ರಚಿನ್‌ ಜೊತೆಗಿರುವ ಚೆಲುವೆ ಯಾರು? –  CSK ಆಟಗಾರನ ಲವ್‌ ಸ್ಟೋರಿ!

ರಚಿನ್‌ ಜೊತೆಗಿರುವ ಚೆಲುವೆ ಯಾರು? –  CSK ಆಟಗಾರನ ಲವ್‌ ಸ್ಟೋರಿ!

ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್ ರಚಿನ್‌ ರವೀಂದ್ರ ಈಗ ವಿಶ್ವಾದ್ಯಂತ ಕ್ರಿಕೆಟ್‌ ಅಭಿಮಾನಿಗಳನ್ನು ಹೊಂದಿದ್ದಾರೆ..  ಐಪಿಎಲ್‌ನಲ್ಲೂ ತನ್ನ ಸ್ಫೋಟಕ ಬ್ಯಾಟಿಂಗ್‌ ಮೂಲಕ ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿ ಮಿಂಚುತ್ತಿದ್ದಾರೆ.. ಇದೇ  ರಚಿನ್ ರವೀಂದ್ರ ಅವರ ಪ್ರೇಮಕಥೆ ಯಾವ ಬಾಲಿವುಡ್ ಚಿತ್ರಕ್ಕಿಂತ ಕಡಿಮೆಯೇನಿಲ್ಲ.

 ಇದನ್ನೂ ಓದಿ:   ಅಬ್ಬಬ್ಬಾ.. ಇದೆಂಥಾ ಹುಚ್ಚು ಅಭಿಮಾನ – ಮಕ್ಕಳ ಸ್ಕೂಲ್ ಫೀಸ್ ಹಣದಲ್ಲಿ ಐಪಿಎಲ್ ಟಿಕೆಟ್ ಖರೀದಿಸಿದ್ದ ಧೋನಿ ಫ್ಯಾನ್!

ರಚಿನ್ ರವೀಂದ್ರ 2023ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ ನಲ್ಲಿ ಅದ್ಭುತ ಬ್ಯಾಟಿಂಗ್‌ ಮೂಲಕ ಮಿಂಚಿದ್ದ ಆಟಗಾರ.. ಈ ಮೂಲಕ ವಿಶ್ವಾದ್ಯಂತ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಈ ಸ್ಟಾರ್ ಆಲ್ ರೌಂಡರ್ ಆಗಿ ರಚಿನ್ ರವೀಂದ್ರ ಸದ್ಯ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.. ಐಪಿಎಲ್‌ ಹರಾಜಿಗೆ ಬಂದಾಗ ರಚಿನ್ ರವೀಂದ್ರಗೆ ಒಳ್ಳೆಯ ಬೆಲೆ ಫಿಕ್ಸ್‌ ಆಗಬಹುದು ಅಂತಲೇ ಕ್ರಿಕೆಟ್‌ ಅಭಿಮಾನಿಗಳು ಅಂದುಕೊಂಡಿದ್ದರು.. ರಚಿನ್‌ ಪ್ರತಿಭೆಗೆ ಹೋಲಿಸಿದ್ರೆ ಕೇವಲ 1.8 ಕೋಟಿ ರೂಪಾಯಿಗಳಿಗೆ ಐಪಿಎಲ್‌ನಲ್ಲಿ ಸಿಎಸ್‌ಕೆ ಖರೀದಿ ಮಾಡುವಲ್ಲಿ ಯಶಸ್ವಿಯಾಗಿತ್ತು.. ಉಳಿದ ಫ್ರಾಂಚೈಸಿಗಳು ಖರೀದಿಗೆ ಆಸಕ್ತಿ ತೋರದೇ ಇದ್ದಿದ್ದರಿಂದ ರಚಿನ್‌ ಐಪಿಎಲ್‌ನಲ್ಲಿ ಚೆನ್ನೈ ಪಾಲಾಗಿದ್ದರು.. ಆದ್ರೆ ರಚಿನ್‌ ರವೀಂದ್ರ ಅವರ ಕ್ರಿಕೆಟ್‌ ಸಾಧನೆಯ ಜೊತೆಗೆ ಅವರ ಪ್ರೇಮ್‌ ಕಹಾನಿ ಕೂಡ ಅಷ್ಟೇ ರೋಚಕವಾಗಿದೆ..

ರಚಿನ್ ರವೀಂದ್ರ ಅವರ ಗೆಳತಿಯ ಹೆಸರು ಪ್ರೆಮಿಲಾ ಮೊರಾರ್. ಪ್ರೆಮಿಲಾ ಮೊರಾರ್ ಅವರು ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್. ಜೊತೆಗೆ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ಯುವತಿ..  ಇವರಿಬ್ಬರ ನಡುವಿನ ಪ್ರೇಮ ಕತೆ ಜಗತ್ತಿಗೆ ಗೊತ್ತಾಗಿದ್ದು ಕೂಡ ಇದೇ ಪ್ರೆಮಿಲಾ ಮೂಲಕ.. ರಚಿನ್‌ ಎಲ್ಲೂ ತಾನು ರಿಲೇಷನ್‌ಶಿಪ್‌ನಲ್ಲಿದ್ದೇನೆ ಎಂದು ಹೇಳಿಕೊಂಡಿರಲಿಲ್ಲ.. ಆದರೆ ಪ್ರೆಮಿಲಾ ಹಾಗಲ್ಲ.. ರಚಿನ್‌ ರವೀಂದ್ರ ಜೊತೆಗಿದ್ದ ಸುಂದರ ಕ್ಷಣಗಳು.. ರಚಿನ್‌ ಜೊತೆಗೆ ಹೋಗಿದ್ದ ಔಟಿಂಗ್‌ಗಳಿಗೆ ಸಂಬಂಧಿಸಿದ ಫೋಟೋಗಳನ್ನು ತಮ್ಮ ಇನ್‌ ಸ್ಟಾ ಗ್ರಾಂನಲ್ಲಿ ಅಪ್‌ಲೋಡ್‌ ಮಾಡೋದಿಕ್ಕೆ ಶುರು ಮಾಡಿದ್ದರು.. ಇದರಿಂದಾಗಿ ಪ್ರೆಮಿಲಾ ಮತ್ತು ರಚಿನ್‌ ನಡುವೆ ಪ್ರೇಮ ಶುರುವಾಗಿದ್ದು ಜನರಿಗೆ ಗೊತ್ತಾಗಿತ್ತು.. ರಚಿನ್ ರವೀಂದ್ರ ಮತ್ತು ಪ್ರೆಮಿಲಾ ಮೊರಾರ್ ಆಲ್‌ಮೋಸ್ಟ್‌ ಮೂರೂವರೆ ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ರಚಿನ್‌ ರವೀಂದ್ರ ಅವರನ್ನು ಸಿಕ್ಕಾಪಟ್ಟೆ ಪ್ರೀತಿಸುವ ಪ್ರೆಮಿಲಾಗೆ ಕ್ರಿಕೆಟ್‌ ಮಾತ್ರ ಇಷ್ಟವಿಲ್ಲ. ಆದರೆ ಗೆಳೆಯ ರಚಿನ್ ರವೀಂದ್ರಗಾಗಿ ಕ್ರಿಕೆಟ್ ನೋಡುತ್ತಾರೆ. ಅಲ್ಲದೆ ರಚಿನ್‌ ಅವರು ಪ್ರತಿ ಶತಕ ಸಿಡಿಸಿದಾಗಲೂ ಅದನ್ನು ಸೆಲೆಬ್ರೇಟ್‌ ಮಾಡಿ ಪೋಸ್ಟ್‌ ಮಾಡ್ತಾರೆ.. ಹಾಗಂತ ರಚಿನ್ ಹಿಂದೆ ಸುತ್ತಾಡೋದೇ ಪ್ರೆಮಿಲಾ ಕೆಲಸವಲ್ಲ. ಫ್ಯಾಷನ್‌ ಡಿಸೈನರ್‌ ಆಗಿರುವ ಪ್ರೆಮಿಲಾ ತನ್ನ ಕ್ಷೇತ್ರದಲ್ಲೂ ಒಳ್ಳೆಯ ಸಾಧನೆ ಮಾಡುತ್ತಿದ್ದು, ಫ್ಯಾಷನ್‌ ಡಿಸೈನಿಂಗ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ..  ಈ ಜೋಡಿ ಆದಷ್ಟು ಬೇಗ ದಾಂಪತ್ಯ ಜೀವನಕ್ಕೂ ಕಾಲಿಡಲಿ ಎನ್ನುವುದು ಕ್ರಿಕೆಟ್‌ ಅಭಿಮಾನಿಗಳ ಹಾರೈಕೆ..

Shwetha M