ವೈಶಾಕ್ ವಿಜಯ್ಕುಮಾರ್ ಬೌಲಿಂಗ್ಗೆ ಜಮ್ಮು ಬ್ಯಾಟರ್ ಲೇವಡಿ – ಕನ್ನಡಿಗನ ಕೆಣಕಿ ದರ್ಪ ತೋರಿದ ಖಮ್ರಾನ್ ಇಕ್ಬಾಲ್

ಕರ್ನಾಟಕದ 11 ವರ್ಷಗಳ ತಪಸ್ಸು ನೀರಲ್ಲಿ ಹೋಮ ಆಗುವುದು ಗ್ಯಾರಂಟಿ ಆಗಿದೆ. ಹೌದು. ಕರ್ನಾಟಕ ತಂಡದ ರಣಜಿ ಕನಸು ಭಗ್ನವಾಗಿದೆ. ಇದರ ಮಧ್ಯೆ ಜಮ್ಮು ಮತ್ತು ಕಾಶ್ಮೀರ ತಂಡದ ಆಟಗಾರರು ಸಮಯ ಸಿಕ್ಕಾಗಲೆಲ್ಲಾ ಕನ್ನಡಿಗರನ್ನು ಕೆಣಕುವ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ:ಕನ್ನಡಿಗನಿಗೆ ಡಿಚ್ಚಿ ಕೊಟ್ಟ ಡೋಗ್ರಾಗೆ ಬಿಸಿಸಿಐನಿಂದ ಶಿಕ್ಷೆ – ಅಶಿಸ್ತಿನ ವರ್ತನೆ ತೋರಿದ ಡೋಗ್ರಾಗೆ ಬಿತ್ತು ದಂಡ
ಕರ್ನಾಟಕ ತಂಡಕ್ಕೆ 9ನೇ ಬಾರಿ ರಣಜಿ ಟ್ರೋಫಿ ಎತ್ತಿ ಹಿಡಿಯುವ ಆಸೆ ಕೈ ತಪ್ಪಿ ಹೋಗಿದೆ. ಆದರೆ, ಫೈನಲ್ ಪಂದ್ಯದಲ್ಲಿ ಕರ್ನಾಟಕ ಮತ್ತು ಜಮ್ಮು-ಕಾಶ್ಮೀರ ಆಟಗಾರರ ನಡುವೆ ಮಾತಿನ ಚಕಮಕಿ ಮಾತ್ರ ಮುಂದುವರೆದಿದೆ. ಈ ಪಂದ್ಯದ ಮೊದಲ ಇನಿಂಗ್ಸ್ ವೇಳೆ ಪರಸ್ ಡೋಗ್ರಾ ಹಾಗೂ ಕೆವಿ ಅನೀಶ್ ಮೈದಾನದಲ್ಲೇ ಕಿತ್ತಾಡಿಕೊಂಡಿದ್ದರು. ಇದೀಗ ಕರ್ನಾಟಕ ವೇಗಿ ವೈಶಾಕ್ ವಿಜಯಕುಮಾರ್ ಹಾಗೂ ಜಮ್ಮು-ಕಾಶ್ಮೀರ ತಂಡದ ಆರಂಭಿಕ ದಾಂಡಿಗ ಖಮ್ರಾನ್ ಇಕ್ಬಾಲ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ನಾಲ್ಕನೇ ದಿನದಾಟದಲ್ಲಿ ಜಮ್ಮು ಮತ್ತು ಕಾಶ್ಮೀರದ ಎರಡನೇ ಇನ್ನಿಂಗ್ಸ್ನ 49ನೇ ಓವರ್ನಲ್ಲಿ ವೈಶಾಕ್ ವಿಜಯಕುಮಾರ್ ಎಸೆದ ಬೌನ್ಸರ್ ಎಸೆದಿದ್ದರು. ಈ ಎಸೆತಕ್ಕೆ ಪ್ರತ್ಯುತ್ತರ ನೀಡಲು ಖಮ್ರಾನ್ಗೆ ಸಾಧ್ಯವಾಗಿರಲಿಲ್ಲ. ಈ ವೇಳೆ ವೈಶಾಕ್ ಸ್ಟ್ರೈಕರ್ನತ್ತ ಗುರಾಯಿಸುವ ಮೂಲಕ ಕೆಣಕಿದ್ದರು. ಈ ವೇಳೆ ಖಮ್ರಾನ್ ಇಕ್ಬಾಲ್ ಹೋಗಿ ಬೌಲಿಂಗ್ ಮಾಡು ಎಂದು ಪ್ರತ್ಯುತ್ತರ ನೀಡಿದ್ದಾರೆ. ಆಗ ವೈಶಾಕ್ ವಿಜಯಕುಮಾರ್ ಗುರಾಯಿಸುವಿಕೆ ಮುಂದುವರೆಸಿದ್ದರು. ಈ ವೇಳೆ ಖಮ್ರಾನ್ ಇಕ್ಬಾಲ್, ನೀನು ಒಳ್ಳೆ ಸ್ಪಿನ್ನರ್ನಂತೆ ಬೌಲಿಂಗ್ ಮಾಡ್ತಿದ್ದೀಯ, ಅಷ್ಟೊಂದು ನಿಧಾನವಾಗಿದೆ ಎಂದು ಲೇವಡಿ ಮಾಡಿದ್ದಾರೆ. ಇದರಿಂದ ಸಿಟ್ಟಾದ ವೈಶಾಕ್ ಮತ್ತಷ್ಟು ವೇಗದಲ್ಲಿ ಚೆಂಡೆಸೆದರು ಆದರೆ ಈ ಎಸೆತದಲ್ಲಿ ಇಕ್ಬಾಲ್ ಸಿಕ್ಸ್ ಸಿಡಿಸುವ ಮೂಲಕ ತಿರುಗೇಟು ನೀಡಿದರು. ಇದಾದ ಬಳಿಕ ಕೂಡ ಇಬ್ಬರ ನಡುವೆ ಮಾತಿನ ಚಕಮಕಿ ಮುಂದುವರೆಯಿತು. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆಯಲು ಅಂಪೈರ್ ರೋಹನ್ ಪಂಡಿತ್ ಅವರು ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿದರು.

ನೋಡಿರಿ

