ಎರಡನೇ ಬಾರಿಗೆ ಕ್ಯಾಪ್ಟನ್ ಆದ ರಘು – ರಕ್ಷಿತಾ ಶೆಟ್ಟಿ ಹಠ ಕೊನೆಗೂ ಗೆದ್ದೇ ಬಿಡ್ತು..!

ಬಿಗ್‌ಬಾಸ್ ಮನೆಯಲ್ಲಿ ಮತ್ತೊಮ್ಮೆ ಕ್ಯಾಪ್ಟನ್ ಆಗಿ ಮೆರೆದಿದ್ದಾರೆ ರಘು. ಈ ಲೀಡರ್‌ಶಿಪ್‌ಗೆ ಕಾರಣವೇ ರಕ್ಷಿತಾ ಶೆಟ್ಟಿ. ಹೀಗಾಗಿ ಇಲ್ಲಿ ಕಿಂಗ್ ರಘು ಆದರೆ, ಕಿಂಗ್ ಮೇಕರ್ ರಕ್ಷಿತಾ ಶೆಟ್ಟಿ ಎಂಬ ಸಂದೇಶ ಸೋಶಿಯಲ್ ಮೀಡಿಯಾ ತುಂಬಾ ಹರಿದಾಡುತ್ತಿದೆ.
ಇದನ್ನೂ ಓದಿ:ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಇನ್ನಿಲ್ಲ – ವಯೋಸಹಜ ಕಾಯಿಲೆಯಿಂದ ವಿಧಿವಶ
ಒಂದು ಬಾರಿಯಾದರೂ ಕ್ಯಾಪ್ಟನ್ ಆಗಬೇಕು ಅನ್ನೋದು ಬಿಗ್‌ಬಾಸ್ ಸ್ಪರ್ಧಿಗಳ ಕನಸು. ಆದರೆ, ಎರಡನೇ ಬಾರಿಗೆ ಕ್ಯಾಪ್ಟನ್ ಆಗಿ ಮಿಂಚಿದ್ದಾರೆ ರಘು. ಈ ವಾರ ರಘು ಅವರು ನಾಮಿನೇಟ್ ಆಗದೇ ಇರುವ ತಂಡದಲ್ಲಿ ಇದ್ದರು. ಈ ವೇಳೆ ಟಾಸ್ಕ್ ಗೆದ್ದ ತಂಡದವರು ಎದುರಾಳಿ ತಂಡದಿಂದ ಒಬ್ಬರನ್ನು ನಾಮಿನೇಟ್ ಮಾಡಿ, ನಾಮಿನೇಟ್ ತಂಡಕ್ಕೆ ಕಳುಹಿಸಬೇಕಿತ್ತು. ಆಗ ರಕ್ಷಿತಾ ಶೆಟ್ಟಿ ಅವರು ಹಠ ಹಿಡಿದು ರಘು ಅವರನ್ನು ನಾಮಿನೇಟ್ ಮಾಡಿದರು. ಈ ವಿಚಾರ ಅವರಿಗ ಬೇಸರ ಮೂಡಿಸಿತ್ತು. ನಂತರ ಮಾಳು ಅವರು ರಘು ಅವರನ್ನು ನೇರವಾಗಿ ನಾಮಿನೇಟ್ ಮಾಡಿ ಮತ್ತೊಂದು ಶಾಕ್ ಕೊಟ್ಟರು. ರಕ್ಷಿತಾ ನನ್ನ ಹೆಸರನ್ನು ಏಕೆ ತೆಗೆದುಕೊಂಡರು ಎಂಬುದೇ ನನಗೆ ಗೊತ್ತಿಲ್ಲ. ನಂತರ ಮಾಳು ಕೂಡ ನನ್ನ ನಾಮಿನೇಟ್ ಮಾಡಿದರು. ಏನಾಗ್ತಿದೆ ಎಂಬುದೇ ತಿಳಿಯುತ್ತಿಲ್ಲ ಎಂದು ರಘು ಹೇಳಿದ್ದರು. ಈಗ ರಕ್ಷಿತಾ ಶೆಟ್ಟಿ ಹಿಡಿದ ಹಠವೇ ರಘುಗೆ ಪ್ಲಸ್ ಆಗಿದೆ. ನಾಮಿನೇಟ್ ಆದ ತಂಡ ಹೆಚ್ಚು ಟಾಸ್ಕ್ ಗೆದ್ದಿದ್ದರಿಂದ ಅವರು ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆ ಆದರು. ಈಗ ರಘು ಅವರು ಇದರಲ್ಲಿ ಗೆದ್ದು ಕ್ಯಾಪ್ಟನ್ ಆಗಿದ್ದಾರೆ.
ಈ ವಾರದ ಕ್ಯಾಪ್ಟನ್ಸಿ ಆಟದಲ್ಲಿ ಸಖತ್ ಟ್ವಿಸ್ಟ್ ಇತ್ತು. ನಾಮಿನೇಟೆಡ್ ತಂಡದ ಸದಸ್ಯರಾದ ಅಶ್ವಿನಿ, ಜಾಹ್ನವಿ, ರಕ್ಷಿತಾ ಶೆಟ್ಟಿ, ರಾಶಿಕಾ, ರಿಷಾ, ರಘು, ಕಾಕ್ರೋಚ್ ಸುಧಿ, ಧ್ರುವಂತ್ ಈ ಟಾಸ್ಕ್‌ಗೆ ಸೇರಿದ್ದರು. ನಾಮಿನೇಟೆಡ್ ತಂಡ ಎರಡು ಟಾಸ್ಕ್‌ಗಳಲ್ಲಿ ಗೆದ್ದುಕೊಂಡಿದ್ದರಿಂದ, ಅವರೇ ಕ್ಯಾಪ್ಟನ್ಸಿ ಹೋರಾಟಕ್ಕೆ ಇಳಿದರು. ಜಿಮ್ ಬಾಲ್‌ನಿಂದ ಸದಸ್ಯರನ್ನ ಅಖಾಡದಿಂದ ಹೊರಗಡೆ ತಳ್ಳಿ ಕೊನೆಯದಾಗಿ ಯಾರು ಉಳಿದುಕೊಳ್ಳುತ್ತಾರೋ ಅವರು ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾಗಬೇಕಿತ್ತು. ಇದರ ಅನುಸಾರ ಮೊದಲ ಸುತ್ತಿನಲ್ಲಿ ಅಖಾಡಕ್ಕೆ ಇಳಿದು, ರಕ್ಷಿತಾ ಶೆಟ್ಟಿ, ರಾಶಿಕಾ, ರಿಷಾ, ಅಶ್ವಿನಿ ಹೊರಬಂದು ಜಾಹ್ನವಿ ಗೆಲುವು ಸಾಧಿಸಿದರು. ಇನ್ನೂ ಪುರುಷರ ತಂಡದಲ್ಲಿ ಧ್ರುವಂತ್ ಮತ್ತು ಕಾಕ್ರೋಚ್ ಸುಧಿಯನ್ನ ಹೊರಗೆ ದಬ್ಬಿ ರಘು ಗೆಲುವು ಸಾಧಿಸಿದರು.

ನೋಡಿರಿ

