KL, ಸಂಜು, ಪಂತ್, ಕಿಶನ್ ಫೈಟ್ – ಯಾರಿಗೆ Wicket Keeper ಚಾನ್ಸ್?
1 ಪ್ಲೇಸ್.. ಐವರ ರೇಸ್.. ಸವಾಲೇನು?

KL, ಸಂಜು, ಪಂತ್, ಕಿಶನ್ ಫೈಟ್ – ಯಾರಿಗೆ Wicket Keeper ಚಾನ್ಸ್?1 ಪ್ಲೇಸ್.. ಐವರ ರೇಸ್.. ಸವಾಲೇನು?

ಟೀಂ ಇಂಡಿಯಾದಲ್ಲಿ ಈಗ ಓಪನರ್ಸ್ನಿಂದ ಹಿಡಿದು ಬೌಲಿಂಗ್ವರೆಗೂ ಭರ್ಜರಿ ಕಾಂಪಿಟೇಷನ್ ಇದೆ. ಒಂದೊಂದು ಸ್ಥಾನದಲ್ಲೂ ಮೂರ್ನಾಲ್ಕು ಆಟಗಾರರ ನಡುವೆ ಪೈಪೋಟಿ ಇದೆ. ಓಪನರ್ಸ್, ಮಿಡಲ್ ಆರ್ಡರ್, ವಿಕೆಟ್ ಕೀಪರ್ಸ್, ಆಲ್ ರೌಂಡರ್ಸ್, ಸ್ಪಿನ್, ವೇಗಿ ಹೀಗೆ ಎಲ್ಲಾ ವಿಭಾಗಗಳಲ್ಲೂ ಸ್ಟಾರ್ ಆಟಗಾರರ ದಂಡೇ ಇದೆ. ಅದ್ರಲ್ಲೂ ವಿಕೆಟ್ ಕೀಪಿಂಗ್ ಬ್ಯಾಟ್ಸ್ಮನ್ ರೇಸ್ ಅಂತೂ ಇನ್ನೂ ಒಂದು ಕೈ ಮುಂದಿದೆ. ಒಂದೇ ಪ್ಲೇಸ್ಗಾಗಿ ಐವರು ಬಲಿಷ್ಠ ಆಟಗಾರರ ನಡುವೆಯೇ ಜಿದ್ದಾಜಿದ್ದಿ ಇದೆ. ಅಷ್ಟಕ್ಕೂ ಯಾರು ಆ ಐವರು ಆಟಗಾರರು? ಅಂತಿಮವಾಗಿ ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸೋ ಪ್ಲೇಯರ್ ಯಾರು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಸಿಕ್ಕ ಸಿಕ್ಕಲ್ಲಿ ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಮಾಡೋ ಮುನ್ನ ಎಚ್ಚರ – ದೇವರ ಹೆಸರಲ್ಲೇ ಮೋಸ ಮಾಡ್ತಿದ್ದ ಈ ಖತರ್ನಾಕ್‌!

ಟೀಂ ಇಂಡಿಯಾದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಅಂದ್ರೆ ಥಟ್ ಅಂತಾ ನೆನಪಾಗೋದೇ ಮಹೇಂದ್ರ ಸಿಂಗ್ ಧೋನಿ. ಭಾರತಕ್ಕೆ ಹಲವು ಟ್ರೋಫಿಗಳನ್ನು ಗೆದ್ದುಕೊಟ್ಟಿರೋ ಧೋನಿ ತಮ್ಮ 15 ವರ್ಷಗಳ ಕ್ರಿಕೆಟ್ ಕೆರಿಯರ್ನಲ್ಲಿ ಹಲವು ವಿಶ್ವದಾಖಲೆಗಳನ್ನು ಬರೆದಿದ್ದಾರೆ. ಭಾರತಕ್ಕೆ ಮೂರು ಐಸಿಸಿ ಪಂದ್ಯಾವಳಿಗಳನ್ನು ಗೆದ್ದ ಏಕೈಕ ನಾಯಕರಾಗಿದ್ದಾರೆ. ವಿಶ್ವದ ಬೆಸ್ಟ್ ಫಿನಿಶರ್ ಹಾಗೇ ವಿಕೆಟ್ ಕೀಪರ್ ಲಿಸ್ಟ್ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ವಿಕೆಟ್ಗಳ ಹಿಂದೆ ನಿಂತು ಎದುರಾಳಿಗಳ ವಿಕೆಟ್ ಬೇಟೆಯಾಡುತ್ತಿದ್ದ ಮಿಸ್ಟರ್ ಕೂಲ್, 538 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 829 ಬಾರಿ ಔಟ್ ಮಾಡಿದ್ದಾರೆ. ಅದ್ರಲ್ಲೂ 0.08 ಸೆಕೆಂಡುಗಳಲ್ಲಿ ಮಾಡಿದ ವೇಗದ ಸ್ಟಂಪಿಂಗ್ ದಾಖಲೆಯನ್ನು ಹೊಂದಿದ್ದಾರೆ. ಸದ್ಯ ವಿಶ್ವದ ಸಾರ್ವಕಾಲಿಕ ಶ್ರೇಷ್ಠ ವಿಕೆಟ್ ಕೀಪರ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಸೋ ಒಂದು ಕಾಲದಲ್ಲಿ ಟೀಂ ಇಂಡಿಯಾದಲ್ಲಿ ವಿಕೆಟ್ ಕೀಪರ್ ಅಂದ್ರೆ ಧೋನಿ ಒಬ್ರೇ ಇದ್ರು. ಬಟ್ ಈಗ ಸಿಚುಯೇಶನ್ ಹಂಗಿಲ್ಲ. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗೋಕೆ ಆಟಗಾರರ ದಂಡೇ ಇದೆ. ಎಲ್ಲರೂ ಕೂಡ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ನಲ್ಲೂ ಜಾದೂ ಮಾಡೋ ಪ್ಲೇಯರ್ಸ್. ಅಷ್ಟಕ್ಕೂ ಯಾರೆಲ್ಲಾ ಇದ್ದಾರೆ ಅನ್ನೋದನ್ನೇ ಹೇಳ್ತೇನೆ ನೋಡಿ.

1 ಪೋಸ್ಟ್.. ಐವರ ರೇಸ್!

ಕ್ರಿಕೆಟ್ ಫೀಲ್ಡ್ನಲ್ಲಿ ಭಾರತ ತಂಡ ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ. ಒಬ್ರಿಗಿಂತ ಒಬ್ರು ಬೆಸ್ಟ್ ಪ್ಲೇಯರ್ಸ್ ಇದ್ದಾರೆ. ಅದ್ರಲ್ಲೂ ವಿಕೆಟ್ ಕೀಪಿಂಗ್ ಬ್ಯಾಟರ್ಗಾಗಿ ಐವರು ರೇಸ್ನಲ್ಲಿದ್ದಾರೆ. ಮಹೇಂದ್ರ ಸಿಂಗ್ ಧೋನಿ ನಿವೃತ್ತಿಯ ನಂತರ ಅವರ ಉತ್ತರಾಧಿಕಾರಿಯಾಗಿ ರಿಷಭ್ ಪಂತ್ ವಿಕೆಟ್ ಕೀಪರ್ ಆಗಿ ಭಾರತ ತಂಡಕ್ಕೆ ಎಂಟ್ರಿಯಾಗಿದ್ರು. ಆದ್ರೆ ಕಾರು ಅಪಘಾತಕ್ಕೀಡಾದ ಬಳಿಕ ರಿಷಬ್ ಸ್ಥಾನಕ್ಕೆ ಬೇರೆಯವ್ರು ಬಂದಿದ್ರು. ಇದೀಗ ಅಪಘಾತದಿಂದ ಚೇತರಿಸಿಕೊಂಡು ತಂಡಕ್ಕೆ ರಿಷಬ್ ಕಮ್ ಬ್ಯಾಕ್ ಮಾಡಿದ್ದಾರೆ. ಆದ್ರೆ ಅಪಘಾತದ ನಂತರ ರಿಷಬ್ ನಿರೀಕ್ಷಿತ ಪ್ರದರ್ಶನ ನೀಡ್ತಿಲ್ಲ. ಟಿ 20 ವಿಶ್ವಕಪ್ನಲ್ಲಿ ಒಂದೆರಡು ಪಂದ್ಯದಲ್ಲಿ ಬಿಟ್ಟರೆ ಅವರ ಪ್ರದರ್ಶನ ಅಷ್ಟಕ್ಕಷ್ಟೆ. ಶ್ರೀಲಂಕಾ ಸರಣಿಯಲ್ಲೂ ವಿಫಲರಾಗಿದ್ದಾರೆ. 7 ಬಾರಿ 20ರೊಳಗೆ, 4 ಬಾರಿ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಹೀಗಾಗಿ ರಿಷಬ್ಗೆ ಪರ್ಮನೆಂಟ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಪ್ಲೇಸ್ ಸಿಗೋದು ಡೌಟ್ ಇದೆ. ಇನ್ನು ರೇಸ್ನಲ್ಲಿರೋ ಮತ್ತೊಬ್ಬ ಆಟಗಾರ ಕೆಎಲ್ ರಾಹುಲ್. ಟಿ20 ತಂಡದಲ್ಲಿ ಅವಕಾಶ ಕಳೆದುಕೊಂಡಿರೋ ಕೆಎಲ್ ರಾಹುಲ್ ಏಕದಿನ ತಂಡದಲ್ಲಿ ಅವಕಾಶ ಸಿಕ್ಕರೂ ನಿರೀಕ್ಷಿತ ಪ್ರದರ್ಶನ ತೋರಿಲ್ಲ. ಇನ್ನೂ ಟೆಸ್ಟ್ ತಂಡಕ್ಕೆ ಮರಳುವ ಸಾಧ್ಯತೆ ಇದ್ದು, ತಮ್ಮ ಸ್ಥಾನ ಉಳಿಸಿಕೊಳ್ಳಬೇಕಾದರೆ ಉತ್ತಮ ಪ್ರದರ್ಶನದ ಅವಶ್ಯಕತೆ ಇದೆ. ಇನ್ನು ಸಂಜು ಸ್ಯಾಮ್ಸನ್ ಕಥೆಯೂ ಹೀಗೇ ಆಗಿದೆ. ಸದ್ಯಕ್ಕೆ ಸಂಜು ಸ್ಯಾಮ್ಸನ್ ಅವರನ್ನು ಟಿ 20 ಪಂದ್ಯಗಳಲ್ಲಿ ಮಾತ್ರ ಪರಿಗಣಿಸಲಾಗುತ್ತಿ. ಆದ್ರೂ ಅವ್ರಿಂದ ನಿರೀಕ್ಷಿತ ಪ್ರದರ್ಶನ ಬರ್ತಿಲ್ಲ. ಮತ್ತೊಂದೆಡೆ  ಉತ್ತಮ ಪ್ರದರ್ಶನ ನೀಡಿಯೂ ಶಿಸ್ತಿನ ಕಾರಣದಿಂದ ತಂಡದಿಂದ ಹೊರಗುಳಿದಿರುವ ಇಶಾನ್ ಕಿಶನ್ ಇತ್ತೀಚೆಗಷ್ಟೇ ಮುಗಿದ ಬುಚಿಬಾಬು ಕ್ರಿಕೆಟ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ಹಾಗಾಗಿ ಶೀಘ್ರದಲ್ಲೇ ಇಶಾನ್ ಕಿಶನ್ ಭಾರತ ತಂಡಕ್ಕೆ ಮರಳುವ ಸಾಧ್ಯತೆಯಿದೆ. ಈ ನಾಲ್ವರು ದಿಗ್ಗಜರ ಜೊತೆ ಯುವ ವಿಕೆಟ್ ಕೀಪರ್ ಧ್ರುವ್ ಜುರೆಲ್ ಕೂಡ ಪೈಪೋಟಿಯಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರು ಪ್ರದರ್ಶನ ನಿರೀಕ್ಷೆಗೂ ಮೀರಿತ್ತು. ಹೀಗಾಗಿ ಈ ಐವರ ನಡುವೆ ಅಂತಿಮವಾಗಿ ವಿಕೆಟ್ ಕೀಪರ್ ಬ್ಯಾಟರ್ ಜಿದ್ದಾಜಿದ್ದಿನಲ್ಲಿ ಯಾರು ಉಳ್ಕೊಳ್ತಾರೆ ಅನ್ನೋದೇ ಕುತೂಹಲ  ಮೂಡಿಸಿದೆ.

ಒಂದು ತಂಡದ ಪ್ಲೇಯಿಂಗ್ 11ನಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಪಾತ್ರ ತುಂಬಾನೇ ಮಹತ್ವದ್ದು. ವಿಕೆಟ್ ಹಿಂದೆ ನಿಂತು ಚಾಣಾಕ್ಷ್ಯತನದಿಂದ ವಿಕೆಟ್ ತೆಗೆಯೋ ಸಾಮರ್ಥ್ಯ ಬೇಕು. ಜಿಂಕೆ ವೇಗದಲ್ಲಿ ಜಿಗಿದು ಸ್ಟಂಪಿಂಗ್ ಮಾಡ್ಬೇಕು. ಹಾಗೇ ಬ್ಯಾಟಿಂಗ್ನಲ್ಲೂ ಕೂಡ ತಂಡಕ್ಕೆ ಬೆಸ್ಟ್ ಪರ್ಫಾಮೆನ್ಸ್ ಕೊಡ್ಬೇಕು. ಸದ್ಯ ರೇಸ್ನಲ್ಲಿರೋ ಈ ಐವರು ಆಟಗಾರರು ಕೂಡ ಟೀಂ ಇಂಡಿಯಾದಲ್ಲಿ ಈಗಾಗ್ಲೇ ತಮ್ಮ ಪ್ರತಿಭೆಯನ್ನ ತೋರಿಸಿದ್ದಾರೆ. ಇದೇ ಕಾರಣಕ್ಕೆ ಯಾರನ್ನ ಅಂತಿಮವಾಗಿ ತಂಡದಲ್ಲಿ ಫೈನಲ್ ಮಾಡ್ಬೇಕು ಅನ್ನೋದೇ ಬಿಸಿಸಿಐಗೆ ಸವಾಲಾಗಿದೆ.

Shwetha M

Leave a Reply

Your email address will not be published. Required fields are marked *