ಸ್ನೇಹ ಆಯ್ತು ಈಗ ಪುಟ್ಟಕ್ಕ ಸಾವು? – ಸಾಯಿಸೋದು, ಬದುಕಿಸೋದೇ ಕಥೆನಾ?
ಕಣ್ಣೀರು ಹಾಕಿದ್ರೆ TRP ಜಾಸ್ತಿನಾ?

ಸ್ನೇಹ ಆಯ್ತು ಈಗ ಪುಟ್ಟಕ್ಕ ಸಾವು? – ಸಾಯಿಸೋದು, ಬದುಕಿಸೋದೇ ಕಥೆನಾ?ಕಣ್ಣೀರು ಹಾಕಿದ್ರೆ TRP ಜಾಸ್ತಿನಾ?

ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಸ್ಟೋರಿ ಎತ್ತಲೋ ಹೋಗಿದೆ.. ಸೀರಿಯಲ್‌ ನಲ್ಲಿ ಒಂದಾದಮೇಲೋಂದು ಪಾತ್ರಗಳನ್ನ ಕೊಲ್ಲೋದು, ಬದುಕಿಸೋದು ಮಾಡ್ತಿದ್ದಾರೆ ಸೀರಿಯಲ್‌ ಡೈರೆಕ್ಟರ್..‌ ಆರಂಭದಲ್ಲಿ ಸಹನಾ ಪಾತ್ರ ಸಾಯಿಸಿ ಬಳಿಕ ಬದುಕಿಸಿದ್ರು.. ಬಳಿಕ ಸ್ನೇಹ ಪಾತ್ರವನ್ನ ಕೊಂದ್ರು.. ಈ ಸೀರಿಯಲ್‌ ನ ಮುಖ್ಯ ಪಾತ್ರ ಪುಟ್ಟಕ್ಕಳನ್ನೇ ಕೊಂದ್ರಾ ಅನ್ನೋ ಅನುಮಾನ ವೀಕ್ಷಕರದ್ದು.. ಅಷ್ಟಕ್ಕೂ ಸೀರಿಯಲ್‌ ನಲ್ಲಿ ಏನ್‌ ಟ್ವಿಸ್ಟ್‌ ಕೊಡಲಾಗಿದೆ? ಪುಟ್ಟಕ್ಕನಿಗೆ ಏನಾಯ್ತು? ನಿಜಕ್ಕೂ ಪುಟ್ಟಕ್ಕ ಸಾಯ್ತಾಳಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  ಬಿಳಿ ಹೊದಿಕೆ ಮೇಲೆ ರಕ್ತಜಲಪಾತ – ಪ್ರಕೃತಿಯ ಈ ವಿಸ್ಮಯಕ್ಕೆ ಕಾರಣವೇನು?

ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಗೆ ಆರಂಭದಿಂದಲೂ ಒಂದು ಗತ್ತು ಇತ್ತು.. ಪುಟ್ಟಕ್ಕ ಪಾತ್ರ ಅದೆಷ್ಟೋ ಹೆಣ್ಣುಮಕ್ಕಳಿಗೆ ಮಾದರಿಯಾಗಿತ್ತು.. ಗಂಡ ಬಿಟ್ಟು ಹೋದ ಮೇಲೆ ಪುಟ್ಟಕ್ಕಳೇ ಮೂವರು ಸಾಕಿದ್ಲು. ಸ್ನೇಹಾಳಿಗೆ ವಿದ್ಯಾಭ್ಯಾಸ ಕೊಡಿಸಿ ಅವಳನ್ನ ಡಿಸಿ ಮಾಡಿ, ಎಲ್ಲರಿಗೂ ಮಾದರಿ ಆಗಿದ್ಲು.. ಕತೆ ಅಂದ್ರೆ ಹೀಗಿರ್ಬೇಕು ಅಂತಾ ಸೀರಿಯಲ್‌ ವೀಕ್ಷಕರು ಕೊಂಡಾಡಿದ್ರು.. ಎಲ್ಲರಿಗೂ ಸ್ಪೂರ್ತಿ ತುಂಬುತ್ತಿದ್ದ ಸೀರಿಯಲ್‌ ನಲ್ಲಿ ಈಗ ಡೈರೆಕ್ಟರ್‌ ಟ್ವಿಸ್ಟ್‌ ಕೊಡಲು ಹೋಗಿ ಇನ್ನೇನೋ ಆಗ್ತಿದೆ ಅಂತ ಈಗ ಸೀರಿಯಲ್‌ ಕೊಂಡಾಡುತ್ತಿದ್ದ ವೀಕ್ಷಕರೇ ಅಸಮಧಾನ ಹೊರ ಹಾಕ್ತಿದ್ದಾರೆ..

ಹೌದು, ಪುಟ್ಟಕ್ಕನ ಮಕ್ಕಳು ಸೀರಿಯಲ್‌ ನಲ್ಲಿ ಈಗ ಸಿಂಗಾರಮ್ಮ ಬಂಗಾರಮ್ಮ ಆಟ ನಡಿತಾ ಇದೆ. ಬಂಗಾರಮ್ಮ ಒಳ್ಳೆಯವಳು ಆಗಿದ್ರೆ, ಸಿಂಗಾರಮ್ಮ ತುಂಬಾ ಕೆಟ್ಟವಳು.. ಆಕೆ ಜೈಲಿನಿಂದ ಬಂದ್ಮೇಲೆ, ಮಗನ ಜೊತೆ ಸೇರ್ಕೊಂಡು ಎಲ್ಲರಿಗೂ ಕೆಟ್ಟದನ್ನ ಮಾಡ್ತಿದ್ದಾಳೆ. ಬಂಗಾರಮ್ಮನ ತರ ವೇಷ ಹಾಕಿಕೊಂಡು, ಎಲ್ಲರನ್ನ ಯಾಮಾರಿಸುತ್ತಾ ಬಂದಿದ್ಲು.. ಇದು ಸ್ನೇಹಾಗೆ ಗೊತ್ತಾಗಿತ್ತು.. ಸಿಂಗಾರಮ್ಮನ ಆಟ ನಿಲ್ಲಿಸ್ಬೇಕು ಅನ್ನೋವಷ್ಟರಲ್ಲೇ ಡಿಸಿ ಸ್ನೇಹಾಳನ್ನ ಕಲಿ ಹಾಗೂ ಸಿಂಗಾರಮ್ಮ ಸಾಯಿಸಿದ್ರು.. ಸ್ನೇಹ ಸಾಯುತ್ತಿದ್ದಂತೆ ಸಿಂಗಾರಮ್ಮ ಮತ್ತೆ ತೊಂದರೆ ಕೊಡ್ತಿದ್ದಾಳೆ.  ಸಿಂಗಾರಮ್ಮ ಮತ್ತೆ ಬಂಗಾರಮ್ಮನ ವೇಷ ಹಾಕಿ ಮತ್ತೆ ಕಂಠಿ ಮನೆಗೆ ಬಂದಿದ್ದಾಳೆ. ಬಳಿಕ ಕಂಠಿ ಅಕ್ಕನ ಮಗುವನ್ನ  ಕರೆದುಕೊಂಡು ಹೋಗಲು ಪ್ರಯತ್ನಪಟ್ಟಿದ್ದರು. ಇದಕ್ಕೆ ರಾಧಾ ಸಾಥ್‌ ಕೊಟ್ಟಿದ್ದಳು. ಆದ್ರೆ ಅಷ್ಟೊತ್ತಿಗೆ ಪುಟ್ಟಕ್ಕ ಎಂಟ್ರಿಕೊಟ್ಟು ಮಗುವನ್ನ ಕಾಪಾಡಿದ್ದಳು. ಅಷ್ಟೊತ್ತಿಗೆ ಸಿಂಗಾರಮ್ಮ ಪುಟ್ಟಕ್ಕನ ಪ್ರಾಣಕ್ಕೆ ಕುತ್ತು ತಂದಿದ್ದಾಳೆ.

ಹೌದು, ಪುಟ್ಟಕ್ಕ ಸಿಂಗಾರಮ್ಮ ಕೈಯಿಂದ ಮಗುವನ್ನ ಎಳೆದುಕೊಂಡಿದ್ದಾಳೆ. ಅಷ್ಟೊತ್ತಿಗೆ, ಸಿಂಗಾರಮ್ಮ ಪುಟ್ಟಕ್ಕಳಿಗೆ ಚಾಕು ಇರಿದಿದ್ದಾಳೆ. ಇದೀಗ ಪುಟ್ಟಕ್ಕ  ಆಸ್ಪತ್ರೆಯಲ್ಲಿ ಒದ್ದಾಡುತ್ತಿರುವುದನ್ನ ತೋರಿಸಲಾಗಿದೆ. ಆದ್ರೆ ಮತ್ತೊಂದು ಪ್ರೋಮೋದಲ್ಲಿ ಪುಟ್ಟಕ್ಕ ಬಂಗಾರಮ್ಮನ ಮನೆಯಲ್ಲೇ ತೀರಿಕೊಂಡಿರುವ ತರ ತೋರಿಸಲಾಗಿದೆ. ಆದ್ರೆ ಪುಟ್ಟಕ್ಕ ಇಷ್ಟು ಬೇಗ ಸಾಯೋದು ಡೌಟ್‌.. ಯಾಕಂದ್ರೆ ಸೀರಿಯಲ್‌ ನಲ್ಲಿ ಪುಟ್ಟಕ್ಕನೇ ಮೈನ್‌ ರೋಲ್..‌  ಪುಟ್ಟಕ್ಕ ಸತ್ತರೆ ಆ ಸೀರಿಯಲ್‌ ನಲ್ಲಿ ಏನೂ ಕತೆ ಇರೋದಿಲ್ಲ.. ಈಗಾಗಲೇ ಸ್ನೇಹಾ ಸತ್ತಿರೋದಿಕ್ಕೆ ವೀಕ್ಷಕರು ಬೇಸರ ಮಾಡಿಕೊಂಡಿದ್ದಾರೆ. ಪ್ರಮುಖ ಪಾತ್ರ ಕೊಲ್ಲೋದಿಕ್ಕಿಂತ ಬೇರೆ ನಟಿಯನ್ನ ಕರೆಸ್ಬೋದಿತ್ತು.. ಈಗೀರುವ ಸ್ನೇಹ ಪಾತ್ರವಂತೂ ಚೂರು ಇಷ್ಟ ಆಗ್ತಿಲ್ಲ.. ಈಗ ಪುಟ್ಟಕ್ಕ ಸತ್ತರೆ ಏನು ಕಥೆ? ಇರೋ ಪಾತ್ರಗಳನ್ನ ಡೈರೆಕ್ಟರ್‌ ಸಾಯಿಸಿಬಿಡ್ತಾರೆ.. ಎಲ್ಲರನ್ನ ಸಾಯಿಸೋದಾದ್ರೆ ಸೀರಿಯಲ್‌ ಯಾಕೆ ಮಾಡ್ಬೇಕಿತ್ತು? ಡೈರೆಕ್ಟರ್‌ ಗೆ ಬೆಸ್ಟ್‌ ಅವಾರ್ಡ್‌ ಕೊಡ್ರೋ.. ಎಂದು ಸೀರಿಯಲ್‌ ವೀಕ್ಷಕರು ಹೇಳ್ತಿದ್ದಾರೆ.. ಇನ್ನು ಕೆಲವರು ಈ ಆರಂಭದಲ್ಲಿ ಈ ಸೀರಿಯಲ್‌ ಸಮಾಜಕ್ಕೆ ಒಳ್ಳೆ ಸಂದೇಶ ನೀಡುತ್ತಿತ್ತು.. ಆದ್ರೀಗ ಬರು ಬರುತ್ತಾ ರಾಯರ ಕುದುರೆ ಕತ್ತೆ ಅನ್ನೋ ತರ.. ಸೀರಿಯಲ್‌ ಸ್ಟೋರಿಯೂ ಹಳ್ಳ ಹಿಡಿತು ಅಂತಾ ಹೇಳ್ತಿದ್ದಾರೆ.

Shwetha M

Leave a Reply

Your email address will not be published. Required fields are marked *