ರಾಘವೇಂದ್ರ ಸ್ವಾಮಿ ಹೆಸರನ್ನು ಹೇಳುವುದರ ಪ್ರಯೋಜನಗಳೇನು.? – ರಾಯರ ಯಾವ 2 ಮಂತ್ರಗಳನ್ನು ಪಠಿಸಬೇಕು.?

ರಾಘವೇಂದ್ರ ಸ್ವಾಮಿ ಹೆಸರನ್ನು ಹೇಳುವುದರ ಪ್ರಯೋಜನಗಳೇನು.? – ರಾಯರ ಯಾವ 2 ಮಂತ್ರಗಳನ್ನು ಪಠಿಸಬೇಕು.?

ರಾಯರ ಹೆಸರಿಗೆ ಅಗಾಧವಾದ ಶಕ್ತಿಯಿದೆ. ರಾಘವೇಂದ್ರ ಎಂದರೆ ಸಾಕು ಅದೆಷ್ಟೋ ಕಷ್ಟ, ಕಾರ್ಪಣ್ಯಗಳು ಕಳೆಯುತ್ತದೆ. ಗುರುವಾರದ ದಿನದಂದು ರಾಘವೇಂದ್ರ ಸ್ವಾಮಿ ಹೆಸರನ್ನು ಹೇಳುವುದರ ಪ್ರಯೋಜನಗಳೇನು.? ರಾಘವೇಂದ್ರ ಎನ್ನುವ ಹೆಸರಿನ ಪ್ರತಿಯೊಂದು ಅಕ್ಷರದ ಪ್ರಯೋಜನವೇನು.? ಗುರುವಾರದ ದಿನ ರಾಯರ ಯಾವ 2 ಮಂತ್ರಗಳನ್ನು ಪಠಿಸಬೇಕು.? ಅನ್ನೋದ್ದನ್ನ ತಿಳಿಯೋಣ.

ರಾಯರನ್ನು ಅಂದರೆ, ಗುರು ರಾಘವೇಂದ್ರ ಸ್ವಾಮಿಯವರನ್ನು ನಂಬಿ ಜೀವನ ನಡೆಸುವವರಿಗೆ ಯಾವುದೇ ಕಷ್ಟ ಕಾರ್ಪಣ್ಯಗಳು ಎದುರಾಗುವುದಿಲ್ಲ ಎನ್ನುವ ನಂಬಿಕೆಯಿದೆ. ರಾಯರನ್ನು ಪೂಜಿಸಲು, ಅವರ ಮಂತ್ರಗಳನ್ನು ಪಠಸಲು ಗುರುವಾರದ ದಿನವನ್ನು ಅತ್ಯಂತ ಪ್ರಶಸ್ಥವಾದ ದಿನವೆಂದು ಪರಿಗಣಿಸಲಾಗುತ್ತದೆ. ರಾಯರನ್ನು ನಂಬಿಕೆಗೆ ತಕ್ಕಂತೆ ಸಾವಿರಾರು ಪವಾಡಗಳು ನಮ್ಮ ಸುತ್ತಮುತ್ತ ಇವೆ.

ರಾಘವೇಂದ್ರ ಸ್ವಾಮಿಗಳನ್ನು ನಂಬುವವರು ಗುರುವಾರದ ದಿನದಂದು ವಿಶೇಷ ಪೂಜೆಯನ್ನು ಮಾಡುತ್ತಾರೆ. ಸಾಧನೆಯನ್ನು ಮಾಡುತ್ತಾರೆ ಮತ್ತು ಅವರ ಮಂತ್ರಗಳನ್ನು ಪಠಿಸುತ್ತಾರೆ. ರಾಘವೇಂದ್ರ ಸ್ವಾಮಿಗಳ ಆರಾಧನೆಯು ಭಕ್ತರ ಸಕಲ ಕಷ್ಟಗಳನ್ನು ಪರಿಹಾರ ಮಾಡುತ್ತದೆ. ಸುಖ, ಶಾಂತಿ, ನೆಮ್ಮದಿಯ ಜೀವನ ನಡೆಸಲು ಮಾರ್ಗವನ್ನು ಸೂಚಿಸುತ್ತಾರೆ. ರಾಯರ ಶಕ್ತಿ ಮಾತ್ರವಲ್ಲ, ರಾಯರ ಹೆಸರಿಗೂ ಕೂಡ ಮಹತ್ತರವಾದ ಅರ್ಥ ಮತ್ತು ಪ್ರಯೋಜನವಿದೆ. ನಾವಿಂದು ಈ ಲೇಖನದಲ್ಲಿ ರಾಘವೇಂದ್ರ ಸ್ವಾಮಿ ಹೆಸರಿನ ಅರ್ಥವನ್ನು ಹಾಗೂ ಗುರುವಾರದ ದಿನದಂದು ನಾವು ಪಠಿಸಬೇಕಾದ 2 ಅದ್ಭುತವಾದ ಮಂತ್ರಗಳ ಬಗ್ಗೆ ತಿಳಿದುಕೊಳ್ಳೋಣ.

  ರಾಘವೇಂದ್ರ ಹೆಸರಿನ ಅರ್ಥ:
ರಾ- ಎಂದರೆ ರಾಶಿ ದೋಷಗಳೆಲ್ಲಾ ದೂರಾಗುವುದು.
ಘ- ಎಂದರೆ ಘನಜ್ಞಾನ ಭುಕುತಿಯನ್ನು ಪಡೆಯುವರು.
ವೇಂ- ಎಂದರೆ ವೇಗದಲ್ಲೇ ಜನನ ಮರಣ ಚಕ್ರದಿಂದ ಮುಕ್ತಿ ದೊರೆಯುವುದು.
ದ್ರ- ಎಂದರೆ ದ್ರವಿಣಾರ್ಥ ಶ್ರುತಿಪಾದ್ಯನ ಕಾಣುವರು.

ಗುರುವಾರದ ದಿನದಂದು ರಾಘವೇಂದ್ರ ಸ್ವಾಮಿಗಳ ಈ ಮಂತ್ರಗಳನ್ನು ಪಠಿಸಿ:


– ರಾಘವೇಂದ್ರ ಸ್ವಾಮಿ ಮೂಲ ಮಂತ್ರ:

”ಓಂ ಶ್ರೀ ರಾಘವೇಂದ್ರಾಯ ನಮಃ”
“ನಾನು ರಾಘವೇಂದ್ರ ಸ್ವಾಮಿಗಳಿಗೆ ನಮಸ್ಕರಿಸುತ್ತೇನೆ” ಎನ್ನುವ ಅರ್ಥವನ್ನು ಈ ಮಂತ್ರ ನೀಡುತ್ತದೆ. ಗುರುವಾರದ ದಿನದಂದು ಮಾತ್ರವಲ್ಲ, ಪ್ರತಿದಿನವೂ ನೀವು ರಾಯರ ಈ ಮಂತ್ರವನ್ನು ಪಠಿಸಬಹುದಾಗಿದೆ.

Kishor KV