ಮುರಳಿ ಪಾತ್ರ ಎಂಡ್‌? – ಸಹನಾಗೆ ಕಾಳಿ ಹೀರೋ?
ಪುಟ್ಟಕ್ಕನ ಮಕ್ಕಳು ಸೀರಿಯಲ್‌ ನಲ್ಲಿ Big Twist!

ಮುರಳಿ ಪಾತ್ರ ಎಂಡ್‌? – ಸಹನಾಗೆ ಕಾಳಿ ಹೀರೋ?ಪುಟ್ಟಕ್ಕನ ಮಕ್ಕಳು ಸೀರಿಯಲ್‌ ನಲ್ಲಿ Big Twist!

ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಕತೆ ಈಗ ರೋಚಕತೆಯಿಂದ ಕೂಡಿದೆ. ದಿನಕ್ಕೊಂದು ಟ್ವಿಸ್ಟ್‌ ನೀಡುತ್ತಿದ್ದಾರೆ ಸೀರಿಯಲ್‌ ನಿರ್ದೇಶಕರು.. ಸಹನಾ ಸತ್ತಿದ್ದಾಳೆ ಎಂದು ಆಕೆ ಗಂಡನ ಮನೆಯವರು ಅಂದು ಕೊಂಡಿದ್ದಾರೆ. ಇತ್ತ ಪುಟ್ಟಕ್ಕ ಕೂಡ ಬೆಂಗಳೂರು ಬಿಟ್ಟು, ಊರಿಗೆ ವಾಪಸ್‌ ಬಂದಿದ್ದಾಳೆ. ಸಹನಾ ಬದುಕಿರುವ ವಿಚಾರ ಕಾಳಿಗೆ ಗೊತ್ತಾಗಿದೆ. ಆದ್ರೆ ಈ ವಿಚಾರನಾ ಯಾರಿಗೆ ಹೇಳಬೇಡ ಅಂತಾ ಮಾತಿನಲ್ಲೇ ಕಟ್ಟಿ ಹಾಕಿದ್ದಾಳೆ. ಈ ಬೆನ್ನಲ್ಲೇ ಮುರಳಿ ಪಾತ್ರ ಕೊನೆಗೊಳ್ಳುತ್ತಾ ಅನ್ನೋ ಪ್ರಶ್ನೆ ಎದುರಾಗಿದೆ.. ಅಷ್ಟೇ ಅಲ್ಲದೇ ಕಾಳಿ ಸಹನಾಗೆ ಜೋಡಿ ಆಗಲಿದ್ದಾನೆ ಅನ್ನೋ ಚರ್ಚೆ ಶುರುವಾಗಿದೆ.

ಇದನ್ನೂ ಓದಿ: ಬಾಂಗ್ಲಾ ಸ್ಪಿನ್ ಅಸ್ತ್ರ.. ಭಾರತಕ್ಕೆ ಕಂಟಕ – ರೋಹಿತ್ & ಕೊಹ್ಲಿ ವಿಕೆಟ್ ವೀಕ್​ನೆಸ್

ಕಳೆದ ಕೆಲವು ದಿನಗಳಿಂದ ಕಳೆದುಹೋದ ಮಗಳು ಸಹನಾಳನ್ನು ಹುಡುಕಿಕೊಂಡು ಪೇಟೆಗೆ ಬರುವ ಪುಟ್ಟಕ್ಕ ಮತ್ತು ಅಮ್ಮನಿಗಾಗಿ ಹಂಬಲಿಸುವ ಮಗಳು ಸಹನಾ ಸೀನ್ ಪ್ರಸಾರವಾಗುತ್ತಿತ್ತು. ಇದೀಗ ಇಲ್ಲಿ ಮತ್ತೊಂದು ಟ್ವಿಸ್ಟ್ ಎದುರಾಗಿದೆ. ಹೌದು, ಸಹನಾ ಬದುಕಿರುವ ವಿಚಾರ ಆಕೆಯ ಗಂಡನ ಮನೆಯವರಿಗೆ ಗೊತ್ತಿಲ್ಲ.. ಬೆಂಗಳೂರಿಗೆ ಬಂದಿರುವ ಆಕೆ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಬೇಕು, ಏನಾದ್ರೂ ಸಾಧನೆ ಮಾಡಬೇಕು ಅಂತಾ ಪಣತೊಟ್ಟಿದ್ದಾಳೆ. ಹೀಗಾಗಿ ಪಟ್ಟಣದಲ್ಲಿ ಕ್ಯಾಂಟೀನ್​ ಶುರು ಮಾಡಿಕೊಂಡಿದ್ದಾಳೆ.

ಸಹನಾ ಸತ್ತಿದ್ದಾಳೆ ಅಂದು ಕೊಂಡಿರುವ ಮುರಳಿ ಮನೆಯವರಿಗೆ ಈಗ ಖುಷಿಯೋ ಖುಷಿ.. ಸಹನಾ ಇಲ್ಲದೇ ಇರುವುದು ಈಗ  ಮುರಳಿ ಮೇಲೆ ಕಣ್ಣಿಟ್ಟಿದ್ದ ಟೀಚರ್​ಗೆ ಈಗ ಹಾದಿ ಸುಗಮವಾಗಿದೆ. ಇದನ್ನೇ ಆಕೆ ಅಡ್ವಾಂಟೇಜ್‌ ಆಗಿ ತೆಗೆದುಕೊಂಡಿದ್ದಾಳೆ. ಮುರಳಿಯನ್ನ ಮದುವೆಯಾಗಲು ಮುಂದಾಗಿದ್ದಾಳೆ. ಅದಕ್ಕೆ ಮುರಳಿ ಒಪ್ಪಿಕೊಂಡಿದ್ದಾನೆ. ಮನೆಯವರು ಕೂಡ ಇದಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ. ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ  ಕಮೆಂಟ್ಸ್​ ಗಳ ಸುರಿಮಳೆಯಾಗಿದೆ. ಗಂಡಸರ ಹಣೆಬರಹವೇ ಇಷ್ಟು? ಸಹನಾ ಸತ್ತಳು ಎಂದು ತಿಳಿದುಕೊಂಡು ವರ್ಷ ಆಗಿಲ್ಲ, ಆಗಲೇ ಬೇರೆ ಮದುವೆಗೆ ರೆಡಿ ಆಗಿದ್ದಾನೆ ಎಂದು ಕಾಮೆಂಟ್‌ ಮಾಡಿದ್ದಾರೆ. ಈ ಕಮೆಂಟ್​ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನೀವು ಹೀಗೆ ಜನರಲೈಸ್​ ಮಾಡಬೇಡಿ ಎಂದು ಗರಂ ಆಗಿದ್ದಾರೆ. ಮತ್ತೆ ಕೆಲವರು ಮದುವೆಯಾದರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ. ಮತ್ತೊಂದಷ್ಟು ಮಂದಿ, ಹೆಣ್ಣು ಒಂಟಿಯಾಗಿ ಜೀವಿಸುವ ತಾಕತ್ತು ಇದೆ, ಆದರೆ ಗಂಡಸರಿಗೆ ಆ ತಾಕತ್ತು ಇಲ್ಲ. ನಮ್ಮದು ಪುರುಷ ಪ್ರಧಾನ ಸಮಾಜ ಆಗಿದ್ದರೂ, ನೈಸರ್ಗಿಕವಾಗಿ ಹೆಣ್ಣಿಗೆ ಇರುವಷ್ಟು ಶಕ್ತಿ ಗಂಡಸರಿಗೆ ಇರಲು ಸಾಧ್ಯವೇ ಇಲ್ಲ ಎಂದು ಕಾಮೆಂಟ್‌ ಮಾಡಿದ್ದಾರೆ. ಇದೀಗ ಈ ವಿಚಾರವನ್ನ ಕಾಳಿ ಸಹನಾಳಿಗೆ ತಿಳಿಸ್ತಾನಾ? ಸಹನಾಳ ಮುಂದಿನ ನಡೆ ಏನು ಎನ್ನುವುದನ್ನು ನೋಡಬೇಕಿದೆ.

ಇನ್ನು ಮುರಳಿ ಟೀಚರ್‌ ಅನ್ನ ಮದುವೆ ಆಗ್ತಿದ್ದಂತೆ ಮುರಳಿ ಪಾತ್ರ ಎಂಡ್‌ ಆಗುತ್ತಾ ಅನ್ನೋ ಪ್ರಶ್ನೆ ಕೂಡ ಎದುರಾಗಿದೆ. ಈ ಪಾತ್ರವನ್ನ ಮದುವೆ ಮೂಲಕ ಕೊನೆಗೊಳಿಸಲಾಗ್ತಿದ್ಯಾ ಅಂತಾ ಕೂಡ ವೀಕ್ಷಕರು ಕಮೆಂಟ್‌ ಮಾಡ್ತಿದ್ದಾರೆ. ಮುಂದೇನಾಗುತ್ತೆ ಅಂತಾ ಕಾದು ನೋಡ್ಬೇಕು..

ಇನ್ನು ಕಾಳಿ ಸಹನಾಳಿಗೆ ಒಳ್ಳೆಯದ್ದನ್ನೇ ಬಯಸ್ತಾ ಬಂದಿದ್ದಾನೆ. ಆತ ಒಳ್ಳೆಯವನು ಅನ್ನೋದು ಕೂಡ ಸಹನಾಗೆ ಅರ್ಥ ಆಗಿದೆ. ಇವರಿಬ್ಬರ ಬಾಂಡಿಂಗ್​ ಜನರು ಮೆಚ್ಚಿಕೊಂಡಿದ್ದಾರೆ. ಸಹನಾ ಅವನನ್ನೇ ಮದುವೆಯಾಗಬೇಕು ಎನ್ನುವುದು ಫ್ಯಾನ್ಸ್​ ಅಭಿಮತ. ಅಷ್ಟಕ್ಕೂ ಮುರುಳಿ, ಅಮ್ಮನ ಮಾತು ಕೇಳಿಕೊಂಡು ಸಹನಾಳಿಗೆ ಕೊಡಬಾರದ ಹಿಂಸೆ ಕೊಟ್ಟಿದ್ದಾನೆ. ಸಹನಾ ಎಂಥವಳು ಎಂದು ತಿಳಿದಿದ್ದರೂ ಅವರಿಗೆ ಅನ್ನಬಾರದು ಅಂದಿದ್ದಾನೆ. ಇದೇ ಕಾರಣಕ್ಕೆ ಸಹನಾ ಮನೆ ಬಿಟ್ಟು ಬರುವ ಹಾಗಾಗಿತ್ತು. ಗಂಡನಿಂದ ದೂರವಾಗಿ ಮಹಿಳೆ ಏನನ್ನಾದರೂ ಸಾಧಿಸಬಹುದು ಎನ್ನುವುದನ್ನು ಸಹನಾ ತೋರಿಸಿಕೊಡುತ್ತಿದ್ದಾಳೆ. ಆದರೆ ಆಕೆಯ ಹಾದಿಯೂ ಏನೂ ಸುಗಮವಲ್ಲ. ಕಾಮುಕನ ಕೈಯಿಂದ ಸಾಲ ಪಡೆದುಕೊಂಡಿದ್ದಾಳೆ. ಸಾಲ ಮರುಪಾವತಿ ಮಾಡದಿದ್ದರೆ ಏನು ಮಾಡಬೇಕೋ ಅದನ್ನು ಮಾಡುತ್ತೇನೆ ಎಂದು ಆತ ಮನಸ್ಸಿನಲ್ಲಿಯೇ ಹೇಳಿಕೊಂಡಿದ್ದಾನೆ. ಸಹನಾ ಜೀವನದಲ್ಲಿ ಸಕ್ಸಸ್​ ಆಗ್ತಾಳಾ? ಮುರಳಿ ಮದುವೆ ಆಗ್ತಾನಾ? ಹೀಗೆ ಹಲವು ಕುತೂಹಲವನ್ನು ಸೀರಿಯಲ್​ ಉಳಿಸಿಕೊಂಡಿದೆ. ಅದೇ ಇನ್ನೊಂದೆಡೆ ಸ್ನೇಹಾ ಡಿಸಿ ಹುದ್ದೆಗೆ ಸಂದರ್ಶನ ಕೊಟ್ಟು ಭೇಷ್​ ಎನ್ನಿಸಿಕೊಂಡಿದ್ದಾಳೆ. ಅವಳಿಗೆ ಗೆಲುವು ಸಿಗತ್ತಾ ಎನ್ನುವುದೂ ಪ್ರೇಕ್ಷಕರ ಕುತೂಹಲ.

Shwetha M

Leave a Reply

Your email address will not be published. Required fields are marked *