ದೊಡ್ಡ ದೇಹ.. ಸಣ್ಣ ಬುದ್ಧಿ – ಚಪಾತಿಯಲ್ಲಿ ಹೋಯ್ತು ರಘು ಮಾನ
ಗಿಲ್ಲಿ ಗೆಳೆತನಕ್ಕೆ ಬೆಲೆ ಇಲ್ವಾ?

ದೊಡ್ಡ ದೇಹ.. ಸಣ್ಣ ಬುದ್ಧಿ –  ಚಪಾತಿಯಲ್ಲಿ ಹೋಯ್ತು ರಘು ಮಾನಗಿಲ್ಲಿ ಗೆಳೆತನಕ್ಕೆ ಬೆಲೆ ಇಲ್ವಾ?

ಗಿಲ್ಲಿ ಮತ್ತು ರಘು ಮಧ್ಯೆ ಒಂದು ಒಳ್ಳೆಯ ಸ್ನೇಹ ಇತ್ತು. ಈ ಜೋಡಿ ಪ್ರೇಕ್ಷಕರಿಗೆ ಇಷ್ಟ ಆಯ್ತು.. ಆದ್ರೆ ಗಿಲ್ಲಿ ಜೊತೆ ಚೆನ್ನಾಗಿಯೇ ಇದ್ದ ಈ ರಘು  ಇದ್ದಕ್ಕಿದ್ದಂತೆ ಗಿಲ್ಲಿಯಿಂದ ದೂರ ಆಗಿದ್ದಾರೆ. ಗಿಲ್ಲಿ ಎಷ್ಟೇ ತಮಾಷೆ ಮಾತುಗಳಿಗೆ ರಘು ಸರಿಯಾಗಿ ಉರ್ಕೋಂಡ್ ಬಿಟ್ಟಿದ್ದಾರೆ. ಗಿಲ್ಲಿ  ಎಷ್ಟೇ ಹತ್ತಿರ ಆಗೋಕೆ ಹೋದ್ರೂ ರಘು ದೂರ ದೂರ ಆಗ್ತಿದ್ದಾರೆ. ಆದ್ರೆ ಈಗ ರಘು ಅವರ ಬಂಡವಾಳ ಒಂದೇ ಒಂದು ಚೂರು ಚಪಾತಿಯಿಂದ ಬಯಲಾಗಿದೆ.

ಗಿಲ್ಲಿ ಬಿಗ್‌ಬಾಸ್ ಮನೆಯಲ್ಲಿ ತಮ್ಮ ಆಟವನ್ನ ಚೆನ್ನಾಗಿ ಆಡ್ತಿದ್ದಾರೆ. ಇವರಿಗಾಗಿ ಬಿಗ್‌ಬಾಸ್ ನೋಡ್ಬೇಕು ಅನ್ಸುತ್ತೆ. ಗಿಲ್ಲಿ ಸೈಲೆಂಟ್ ಆದ್ರೆ ಬಿಗ್‌ಬಾಸ್ ನೋಡ್ಬೇರು ಅನ್ನೋ ಇಂಟ್ರೆಸ್ಟಿಂಗ್ ಇರಲ್ಲ.. ಆದ್ರೆ ಅಲ್ಲಿರೋ ಸಹ ಸ್ಪರ್ಧಿಗಳಿಗೆ ಗಿಲ್ಲಿನೇ ಟಾರ್ಗೆಟ್‌.. ಏನ್ ಮಾಡಿದ್ರೂ ಏನ್ ತಿಂದ್ರೂ, ಏನ್ ಮಾತನಾಡಿದ್ರೂ ತಪ್ಪು ಅಂತಾರೆ.. ಗಿಲ್ಲಿ ಕಾಮಿಡಿ ಮಾಡ್ತಾ ಜೊತೆಯಲ್ಲಿ ಇದ್ದು ಬಿದ್ದು ಬಿದ್ದು ನಗ್ತಾರೆ.. ಆಮೇಲೆ ಅವನೇ ಕಾಮಿಡಿ ಮಾಡಿದ್ದೇ ತಪ್ಪು ಅನ್ನೋ ಕಾರಣ ಕೊಡ್ತಾರೆ.. ಆದ್ರೆ ಗಿಲ್ಲಿ ಬಗ್ಗೆ ಬೇರೆ ಯಾರ್ ಏನ್ ಹೇಳಿದ್ರೂ ಬೇಜಾರ್ ಆಗ್ತಾ ಇರಲಿಲ್ಲ.. ಕುಚಿಕು ಗೆಳೆಯರಂತಿದ್ದ ರಘು ನಡೆ ಪ್ರೇಕ್ಷಕರಿಗೆ ಸಿಟ್ಟು ತರಿಸಿದೆ.. ರಘು ವಿರುದ್ಧ ರೊಚ್ಚಿಗೇಳುವಂತೆ ಮಾಡಿದೆ. ಅಂದಹಾಗೇ  ಗಿಲ್ಲಿ ನಟ ಬೇರೆಯವರನ್ನು ಬಾಡಿ ಶೇಮಿಂಗ್‌ ಮಾಡಿ, ಕೆಳಗಡೆ ಹಾಕಿ ಕಾಮಿಡಿ ಮಾಡ್ತಾನೆ. ನನಗೆ ಇದು ಇಷ್ಟ ಆಗ್ತಿಲ್ಲ, ಸಾಕಷ್ಟು ಬಾರಿ ವಾರ್ನ್‌ ಮಾಡಿದ್ದೇನೆ. ಬಟ್ಟೆಯಿದ್ದರೂ ಕೂಡ ಹಾಕಿಕೊಳ್ಳೋದಿಲ್ಲ, ಬನಿಯನ್‌, ಚಡ್ಡಿಯಲ್ಲಿ ಇರುತ್ತಾನೆ ಎಂದು ರಘು ಹೇಳುತ್ತಿದ್ದಾರೆ. ಎರಡು ವಾರದಿಂದ ರಘು ಗಿಲ್ಲಿಯಿಂದ ದೂರವೇ ಇದ್ದಾರೆ. ಗಿಲ್ಲಿ ಎಷ್ಟೇ ಮಾತನಾಡಿಸೋಕೆ, ಜೊತೆಗೆ ಇರೋಕೆ ಟ್ರೈ ಮಾಡಿದ್ರೂ ರಘು ದೂರ ಆಗ್ತಿದ್ದಾರೆ. ಆದ್ರೆ ಚಪಾತಿ ವಿಷ್ಯಕ್ಕೆ ರಘು ಮೇಲೆ ಪ್ರೇಕ್ಷಕರು ಸಿಟ್ಟಾಗಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿನ ಒಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ರಘು ಅವರು ಪ್ಲೇಟ್​ನಲ್ಲಿ ಚಪಾತಿ ತಿನ್ನುತ್ತಾ ಇರುತ್ತಾರೆ. ಅಲ್ಲಿಗೆ ಹೋಗುವ ಗಿಲ್ಲಿ ರಘು ಅಣ್ಣ ರಘು ಅನ್ನೋ ನನಗೆ ಒಂದು  ಪೀಸ್ ಕೊಡುವಂತೆ ಕೇಳುತ್ತಾರೆ.  ಸ್ವಲ್ಪ ಹೊತ್ತು ಇಬ್ಬರು ಮಧ್ಯೆ ಚರ್ಚೆ ಆಗುತ್ತದೆ. ಏನೇ ಮಾಡಿದರೂ ಇದಕ್ಕೆ ರಘು ಒಪ್ಪುವುದೇ ಇಲ್ಲ. ಆ ಬಳಿಕ ಬೇಸರದಲ್ಲಿ ಗಿಲ್ಲಿ ಅಲ್ಲಿಂದ ತೆರಳುತ್ತಾರೆ.  ಆಮೇಲೆ ಗಿಲ್ಲಿ  ರಕ್ಷಿತಾಗೆ ಹೇಳ್ತಾರೆ.  ಎಷ್ಟೇ ಹೇಳಿದರೂ ಕೂಡ ರಘು ಅಣ್ಣ ಕೊಟ್ಟಿಲ್ಲ. ನನಗೂ ಆ ಥರದ್ದೇ ಮಾಡಿಕೊಡು  ಎಂದು ಹೇಳ್ತಾರೆ.. ಗಿಲ್ಲಿ ಇಲ್ಲಿ ತಮಾಷೆ ಮಾಡ್ತಾ ಇರಲಿಲ್ಲ, ಸೀರಿಯಸ್ ಆಗೇ ಕೇಳ್ತಾರೆ.. ಆದ್ರೂ ರಘು ಗಿಲ್ಲಿಗೆ ಚಪಾತಿ ಕೊಟ್ಟಿಲ್ಲ.  ಆಮೇಲೆ   ರಘು ಬಳಿ ಬರೋ ರಾಶಿಕಾ , ಯಾವುದೇ ಒಪ್ಪಿಗೆ ಇಲ್ಲದೆ ರಘು ಪ್ಲೇಟ್​ನಿಂದ ಚಪಾತಿಯನ್ನ ತಿನ್ನುತ್ತಾರೆ. ಆಗ ರಘು ಏನು ಹೇಳುವುದಿಲ್ಲ..  ಗಿಲ್ಲಿ ಹಾಗೂ ರಘು ಒಳ್ಳೆಯ ಗೆಳೆಯರಾಗಿದ್ದರು. ಗಿಲ್ಲಿಯನ್ನು ರಘು ಅಷ್ಟು ಕೀಳಾಗಿ ಕಂಡಿದ್ದು ಏಕೆ ಅನ್ನೋ ಚರ್ಚೆ ನಡೆಯುತ್ತಿದೆ. ಕೇವಲ ಚಪಾತಿಗಾಗಿ ರಘು ಈ ತರ ನಡೆದು ಕೊಂಡಿದ್ದು ಸರಿ ಅಲ್ಲ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗ್ತಿದೆ. ಅದ್ದಕ್ಕೆ ಕಮೆಂಟ್ ನೆಕ್ಟ್ ಲವೆಲ್‌ನಲ್ಲಿ ಬರ್ತಿದೆ.

ಗಿಲ್ಲಿಗೆ ರಘು ಕೊಡದೆ ಇದ್ದದ್ದು ತಪ್ಪಲ್ಲ, ಅವನಿಗೆ ಕೊಡಲ್ಲ ಅಂದು ಬೇರೆಯವರಿಗೆ ಕೊಟ್ಟಿದ್ದು ತಪ್ಪು. ಮಾನವೀಯತೆ ದೃಷ್ಟಿಯಿಂದನಾದ್ರೂ ಈ ಟಾಪಿಕ್ ಶನಿವಾರ ಡಿಸ್ಕಸ್ ಆಗಬೇಕು. ಇಲ್ಲಿ ಗಿಲ್ಲಿಯನ್ನು ಬಿಟ್ರೆ ಯಾರ್ ವ್ಯಕ್ತಿತ್ವವು ಸರಿಯಿಲ್ಲ. ಹೊಟ್ಟೆಕಿಚ್ಚಿಗೆ ಎಂಥ ಸ್ನೇಹ ಆದ್ರೂ ಮುರಿಯೋ ಶಕ್ತಿ ಇದೆ.

ಇದನ್ನೂ ಓದಿ: ಫಿಟ್ ಆದ್ರೂ ಶುಭಮನ್ ಗಿಲ್ – ಟಿ20I ಆಡೋಕೆ ಸಿಕ್ಕು ಪರ್ಮಿಷನ್

, ಇಷ್ಟು ದೊಡ್ಡ ದೇಹ ಇಟ್ಟುಕೊಂಡು, ಈ ಥರ ಸಣ್ಣಬುದ್ಧಿ ಬೇಡ. ರಘು ಅವರಿಗೆ ಯಾರು ಕೂಡ ಸಪೋರ್ಟ್ ಮಾಡಬೇಡಿ ಅಂತ ವೀಕ್ಷಕರು ಹೇಳುತ್ತಿದ್ದಾರೆ. ಅಷ್ಟೇ ಗಿಲ್ಲಿ ಮಾಡೋದು ತಪ್ಪು ನೀವು ಮಾಡೋದ ಸರಿನಾ ಅಂತ ಕೇಳುತ್ತಿದ್ದಾರೆ. ಈ ಪೋಸ್ಟ್‌ ನೋಡಿ ತುಂಬಾ ಚೆನ್ನಾಗಿ ಹಾಕಿದ್ದಾರೆ. ರಘುಗೆ ಗಿಲ್ಲಿ ಕಾಮಿಡಿ ಮಾಡಿದ್ದು ತಪ್ಪು, ಆದ್ರೆ ನಿನ್ನೆ ಅವನನ್ನ ಸ್ವಿಮಿಂಗ್ ಪೊಲ್ ಅಕಿದ್ದು ಸರಿ.. ಗಿಲ್ಲಿ ಬೇರೆಯವರನ್ನು ರೆಗಸೋದು ತಪ್ಪು,  ನೆನ್ನೆ ಟಾಸ್ಕ್ ಸೋತಾಗ ನೀವು ಗಿಲ್ಲಿಗೆ ರೆಗಿಸಿದ್ದು ಸರಿ. ಚೈತ್ರ ಗಿಲ್ಲಿನ ನನ್ನಮಗನೇ ಅನ್ನೋದು ಕಾಮಿಡಿ ಅದೇ ಚೈತ್ರಗೆ ಗಿಲ್ಲಿ ವಯಸ್ಸಾಗಿದೆ ಎಂದರೆ ತಪ್ಪು. ಇಲ್ಲಿ ಎಲ್ಲರೂ ಸೇರಿ ಗಿಲ್ಲಿನ ಟಾರ್ಗೆಟ್ ಮಾಡುತ್ತಿದ್ದಾರೆ ಅನ್ನೋದು ಎದ್ದು ಕಾಣ್ತಿದೆ. ಅಶ್ವಿನಿ ಸುಮ್ನೆ ಅಪಪ್ರಚಾರ ಮಾಡ್ತಿದ್ದಾರೆ ಗಿಲ್ಲಿ ಬಗ್ಗೆ.. ಗಿಲ್ಲಿ ಅವರಿಂದ ತಂದು ಇವರಿಗೆ ಹಾಕ್ತಾರೆ ಅಂತ.. ಆ ತರ ಗಿಲ್ಲಿ ಇಲ್ಲಿ ತನಕ ಮಾಡಿಲ್ಲ.. ಗಿಲ್ಲಿಯದ್ದು ಏನಿದ್ರೂ ಡೈರೆಕ್ಟ್ ಹಿಟ್‌.. ಅಲ್ಲೇ ಡ್ರಾ ಅಲ್ಲೇ ಬಹುಮಾನ.. ಕಾಳೆಯುತ್ತಾನೆ ಕಾಮಿಡಿ ಮಾಡ್ತಾರೆ ಅನ್ನೋ ಕಾರಣಕ್ಕೆ ಗಿಲ್ಲಿ ಆಟನೇ ಆಡಲ್ಲ, ಕೆಲಸನೇ ಮಾಡಲ್ಲ, ಸರಿಯಾಗಿ ಮಾತನಾಡಲ್ಲ ಅನ್ನೋದು ತಪ್ಪು.

ಇನ್ನೂ ಗಿಲ್ಲಿ ಯಾರಿಗೂ ಕೂಡ ಕೆಟ್ಟ ಪದ ಬಳಸಿಲ್ಲ..ವೈಯಕ್ತಿಕ ವಿಚಾರ ಮಾತನಾಡಿಲ್ಲ.. ಮನೆ ವಿಚಾರ ಮಾತನಾಡಿಲ್ಲ.. ರಘು  ಎಲ್ಲರಿಗೂ ಅಡಿಗೆ ಮಾಡಿಹಾಕೋಕೆ ತೇವಲಾ ಅಂತ ಹೇಳಿದ್ದಾರೆ.. ಇದು ಕೂಡ ಈಗ ಮನೆಯಲ್ಲಿ ಬೆಂಕಿ ಹಚ್ಚಿದೆ. ಆದ್ರೆ ಈ ವಾರ ಬಿಗ್ ಬಾಸ್ ಮನೆಯ ಆಟ ಡಲ್ ಅಂತ ನನಗೆ ಅಸ್ಸುತ್ತೆ. ಕಿಚ್ಚ ಹೇಳಿದ್ದಂತೆ ಒಂದು ಅಂತೂ ನಿಜ.. ಒಂದಾಗಿದ್ದವರು ದೂರವಾಗುತ್ತಿದ್ದಾರೆ, ದೂರ ಇದ್ದವರು ಒಂದಾಗುತ್ತಿದ್ದಾರೆ..

Kishor KV