ನಾನು ಮದ್ವೆಯಾಗಲು ರೆಡಿ! – ಹುಟ್ಟು ಹಬ್ಬದಂದೇ ಫ್ಯಾನ್ಸ್ ಗೆ ಗುಡ್ನ್ಯೂಸ್ ಕೊಟ್ಟ ರಚಿತಾ ರಾಮ್!

ಸ್ಯಾಂಡಲ್ವುಡ್ನ ಗುಳಿಗೆನ್ನೆ ಚಲುವೆ ಹುಟ್ಟಹಬ್ಬ ಆಚರಣೆ ಸಂಭ್ರಮದಲ್ಲಿ ಇದ್ದಾರೆ. ನಟಿ ರಚಿತಾ ರಾಮ್ ಆರ್ಆರ್ ನಗರದ ತಮ್ಮ ನಿವಾಸದಲ್ಲಿ ಇದೇ ಮೊದಲ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಬರ್ತ್ಡೇ ದಿನವೇ ರಚಿತಾರಾಮ್ ಫ್ಯಾನ್ಸ್ ಗೆ ಗುಡ್ನ್ಯೂಸ್ ಕೊಟ್ಟಿದ್ದಾರೆ. ಇದೀಗ ಗುಳಿಗೆನ್ನೆ ಹುಡುಗಿ ಮದುವೆಗೆ ರೆಡಿಯಾಗಿದ್ದಾರೆ.
ಇದನ್ನೂ ಓದಿ: ಗಿಲ್ಲಿ ರಾಜಾಹುಲಿ.. ಅಶ್ವಿನಿ ವಾಚ್ಮ್ಯಾನ್.. ಜಂಟಿಗಳಿಗೆ ಬಿಗ್ ಬಾಸ್ ಅನ್ಯಾಯ? -ಸ್ಪರ್ಧಿಗಳ ರಂಪಾಟ.. ಟಾಸ್ಕ್ ರದ್ದು!
ರಚಿತಾ ರಾಮ್ಗೆ ಈಗ 33 ವರ್ಷ. ನಟಿ ಇನ್ನೂ ಮದುವೆ ಬಗ್ಗೆ ಚಿಂತಿಸಿಲ್ಲ. ಸಿನಿಮಾಗಳಲ್ಲಿ ಸದ್ಯ ಬ್ಯೂಸಿಯಾಗಿದ್ದಾರೆ. ಈಗ ಪರಭಾಷೆಯಿಂದ ಬೇಡಿಕೆ ಸೃಷ್ಟಿ ಆಗುತ್ತಿದೆ. ತಮಿಳಿನಿ ರಜಿನಿಕಾಂತ್ ನಟನೆಯ ಕೂಲಿ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ್ದ ರಚಿತಾ. ಈಗ ಲೋಕೇಶ್ ಕನಗರಾಜ್ ಹೀರೋ ಆಗಿ ನಟಿಸುತ್ತಿರುವ ತಮಿಳು ಸಿನಿಮಾಗೆ ನಾಯುಕಿ ಆಗಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬಂದಿವೆ. ಇವೆಲ್ಲದ್ರ ಮಧ್ಯೆ ಸ್ಯಾಂಡಲ್ವುಡ್ ಬ್ಯೂಟಿ ಮದುವೆ ಬಗ್ಗೆ ಅಪ್ಡೇಟ್ ಕೊಟ್ಟಿದ್ದಾರೆ.
ರಚಿತಾ ರಾಮ್ ಹೋದಲ್ಲಿ ಬಂದಲ್ಲಿ ಮದ್ವೆ ಯಾವಾಗ ಎಂಬ ಪ್ರಶ್ನೆ ಎದುರಾಗ್ತಾನೇ ಇದೆ. ಕೊನೆಗೂ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಬರ್ತ್ಡೇ ದಿನವೇ, ನಾನು ವಿವಾಹ ಆಗಬೇಕು ಅಂತ ನಿರ್ಧರಿಸಿದ್ದೇನೆ. ಆದಷ್ಟು ಬೇಗ ಮದುವೆ ಆಗುತ್ತೇನೆ. ಮನೆಯಲ್ಲಿ ಹುಡುಗನ ಹುಡುಕುತ್ತಾ ಇದ್ದಾರೆ. ನಾನು ಅರೇಂಜ್ ಮ್ಯಾರೇಜ್ ಆಗ್ತೀನಿ ಎಂದು ಹೇಳಿದ್ದಾರೆ. ಇದೀಗ ರಚಿತಾ ಮದುವೆ ಬಗ್ಗೆ ಕುತೂಹಲ ಮೂಡಿದೆ. ಅವರು ಮದುವೆ ಆಗುವ ಹುಡುಗನನ್ನು ಮನೆಯವರೇ ನಿರ್ಧರಿಸುತ್ತಾರೋ ಅಥವಾ ಇವರೇ ಆಯ್ಕೆ ಮಾಡಿಕೊಳ್ಳುತ್ತಾರೋ ಎನ್ನುವ ಪ್ರಶ್ನೆ ಮೂಡಿದೆ.

ನೋಡಿರಿ

