ಪುಟ್ಟಕ್ಕನ ಮಡಿಲು ಸೇರಿದ ಸಹನಾ – ಅಮ್ಮ ಮಗಳು ಒಂದಾಗಿದ್ದು ಕನಸಾ, ನನಸಾ?
ಸೀರಿಯಲ್‌ನಲ್ಲಿ ಕಾದಿದೆ ಟ್ವಿಸ್ಟ್?
ಪುಟ್ಟಕ್ಕನ ಮಕ್ಕಳು ಸೀರಿಯಲ್ ಸದ್ಯ ರೋಚಕ ಘಟ್ಟ ತಲುಪಿದೆ.. ಬಂಗಾರಮ್ಮ ಸಿಂಗಾರಮ್ಮನ ವಶದಲ್ಲಿ ಇದ್ದಾಳೆ.. ಇನ್ನೊಂದು ಕಡೆ ಸುಮನಾ ಅವ್ವನಿಗೆ ಕೊಟ್ಟ ಮಾತು ತಪ್ಪಿ ಲವ್ವಲ್ಲಿ ಬಿದ್ದಿದ್ದಾಳೆ. ಮತ್ತೊಂದ್ಕಡೆ ಸಹನಾ ಮನೆ ಬಿಟ್ಟು ಹೋಗಿದ್ದಾಳೆ. ಅತ್ತ ಪುಟ್ಟಕ್ಕನಿಗೆ ಸಹನ ಬದುಕಿದ್ದಾಳೆ ಅನ್ನೋ ವಿಚಾರ ಗೊತ್ತಾಗಿ, ಮಗಳನ್ನು ಹುಡುಕಿಕೊಂಡು ಸಿಟಿಗೆ ಹೋಗಿದ್ದಾಳೆ. ಇನ್ನು ಪುಟ್ಟಕ್ಕ ಸಿಟಿಯಲ್ಲಿ ಗೋಳಾಡೋದು ಇದ್ದೇ ಇದೆ.. ಇನ್ನು ಒಂದು ತಿಂಗಳು ಇದನ್ನೇ ನೋಡ್ಬೇಕಾ ಅಂತಾ ಫಾನ್ಸ್ ಬೇಜಾರು ಮಾಡ್ಕೊಂಡಿರುವಾಗಲೇ ಡೈರೆಕ್ಟರ್ ಟ್ವಿಸ್ಟ್ ಕೊಟ್ಟಿದ್ದಾರೆ.. ಸಹನ, ಪುಟ್ಟಕ್ಕನ ಮಡಿಲು ಸೇರಿದ್ದಾಳೆ..
ಇದನ್ನೂ ಓದಿ: ನನ್ನ ದೇಹ.. ನನ್ನ ಇಷ್ಟ ನಿಮಗ್ಯಾಕೆ ಕಷ್ಟ.. ಬಟ್ಟೆ ಅಲರ್ಜಿಯಾಗಿದ್ದೇ ಇದಕ್ಕಾ? – ನಿಮಗೆ ಗೊತ್ತಿರದ ಉರ್ಫಿ Story..!
ಸಹನಾ ಮನೆ ಬಿಟ್ಟು ಹೋದ್ಮೇಲೆ ಪುಟ್ಟಕ್ಕನ ಗೋಳಾಟವನ್ನೇ ಸೀರಿಯಲ್‌ನಲ್ಲಿ ತೋರಿಸಲಾಗ್ತಿದೆ.. ವೀಕ್ಷಕರಿಗೂ ಇದು ಬೋರ್ ಆಗಿತ್ತು.. ಇದೀಗ ಪುಟ್ಟಕ್ಕ ಸಹನಾಳನ್ನ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದಾಳೆ.. ಈ ಮಹಾನಗರ ಬೆಂಗಳೂರಲ್ಲಿ ಮಗಳನ್ನು ಹುಡುಕಿ ಹುಡುಕಿ ಸೋತು ಹೈರಾಣಾಗಿದ್ದಾಳೆ. ಕಡೆಗೂ ಮಗಳು ಸಿಕ್ಕಳು ಅನ್ನುವಾಗ ಇಬ್ಬರೂ ವಿರುದ್ಧ ದಿಕ್ಕಿಗೆ ನಡೆದು ಹೋಗಿದ್ದಾರೆ. ಇನ್ನು ಒಂದು ತಿಂಗಳು ಇದನ್ನೇ ರಬ್ಬರ್ ತರ ಎಳೆಯಲಾಗುತ್ತೇ ಅಂತಾ ವೀಕ್ಷಕರು ಅಂದುಕೊಂಡಿದ್ದರು.. ಇದೀಗ ಡೈರೆಕ್ಟರ್ ವೀಕ್ಷಕರಿಗೆ ಸರ್‌ಪ್ರೈಸ್ ಕೊಟ್ಟಿದ್ದಾರೆ.. ಮಗಳು ಅಮ್ಮನ ಮಡಿಲು ಸೇರಿದ್ದಾಳೆ.
ಹೌದು, ಜೀ ಕನ್ನಡ ಸಹನಾ ಪುಟ್ಟಕ್ಕ ಒಂದಾಗಿರೋ ಪ್ರೊಮೋವನ್ನು ಪ್ರಸಾರ ಮಾಡಿದೆ. ಕಂಠಿ ಹಾಗೂ ಪುಟ್ಟಕ್ಕ ಒಂದು ಕಡೆ ಕುಳಿತು ಸಹನಾ ಬಗ್ಗೆ ಮಾತಾಡ್ತಿರ್ತಾರೆ.. ನಡೆದ ವಿಷಯವನ್ನೆಲ್ಲಾ ಪುಟ್ಟಕ್ಕ ಕಂಠಿಗೆ ಹೇಳ್ತಿರ್ತಾಳೆ.. ಈ ವೇಳೆ ಮಾಕ್ಸಿ ವಿಡಿಯೋ ಮಾಡ್ತಿರುವಾಗ ಶಾಕ್ ಆಗ್ತಾನೆ.. ಪುಟ್ಟಕ್ಕ ಅಂತಾ ಹೇಳ್ತಾನೆ.. ಪುಟ್ಟಕ್ಕನನ್ನ ತೋರಿಸುತ್ತಿದ್ದಂತೆ ಅವ್ವ ಅಂತಾ ಸಹನಾ ಓಡಿ ಹೋಗಿ ಪುಟ್ಟಕ್ಕಳನ್ನ ತಬ್ಬಿಕೊಂಡಿದ್ದಾಳೆ.. ಇದ್ರಿಂದಾಗಿ ಕೆಲ ವೀಕ್ಷಕರು ಸಂತಸ ಪಟ್ಟಿದ್ದಾರೆ.. ಕಡೆಗೂ ಅಮ್ಮ ಮಗಳು ಒಂದಾದ್ರು.. ಇನ್ನು ಪುಟ್ಟಕ್ಕನ ಗೋಳಾಟ ತಪ್ಪಿತು ಅಂತಾ ಹೇಳಿದ್ದಾರೆ.. ಆದ್ರೆ ಇನ್ನೂ ಕೆಲವರು ಇದನ್ನು ನಂಬಲು ರೆಡಿ ಇಲ್ಲ. ಇದೆಲ್ಲ ಕನಸು ಅಂತಾನೇ ಹೇಳ್ತಿದ್ದಾರೆ. ಯಾಕೆಂದರೆ ಅವರ ಊಹೆ ಪ್ರಕಾರ ಪುಟ್ಟಕ್ಕ ಮತ್ತು ಸಹನಾ ಇಷ್ಟು ಬೇಗ ಒಂದಾಗೋಕೆ ಸಾಧ್ಯ ಇಲ್ಲ. ಇನ್ನೂ ಏನೇನೋ ಡ್ರಾಮಾಗಳೆಲ್ಲ ನಡೀಬೇಕಿದೆ. ಪುಟ್ಟಕ್ಕ ಸಿಟಿಗೆ ಬಂದರೆ ಅವಳು ಮಗಳನ್ನು ವಾಪಾಸ್ ಕರ್ಕೊಂಡು ಹೋಗದೇ ಬಿಡೋದಿಲ್ಲ. ಸಹನಾ ಏನಾದ್ರೂ ಸಾಧನೆ ಮಾಡಿ ಊರಿಗೆ ಹೋಗ್ಬೇಕು ಅಂತಾ ನಿಋಧಾರ ಮಾಡಿ ಬಂದಿದ್ದಾಳೆ.. ಗಾಡಿಯಿಂದ.. ಹೊಟೇಲ್ ನಡೆಸೋ ತನಕ ಸಹನ ಬೆಳೀಬೇಕಿದೆ. ಪುಟ್ಟಕ್ಕ ಮತ್ತು ಸಹನಾ ಭೇಟಿ ಆದ್ರೆ ಇದೆಲ್ಲ ಸಾಧ್ಯ ಆಗಲಿಕ್ಕಿಲ್ಲ ಅನ್ನೋದು ಸದ್ಯದ ಲೆಕ್ಕಾಚಾರ. ಮತ್ತೊಂದ್ಕಡೆ ಸಹನಾ ಸಂಕಷ್ಟದಲ್ಲಿ ಕೂಡ ಇದ್ದಾಳೆ.. ಹಣಕಾಸಿನ ಸಹಾಯ ನೀಡಿರೋ ವ್ಯಕ್ತಿ ದೊಡ್ಡ ರೌಡಿ.. ಆತ ಆಕೆಯನ್ನ ಕೆಟ್ಟ ದೃಷ್ಟಿಯಿಂದ ನೋಡ್ತಾ ಇದ್ದ.. ಈಗ ಆತನಿಂದ ಕಿರುಕುಳ ಶುರುವಾಗಬೇಕಿದೆ.
ಸೋ ಈಗ ವೀಕ್ಷಕರ ಲೆಕ್ಕಾಚಾರದ ಪ್ರಕಾರ ಪುಟ್ಟಕ್ಕನಿಗೆ ಸಹನಾ ಸಿಗೋದಿಲ್ಲ. ಪುಟ್ಟಕ್ಕ ಊರಿಗೆ ವಾಪಾಸ್ ಹೋಗ್ತಾಳೆ. ಸಹನಾಳಾ ಲೈಫು ಮತ್ತೊಂದು ಟರ್ನ್ ತಗೊಳುತ್ತೆ. ಸಹನಾ ಸಂಕಷ್ಟದಲ್ಲಿ ಸಿಲುಕುವಾಗ ಮ್ಯಾಕ್ಸಿ ಕಾಪಾಡ್ತಾನೆ.. ಬಳಿಕ ಅವರಿಬ್ಬರ ಮಧ್ಯೆ ಒಳ್ಳೆ ಬಂಧ ಬೆಸಿಬೋದು.. ಅವಳ ಮತ್ತು ಮ್ಯಾಕ್ಸ್ ವೆಲ್ ನಡುವಿನ ಸಂಬಂಧ ಹೇಗಾಗುತ್ತೆ ಅನ್ನೋದನ್ನೂ ನೋಡೋದಿದೆ. ವೀಕ್ಷಕರು ಕೂಡ ಅವರಿಬ್ಬರು ಒಂದಾದ್ರೆ ಚೆನ್ನಾಗಿರುತ್ತೆ ಅಂತಾ ಹೇಳ್ತಿದ್ದಾರೆ.. ಇದು ಕನಸೇ ಆಗಲಿ, ರಿಯಲ್ಲೇ ಆಗಲಿ. ಕೆಲವು ವೀಕ್ಷಕರಂತೂ ಕಣ್ತುಂಬಿಕೊಂಡು ಈ ಸೀರಿಯಲ್ ಕಥೆಯನ್ನು ತಮ್ಮ ಲೈಫಿಗೆ ಕನೆಕ್ಟ್ ಮಾಡಿಕೊಳ್ಳುತ್ತಿದ್ದಾರೆ. ತಾಯಿ ಕರುಳಿನ ನೋವು, ವೇದನೆಗಳನ್ನು ಹಂಚಿಕೊಂಡಿದ್ದಾರೆ.