ಪುಟ್ಟಕ್ಕನ ಮಕ್ಕಳು ಗೆ ಸ್ನೇಹ ಗುಡ್ ಬೈ? – ಸಂಜನಾ ಈ ನಿರ್ಧಾರ ಯಾಕೆ?
DC ಸ್ನೇಹಾ ಪಾತ್ರಕ್ಕೆ ಈ ನಟಿ?

ಪುಟ್ಟಕ್ಕನ ಮಕ್ಕಳು ಗೆ ಸ್ನೇಹ ಗುಡ್ ಬೈ? – ಸಂಜನಾ ಈ ನಿರ್ಧಾರ ಯಾಕೆ?DC ಸ್ನೇಹಾ ಪಾತ್ರಕ್ಕೆ ಈ ನಟಿ?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಪುಟ್ಟಕ್ಕನ ಮಕ್ಕಳು ಮಹಾ ತಿರುವು ಪಡೆದುಕೊಂಡಿದೆ. ಪುಟ್ಟಕ್ಕನ ಹುಟ್ಟುಹಬ್ಬಕ್ಕೆ ಎರಡೆರಡು ಸರ್ಪ್ರೈಸ್ ಕೊಡೋಕೆ ತಯಾರಾಗಿದ್ದಾಳೆ ಸ್ನೇಹ. ಒಂದು ಕಡೆ ಬಂಗಾರಮ್ಮನನ್ನು ಬಿಡಿಸಿಕೊಂಡು ಹೋಗಿದ್ದಾಳೆ. ಮತ್ತೊಂದೆಡೆ ಸಹನಾ ಸಿಕ್ಕಿದ್ದಾಳೆ. ಈ ಮಹಾ ತಿರುವನ್ನ ನೋಡಿ ಸೀರಿಯಲ್‌ ಫ್ಯಾನ್ಸ್‌ ಸಿಕ್ಕಾಪಟ್ಟೆ ಖುಷಿಪಟ್ಟಿದ್ರು.. ಡಿಸಿ ಸ್ನೇಹಾಗೆ ಬಹುಪರಾಕ್‌ ಅಂದಿದ್ರು.. ಆದ್ರೀಗ ಪುಟ್ಟಕ್ಕನ ಮಗಳು ಸ್ನೇಹಾ ಪಾತ್ರಧಾರಿ ಸಂಜನಾ ಅವರು ಇನ್‌ಸ್ಟಾದಲ್ಲಿ ಹೊಸ ಪೋಸ್ಟ್‌ ಶೇರ್‌ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಆ ಪೋಸ್ಟ್‌ ನಲ್ಲಿ ಏನಿದೆ? ಸೀರಿಯಲ್‌ ಬಿಡ್ತಾರಾ ಸಂಜನಾ? ಸ್ನೇಹ ಪಾತ್ರಕ್ಕೆ ಯಾವ ನಟಿ ಬರ್ತಾರೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ದರ್ಶನ್‌ ಬೆನ್ನು ನೋವಿನಿಂದ ವಿಲವಿಲ.. – ಕೊನೆಗೂ ಸಿಕ್ತು ಬಿಗ್‌ ರಿಲೀಫ್‌

ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಸದ್ಯ ಭಾರಿ ಕುತೂಹಲ ಮೂಡಿಸಿದೆ. ಒಂದ್ಕಡೆ ಸಿಂಗಾರಮ್ಮನಿಂದ ಬಂಗಾರಮ್ಮನನ್ನ ಸ್ನೇಹ ಕಾಪಾಡಿದ್ದಾಳೆ. ಮತ್ತೊಂದ್ಕಡೆ ಸಹನಾ ಬದುಕಿರುವ ವಿಚಾರ ಸ್ನೇಹಾಗೆ ಗೊತ್ತಾಗಿದೆ. ಇದೀಗ ಪುಟ್ಟಕ್ಕನ ಹುಟ್ಟುಹಬ್ಬದಂದೇ ಸಹನಾ ಬದುಕಿರುವ ವಿಚಾರವನ್ನ ಎಲ್ಲರಿಗೆ ತಿಳಿಸಲು ಸ್ನೇಹ ಮುಂದಾಗಿದ್ದಾಳೆ.. ಈ ಬೆನ್ನಲ್ಲೇ ಸ್ನೇಹಾ ಪಾತ್ರಧಾರಿ ಸಂಜನಾ ಬುರ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನ ಪೋಸ್ಟ್‌ ಮಾಡಿದ್ದಾರೆ. ಈ ಪೋಸ್ಟ್‌ ನೋಡಿ ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿದ್ದಾರೆ.

ಹೌದು, ಪುಟ್ಟಕ್ಕನ ಮಕ್ಕಳು ಸೀರಿಯಲ್‌ ನಲ್ಲಿ ಪುಟ್ಟಕ್ಕನ ಮಗಳು ಸ್ನೇಹಾ ಪಾತ್ರ ವೀಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟ. ಡಿಸಿ ಆಗುವ ತನ್ನ ಕನಸನ್ನು ನನಸಾಗಿಸಿ, ಹಲವರಿಗೆ ಪ್ರೇರಣೆಯಾಗಿದ್ದಾಳೆ.. ನಟಿ ಸಂಜನಾ ಬುರ್ಲಿ ಪುಟ್ಟಕ್ಕನ ಮಗಳಾಗಿ, ಸ್ನೇಹಾ ಪಾತ್ರದ ಮೂಲಕ ಜನಮನ ಗೆದ್ದಿದ್ದರು, ಕಂಠಿ ಮತ್ತು ಸ್ನೇಹಾ ಲವ್ ಸ್ಟೋರಿ, ಸ್ನೇಹಾಳ ಸ್ಟ್ರಾಂಗ್ ಕ್ಯಾರೆಕ್ಟರ್, ಕನಸನ್ನು ನನಸಾಗಿಸಲು ಪಣತೊಡುವ ರೀತಿ ಹಾಗೂ ಕೊನೆಗೆ ಡಿಸಿಯಾಗಿ ಅಧಿಕಾರಿ ಸ್ವೀಕರಿಸಿದ್ದು, ಎಲ್ಲವೂ ಜನರಿಗೆ ಪ್ರೇರಣೆ ನೀಡಿತ್ತು.

ಇದೀಗ ಸ್ನೇಹಾ ಪಾತ್ರದ ನಟಿ ಸಂಜನಾ ಬುರ್ಲಿ ಶಾಕಿಂಗ್ ನ್ಯೂಸ್ ಕೊಟ್ರಾ ಅನ್ನೊ ಅನುಮಾನ ಮೂಡಿದೆ.  ಸಂಜನಾ ಬುರ್ಲಿ  ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಡಿರುವಂತಹ ಒಂದು ಪೋಸ್ಟ್ ವೀಕ್ಷಕರಲ್ಲಿ ಗೊಂದಲ ಸೃಷ್ಟಿಸಿದೆ. ನಟಿ ಸ್ನೇಹಾ ಪಾತ್ರಕ್ಕೆ ಸಂಜನಾ ಬುರ್ಲಿ ಗುಡ್ ಬೈ ಹೇಳುತ್ತಿದ್ದಾರಾ ಎಂದು ಜನ ಪ್ರಶ್ನಿಸುತ್ತಿದ್ದಾರೆ. ಅಷ್ಟಕ್ಕೂ ನಟಿಯ ಸೋಶಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಏನಿದೆ? ಅಂತಾ ಹೇಳ್ತೆನೆ..

ಸಂಜನಾ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ತಮ್ಮ ಫೋಟೊ ಶೇರ್ ಮಾಡಿದ್ದಾರೆ..  ಅದಕ್ಕೊಂದು ಕ್ಯಾಪ್ಶನ್ ಕೂಡ ಹಾಕಿದ್ದಾರೆ. ಅದರಲ್ಲಿ ನಟಿ ಕೆಲವೊಂದು ಗುಡ್ ಬೈ ಗಳು ಹೇಳೋದಕ್ಕೆ ತುಂಬಾನೆ ಕಷ್ಟ, ಆದರೆ ಒಬ್ಬರ ಬೆಳವಣಿಗೆಗೆ ಅದು ತುಂಬಾನೆ ಮುಖ್ಯ. ಏನು ಹೇಳ್ತೀರಾ ಅಂತ ಪ್ರಶ್ನೆ ಮಾಡಿದ್ದಾರೆ.

ಇದೀಗ ಸಂಜನಾ ಬುರ್ಲಿ ಪೋಸ್ಟ್‌ ಪುಟ್ಟಕ್ಕನ ಮಕ್ಕಳು ಸೀರಿಯಲ್‌ ವೀಕ್ಷಕರಲ್ಲಿ ಗೊಂದಲ ಮೂಡಿಸಿದೆ. ನಿಜವಾಗಿಯೂ ಸ್ನೇಹಾ ಸೀರಿಯಲ್ ಬಿಡ್ತಿದ್ದಾರ ಅಂತ ಕೇಳ್ತಿದ್ದಾರೆ ಸೀರಿಯಲ್‌ ಫ್ಯಾನ್ಸ್‌.. ಅಷ್ಟೇ ಅಲ್ಲ ಸಂಜನಾ ಅವರೇ ಈ ಪಾತ್ರದಲ್ಲಿ ಮುಂದುವರೆಯಬೇಕು.. ಸಂಜನಾ ಇಲ್ಲದೇ ಸೀರಿಯಲ್ ನೋಡೋದಕ್ಕೆ ಸಾಧ್ಯಾನೆ ಇಲ್ಲ ಅಂತಾನೂ ಹೇಳಿದ್ದಾರೆ..

ಅದಷ್ಟೇ ಅಲ್ಲ ಈ ಸೀರಿಯಲ್ ಟಿ ಆರ್ ಪಿ ನೋಡಿದ್ರೆ ನಮ್ ಸ್ನೇಹ ಕಂಠಿ ಜೋಡಿ ನಾ ಜನ ಎಷ್ಟು ಇಷ್ಟ ಪಡ್ತಿದಾರೆ ಅಂತ ಗೊತ್ತಾಗುತ್ತೆ. ಸ್ನೇಹ ಇಲ್ಲದ ಸೀರಿಯಲ್‌ ಅನ್ನ ಇನ್ನು ಯಾರು ನೋಡುತ್ತಾರೆ.. ನಮ್ ಸ್ನೇಹ ಇರೋವರೆಗೆ ಮಾತ್ರ ನಾವು ಸೀರಿಯಲ್ ನೋಡೋದು ಎಂದು ಕೆಲ ವೀಕ್ಷಕರು ಕಾಮೆಂಟ್‌ ಮಾಡಿದ್ದಾರೆ..

ಅಂದ್ಹಾಗೆ ಪುಟ್ಟಕ್ಕನ ಮಕ್ಕಳು ಸೀರಿಯಲ್‌ ನಲ್ಲಿ ಅಭಿನಯಿಸಿರುವ ಅನೇಕ ಕಲಾವಿದರಿಗೆ ಹೊಸ ಆಫರ್‌ಗಳು ಬರುತ್ತಿವೆ. ಈ ಬಗ್ಗೆ ಉಮಾಶ್ರೀ ಅವರು ಕೆಲವು ದಿನಗಳ ಹಿಂದೆ ಫೇಸ್‌ಬುಕ್‌ ಲೈವ್‌ನಲ್ಲಿ ಹೇಳಿಕೊಂಡಿದ್ದರು, ಇದೇ ಧಾರಾವಾಹಿಯ ಕಂಠಿ ಪಾತ್ರಧಾರಿಗೂ ಸಿನಿಮಾ ಆಫರ್‌ ಬಂದಿತ್ತು ಎಂದು ಹೇಳಿಕೊಂಡಿದ್ದರು. ಇದೀಗ ಸಂಜನಾ ಬುರ್ಲಿಗೂ ಹೊಸ ಸೀರಿಯಲ್‌ ಅಥವಾ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಾತಾ ಅನ್ನೋ ಕುತೂಹಲ ಎಲ್ಲರನ್ನೂ ಕಾಡ್ತಾ ಇದೆ.

ಒಟ್ಟಾರೆ ಸ್ನೇಹಾ ಪಾತ್ರದಿಂದಾಗಿ ಸಂಜನಾಗೆ ಅಪಾರ ಅಭಿಮಾನಿಗಳು ಸಹ ಹುಟ್ಟಿಕೊಂಡಿದ್ದರು.  ಇದೀಗ ನಿಜಕ್ಕೂ ಸ್ನೇಹಾ ಪಾತ್ರ ಕೊನೆಯಾಗುತ್ತಾ? ಈ ಪಾತ್ರಕ್ಕೆ ಬೇರೆ ನಟಿಯ ಆಗಮನವಾಗುತ್ತಾ ಅಂತಾ ಸೀರಿಯಲ್ ನೋಡಿನೆ ತಿಳ್ಕೋಬೇಕು.

Shwetha M

Leave a Reply

Your email address will not be published. Required fields are marked *