ಪ್ರೀತಿಯಲ್ಲಿ ಬಿದ್ದ ಗೋಲ್ಡನ್‌ ಬಾಯ್‌.. ರಚಿನ್ ರವೀಂದ್ರ ಮನಸ್ಸು ಕದ್ದ ಉದ್ಯಮಿ!

ಪ್ರೀತಿಯಲ್ಲಿ ಬಿದ್ದ ಗೋಲ್ಡನ್‌ ಬಾಯ್‌.. ರಚಿನ್ ರವೀಂದ್ರ ಮನಸ್ಸು ಕದ್ದ ಉದ್ಯಮಿ!

ರಚಿನ್‌ ರವೀಂದ್ರ.. ನ್ಯೂಜಿಲೆಂಡ್ ಪ್ಲೇಯರ್‌ ಆಗಿದ್ರೂ ಕ್ರಿಕೆಟ್‌ ಅಭಿಮಾನಿಗಳಲ್ಲಿ ನಮ್ಮವರು ಅನ್ನೋ ಭಾವ.. ಐಸಿಸಿ ಟೂರ್ನಿಗಳಲ್ಲಿ ಮಿಂಚು ಹರಿಸುತ್ತಿರುವ ಪ್ಲೇಯರ್‌ ನ್ಯೂಜಿಲೆಂಡ್ ತಂಡದ ಭವಿಷ್ಯದ ತಾರೆ ಅನ್ನೋದನ್ನ ಸಾಬೀತು ಪಡಿಸಿದ್ದಾರೆ. ತಮ್ಮ ಅಬ್ಬರದ ಬ್ಯಾಟಿಂಗ್ ಹಾಗೂ ಬೌಲಿಂಗ್‌ ಮೂಲಕ ತಂಡಕ್ಕೆ ನೆರವಾಗುವ ಪ್ಲೇಯರ್‌, ತಂಡ ಸಂಕಷ್ಟದಲ್ಲಿದ್ದಾಗ ಎದೆಗೊಟ್ಟು ನಿಲ್ಲುತ್ತಾರೆ. ಯಾವುದೇ ಒತ್ತಡದ ಸನ್ನಿವೇಶವೇ ಇರಲಿ ರಚಿನ್ ರವೀಂದ್ರ ನೆಲಕಚ್ಚಿ ಬ್ಯಾಟ್ ಮಾಡುವಲ್ಲಿ ನಿಸ್ಸೀಮರು.  ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲೂ ಕನ್ನಡಿಗ ರಚಿನ್‌ ರನ್‌ ಮಳೆ ಸುರಿಸಿದ್ದಾರೆ..  ಚಾಂಪಿಯನ್‌ ಟ್ರೋಫಿಯಲ್ಲಿ ಗೋಲ್ಡನ್‌ ಬ್ಯಾಟ್‌ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.. ರಚಿನ್‌ ಅಬ್ಬರ ಆಟ ನೋಡ್ತಿದ್ದಂತೆ ಈ ಹ್ಯಾಂಡ್ಸಮ್‌ ಬಾಯ್‌ ಸಿಂಗಲಾ? ಅವ್ರಿರಿಗೆ ಗರ್ಲ್ಸ್‌ ಫ್ರೆಂಡ್‌ ಇದ್ದಾರಾ ಅಂತಾ ಲೇಡಿ ಫ್ಯಾನ್ಸ್‌ ಕೇಳ್ತಿದ್ದಾರೆ.. ಅಂದ್ಹಾಗೆ ರಚಿನ್‌ ಅಲ್‌ರೆಡಿ ಪ್ರೀತಿಯ ಬಲೆಗೆ ಬಿದ್ದಾಗಿದೆ. ರಚಿನ್‌ ಮನಸ್ಸು ಕದ್ದಾಕೆ ಯಾವ ಬಾಲಿವುಡ್ ಹೀರೋಯಿನ್​ಗೂ ಕಡಿಮೆ ಇಲ್ಲ.

ಇದನ್ನೂ ಓದಿ: ಮುಂಬೈ & ಚೆನ್ನೈ IPL ಕಿಂಗ್ಸ್ – 17 ಸೀಸನ್.. ಟ್ರೋಫಿ ಗೆದ್ದವರೆಷ್ಟು?

ವಯಸ್ಸು ಜಸ್ಟ್‌ 25.. ಸಣ್ಣ ವಯಸ್ಸಲ್ಲೇ ರಚಿನ್‌ ರವೀಂದ್ರ ಭರವಸೆಯ ಆಟಗಾರ ಅಂತಾ ಅನ್ನಿಸಿಕೊಂಡಿದ್ದಾರೆ.. ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ನ್ಯೂಜಿಲೆಂಡ್‌ ಫೈನಲ್‌ ವರೆಗೂ ಬರಲು ಪ್ರಮುಖ ಪಾತ್ರವಹಿಸಿದ್ದು ರಚಿನ್‌ ರವೀಂದ್ರ.. ಕಿವೀಸ್ ಪರ ಇಡೀ ಪಂದ್ಯಾವಳಿಯ ಉದ್ದಕ್ಕೂ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ ರಚಿನ್​ ಗೋಲ್ಡನ್ ಬ್ಯಾಟ್ ತಮ್ಮದಾಗಿಸ್ಕೊಂಡಿದ್ದಾರೆ.. ಇಡೀ ಪಂದ್ಯಾವಳಿಯಲ್ಲಿ ಆಡಿದ 4 ಇನ್ನಿಂಗ್ಸ್‌ಗಳಲ್ಲಿ 263 ರನ್ ಕಲೆಹಾಕಿದ ರಚಿನ್ ರವೀಂದ್ರ, ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡ್ರು.. ಮೈದಾನದಲ್ಲಿ ರಚಿನ್‌ ಸದ್ದು ಮಾಡ್ತಿದ್ದಂತೆ ಈಗ ಅವ್ರ ವೈಯಕ್ತಿ ವಿಚಾರ ಕೂಡ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಇದೀಗ ರಚಿನ್‌ ಲವ್‌ ಮ್ಯಾಟರ್‌ ಹೊರ ಬಿದ್ದಿದೆ.. ಅಂದ್ಹಾಗೆ ಯುವ ಬ್ಯಾಟರ್‌ ಮನಸು ಕದ್ದ ಚೆಲುವೆ ಪ್ರೆಮಿಲಾ ಮೋರ್‌.. ಫ್ಯಾಷನ್‌ ಡಿಸೈನರ್‌ ಆಗಿರೋ ಈಕೆ, ಈಗಾಗಲೇ ಉದ್ಯಮ ಕ್ಷೇತ್ರದಲ್ಲೂ ಖ್ಯಾತಿ ಗಳಿಸಿದ್ದಾರೆ.

ಹೌದು,  ಪ್ರೆಮಿಲಾ ಮೊರಾರ್ ಅವರು ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್. ಜೊತೆಗೆ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ಯುವತಿ.. ಇವರಿಬ್ಬರ ಪ್ರೇಮ ಪುರಾಣ ಜಗತ್ತಿಗೆ ಗೊತ್ತಾಗಿದ್ದು ಕೂಡ ಇದೇ ಪ್ರೆಮಿಲಾ ಮೂಲಕ.. ರಚಿನ್‌ ಎಲ್ಲೂ ತಾನು ರಿಲೇಷನ್‌ಶಿಪ್‌ನಲ್ಲಿದ್ದೇನೆ ಎಂದು ಹೇಳಿಕೊಂಡಿರ್ಲಿಲ್ಲ.. ಆದರೆ ಪ್ರೆಮಿಲಾ ಹಾಗಲ್ಲ.. ರಚಿನ್‌ ರವೀಂದ್ರ ಜೊತೆಗಿದ್ದ ಸುಂದರ ಕ್ಷಣಗಳು.. ರಚಿನ್‌ ಜೊತೆಗೆ ಹೋಗಿದ್ದ ಔಟಿಂಗ್‌ಗಳಿಗೆ ಸಂಬಂಧಿಸಿದ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡೋದಿಕ್ಕೆ ಶುರು ಮಾಡಿದ್ರು.. ಇದರಿಂದಾಗಿ ಪ್ರೆಮಿಲಾ ಮತ್ತು ರಚಿನ್‌ ನಡುವೆ ಪ್ರೇಮ ಶುರುವಾಗಿದ್ದು ಜನರಿಗೆ ಗೊತ್ತಾಗಿತ್ತು.. ರಚಿನ್ ರವೀಂದ್ರ ಮತ್ತು ಪ್ರೆಮಿಲಾ ಮೊರಾರ್ ಸುಮಾರು 4 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ರಚಿನ್‌ ರವೀಂದ್ರ ಅವರನ್ನು ಸಿಕ್ಕಾಪಟ್ಟೆ ಪ್ರೀತಿಸುವ ಪ್ರೆಮಿಲಾಗೆ ಕ್ರಿಕೆಟ್‌ ಮಾತ್ರ ಇಷ್ಟವಿಲ್ಲ. ಆದರೆ ಗೆಳೆಯ ರಚಿನ್ ರವೀಂದ್ರಗಾಗಿ ಕ್ರಿಕೆಟ್ ನೋಡುತ್ತಾರಂತೆ ಅಲ್ಲದೆ ರಚಿನ್‌ ಅವರು ಪ್ರತಿ ಶತಕ ಸಿಡಿಸಿದಾಗಲೂ ಅದನ್ನು ಸೆಲೆಬ್ರೇಟ್‌ ಮಾಡಿ ಪೋಸ್ಟ್‌ ಮಾಡ್ತಾರೆ.. ಹಾಗಂತ ರಚಿನ್ ಹಿಂದೆ ಸುತ್ತಾಡೋದೇ ಪ್ರೆಮಿಲಾ ಕೆಲಸವಲ್ಲ. ಫ್ಯಾಷನ್‌ ಡಿಸೈನರ್‌ ಆಗಿರುವ ಪ್ರೆಮಿಲಾ ತನ್ನ ಕ್ಷೇತ್ರದಲ್ಲೂ ಒಳ್ಳೆಯ ಸಾಧನೆ ಮಾಡುತ್ತಿದ್ದಾರೆ..

ಅಂದ್ಹಾಗೆ ಮೊರಾರ್‌ ಓದಿದ್ದು ಫಾರಿನ್‌ ನಲ್ಲೇ.. ನ್ಯೂಜಿಲ್ಯಾಂಡ್‌ ನ ಮ್ಯಾಸೆ ವಿಶ್ವವಿದ್ಯಾಲಯದ ಕಾಲೇಜ್ ಆಫ್ ಕ್ರಿಯೇಟಿವ್ ಆರ್ಟ್ಸ್‌ನಲ್ಲಿ‌ ಓದಿದ್ದಾರೆ. ಎಜುಕೇಷನ್‌ ಮುಗಿದ್ಮೇಲೆ, ಪ್ರೆಮಿಲಾ ದಿ ಫುಡ್ ಡ್ಯೂಡ್ಸ್ NZ ಎಂಬ ಕಂಪನಿಯಲ್ಲಿ ಕೆಲ್ಸ ಮಾಡಿದ್ರು.  ಅದಾದ್ಮೇಲೆ ಮೊರಾರ್‌ ಸ್ವಂತ ಉದ್ಯಮ ಶುರುಮಾಡಿದ್ರು.. ಪ್ರೇಮಿಲಾ Morar Fashions ಎಂಬ ಕಂಪನಿಯನ್ನ ನಡೆಸ್ತಿದ್ದಾರೆ. ಇದೀಗ ಪ್ರೆಮಿಲಾ ಹಾಗೂ ರಚಿನ್‌ ಪ್ರೀತಿಯಲ್ಲಿ ಬಿದ್ದಿದ್ದು, ಈ ಜೋಡಿ ಆದಷ್ಟು ಬೇಗ ದಾಂಪತ್ಯ ಜೀವನಕ್ಕೂ ಕಾಲಿಡಲಿ ಎನ್ನುವುದು ಕ್ರಿಕೆಟ್‌ ಅಭಿಮಾನಿಗಳ ಹಾರೈಕೆ..

Shwetha M

Leave a Reply

Your email address will not be published. Required fields are marked *