ಎಗ್ಕರಿ ವಿಚಾರಕ್ಕೆ ಗಂಡ ಹೆಂಡತಿ ಜಗಳ – ಬೀದಿ ಜಗಳಕ್ಕೆ ಹೋಯ್ತು ಪತಿ ಪ್ರಾಣ

ಮೊಟ್ಟೆ ಕರಿ ಮಾಡಿಲ್ಲ ಅನ್ನೋ ಕಾರಣಕ್ಕೆ ಪತ್ನಿಯೊಂದಿಗೆ ಜಗಳವಾಡಿ ಗಂಡ ಸೂಸೈಡ್ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಬಂದಾದಲ್ಲಿ ನಡೆದಿದೆ. 28 ವರ್ಷದ ವ್ಯಕ್ತಿಯೊಬ್ಬ ತನ್ನ ಹೆಂಡತಿಯೊಂದಿಗಿನ ಕೌಟುಂಬಿಕ ಕಲಹದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಮೃತನನ್ನು ಶಾಂತಿನಗರ ಪ್ರದೇಶದ ನಿವಾಸಿ ಶುಭಂ ಎಂದು ಗುರುತಿಸಲಾಗಿದ್ದು, ಅವರು ಪೇಂಟ್ ಮಾಡುತ್ತಾ ಜೀವನೋಪಾಯಕ್ಕಾಗಿ ಸಂಪಾದಿಸುತ್ತಿದ್ದರು. ಕುಟುಂಬ ಸದಸ್ಯರ ಪ್ರಕಾರ, ಶುಭಂ ಹಿಂದಿನ ದಿನ ಕೆಲಸದಿಂದ ಮನೆಗೆ ಹಿಂದಿರುಗಿದ ನಂತರ ಈ ಘಟನೆ ನಡೆದಿದೆ. ಶುಭಂ ಅವರ ತಾಯಿ ಮುನ್ನಿ ದೇವಿ ಪೊಲೀಸರಿಗೆ ನೀಡಿರುವ ಮಾಹಿತಿಯ ಪ್ರಕಾರ, ಮನೆಗೆ ಬಂದ ನಂತರ ಅವರ ಮಗ ಪತ್ನಿಗೆ ಮೊಟ್ಟೆ ಕರಿ ಮಾಡಲು ಹೇಳಿದಾಗ ಅವರು ನಿರಾಕರಿಸಿದ್ದಾರೆ ಎನ್ನಲಾಗಿದೆ. ಶುಭಂ ಹೊರಗಿನಿಂದ ಆಹಾರ ತಂದಿದ್ದರು. ಅದನ್ನು ಅವರ ಪತ್ನಿ ತಿನ್ನಲು ನಿರಾಕರಿಸಿದರು ಎಂದು ಮುನ್ನಿ ದೇವಿ ಹೇಳಿದ್ದಾರೆ. ನಂತರ, ಹೆಂಡತಿ ಬಳಿ ಮೊಟ್ಟೆ ಕರಿ ಮಾಡುವಂತೆ ಹೇಳಿದ್ದಾರೆ. ಆದರೆ, ಆಕೆ ಮಾಡಲಿಲ್ಲ. ಹೀಗಾಗಿ ತನ್ನ ಮಗನೇ ಮೊಟ್ಟೆ ಕರಿ ತಯಾರಿಸಿದ. ಸ್ವಲ್ಪ ಸಮಯದ ನಂತರ, ಇಬ್ಬರ ನಡುವೆ ಜಗಳವಾಯಿತು ಎಂದು ಅವರು ಹೇಳಿದರು.
ಇದನ್ನೂ ಓದಿ: ಟಾಕ್ಸಿಕ್ ಟೀಸರ್ಗೆ ಮತ್ತೆ ಕಂಟಕ – ರಾಜ್ಯ ಮಹಿಳಾ ಆಯೋಗಕ್ಕೆ ದೂರು ದಾಖಲು
ಈ ಭಿನ್ನಾಭಿಪ್ರಾಯವು ಉಲ್ಬಣಗೊಂಡಿತು. ವಾದದ ಸಮಯದಲ್ಲಿ ಪತ್ನಿ ಬೀದಿಗೆ ಬಂದು ರಂಪಾಟ ಮಾಡಿದ್ದಾಳೆ. ಮುನ್ನಿ ದೇವಿ ಅವರು ತಮ್ಮ ಮಗ ಮತ್ತು ಆಕೆಯನ್ನು ಮನೆಯೊಳಗೆ ಕರೆತಂದರು ಎಂದು ಹೇಳಿದರು. ಜಗಳ ಸಾರ್ವಜನಿಕವಾಗಿ ನಡೆಯಿತು. ಇದರಿಂದ ತನ್ನ ಮಗನಿಗೆ ತೀವ್ರ ಅವಮಾನವಾಯಿತು ಎಂದು ಅವರು ಆರೋಪಿಸಿದ್ದಾರೆ.ಕುಟುಂಬದ ಪ್ರಕಾರ, ಶುಭಂ ತೀವ್ರ ಮಾನಸಿಕ ಒತ್ತಡದಲ್ಲಿದ್ದರು. ನೆರೆಹೊರೆಯವರು ಮತ್ತು ಸಮುದಾಯದ ದೃಷ್ಟಿಯಲ್ಲಿ ಅವರ ಗೌರವಕ್ಕೆ ಧಕ್ಕೆಯಾಗಿದೆ ಎಂದು ಬೇಸರ ಮಾಡಿಕೊಂಡಿದ್ದ ಎನ್ನಲಾಗಿದೆ. ಅವಮಾನವಾಯಿತು ಎಂಬ ಬೇಸರದಿಂದ ಶುಭಂ ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನೋಡಿರಿ

