ಹನುಮ ಜಯಂತಿದಿನವೇ ಕನಕಪುರದ ನಾಟಿ ಕೋಳಿ ಮ*ರ್ಡರ್- ಸಿದ್ದು, ಡಿಕೆಶಿ ಬ್ರೇಕ್ ಫಾಸ್ಟ್ ಮೀಟಿಂಗ್‌ಗೆ ಆರ್ ಅಶೋಕ್ ಟಾಂಗ್

ಹನುಮ ಜಯಂತಿದಿನವೇ ಕನಕಪುರದ ನಾಟಿ ಕೋಳಿ ಮ*ರ್ಡರ್- ಸಿದ್ದು, ಡಿಕೆಶಿ ಬ್ರೇಕ್ ಫಾಸ್ಟ್ ಮೀಟಿಂಗ್‌ಗೆ ಆರ್ ಅಶೋಕ್ ಟಾಂಗ್

ಬೆಳ್ಳಂಬೆಳಗ್ಗೆ ಡಿಕೆ ಶಿವಕುಮಾರ್ ಮನೆಗೆ ಹೋಗಿ ನಾಟಿ ಕೋಳಿ ಸಾರ್ ತಿಂದ ಸಿಎಂ ಸಿದ್ದರಾಮಯ್ಯರನ್ನ ಬಿಜೆಪಿ ಕಾಲೆಯುವ ಕೆಲಸ ಮಾಡ್ತಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬ್ರೇಕ್‌ಫಾಸ್ಟ್ ಮೀಟಿಂಗ್‌ಗೆ ವಿಪಕ್ಷ ನಾಯಕ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ. ಇಂದು ರಾಜ್ಯದಲ್ಲಿ ಎಲ್ಲಾ ಕಡೆ ಹನುಮ ಜಯಂತಿ ಆಚರಣೆ ನಡೆಯುತ್ತಿದೆ. ಆದರೆ ಹನುಮ ಜಯಂತಿ ದಿನವೇ ಸದಾಶಿವನಗರದಲ್ಲಿ ಕನಕಪುರದ ನಾಟಿ ಕೋಳಿ ಮರ್ಡರ್ ಆಗಿದೆ ಅಂತ ಅಶೋಕ್ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆಯ ಬಂಡವಾಳ ಬಯಲು – ಹುಳದ ಆಹಾರ ಕೊಟ್ಟು, ಕೇಸ್ ಹಾಕಿದವರಿಗೆ ಬಿಗ್ ಶಾಕ್

ನಾಟಿ ಕೋಳಿಯ ಪಲಾವ್, ಬಿರಿಯಾನಿ, ಸಾಂಬಾರ್ ತಿಂದಿದ್ದಾರೆ. ಮೊದಲೇ ಸಿದ್ದರಾಮಯ್ಯ ಮಾಂಸ ತಿಂದು ಧರ್ಮಸ್ಥಳಕ್ಕೆ ಹೋದರು. ನಾವೆಲ್ಲಾ ಆಂಜನೇಯನ ಆರಾಧನೆ ಮಾಡಿದರೆ, ಇವರು ನಾಟಿ ಕೋಳಿ ಆರಾಧನೆ ಮಾಡುತ್ತಿದ್ದಾರೆ. ಇದನ್ನು ಪ್ರಶ್ನೆ ಮಾಡಿ ಎಂದು ನನಗೆ ನೂರಾರು ಫೋನ್ ಬಂತು. ಅದಕ್ಕೋಸ್ಕರ ನಾನು ಕೇಳುತ್ತಿದ್ದೇನೆ ಅಂತ ಅಶೋಕ್ ಹೇಳಿದ್ದಾರೆ.

ಇದೊಂದು ರೀತಿ ಪ್ರಹಸನ ಇದ್ದಂತೆ. ಮೊನ್ನೆ ಸಿದ್ದರಾಮಯ್ಯ ಮನೆಯಲ್ಲಿ ಬ್ರೇಕ್ ಫಾಸ್ಟ್, ಇಂದು ಡಿಸಿಎಂ ಮನೆಯಲ್ಲಿ ನಾಟಿ ಕೋಳಿ. ಇದು ಸೋನಿಯಾ ಗಾಂಧಿ ನಿರ್ದೇಶನ, ರಾಹುಲ್ ಗಾಂಧಿ ಚಿತ್ರಕಥೆ, ವೇಣುಗೋಪಾಲ್ ಸಂಭಾಷಣೆ ಅಶೋಕ್ ವ್ಯಂಗ್ಯವಾಡಿದ್ರು. ಪುಣ್ಯಕ್ಕೆ ಇಂದು ಹನುಮ ಜಯಂತಿ ಅಂತಾ ಡಿ.ಕೆ. ಶಿವಕುಮಾರ್ ತಿಂದಿಲ್ಲ. ಸಿದ್ದರಾಮಯ್ಯ ಯಾವ ಜಯಂತಿ ಆದರೆ ನನಗೆ ಏನು ಅಂತಾ ತಿಂದಿದ್ದಾರೆ. ಮೊದಲೇ ಅವರಿಗೆ ದೇವರನ್ನು ಕಂಡರೆ ಆಗಲ್ಲ. ಎಲ್ಲಾ ಹಳ್ಳಿಗಳಲ್ಲೂ ರಾಮ ಇಲ್ಲದಿದ್ದರೂ ಆಂಜನೇಯ ಇದ್ದೇ ಇರುತ್ತಾನೆ. ಈ ರೀತಿ ಮಾಡುವುದರಿಂದ ಹನುಮ ಭಕ್ತರಿಗೆ ಬೇಜಾರಾಗಿದೆ ಅಂತ ಅಶೋಕ್ ಹೇಳಿದ್ರು.

Kishor KV