ಜಗದೀಶ್ ಹೇಳೋದೆಲ್ಲಾ ನಿಜನಾ?- ರಚಿತಾ ಹಿಂದೆ ಬಿದ್ದಿದ್ದೇಕೆ ಲಾಯರ್?
ಇದೇ ಮಾಜಿ ಸಿಎಂ ಟಾರ್ಗೆಟ್ ಆದ್ರಾ?

ಲಾಯರ್ ಜಗದೀಶ್ ಯಾವಾಗ ಯಾರ ಮೇಲೆ ತಿರುಗಿಬೀಳ್ತಾರೆ ಅಂತ ಹೇಳೋದು ಸ್ವಲ್ಪ ಕಷ್ಟ.. ಆದ್ರೆ ಸತ್ಯವನ್ನೇ ಹೇಳ್ತೇನೆ.. ನ್ಯಾಯಕ್ಕಾಗಿನೇ ಹೋರಾಡ್ತೇನೆ ಅನ್ನೋದನ್ನು ಲಾಯರ್ ಜಗದೀಶ್ ಅವರು ನಾರ್ಮಲ್ ಆಗಿ ಹೇಳ್ತಿರುತ್ತಾರೆ.. ಈ ಬಾರಿಯ ಬಿಗ್ ಬಾಸ್ ಸೀಸನ್‌ಗೆ ಕಂಟೆಸ್ಟೆಂಟ್ ಆಗಿ ಎಂಟ್ರಿ ಕೊಟ್ಟಿದ್ದ ಜಗದೀಶ್, ಬಿಗ್ ಮನೆಯಲ್ಲಿ ಕಿರಿಕ್ ಮಾಡ್ಕೊಂಡು ಹೊರ ಬಂದಿದ್ರು.. ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟಿವ್ ಆಗಿರುವ ವ್ಯಕ್ತಿ. ಆದ್ರೆ ಈಗ ಜಗದೀಶ್ ಸಿಡಿಸಿದ ಒಂದೇ ಒಂದು ಬಾಂಬ್ ಸ್ಯಾಂಡಲ್ವುಡ್ ಮತ್ತು ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ತಮ್ಮ ವಿಭಿನ್ನ ಮಾತಿನ ಶೈಲಿಯ ಮೂಲಕ ಎಲ್ಲಾರನ್ನೂ ಎದುರು ಹಾಕಿಕೊಳ್ಳುವ ಜಗದೀಶ್, ಈಗ ಸ್ಯಾಂಡಲ್ವುಡ್ ನಟಿ ರಚಿತಾ ರಾಮ್ ಬಗ್ಗೆ ಆಡಿದ ಮಾತಿನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ.
ಖಾಸಗಿ ಚಾನೆಲ್‌ನಲ್ಲಿ ಕುಳಿತು ಲಾಯರ್ ಜಗದೀಶ್‌ಗೆ ಆ್ಯಂಕರ್ ನಿಮ್ಗೆ ರಚಿತಾರಾಮ್ ಬಗ್ಗೆ ಅಭಿಮಾನ ಬರೋಕೆ ಕಾರಣವೇನು ಅಂತಾ ಕೇಳ್ತಾರೆ.. ಅದಕ್ಕೆ ಉತ್ತರಿಸುವ ಲಾಯರ್ ಜಗದೀಶ್.. ನಿಜವಾಗ್ಲೂ ನಾನು ಅವರ ಫ್ಯಾನ್.. ಅವರು ರಾಜಕಾರಣಿಗಳ ಜೊತೆ ವ್ಯವಹಾರ ಮಾಡ್ತಾರೆ.. ರಾಜಕಾರಣಿಗಳ ಜೊತೆ ಒಡನಾಟವಿದೆ.. ರಾಜಕಾರಣಿಗಳ ಕೃಪಾಕಟಾಕ್ಷವಿದೆ. ಎಕ್ಸ್ ಸಿಎಂಗಳ ಜೊತೆ ಒಡನಾಟವಿದೆ, ಅವರಿಂದ ಲಾಭವನ್ನ ಪಡೆದಿದ್ದಾರೆ ಅನ್ನೋ ಆರೋಪವಿದೆ ಎಂದು ಜಗದೀಶ್ ಹೇಳಿದ್ದಾರೆ. ಅಷ್ಟೇ ಅಲ್ಲ ಅವರು ಮೇಲೆ ಇರೋ ಆರೋಪಕ್ಕೂ , ಅವರು ಮಾಡ್ತಿರೋ ಟೆಂಪಲ್ ರನ್ ನೋಡಿದ್ರೆ ಆರೋಪ ನಿಜ ಅನ್ಸುತ್ತೆ ಎಂದಿದ್ದಾರೆ. ಜಗದೀಶ್ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತಿದ್ದು, ಸಾಕಷ್ಟು ಚರ್ಚೆ ಆಗುತ್ತಿದೆ.
ಲಾಯರ್ ಜಗದೀಶ್‌ಗೆ ರಚಿತಾರಾಮ್ ತಿರುಗೇಟು
ತನ್ನ ಮೇಲೆ ಮಾಡಿರೋ ಆರೋಪಕ್ಕೆ ಉತ್ತರಿಸಿದ ನಟಿ ರಚಿತಾ ರಾಮ್.. ತಂದೆ ತಾಯಿ ಒಡಹುಟ್ಟಿದವರು ಹೊರತು ಪಡಿಸಿದರೆ ಸಂಬಂಧಿಕರೇ ಒಂದಿಷ್ಟು ಮಾತನಾಡುತ್ತಾರೆ. ಇನ್ನು ಲಾಯರ್ ಜಗದೀಶ್ ಬಗ್ಗೆ ಏನು ಹೇಳಬೇಕು? ನಾನು ನನ್ನ ಕೆಲಸ ಮಾಡುತ್ತಿದ್ದೀನಿ. ಸುಮಾರು 12 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದೀನಿ ಅದಕ್ಕೆ ಪಡೆಯಬೇಕಾಗಿರುವ ಸಂಭಾವನೆ ಪಡೆಯುತ್ತಿದ್ದೀನಿ. ಅವಶ್ಯಕತೆ ಇರುವ ಕಡೆ ಮಾತ್ರ ಮಾತನಾಡುತ್ತೀನಿ. ಶೂಟಿಂಗ್ನಲ್ಲಿ ಬ್ಯೂಸಿಯಾಗಿರುತ್ತೀನಿ ಇಲ್ಲವಾದರೆ ಮನೆಯಲ್ಲಿ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತೀನಿ. ನೀವು ಹೇಳಿದ ವ್ಯಕ್ತಿ ವಯಸ್ಸಿನಲ್ಲಿ ದೊಡ್ಡವರು ಜೀವನದಲ್ಲಿ ಅನುಭವ ಆಗಿರುವವರು ಅದಕ್ಕೆ ಮರ್ಯಾದೆ ಕೊಟ್ಟು ಅಗೌರವಿಸಲು ನನಗೆ ಇಷ್ಟವಿಲ್ಲ. ಅವರು ಮಾತನಾಡುತ್ತಿರುವ ಅಂತೆ ಕಂತೆಗಳ ಬಗ್ಗೆ ಯಾಕೆ ಮಾತನಾಡಬೇಕು. ಕೆಟ್ಟ ಚಟುವಟಿಕೆಗಳಲ್ಲಿ ನಾನು ತೊಡಗಿಸಿಕೊಂಡಿದ್ದರೆ ನನ್ನ ಜೀವನ ನನ್ನ ಇಷ್ಟ ಎಂದು ಹೇಳುತ್ತಿದ್ದೆ, ಇದ್ಯಾವುದು ನಾನು ಮಾಡಿಲ್ಲ ಅಂದಾಗ ಯಾಕೆ ಯೋಚನೆ ಮಾಡಬೇಕು’ ಎಂದಿದ್ದಾರೆ.
ಪ್ರಸಾದ ತಿನ್ನುಕೊಂಡು ಇರುತ್ತೀನಿ ಎಂದು ಜಗದೀಶ್ ಗೆ ಪಂಚ್!
ನನ್ನ ಬಗ್ಗೆ ಟಿವಿಯಲ್ಲಿ ನೆಗೆಟಿವ್ ಬಂದಿದೆ ಅಂದ್ರೆ ಅದನ್ನು ತೆಗೆದುಬಿಡಿ ಎಂದು ನಾನು ಯಾವತ್ತೂ ಯಾರಿಗೂ ಕಾಲ್ ಮಾಡಿ ಹೇಳಿದಳವಲ್ಲ. ಕೆಲಸ ಮಾಡುವವರು ಯಾವುದಕ್ಕೂ ಟ್ರಿಗರ್ ಆಗುವುದಿಲ್ಲ. ರಚಿತಾ ರಾಮ್ಗೆ ಜೀವನದಲ್ಲಿ ಕಷ್ಟ ಬಂತು, ಜೀವನದಲ್ಲಿ ಎಲ್ಲಾ ಕಳೆದುಕೊಂಡೆ ಅನ್ನೋ ದಿನ ಬಂದರೆ ಒಂದು ದೇವಸ್ಥಾನದಲ್ಲಿ ಕೆಲಸ ಮಾಡಿಕೊಂಡು ಅಲ್ಲಿ ಕೊಟ್ಟ ಪ್ರಸಾದ ತಿನ್ನುಕೊಂಡು ಇರುತ್ತೀನಿ ಹೊರತು ಯಾರ ಜೊತೆಗೂ ಹೋಗಿ ಇರುವವಳು ನಾನಲ್ಲ. ಕೈ ತುಂಬಾ ಕೆಲಸ ಕೊಟ್ಟಿದ್ದಾನೆ ಭಗವಂತ ಇದಕ್ಕೂ ಮೀರಿ ನಾನು ಏನೂ ಬೇಡಲು ಆಗಲ್ಲ’ ಎಂದು ರಚಿತಾ ರಾಮ್ ಹೇಳಿದ್ದಾರೆ.
ಲಾಯರ್ ಜಗದೀಶ್ ಹೇಳಿದ ಮಾಜಿ ಸಿಎಂ ಯಾರು?
ಒಂದು ಕಡೆ ರಚಿತರಾಮ್ ನಾನೇನು ತಪ್ಪು ಮಾಡಿಲ್ಲ ಅಂತ ಹೇಳಿದ್ದಾರೆ. ಆದ್ರೆ ಜಗದೀಶ್ ಈ ವಿಚಾರವನ್ನ ಸಾಕಷ್ಟು ಬಾರಿ ಪ್ರಸ್ತಾಪ ಮಾಡಿದ್ದು, ಜನರ ಮನಸ್ಸಿನಲ್ಲಿ ಒಂದು ತಪ್ಪು ತಿಳುವಳಿಕೆ ಬಂದಿದೆ. ರಚಿತಾರಾಮ್ಗೆ ಮಾಜಿ ಸಿಎಂ ಲಿಂಕ್ ಇದೆ ಅಂತ ಹೇಳಿರೋ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಯಾರು ಆ ಮಾಜಿ ಸಿಎಂ? ಎಂಬ ಪ್ರಶ್ನೆ ಎದ್ದಿದೆ.. ಇಷ್ಟಕ್ಕೂ ಈ ಹಿಂದೆ ಇದೇ ಲಾಯರ್ ಜಗದೀಶ್ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಕುರಿತು.. ಬೊಮ್ಮಾಯಿ ಐ ಲವ್ ಯು ಎಂದು ವ್ಯಂಗ್ಯ ಭರಿತ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದರು.. ಅಲ್ಲದೆ ಶಿಗ್ಗಾವಿ ಕ್ಷೇತ್ರದಲ್ಲಿ ಬೈಎಲೆಕ್ಷನ್ ನಡೆದಾಗ, ಒಂದು ವೇಳೆ ಕಾಂಗ್ರೆಸ್‌ನಿಂದ ಟಿಕೆಟ್ ಕೊಟ್ರೆ ನಾನು ಭರತ್ ಬೊಮ್ಮಾಯಿ ವಿರುದ್ಧ ಸ್ಪರ್ಧಿಸೋದಕ್ಕೂ ರೆಡಿ ಅಂದಿದ್ರು ಇದೇ ಲಾಯರ್ ಜಗದೀಶ್.. ಹೀಗೆ ಬೊಮ್ಮಾಯಿಯವರನ್ನು ಪದೇ ಪದೆ ಕೆಣಕ್ತಿದ್ದ ಲಾಯರ್ ಜಗದೀಶ್, ಈಗ ಎಕ್ಸ್ ಸಿಎಂಗಳ ವಿಚಾರವನ್ನು ಮತ್ತೆ ಕೆದಕಿದ್ದಾರೆ.. ಜೊತೆಗೆ ರಚಿತಾ ರಾಮ್ ಬಗ್ಗೆಯೂ ಕಮೆಂಟ್ ಮಾಡಿದ್ದಾರೆ.. ಇಷ್ಟಕ್ಕೂ ರಚಿತಾ ರಾಮ್ ಬಗ್ಗೆ ನೇರವಾಗಿ ಆರೋಪ ಮಾಡುವ ಧೈರ್ಯವನ್ನು ಲಾಯರ್ ಜಗದೀಶ್ ಎಲ್ಲೂ ಮಾಡಿಲ್ಲ.. ಆದ್ರೆ ಇದೇ ಲಾಯರ್ ಜಗದೀಶ್ ಒಂದು ಕಡೆ ತಾನೊಬ್ಬ ಸಾಮಾಜಿಕ ಹೋರಾಟಗಾರ.. ಭ್ರಷ್ಟಾಚಾರ ವಿರುದ್ಧದ ಹೋರಾಟಗಾರ ಎಂದು ಕ್ಲೇಮ್ ಮಾಡ್ಕೊಳ್ತಾರೆ. ಆದ್ರೆ ಇದ್ದಕ್ಕಿದ್ದಂತೆ ಒಬ್ಬ ನಟಿಯ ಬಗ್ಗೆಯೂ ಅನುಮಾನ ಬರುವ ರೀತಿಯಲ್ಲಿ ಮಾತಾಡ್ತಿರುವುದನ್ನು ನೋಡಿದ್ರೆ, ಇದೊಂದು ರೀತಿಯಲ್ಲಿ ಇನ್ನೊಬ್ಬರಿಗೆ ನೋವು ಕೊಟ್ಟು ವಿಕೃತ ಆನಂದಪಡುವ ಮನೋಭಾವವೇ ಎಂಬ ಪ್ರಶ್ನೆಯನ್ನೂ ಸಾಮಾನ್ಯ ಜನ ಮಾಡ್ತಿದ್ದಾರೆ.. ಅದರಲ್ಲೂ ಕನ್ನಡ ಚಿತ್ರರಂಗದ ಹೆಸರಾಂತ ನಟಿ ರಚಿತಾರಾಮ್ ಬಗ್ಗೆ ಇಂತಹ ಆರೋಪ ಬಂದಿರೋದು ಅವರ ಫ್ಯಾನ್ಸ್ಗೆ ಬೇಸರ ತರಿಸಿದೆ. ಅಲ್ಲದೆ ಲಾಯರ್ ಜಗದೀಶ್ ಯಾವುದೇ ನೇರವಾದ ಪುರಾವೆ ಇಲ್ಲದೆ, ಅಡ್ಡಗೋಡೆ ಮೇಲೆ ದೀಪವಿಟ್ಟವರಂತೆ ಮಾತಾಡುತ್ತಾ.. ಕಾನೂನಿನ ಕುಣಿಕೆಯಿಂದಲೂ ಬಚಾವಾಗುವ ರೀತಿಯಲ್ಲಿ ಡೈಲಾಗ್ ಹೊಡೀತಾ. ಇನ್ನೊಬ್ಬರ ಜೀವನದ ಬಗ್ಗೆಯೂ ಪ್ರಶ್ನೆ ಮಾಡ್ತಿರುವುದು ಮಾತ್ರ ವಿಚಿತ್ರವಾಗಿ ಭಾಸವಾಗುತ್ತಿದೆ..