ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿದ ಬೆಂಗಳೂರು ಮೂಲದ ಹುಡುಗ – ವಿಶ್ವಕಪ್ ಮೊದಲ ಪಂದ್ಯದಲ್ಲಿ ಸ್ಟಾರ್ ಆದ ರಚಿನ್ ರವೀಂದ್ರ

ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿದ ಬೆಂಗಳೂರು ಮೂಲದ ಹುಡುಗ –  ವಿಶ್ವಕಪ್ ಮೊದಲ ಪಂದ್ಯದಲ್ಲಿ ಸ್ಟಾರ್ ಆದ ರಚಿನ್ ರವೀಂದ್ರ

2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಯಂಗ್ ಬ್ಯಾಟರ್ ರಚಿನ್ ರವೀಂದ್ರ ಚೊಚ್ಚಲ ಶತಕ ಸಿಡಿಸಿದ್ದಾರೆ. ಇಂಗ್ಲೆಂಡ್‌ ನೀಡಿದ್ದ 283 ರನ್‌ಗಳ ಗುರಿ ಹಿಂಬಾಲಿಸಿದ ನ್ಯೂಜಿಲೆಂಡ್ ಪರ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ರಚಿನ್‌ ರವಿಂದ್ರ ಎದುರಿಸಿದ ಮೊದಲನೇ ಎಸೆತದಿಂದಲೇ ಸ್ಪೋಟಕ ಬ್ಯಾಟಿಂಗ್‌ ಆರಂಭಿಸಿದರು. ಕೇವಲ 82 ಎಸೆತಗಳಲ್ಲಿ ರಚಿನ್‌ ರವೀಂದ್ರ ಶತಕ ಸಿಡಿಸಿದ್ದಾರೆ. ಇದಾದ ನಂತರ ರಚಿನ್‌ ರವೀಂದ್ರ ಸ್ಟಾರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ.

ಇದನ್ನೂ ಓದಿ: ಕ್ಯಾಪ್ಟನ್ಸಿ ಡೇನಲ್ಲಿ ರೋಹಿತ್ ಶರ್ಮಾ ಗರಂ – ಹಿಟ್‌ಮ್ಯಾನ್ ಸಿಟ್ಟು ನೋಡಿ ಪಾಕ್ ಕ್ಯಾಪ್ಟನ್‌ಗೆ ನಗು ತಡೆಯಲಾಗಲಿಲ್ಲ ಯಾಕೆ??

ರಚಿನ್ ರವೀಂದ್ರ ಕೇವಲ ನ್ಯೂಜಿಲೆಂಡ್‌ನಲ್ಲಷ್ಟೇ ಅಲ್ಲ, ಭಾರತದಲ್ಲೂ ಹೊಸ ಸ್ಟಾರ್ ಆಗಿದ್ದಾರೆ. ಅಷ್ಟಕ್ಕೂ ಯುವ ಕ್ರಿಕೆಟಿಗ ರಚಿನ್ ರವೀಂದ್ರ ಹಿನ್ನೆಲೆಯೇನು? ಹೆಸರಲ್ಲೇ ಗೊತ್ತಾಗುವಂತೆ ಭಾರತಕ್ಕೂ ರಚಿನ್​​ಗೂ ಇರುವ ಲಿಂಕ್​ ಏನು ಎಂಬುದನ್ನು ವಿವರಿಸ್ತೀವಿ. ರಚಿನ್ ರವೀಂದ್ರ ಕುಟುಂಬ ಮೂಲತ: ಭಾರತೀಯ ಮೂಲದವರೇ. ಅದರಲ್ಲೂ ಕನ್ನಡಿಗರೇ. ರಚಿನ್ ತಂದೆ-ತಾಯಿ ಇಬ್ಬರೂ ಬೆಂಗಳೂರಿನವರಾಗಿದ್ದಾರೆ. ತಂದೆ ರವಿಕೃಷ್ಣಮೂರ್ತಿ ಸಾಫ್ಟ್​​ವೇರ್ ಆರ್ಕಿಟೆಕ್ಟ್ ಆಗಿದ್ದು, ಬೆಂಗಳೂರಿನಲ್ಲಿದ್ದಾಗ ಕ್ಲಬ್ ಲೆವೆಲ್ ಕ್ರಿಕೆಟ್ ಕೂಡ ಆಡಿದ್ದರು. ವಿದ್ಯಾಭ್ಯಾಸದ ಬಳಿಕ ಸಾಫ್ಟ್​​ವೇರ್ ಆರ್ಕಿಟೆಕ್ಟ್ ಆಗಿ ರಚಿನ್ ರವೀಂದ್ರ ತಂದೆ ನ್ಯೂಜಿಲೆಂಡ್‌ಗೆ ​​ಗೆ ಹೋದರು. 1999 ನವೆಂಬರ್​ 18ರಂದು ವೆಲ್ಲಿಂಗ್ಟನ್​​ನಲ್ಲಿ ರಚಿನ್ ರವಿಂದ್ರ ಜನಿಸಿದರು. ಇಲ್ಲಿ ರಚಿನ್ ರವೀಂದ್ರ ಅನ್ನೋ ಹೆಸರು ಇಟ್ಟಿರೋದ್ರ ಹಿಂದೆಯೂ ಒಂದು ಇಂಟ್ರೆಸ್ಟಿಂಗ್​ ಸ್ಟೋರಿ ಇದೆ. ರಚಿನ್ ತಂದೆ ರವಿಕೃಷ್ಣಮೂರ್ತಿ ಸಚಿನ್ ತೆಂಡೂಲ್ಕರ್​ ಮತ್ತು ರಾಹುಲ್​ ದ್ರಾವಿಡ್ ಅವರ ದೊಡ್ಡ ಅಭಿಮಾನಿ. ಹೀಗಾಗಿ ತಮ್ಮ ಹೆಸರಿನ ಆರಂಭದ ಅಕ್ಷರ ರಾದ ಜೊತೆ ಸಚಿನ್ ಮತ್ತು ರಾಹುಲ್ ದ್ರಾವಿಡ್​​ ಹೆಸರಿಗೂ ಕನೆಕ್ಟ್ ಆಗಿರುವಂತೆ ಇರಬೇಕು ಅನ್ನೋ ಕಾರಣಕ್ಕಾಗಿ ತಮ್ಮ ಪುತ್ರನಿಗೆ ರಚಿನ್ ರವೀಂದ್ರ ಅಂತಾ ನಾಮಕರಣ ಮಾಡ್ತಾರೆ. ರಚಿನ್ ಅಂದ್ರೆ ಸಚಿನ್​.. ರವೀಂದ್ರ ಅಂದ್ರೆ ರಾಹುಲ್ ದ್ರಾವಿಡ್ ಅನ್ನೋ ಅರ್ಥದಲ್ಲಿ ರಚಿನ್ ರವೀಂದ್ರ ಅಂತಾ ಹೆಸರಿಡ್ತಾರೆ. ಇನ್ನು ರಚಿನ್ ರವೀಂದ್ರ ಪಾಲಿಗೂ ಸಚಿನ್ ಮತ್ತು ದ್ರಾವಿಡ್​​ ರೋಲ್​ಮಾಡೆಲ್​​ಗಳಂತೆ.

ಇನ್ನು ರಚಿನ್ ರವೀಂದ್ರ ಅಂತಾರಾಷ್ಟ್ರೀಯ ಕ್ರಿಕೆಟರ್​​ ಆಗುವಲ್ಲಿ ಅವರ ತಂದೆಯ ರೋಲ್ ತುಂಬಾ ದೊಡ್ಡದಿದೆ. ರಚಿನ್ ತಂದೆ ಮತ್ತು ಟೀಂ ಇಂಡಿಯಾದ ಮಾಜಿ ವೇಗಿ ಜಾವಗಲ್ ಶ್ರೀನಾಥ್ ಇಬ್ಬರೂ ಸ್ನೇಹಿತರು. ರಚಿನ್ ರವೀಂದ್ರ ಕೇವಲ ಒಬ್ಬ ಬ್ಯಾಟ್ಸ್​​ಮನ್ ಅಷ್ಟೇ ಅಲ್ಲ, ಲೆಫ್ಟ್​ ಆರ್ಮ್ ಸ್ಪಿನ್​​ ಬೌಲರ್ ಕೂಡ. 2021ರಲ್ಲಿ ಬಾಂಗ್ಲಾದೇಶ ವಿರುದ್ಧ ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಡೆಬ್ಯೂ ಮಾಡಿದರು. ಅದೇ ವರ್ಷ ಕಾನ್ಪುರ್​​ನಲ್ಲಿ ಭಾರತದ ವಿರುದ್ಧ ಟೆಸ್ಟ್​ ಕ್ರಿಕೆಟ್​ಗೂ ಪಾದಾರ್ಪಣೆ ಮಾಡಿದ್ರು. 2023ರ ಮಾರ್ಚ್​​ನಲ್ಲಿ ಶ್ರೀಲಂಕಾ ವಿರುದ್ಧ ರಚಿನ್ ರವೀಂದ್ರ ಅಂತಾರಾಷ್ಟ್ರೀಯ ಏಕದಿನ  ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರು. ಇದುವರೆಗೆ ರಚಿನ್ 13 ಇಂಟರ್​ನ್ಯಾಷನಲ್​ ವಂಡೇ ಮ್ಯಾಚ್​ಗಳನ್ನಷ್ಟೇ ಆಡಿದ್ದು, ಈಗಾಗಲೇ ತಮ್ಮ ಟ್ಯಾಲೆಂಟ್​ನ್ನ ಸಾಬೀತುಪಡಿಸಿದ್ದಾರೆ. ಅದರಲ್ಲೂ ತಾವಾಡುತ್ತಿರುವ ಮೊದಲ ವರ್ಲ್ಡ್​ಕಪ್​​ನ ಫಸ್ಟ್​ ಮ್ಯಾಚ್​ನಲ್ಲೇ ಅದೂ ಕೂಡ ತಮ್ಮ ಮೂಲವಾಗಿರುವ ಭಾರತದ ಗ್ರೌಂಡ್​ನಲ್ಲಿ ರಚಿನ್ ರವೀಂದ್ರ ಸೆಂಚೂರಿ ಬಾರಿಸಿರೋದು ಇನ್ನಷ್ಟು ಸ್ಪೆಷಲ್. ಹಾಗೆ ನೋಡಿದ್ರೆ, ಇಂಗ್ಲೆಂಡ್​ ವಿರುದ್ಧದ ಮ್ಯಾಚ್​ನಲ್ಲಿ ರಚಿನ್​ ರವಿಂದ್ರಗೆ ಆಡೋಕೆ ಸಿಕ್ಕಿರೋದೆ ಒಂದು ಅದೃಷ್ಟ. ಯಾಕಂದ್ರೆ ಕ್ಯಾಪ್ಟನ್ ಕೇನ್ ವಿಲಿಯಮ್ಸನ್​​ ಅನಾರೋಗ್ಯಕ್ಕೊಳಗಾಗಿದ್ರಿಂದ ಅವರ ಸ್ಥಾನವನ್ನ ರಚಿನ್ ರಿಪ್ಲೇಸ್ ಮಾಡಿದ್ದಾರೆ. ಆದ್ರೆ ಸಿಕ್ಕ ಅವಕಾಶವನ್ನ ಚೆನ್ನಾಗಿಯೇ ಬಳಸಿಕೊಂಡ ರಚಿನ್ ಕಾನ್ವೆ ಜೊತೆ ಸೇರಿ ತಂಡವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಆದ್ರೀಗ ಮುಂದಿನ ಪಂದ್ಯಗಳಿಗೆ ಕೇನ್​ ವಿಲಿಯಮ್ಸನ್​ ಕಮ್​ಬ್ಯಾಕ್​ ಮಾಡುವ ಸಾಧ್ಯತೆ ಇದೆ.

Sulekha