ಅಡುಗೆ ಚೆನ್ನಾಗಿಲ್ಲ ಎಂದಿದ್ದಕ್ಕೆ ತವರು ಮನೆಯವರನ್ನ ಕರೆಸಿ ಹೊಡೆಸಿದ ಪತ್ನಿ! – ಹೆಂಡ್ತಿ ಸಿಟ್ಟಿಗೆ ಗಂಡನ ಕುಟುಂಬ ಆಸ್ಪತ್ರೆ ಪಾಲು!

ಅಡುಗೆ ಮಾಡುವಾಗ ಉಪ್ಪು, ಖಾರ ಹೆಚ್ಚುಕಮ್ಮಿ ಆಗೋದು ಕಾಮನ್. ಮನೆಯಲ್ಲಿರುವವರು ಸುಧಾರಿಸಿಕೊಂಡು ಹೋಗ್ತಾರೆ. ಆದ್ರೀಗ ಇಲ್ಲೊಂದು ಕಡೆ ಅಡುಗೆ ಮಾಡೋ ವಿಚಾರಕ್ಕೆ ಗಂಡ, ಹೆಂಡತಿ ಮಧ್ಯೆ ಜಗಳ ಶುರುವಾಗಿದ್ದು, ನಂತರ ಮಾರಾಮಾರಿ ನಡೆದಿದೆ.
ಇದನ್ನೂ ಓದಿ: ಪ್ರೇಯಸಿಗಾಗಿ ಹೆಂಡ್ತಿಗೆ ಡಿವೋರ್ಸ್! – ಗಂಡನ ಬಿಟ್ಟು ಬರಲು ಒಪ್ಪದಿದ್ದಕ್ಕೆ ಆಕೆಯನ್ನ ಕೊಂದು ತಾನೂ ಜೀವ ಬಿಟ್ಟ ಪಾಗಲ್!
ರಾಯಚೂರಿನ ಹೊಸೂರು ರಸ್ತೆಯಲ್ಲಿ ಈ ಘಟನೆ ನಡೆದಿದೆ. ಬ್ಯಾಂಕ್ ಉದ್ಯೋಗಿ ಶಿವರಾಜ್ ಹಾಗೂ ಕೃಷಿ ಇಲಾಖೆಯ ಶೋಭಾ ದಂಪತಿಗಳ ನಡುವೆ ಕ್ಷಲ್ಲಕ ಕಾರಣಕ್ಕೆ ಆಗಾಗ ಮನಸ್ತಾಪವಾಗುತ್ತಿತ್ತು. ನೀನು ಅಡುಗೆ ಸರಿಯಾಗಿ ಮಾಡುವುದಿಲ್ಲ ಎಂದು ಪತಿ ಶಿವರಾಜ್ ಕಿರಿಕ್ ತೆಗೆದಿದ್ದೇ ಈ ದೊಡ್ಡ ರಂಪಾಟಕ್ಕೆ ಕಾರಣವಾಗಿದೆ.. ಮಾತಿಗೆ ಮಾತು ಬೆಳೆದು, ಇಡೀ ಮನೆ ರಣರಂಗವಾಗಿ ಮಾರ್ಪಟ್ಟಿದೆ.
ಪತಿ ಶಿವರಾಜ್ ಬೈಯ್ಯುತ್ತಿದ್ದಂತೆ ಕೆರಳಿದ ಪತ್ನಿ ಶೋಭಾ, ತಕ್ಷಣವೇ ತನ್ನ ತವರು ಮನೆಯವರಿಗೆ ಫೋನ್ ಮಾಡಿದ್ದಾರೆ. ಮಗಳ ಕರೆಯನ್ನು ಕೇಳಿ ಆವೇಶದಿಂದ ಬಂದ ಶೋಭಾ ಮನೆಯವರು, ಶಿವರಾಜ್ ಅವರ ಮನೆಗೆ ನುಗ್ಗಿ ರೇಗಾಡಿದ್ದಾರೆ. ನೋಡನೋಡುತ್ತಿದ್ದಂತೆಯೇ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ಮಾರಾಮಾರಿಯೇ ನಡೆದುಹೋಗಿದೆ.
ಬಂದವರು ಸುಮ್ಮನೆ ಇರಲಿಲ್ಲ. ಪತಿ ಶಿವರಾಜ್ ಮಾತ್ರವಲ್ಲದೆ, ಅವರ ವಯಸ್ಸಾದ ತಂದೆ ದೇವಿಂದ್ರಪ್ಪ, ತಾಯಿ ಲಕ್ಷ್ಮಿ ಮತ್ತು ಸಹೋದರ ವೆಂಕಟೇಶ್ ಮೇಲೆಯೂ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಶಿವರಾಜ್ ತಂದೆ ದೇವಿಂದ್ರಪ್ಪ ಗಂಭೀರ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ರಾಯಚೂರಿನಿಂದ ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪತ್ನಿ ಶೋಭಾ ಸೇರಿದಂತೆ ಐವರ ವಿರುದ್ಧ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶೋಭಾ, ರಂಜಿತ್ ಕುಮಾರ್, ತಾಯಣ್ಣಗೌಡ, ಅಕ್ಷಯ್ ಕುಮಾರ್ ಹಾಗೂ ಈರಣ್ಣಗೌಡ ಎಂಬುವವರ ಮೇಲೆ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ನೋಡಿರಿ

