ಕೊಹ್ಲಿ ನೋವಿನ ಅಪ್ಪುಗೆ, ಕಣ್ಣೀರ ವಿದಾಯ – ಸ್ಪಿನ್ ಮಾಂತ್ರಿಕ ಆರ್. ಅಶ್ವಿನ್ ಭಾವುಕ ಕ್ಷಣಗಳು
ಭಾರತ ತಂಡದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಆದರೆ, ಈ ವಿದಾಯ ಹೇಳುವುದು ಸ್ಪಿನ್ ದಿಗ್ಗಜನಿಗೂ ಸ್ವಲ್ಪ ಕಷ್ಟವಾಗಿತ್ತು. ಜೊತೆಗೆ ಕಣ್ಣೀರು ಅದುಮಿಟ್ಟುಕೊಳ್ಳುವುದು ಕೂಡಾ ಕಷ್ಟವಾಗಿತ್ತು. ಸ್ಪಿನ್ ಲೆಜೆಂಡ್ ರವಿಚಂದ್ರನ್ ಅಶ್ವಿನ್ ಮಹತ್ವದ ನಿರ್ಧಾರಕ್ಕೆ ಬರುವ ಮೊದಲು ವಿರಾಟ್ ಕೊಹ್ಲಿಯೊಂದಿಗೆ ಚರ್ಚಿಸಿದ್ದರು.
ಇದನ್ನೂ ಓದಿ: ರೋಹಿತ್ ಶರ್ಮಾ ಬ್ಯಾಟ್ ಸೈಲೆಂಟ್ ಯಾಕಾಯ್ತು?- ಹಿಟ್‌ಮ್ಯಾನ್ ನಾಯಕತ್ವ ಕುರಿತು ಟೀಕೆ
ಬ್ರಿಸ್ಬೇನ್ನ ಗಾಬಾ ಮೈದಾನದಲ್ಲಿ ನಡೆದ ಈ ಪಂದ್ಯದ 5ನೇ ದಿನದಾಟದ ವೇಳೆ ಅಶ್ವಿನ್ ಹಾಗೂ ವಿರಾಟ್ ಕೊಹ್ಲಿ ಜೊತೆಯಾಗಿ ಡ್ರೆಸ್ಸಿಂಗ್ ರೂಮ್ನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಅಶ್ವಿನ್ ತಮ್ಮ ನಿವೃತ್ತಿ ನಿರ್ಧಾರವನ್ನು ಕೊಹ್ಲಿ ಜೊತೆ ಹಂಚಿಕೊಂಡಿದ್ದಾರೆ. ಇಬ್ಬರೂ ಜೊತೆಯಲ್ಲೇ ಕುಳಿತು ಗಂಭೀರವಾಗಿ ಚರ್ಚಿಸಿದ್ದಾರೆ. ನಂತರ ವಿರಾಟ್ ಕೊಹ್ಲಿ ರವಿಚಂದ್ರನ್ ಅಶ್ವಿನ್ ಅವರನ್ನು ತಬ್ಬಿಕೊಂಡಿದ್ದಾರೆ. ಕೊಹ್ಲಿಯ ಆತ್ಮೀಯ ಅಪ್ಪುಗೆಗೆ ಅಶ್ವಿನ್ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ರವಿಚಂದ್ರನ್ ಅಶ್ವಿನ್ 55 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 293 ವಿಕೆಟ್ಗಳನ್ನು ಕಬಳಿಸಿದ್ದರು. ಅಂದರೆ ಕಿಂಗ್ ಕೊಹ್ಲಿ ನಾಯಕತ್ವದಲ್ಲಿ ಅಶ್ವಿನ್ ಅತ್ಯಂತ ಯಶಸ್ವಿ ಬೌಲರ್ ಆಗಿ ಗುರುತಿಸಿಕೊಂಡಿದ್ದರು.
ಅಶ್ವಿನ್ ದಿಢೀರ್ ನಿವೃತ್ತಿ ಘೋಷಣೆ ವೇಳೆ ಕೆಲ ವಿಚಾರವನ್ನ ಹಂಚಿಕೊಂಡಿದ್ದಾರೆ. ನನ್ನಲ್ಲಿ ಇನ್ನೂ ಸಹ ಸ್ವಲ್ಪ ಕ್ರಿಕೆಟ್ ಉಳಿದಿದೆ ಎಂದು ಭಾವಿಸುತ್ತೇನೆ. ಇದನ್ನ ಕ್ಲಬ್ ಕ್ರಿಕೆಟ್ನಲ್ಲಿ ಮುಂದುವರೆಸಲು ನಿರ್ಧರಿಸಿದ್ದೇನೆ. ಇದು ಟೀಮ್ ಇಂಡಿಯಾ ಜೊತೆಗಿನ ನನ್ನ ಕೊನೆಯ ದಿನ. ನನ್ನ ಸಹ ಆಟಗಾರರಿಗೆ ಹಾಗೂ ಬಿಸಿಸಿಐಗೆ ಧನ್ಯವಾದಗಳು. ನನ್ನ ಈ ಜರ್ನಿಯಲ್ಲಿ ಜೊತೆಗೂಡಿದ ಪ್ರತಿಯೊಬ್ಬರು ಧನ್ಯವಾದ ಎಂದು ಹೇಳಿದ್ದಾರೆ.