ಕ್ರಿಕೆಟ್‌ ಪ್ರೇಮಿಗಳಿಗೆ ಗುಡ್ ನ್ಯೂಸ್! – ಇನ್ನುಮುಂದೆ ಪಿವಿಆರ್ ನಲ್ಲೂ ಕ್ರಿಕೆಟ್‌ ಪ್ರದರ್ಶನ?

ಕ್ರಿಕೆಟ್‌ ಪ್ರೇಮಿಗಳಿಗೆ ಗುಡ್ ನ್ಯೂಸ್! – ಇನ್ನುಮುಂದೆ ಪಿವಿಆರ್ ನಲ್ಲೂ ಕ್ರಿಕೆಟ್‌ ಪ್ರದರ್ಶನ?

ಭಾರತದಲ್ಲಿ ಜನರನ್ನು ಹುಚ್ಚೆಬ್ಬಿಸುವಂತೆ ಮಾಡುವುದು ಕ್ರಿಕೆಟ್ ಕ್ರೇಜ್. ಚಿಕ್ಕ ಮಕ್ಕಳಿಂದ ವೃದ್ಧರವರೆಗೆ ಪ್ರತಿಯೊಬ್ಬರೂ ಕ್ರಿಕೆಟ್ ನೋಡಿ ಆನಂದಪಟ್ಟುಕೊಳ್ಲುತ್ತಾರೆ. ಅದೆಷ್ಟೋ ಜನ ಸ್ಟೇಡಿಯಂ ನಲ್ಲಿ ಕಿಕೆಟ್‌ ನೋಡಿ ಆನಂದಿಸ್ಬೇಕು ಎಂದು ಆಸೆ ಪಡ್ತಿರ್ತಾರೆ.. ಆದ್ರೆ ಅದು ಸಾಧ್ಯವಾಗೋದಿಲ್ಲ.. ಇದೀಗ ಅಂಥವರಿಗಾಗೇ ಒಂದು ಗುಡ್‌ನ್ಯೂಸ್‌ ಇದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ರೀತಿ ಕ್ರಿಕೆಟ್ ಪ್ರದರ್ಶನ ಮಾಡಲು ಬಿಸಿಸಿಐ ಜೊತೆ ಒಪ್ಪಂದ ಮಾಡಿಕೊಳ್ಳಲು ಪಿವಿಆರ್  ಮುಂದಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ: ಶ್ರೀಶೈಲಂ ಎಡದಂಡೆ ಕಾಲುವೆ ಸುರಂಗದೊಳಗೆ ಇಂದು ಮತ್ತೊಂದು ಮೃತದೇಹ ಪತ್ತೆ

ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ರೀತಿ ಕ್ರಿಕೆಟ್ ಪ್ರದರ್ಶನ ಮಾಡಲು ಪ್ಲ್ಯಾನ್‌ ನಡೆಯುತ್ತಿದ್ಯಂತೆ. ಭಾರತದ 30 ಸಿಟಿಗಳ ಪಿವಿಆರ್‌ಗಳು ಕ್ರಿಕೆಟ್ ಪ್ರದರ್ಶನಕ್ಕೆ ಅವಕಾಶ ಪಡೆದಿವೆ ಎಂದು ಮೂಲಗಳು ತಿಳಿಸಿದ್ದು, ಕರ್ನಾಟಕದ ಬೆಂಗಳೂರು, ಧಾರವಾಡ ಹಾಗೂ ಮಹಾರಾಷ್ಟ್ರ, ಗುಜರಾತ್, ಹೈದರಾಬಾದ್ ಸೇರಿದಂತೆ ಹಲವೆಡೆ ಪ್ರದರ್ಶನ ಸಾಧ್ಯತೆ ಎನ್ನಲಾಗುತ್ತಿದೆ.

ಸಿನಿಮಾ ಆಕ್ಟ್ ಪ್ರಕಾರ ಸೆನ್ಸಾರ್ ಇಲ್ಲದೇ ಥಿಯೇಟರ್ ಹಾಗೂ ಪಿವಿಆರ್‌ನಲ್ಲಿ ಏನನ್ನೂ ಪ್ರದರ್ಶನ ಮಾಡುವ ಹಾಗಿಲ್ಲ. ಒಂದು ವೇಳೆ ಕ್ರಿಕೆಟ್ ಪ್ರದರ್ಶನಕ್ಕೆ ಅನುಮತಿ ಸಿಕ್ಕರೆ ಸಿನಿಮಾ ಕಥೆ ಅಷ್ಟೆ ಎನ್ನುವ ಪರಿಸ್ಥಿತಿ ಎದುರಾಗಲಿದೆ. ಈಗಾಗಲೇ ಜನರಿಲ್ಲದೇ ಥಿಯೇಟರ್, ಸಿಂಗಲ್ ಸ್ಕ್ರೀನ್‌ಗಳು ಸಮಸ್ಯೆ ಎದುರಿಸುತ್ತಿವೆ. ಈಗ ಕ್ರಿಕೆಟ್, ಮುಂದಿನ ದಿನಗಳಲ್ಲಿ ಬೇರೆ ಪ್ರದರ್ಶನಗಳಿಗೆ ಪಿವಿಆರ್ ಒಪ್ಪಿಕೊಂಡರೆ ಸಿನಿಮಾಗಳಿಗೆ ಕುತ್ತು ಬರುವುದು ಗ್ಯಾರಂಟಿಯಾಗಲಿದೆ. ಈಗಲೇ ಒಳ್ಳೆಯ ಸಿನಿಮಾಗಳಿಲ್ಲದೇ ಥಿಯೇಟರ್‌ಗಳು ಸಮಸ್ಯೆ ಎದುರಿಸುತ್ತಿದ್ದು, ಇದರಿಂದ ಸಿನಿಮಾ ಪ್ರದರ್ಶನದ ಸಂಸ್ಕೃತಿ ಏನಾಗುತ್ತದೆ ಎಂಬ ಪ್ರಶ್ನೆ ಮೂಡಿದೆ.

Shwetha M