ಡ್ಯೂಕ್ಸ್ ಬಾಲ್ ಅಸಲಿ ಗುಟ್ಟು ರಟ್ಟು – ಸಿಗುತ್ತಿಲ್ವಾ ಆಂಗಸ್ ಹಸುವಿನ ಚರ್ಮ?
ಒಂದು Ballಗೆ ಎಷ್ಟು ಹಸು ಬಲಿಯಾಗುತ್ತೆ?

ಇಂಗ್ಲೆಂಡ್ ಮತ್ತು ಭಾರತ ಟೆಸ್ಟ್ ಸರಣಿಯಲ್ಲಿ ಡ್ಯೂಕ್ಸ್ ಬಾಲ್ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.. 2ನೇ ಟೆಸ್ಟ್ ಕೇವಲ 10 -20 ಓವರ್ಗಳಿಗೆ ಬಾಲ್ ಚೇಂಜ್ ಮಾಡಬೇಕಾದ ಪರಿಸ್ಥಿತಿ ಎದುರಾಗಿತ್ತು.. ಇದು ಟೀಂ ಇಂಡಿಯಾ ಆಟಗಾರರ ಸಿಟ್ಟು ನೆತ್ತಿಗೇರುವಂತೆ ಮಾಡಿತ್ತು. ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ ಟೆಸ್ಟ್ ಪಂದ್ಯಗಳಿಗೆ ಕಳಪೆ ಬಾಲ್ ನೀಡಿದ್ದಾರೆ ಅಂತ ಕಿಡಿಕಾರಿದ್ರು. ಶುಭ್ಮನ್ ಗಿಲ್ ಡ್ಯೂಕ್ಸ್ ಬಾಲ್ ಬೇಗನೇ ಮೃದುವಾಗುತ್ತಿವೆ ಎಂದು ದೂರಿದ್ದರು. ಇಂಗ್ಲೆಂಡ್ ಆಟಗಾರರು ಕೂಡ ಡ್ಯೂಕ್ಸ್ ಬಾಲ್ ಬಗ್ಗೆ ಆಕ್ರೋಶ ಹೊರ ಹಾಕಿದ್ರು.. ಈಗ ಬಾಲ್ ಯಾಕೆ ಬೇಗ ಹಾಳುಗುತ್ತೆ ಅನ್ನೋದು ಗೊತ್ತಾಗಿದೆ..
ಇಂಗ್ಲೆೆಂಡ್ ಮತ್ತು ಭಾರತ ನಡುವಿನ ಟೆಸ್ಟ್ ಸರಣಿಯಲ್ಲಿ ಬಳಸುತ್ತಿರುವ ಡ್ಯೂಕ್ಸ್ ಬಾಲ್ ಬಹಳ ಕಳಪೆಯಾಗಿದೆ.. ಬೇಗನೇ ಮೃದುವಾಗುತ್ತಿದೆ ಎಂಬ ಮಾತು ಸರಣಿ ಆರಂಭವಾದಾಗಿನಿಂದಲೂ ಕೇಳಿ ಬರುತ್ತಿದೆ. ಈ ವಿಚಾರವಾಗಿ ಮೈದಾನದಲ್ಲೇ ಮಾತನಾಡಿದ್ದೂ ಆಗಿದೆ, ಮೈದಾನದ ಹೊರೆಗೂ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದೂ ಆಗಿದೆ. ಈ ಬಗ್ಗೆ ಸ್ವತಃ ಡ್ಯೂಕ್ಸ್ ಚೆಂಡು ತಯಾರಕ ಕಂಪನಿಯಾದ ಬ್ರಿಟಿಷ್ ಬಾಲ್ಸ್ ಲಿಮಿಟೆಡ್ ಮಾಲೀಕರೇ ಮುತುವರ್ಜಿ ವಹಿಸಿಕೊಂಡು ತನಿಖೆ ನಡೆಸುವುದಾಗಿ ತಿಳಿಸಿದ್ದರು. ಇದೀಗ ಅಚ್ಚರಿಯ ಸಂಗತಿ ಬಯಲಾಗಿದೆ.
ಹಸುವಿನಿಂದ ಬರುವ ಚರ್ಮದ ಗುಣಮಟ್ಟದ ವ್ಯತ್ಯಾಸವೇ ಈ ಸಮಸ್ಯೆಗೆ ಕಾರಣ ಎಂದು ತಿಳಿದು ಬಂದಿದೆ. ಭಾರತೀಯ ಮೂಲದ ಉದ್ಯಮಿ ದಿಲೀಪ್ ಜಜೋಡಿಯಾ ಅವರ ಪ್ರಕಾರ, ಆಂಗಸ್ ಎಂಬ ನಿರ್ದಿಷ್ಟ ತಳಿಯ ಹಸುಗಳ ಚರ್ಮ ಪೂರೈಕೆಯಲ್ಲಿ ಆಗಿರುವ ಕೊರತೆಯಿಂದಾಗಿ ಈ ಸಮಸ್ಯೆ ಉಂಟಾಗಿದೆ. ಈ ಹಿಂದೆ ನಮಗೆ ಬೇಕಾದಂತಹ ಗುಣಮಟ್ಟದ ಚರ್ಮ ಸಿಗುತ್ತಿತ್ತು. ಆದರೆ ಕೊರೋನಾ ಸಂಕಷ್ಟ ಕಾಲದ ಬಳಿಕ ಈಗ ಸಿಗತ್ತಿಲ್ಲ ಎಂದು ಅವರು ತಿಳಿಸಿದ್ದಾರೆ. ಚರ್ಮದ ಗುಣಮಟ್ಟದ ಮೇಲೆ ಬಾಲ್ನ ಗುಣಮಟ್ಟ ಮತ್ತು ಬಾಳಿಕೆ ನಿರ್ಧಾರವಾಗುತ್ತದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಚೆಂಡಿಗೆ ಅಗತ್ಯವಿರುವ ಉತ್ತಮ ಗುಣಮಟ್ಟದ ಚರ್ಮ ಸಿಗುವುದು ಕಷ್ಟವಾಗಿದೆ. ದನದ ಮಾಂಸದ ಉತ್ಪಾದನಾ ಘಟಕಗಳು ಮುಚ್ಚುತ್ತಿರುವುದೇ ಇದಕ್ಕೆ ಕಾರಣ.. ಒಂದು ನಿರ್ದಿಷ್ಟ ತಳಿಯ ಚರ್ಮವೇ ಬೇಕೆಂದು ಕೇಳುವ ಸ್ಥಿತಿಯಲ್ಲಿ ಈಗ ಇಲ್ಲ. ಚರ್ಮವನ್ನು ಸಂಸ್ಕರಿಸುವ ಘಟಕಗಳಿಗೆ ಬೇಕಾದ ದಪ್ಪದ ಚರ್ಮ ಸಿಕ್ಕರೆ ಅದೇ ದೊಡ್ಡ ವಿಷಯ. ಇದೇ ಸಮಸ್ಯೆಯನ್ನು ನಾವು ಎದುರಿಸುತ್ತಿದ್ದೇವೆ ಎಂದು ಜಜೋಡಿಯಾ ಹೇಳಿದ್ದಾರೆ.
ಈಬಾಲ್ಗೆ ಬಳಸೋದು ಆಂಗಸ್ ಹಸುಗಳ ಚರ್ಮ. ಈ ಹಸುಗಳು ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ನ ಹುಲ್ಲುಗಾವಲುಗಳಲ್ಲಿ ಮೇಯುತ್ತವೆ. ಅವುಗಳ ಚರ್ಮದಿಂದ ತಯಾರಿಸಿದ ಚೆಂಡುಗಳು ಉತ್ತಮವಾಗಿರುತ್ತದೆ. ಆದರೆ ಈಗ ತಳಿ ಬದಲಾವಣೆ ಮತ್ತು ರಫ್ತು ಬೇಡಿಕೆಯಿಂದಾಗಿ, ಅವುಗಳ ಚರ್ಮವನ್ನು ದೊಡ್ಡ ಪ್ರಮಾಣದಲ್ಲಿ ಪಡೆಯುವುದು ಕಷ್ಟವಾಗಿದೆ. ಕೋವಿಡ್ ಸಂಕಷ್ಟಕಾಲದ ಬಳಿಕ ಚರ್ಮ ಸಂಸ್ಕರಣಾ ಘಟಕಗಳಲ್ಲಿ ಕೆಲಸ ಮಾಡುವವರ ಸಂಖ್ಯೆ ಬಹಳ ಇಳಿದಿದೆ. ಹೀಗಾಗಿ ಉತ್ಪಾದನೆಗೆ ತೊಂದರೆಯಾಗಿದೆ ಅನ್ನೋ ಮಾತು ಕೇಳಿ ಬರ್ತಿದೆ.

ನೋಡಿರಿ

