ಮ್ಯಾಕ್ಸಿಗೆ ಪುಟ್ಟಕ್ಕನ ಮಗಳ ಮೇಲೆ ಲವ್? – ಸಹನಾಗೆ ಕಾಳಿಯೇ ಬೆಸ್ಟ್!
ಸಿಕ್ಕಿ ಬಿದ್ಲು ಸಿಂಗಾರಮ್ಮ?
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಸೀರಿಯಲ್ ಕತೆ ಕುತೂಹಲ ಮೂಡಿಸಿದೆ. ಒಂದು ಕಡೆ ಸಿಂಗಾರಮ್ಮ ಬಂಗಾರಮ್ಮನ ಅದಲು ಬದಲು ಆಟ ನಡಿತಾ ಇದ್ರೆ.. ಇನ್ನೊಂದ್ಕಡೆ ಸಹನಾ ಮುಂದೆಯೇ ಮುರಳಿ ಮದುವೆಯಾಗಿದೆ. ಇದೀಗ ವೀಕ್ಷಕರೇ ಸೀರಿಯಲ್ ನಲ್ಲಿ ಮುಂದೇನು ನಡೆಯುತ್ತೆ ಅಂತಾ ಹೇಳಲು ಶುರುಮಾಡಿದ್ದಾರೆ.. ಕಾಳಿ ಹಾಗೂ ಮಾಕ್ಸ್ ವೆಲ್.. ಈ ಇಬ್ಬರಲ್ಲಿ ಯಾರು ಸಹನಾಗೆ ಜೋಡಿ ಆಗಲಿದ್ದಾರೆ ಅನ್ನೋದ್ರ ಬಗ್ಗೆ ಚರ್ಚೆ ಶುರು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: 3 ವರ್ಷದಿಂದ ಟೆಸ್ಟ್ ಗೆದ್ದಿಲ್ಲ PAK – ಬಾಬರ್ ಔಟ್.. ಹೊಸ ಕ್ಯಾಪ್ಟನ್ ಫೇಲ್
ಮನೆ ಬಿಟ್ಟು ಬಂದಿರುವ ಸಹನಾ ತಾನು ಏನನ್ನಾದರೂ ಸಾಧಿಸಬೇಕು ಅಂತಾ ಸ್ವಂತ ಬಿಸಿನೆಸ್ ಶುರು ಮಾಡ್ಕೊಂಡಿದ್ದಾಳೆ.. ಮದುವೆ ಕ್ಯಾಟರಿಂಗ್ ಗೆ ಬಂದ ಸಹಾನಾಗೆ ತನ್ನ ಗಂಡನೇ ಎರಡನೇ ಮದುವೆ ಆಗ್ತಿರೋದು ಅನ್ನೋ ಸುದ್ದಿ ಕೇಳಿ ಆಘಾತವಾಗಿದೆ. ಮೊದಲಿಗೆ ಸಹನಾ ಬಿಕ್ಕಿ ಬಿಕ್ಕಿ ಅತ್ತರೂ ಮದುವೆಗೆ ಅಡ್ಡಿ ಪಡಿಸದೆ ಮದುಮಗಳು ವಿನುತಾಳಿಗೆ ಮದುವೆಯಾಗಿ ಎಂದು ಸಾಥ್ ಕೊಟ್ಟಿದ್ದಾಳೆ.. ಅಂತೂ ಯಾವುದೇ ವಿಘ್ನ ಇಲ್ಲದೇ ಮುರಳಿ ಎರಡನೇ ಮದುವೆ ನಡೆದಿದೆ..
ಇನ್ನು ಮತ್ತೊಂದ್ಕಡೆ ಬಂಗಾರಮ್ಮ ಸಿಂಗಾರಮ್ಮ ಅದಲು ಬದಲು ಆಟ ಸಹಾನಗೆ ಗೊತ್ತಾಗಿದೆ. ನಮ್ಮ ಮಧ್ಯೆ ಇರೋದು ಬಂಗಾರಮ್ಮ ಅಲ್ಲ ಬೇರೆ ಯಾರೋ ಅಂತಾ ಸಹನಾ ಕಂಡು ಹಿಡಿದಿದ್ದಾಳೆ. ಈ ವಿಚಾರನ ಕಾಳಿಗೆ ಹೇಳಿದ್ದಾಳೆ.. ಆದ್ರೆ ಈ ಸತ್ಯ ಎಲ್ಲರಿಗೂ ಗೊತ್ತಾಗ್ಬೇಕು.. ಬಂಗಾರಮ್ಮ ಅಲ್ಲ ಅನ್ನೋದನ್ನ ನಂಬಬೇಕಾದ್ರೆ ನೀನು ಬದುಕಿರುವ ವಿಚಾರ ಗೊತ್ತಾಗ್ಬೇಕು ಅಂತಾ ಹೇಳಿದ್ದಾನೆ. ಇದೀಗ ಸಹನಾ ಎಲ್ಲರ ಮುಂದೆ ಎಂಟ್ರಿ ಕೊಟ್ಟು ಸತ್ಯ ಹೇಳ್ತಾಳಾ? ಅನ್ನೋ ಕುತೂಹಲ ಮೂಡಿದೆ.
ಇದೆಲ್ಲದರ ನಡುವೆ ವೀಕ್ಷಕರು ಸಹನಾಗೆ ಮುರಳಿ ಬದಲಾಗಿ ಬೇರೆ ಜೋಡಿಯನ್ನೂ ಮಾಡಿದ್ದಾರೆ. ಸಹನಾಳನ್ನು ಮೊದಲಿನಿಂದಲೂ ಪ್ರೀತಿಸುತ್ತಿರುವ, ಮೊದಲು ಕೆಟ್ಟವನಾಗಿದ್ದು, ಈಗ ಒಳ್ಳೆಯವನಾಗಿರುವ ಕಾಳಿನೆ ಸಹನಾಗೆ ಬೆಸ್ಟ್ ಜೋಡಿ.. ಪಾಪ ಕಾಳಿ ನೀನು ಒಬ್ಬನೇ ಸಹನಾ ಜೊತೆ ನಿಂತಿರೋದು.. ನೀನೇ ಸಹನಾಳನ್ನ ಮದುವೆ ಮಾಡ್ಕೋ ಅಂತಾ ಹೇಳ್ತಿದ್ದಾರೆ ವೀಕ್ಷಕರು.
ಇನ್ನು ಕೆಲವರು, ಸಹನಾಗೆ ಕಾಳಿನೆ ಸರಿಯಾದ ಜೋಡಿ. ಕಾಳಿ ಒರಟ ಆದ್ರೂ ಅವ್ನು ಪ್ರೀತಿಲಿ ಸತ್ಯ ಇದೆ. ಕಾಳಿಗೆ ಸಹನಾ ಮೇಲೆ ಪ್ರೀತಿಯ ಜೊತೆ ನಂಬಿಕೆ ಇದೆ ಅದೆ ಮುಖ್ಯ..ಆದರೆ ಮೇಷ್ಟ್ರು ಸಹನಾ ಮೇಲೆ ನಂಬಿಕೆನೆ ಇಡಲಿಲ್ಲ ಎಂದಿದ್ದಾರೆ. ಆದ್ರೆ ಇನ್ನೂ ಒಂದಷ್ಟು ಜನ ಸಹನಾ ಮತ್ತು ಮ್ಯಾಕ್ಸಿ ಬೆಸ್ಟ್ ಜೋಡಿ.. ಸಹನಾ ಮೇಲೆ ಮಾಕ್ಸಿ ಗೆ ಲವ್ ಆಗಿದೆ ಅನ್ಸತ್ತೆ.. ಹೀಗಾಗಿ ಅವಳಿಗೆ ಅಷ್ಟೊಂದು ಹೆಲ್ಪ್ ಮಾಡ್ತಾ ಇದ್ದಾನೆ ಎಂದಿದ್ದಾರೆ. ಒಟ್ಟಿನಲ್ಲಿ ಸೀರಿಯಲ್ ಸಾಕಷ್ಟು ಕುತೂಹಲ ಮೂಡಿಸಿದೆ.