BBK ಹಂಸಾ ವಿರುದ್ಧ ಕೇಸ್‌ – ಪುಟ್ಟಕ್ಕನ ಮಕ್ಕಳು ತಂಡಕ್ಕೆ ಮೋಸ?
ಶೋಗಾಗಿ ನಿರ್ದೇಶಕರಿಗೆ ಟೋಪಿ

BBK ಹಂಸಾ ವಿರುದ್ಧ ಕೇಸ್‌ – ಪುಟ್ಟಕ್ಕನ ಮಕ್ಕಳು ತಂಡಕ್ಕೆ ಮೋಸ?ಶೋಗಾಗಿ ನಿರ್ದೇಶಕರಿಗೆ ಟೋಪಿ

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಒಂದಲ್ಲ ಒಂದು ಕಾರಣದಿಂದ ಸದ್ದು ಮಾಡ್ತಾ ಇದೆ. ಮನೆ ಒಳಗಿರುವ ಸ್ಪರ್ಧಿಗಳು ಟಾಸ್ಕ್‌, ನಾಮಿನೇಷನ್‌ ವಿಚಾರವಾಗಿ ಸುದ್ದಿಯಾಗ್ತಿದ್ರೆ.. ದೊಡ್ಮನೆಯಿಂದ ಆಚೆ ಬಂದವರು ಬೇರೆ ಕಾರಣಕ್ಕೆ ಸದ್ದು ಮಾಡ್ತಾ ಇದ್ದಾರೆ. ಇದೀಗ ಮಾನಸ ಟ್ರೋಲ್ಸ್‌ ಮೀಮ್ಸ್‌ ಗೆ ಆಹಾರ ಆಗಿದ್ರೆ, ರಂಜಿತ್‌, ಲಾಯರ್‌ ಜಗದೀಶ್‌ ಹೊಡೆದಾಡಿಕೊಂಡು ಸುದ್ದಿಯಾಗಿದ್ರು. ಇದೀಗ ಹಂಸ ಬೇರೆ ಕಾರಣಕ್ಕೆ ಸುದ್ದಿಯಾಗಿದ್ದಾರೆ.. ಪುಟ್ಟಕ್ಕನ ಮಕ್ಕಳು ಸೀರಿಯಲ್‌ ನಿರ್ದೇಶಕ ಆರೂರು ಜಗದೀಶ್‌ ಹಂಸ ಮೇಲೆ ಆರೋಪವೊಂದನ್ನ ಮಾಡಿದ್ದಾರೆ.. ಇದೀಗ ನಿರ್ದೇಶಕರ ಹೇಳಿಕೆಯಿಂದ ಹಂಸ ಮೋಸ ಮಾಡ್ರಿದ್ಯಾ ಅನ್ನೋ ಅನುಮಾನ ಮೂಡಿದೆ. ಅಷ್ಟಕ್ಕೂ ಹಂಸ ಮಾಡಿದ್ದೇನು? ಪುಟ್ಟಕ್ಕನ ಮಕ್ಕಳು ಸೀರಿಯಲ್‌ ನಲ್ಲಿ ಮುಂದುವರೆಯಲ್ವಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಡಿ. 4 ರಂದು ಶೋಭಿತಾ ನಾಗಾಚೈತನ್ಯ ಮದುವೆ – ಆಮಂತ್ರಣ ಪತ್ರಿಕೆ ವೈರಲ್‌

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಹಂಸ ನಾಲ್ಕು ವಾರ ವೀಕ್ಷಕರಿಗೆ ಮನರಂಜನೆ ನೀಡಿದ್ರು.. ದೊಡ್ಮನೆಯಲ್ಲಿ ಇರುವಷ್ಟು ದಿನ ಹವಾ ಕ್ರಿಯೇಟ್​ ಮಾಡಿದ್ರು.. ಇವರು ಸಕತ್​ ಸದ್ದು ಮಾಡಿದ್ದು, ಲಾಯರ್​ ಜಗದೀಶ್​ ಅವರೊಂದಿಗಿನ ಒಡನಾಟದಿಂದಾಗಿ. ಆದ್ರೆ ತುಸು ಬೇಗವೇ ದೊಡ್ಮನೆಯಿಂದ ಆಚೆ ಬಂದಿದ್ರು.. ಮನೆಯಿಂದ ಹೊರಕ್ಕೆ ಬಂದ ಮೇಲೆ ಅವರು,  ಬಿಗ್‌ ಬಾಸ್‌ ಮನೆಯಲ್ಲಿ ಉಳಿಯುವುದು ತುಂಬಾ ಕಷ್ಟವಾಗಿತ್ತು.  ಅಲ್ಲಿ ಅನೇಕ ವಿಷಯಗಳನ್ನು ಕಲಿತಿದ್ದೇನೆ.  ಮುಖ್ಯವಾಗಿ ಇರುವ ಟಾಸ್ಕ್‌ ಎಂದರೆ ನಮಗೆ ಪರಿಚಯವೇ ಇಲ್ಲದ ಹಲವು ವ್ಯಕ್ತಿತ್ವಗಳ ಜೊತೆ ಬದುಕುವುದು ಎಂದು ಹೇಳಿದ್ದರು. ಬಿಗ್‌ ಬಾಸ್‌ ಮನೆಗೆ ಹೋಗುವ ಮುನ್ನ ಊಟ ಮತ್ತು ನಿದ್ರೆ ನನಗೆ ಸವಾಲಾಗಿರುತ್ತದೆ ಎಂದುಕೊಂಡಿದ್ದೆ. ಆದರೆ ಹಾಗೆ ಆಗಲಿಲ್ಲ. ಆದರೆ ಮೊಬೈಲ್​ ಎಲ್ಲಾ ಇಲ್ಲದ ಕಾರಣ ತುಂಬಾ ತೊಂದರೆಯಾಯ್ತು ಎಂದಿದ್ದಾರೆ. ಇದು ಬಿಗ್​ಬಾಸ್​ ಹಂಸಾರ ಕಥೆಯಾದ್ರೆ, ಪುಟ್ಟಕ್ಕನ ಮಕ್ಕಳು ರಾಜಿ ಕಥೆ ಏನು ಅಂತಾ ವೀಕ್ಷಕರಿಗೆ ಕಾಡ್ತಾ ಇತ್ತು. ಇದೀಗ ಶಾಕಿಂಗ್ ವಿಚಾರವೊಂದು ರಿವೀಲ್‌ ಆಗಿದೆ. ಇದೀಗ ಪುಟ್ಟಕ್ಕನ ಮಕ್ಕಳು ಸೀರಿಯಲ್‌ ನಿರ್ದೇಶಕ ಆರೂರು ಜಗದೀಶ್‌ ಹಂಸ ವಿರುದ್ಧ ಆರೋಪವೊಂದನ್ನ ಮಾಡಿದ್ದಾರೆ.

ಹೌದು. ದಿಢೀರ್​ ಎಂದು ಪುಟ್ಟಕ್ಕನ ಮಕ್ಕಳು ರಾಜಿ ಕಾಣೆಯಾಗಿಬಿಟ್ಟಳು. ಸವತಿ ಪಾತ್ರಕ್ಕೆ ಜೀವ ತುಂಬಿದ್ದ ರಾಜಿ ಪಾತ್ರಧಾರಿ ಹಂಸಾ ಅವರನ್ನು ಕಾಣದೇ ಅಭಿಮಾನಿಗಳು ಶಾಕ್​ ಆಗಿದ್ರು. ಆದ್ರೂ ಅವರನ್ನು ಬಿಗ್​ಬಾಸ್​ನಲ್ಲಿ ನೋಡಿ ತೃಪ್ತಿ ಪಟ್ಟುಕೊಂಡು ಇದೇ ಕಾರಣಕ್ಕೆ ಸೀರಿಯಲ್​ನಿಂದ ಹೊರಬಂದರು ಎಂದು ಅರಿತುಕೊಂಡರು. ಆದರೆ ಕುತೂಹಲದ ವಿಷಯ ಏನೆಂದರೆ, ಪುಟ್ಟಕ್ಕನ ಮಕ್ಕಳು ನಿರ್ದೇಶಕರಿಗೂ ಹೇಳದೇ, ಯಾರಿಗೂ ಒಂದು ಮಾತನ್ನೂ ಹೇಳದೇ ಹಂಸಾ ಬಿಗ್​ಬಾಸ್​ಗೆ ಹೋಗಿ ಸೀರಿಯಲ್​ ತಂಡಕ್ಕೆ ಶಾಕ್​ ಕೊಟ್ಟಿದ್ದರು. ಒಂದು ಮುಖ್ಯ ಪಾತ್ರದಲ್ಲಿ ನಟಿಸುವ ನಟಿ ಹೀಗೆ ಹೇಳದೇ  ಕೇಳದೇ ಹೋದರೆ ಸೀರಿಯಲ್​ ಗತಿ ಏನಾಗಬೇಕು ಎನ್ನುವುದನ್ನೂ ಅವರು ಗಮನಿಸಿಲ್ಲ ಎನ್ನುವ ಬಗ್ಗೆ ಇದೀಗ ಖುದ್ದು ಈ ಸೀರಿಯಲ್​ ನಿರ್ದೇಶಕ ಆರೂರು ಜಗದೀಶ್​ ಹೇಳಿದ್ದಾರೆ.

ಯೂಟ್ಯೂಬ್‌ ಚಾನೆಲ್‌ ವೊಂದರ ಸಂದರ್ಶನದಲ್ಲಿ ಆರೂರು ಜಗದೀಶ್ ಈ ಬಗ್ಗೆ ಮಾತನಾಡಿದ್ದಾರೆ.. ನಟನೆಯ ವಿಷಯದಲ್ಲಿ ಹಂಸಾ ಅವರು ಟಾಪ್​-1. ತುಂಬಾ ಚೆನ್ನಾಗಿ ಆ್ಯಕ್ಟ್​ ಮಾಡುತ್ತಾರೆ. ಅದರಲ್ಲಿ ಎರಡು ಮಾತೇ ಇಲ್ಲ. ಆದರೆ ಹೇಳದೇ ಕೇಳದೇ ದಿಢೀರನೆ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟರು. ಅವರು ಯಾಕೆ ಶೂಟಿಂಗ್​ಗೆ ಬರಲಿಲ್ಲ ಎನ್ನುವುದೂ ಗೊತ್ತಿರಲಿಲ್ಲ. ಬಳಿಕ ಬಿಗ್​ಬಾಸ್​ನ ಪ್ರೊಮೋ ನೋಡಿದ ಮೇಲಷ್ಟೇ ನಮಗೆ ಗೊತ್ತಾಗಿದ್ದು ಎಂದಿದ್ದಾರೆ. ಕೆಲ ದಿನ ಅವರು ಶೂಟಿಂಗ್​ಗೆ ಬರದ ಕಾರಣ ಕರೆ ಮಾಡಿದಾಗ, ನನಗೆ  40 ದಿನ ರಜೆ ಬೇಕು. ಸಿನಿಮಾ ಶೂಟಿಂಗ್​ಗೆ  ವಿದೇಶಕ್ಕೆ ಹೋಗುತ್ತಿರುವುದಾಗಿ ಹೇಳಿದ್ದರು. ಒಳ್ಳೆ ಅವಕಾಶ ಸಿಕ್ಕಿದೆ ಎಂದು ಖುಷಿಯಾಯ್ತು. ಮಧ್ಯೆ ಬಂದು ಶೂಟಿಂಗ್​ ಮಾಡ್ತಾರೆ ಅಂದುಕೊಂಡಿದ್ವಿ.  ಆದ್ರೆ ಬರಲೇ ಇಲ್ಲ. ಅದ್ಯಾಕೆ ಹಾಗೆ ಮಾಡಿದ್ರೋ ಗೊತ್ತಾಗಲಿಲ್ಲ ಎಂದಿದ್ದಾರೆ.

ಹಂಸಾ ಅವರು  ಬಿಗ್‌ಬಾಸ್‌ಗೆ ಹೋಗುವ ವಿಷಯ ಹೇಳಿದ್ದರೆ, ನಾವೇನೂ ಬೇಡ ಅನ್ನುತ್ತಿರಲಿಲ್ಲ. ಬೇರೆ ವ್ಯವಸ್ಥೆ ಮಾಡಿಕೊಳ್ಳುತ್ತಿದ್ವಿ.  ಕಲಾವಿದರಿಗೆ ನೈತಿಕತೆ ಮುಖ್ಯ. ಆದರೆ ಅವರು ಹಾಗೆ ಮಾಡಲಿಲ್ಲ. ಇದೇ  ಕಾರಣಕ್ಕೆ ಹಂಸಾ ವಿರುದ್ಧ ದೂರು ಕೊಟ್ಟಿದ್ದೇನೆ. ಆ ದೂರು ಏನಾಯಿತೋ ಗೊತ್ತಿಲ್ಲ. ಆದರೆ ಕಲಾವಿದರಿಗೆ ಎಥಿಕ್ಸ್ ಇಲ್ಲದಿದ್ದರೆ ಕಷ್ಟ ಎಂದಿದ್ದಾರೆ ಆರೂರು ಜಗದೀಶ್​. ಬಿಗ್​ಬಾಸ್​​ನಿಂದ ಹೊರಕ್ಕೆ ಬಂದ ಮೇಲೆ ನಟಿಸುವಂತೆ ಕೇಳಿಕೊಂಡ್ವಿ. ಲಾಯರ್​ ಜಗದೀಶ್​ ರಿಯಾಲಿಟಿ ಶೋಗೆಲ್ಲಾ ಹೋಗ್ತಾ ಇದ್ದಾರಲ್ಲ, ಇವರೂ ಬರಬಹುದಿತ್ತು. ಅವರನ್ನು ಸಂಪರ್ಕಿಸಿದೆವು ಕೂಡ. ಆದರೆ  ಅವರು ಒಪ್ಪಲಿಲ್ಲ. ಬಿಗ್‌ಬಾಸ್ ಕಮೀಟ್‌ಮೆಂಟ್ ಇದೆ, ಒಪ್ಪಂದ ಆಗಿದೆ ಎಂದುಬಿಟ್ಟರು ಎಂದು ಆರೂರು ಹೇಳಿದ್ದಾರೆ.  ಸ್ನೇಹಾ ಸಾವನ್ನಪ್ಪಿದಾಗ ರಾಜಿಯೂ ಆಗ ಇರಬೇಕಿತ್ತು. ಅಲ್ಲಿ ಬೇರೊಂದು ದೃಶ್ಯವಿತ್ತು. ಆದರೆ ಹಂಸಾ ಹೇಳದೇ ಕೇಳದೇ ಹೋಗಿದ್ದರಿಂದ ಅದನ್ನು  ತೋರಿಸಲು ಸಾಧ್ಯವಾಗಲಿಲ್ಲ ಎಂದು ಆರೂರು ಜಗದೀಶ್ ವಿವರಿಸಿದ್ದಾರೆ. ಇದೀಗ ಹಂಸ ತಮ್ಮ ತಪ್ಪನ್ನ ತಿದ್ದಿ, ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಶೂಟಿಂಗ್‌ ನಲ್ಲಿ ಭಾಗಿಯಾಗ್ತಾರಾ? ಅಥವಾ ಈ ಬಗ್ಗೆ ಸ್ಪಷ್ಟನೆ ಕೊಡ್ತಾರಾ ಅಂತಾ ಕಾದು ನೋಡ್ಬೇಕು.

Shwetha M