ದೂರವಾಗ್ತಾರಾ ಕಂಠಿ, ಸ್ನೇಹ? – ಸುಮಾ ಬಾಳಲ್ಲೂ ಬಿರುಗಾಳಿ?
ಗುರು ಭವಿಷ್ಯ.. ಪುಟ್ಟಕ್ಕ ಏನ್ಮಾಡ್ತಾಳೆ?

ದೂರವಾಗ್ತಾರಾ ಕಂಠಿ, ಸ್ನೇಹ? – ಸುಮಾ ಬಾಳಲ್ಲೂ ಬಿರುಗಾಳಿ?ಗುರು ಭವಿಷ್ಯ.. ಪುಟ್ಟಕ್ಕ ಏನ್ಮಾಡ್ತಾಳೆ?

ಪುಟ್ಟಕ್ಕನ ಪುಟ್ಟಕ್ಕನ ಮೆಸ್‌ ಮುಚ್ಚಬೇಕು.. ಆಕೆಯ ಹೆಸ್ರು ಹಾಳು ಮಾಡ್ಬೇಕು ಅಂತಾ ರಾಜಿ ಒಂದಲ್ಲ ಒಂದು ಪ್ಲ್ಯಾನ್‌ ಮಾಡ್ತಾನೆ ಇರ್ತಾಳೆ. ಇದೀಗ ಕುತಂತ್ರಿಗಳ ಆಟದ ಜೊತೆಗೆ ಪುಟ್ಟಕ್ಕನ ಮಕ್ಕಳ ಬಾಳಲ್ಲಿ ದೇವರ ಆಟ ಕೂಡ ನಡಿತಾ ಇದೆ. ಸಹನಾ ದಾಂಪತ್ಯ ಮುರಿದು ಬಿದ್ದಿತ್ತು.. ಸ್ನೇಹ ಕೂಡ ಆಕ್ಸಿಡೆಂಟ್‌ನಲ್ಲಿ ಸಾವನ್ನಪ್ಪಿದ್ಲು. ಇದೀಗ ಸುಮಾ ಬಾಳಲ್ಲೂ ದೊಡ್ಡ ಬಿರುಗಾಳಿ ಏಳೋ ಮುನ್ಸೂಚನೆ ಸಿಕ್ಕಿದೆ. ಇದೀಗ ಪುಟ್ಟಕ್ಕನ ಮಕ್ಕಳು ಸೀರಿಯಲ್‌ಗೆ ಮತ್ತೊಂದು ಟ್ವಿಸ್ಟ್‌ ಸಿಗೋದು ಪಕ್ಕಾ ಆಗಿದೆ.

ಇದನ್ನೂ ಓದಿ:  ಕೊನೆಯಾಗಿದ್ದು ರಾಮಾಚಾರಿ ಪಾತ್ರವೋ, ಕಿಟ್ಟಿ ಪಾತ್ರವೋ – ನಾಯಕನ ಪಾತ್ರ ಕೊಲೆಯಲ್ಲಿ ಅಂತ್ಯ ಮಾಡಿದ್ದು ಯಾಕೆ?

ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಸ್ಟೋರಿ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ಪಾತ್ರಕ್ಕೆ ತಕ್ಕಂತೆ ಸೀರಿಯಲ್‌ ಸ್ಟೋರಿ ಸಾಗ್ತಾ ಇದೆ. ಪುಟ್ಟಕ್ಕ ಮನೆ ದೇವರ ದರ್ಶನಕ್ಕೆ ಹೋಗಿದ್ದಾಗ, ರಾಜಿ ಸಚಿನ್‌ ತಂದೆ ಜೊತೆ ಸೇರ್ಕೊಂಡು  ಸುಮಾಳನ್ನ ಕಿಡ್ನ್ಯಾಪ್‌ ಮಾಡಿಸಿದ್ಲು.. ಮೆಸ್‌ ಅನ್ನ ಕೂಡ ಮುಚ್ಚಿಸಿದ್ಲು. ಇದು ಕಂಠಿಗೆ ಗೊತ್ತಾದ್ರೆ ಆತ ಉಗ್ರ ರೂಪ ತಾಳ್ತಾನೆ ಅಂತ ಸ್ನೇಹ, ಡಿಸಿ ಸ್ನೇಹ ಆತ್ಮದ ಕತೆ ಕಟ್ಟಿದ್ಲು.. ಇದೆಲ್ಲಾ ಪುಟ್ಟಕ್ಕನಿಗೆ ಗೊತ್ತಾಯ್ತು. ಹೀಗಾಗಿ ಪುಟ್ಟಕ್ಕ ಎಲ್ಲರ ಜೊತೆ ಮಾತು ಬಿಟ್ಟಿದ್ಲು.. ಬಳಿಕ ಪುಟ್ಟಕ್ಕ ಡಿಸಿ ಸ್ನೇಹ ಆತ್ಮ ಎಲ್ಲಾ ಸುಳ್ಳು.. ಮನೆಯವರೆಲ್ಲಾ ಸೇರಿಕೊಂಡು ಮಾಡಿರೋ ನಾಟಕ ಅಂತ ಪುಟ್ಟಕ್ಕ ಕಂಠಿಗೆ ಹೇಳಿದ್ದಾಳೆ. ಈ ವಿಚಾರ ಕೇಳಿದ ಕಂಠಿ ಉಗ್ರ ರೂಪ ತಾಳಿದ್ದಾನೆ.. ತಾಂಡವ್‌ನ ಕೂಡ ಕಂಠಿ ಕಿಡ್ನ್ಯಾಪ್‌ ಮಾಡಿದ್ದಾನೆ. ಇದೀಗ ಕಂಠಿ ಹೀಗೆ ಇದ್ರೆ ದೊಡ್ಡ ಅನಾಹುತ ಆಗುತ್ತೆ ಅಂತಾ ಪುಟ್ಟಕ್ಕ ಹಾಗೂ ಬಂಗಾರಮ್ಮನಿಗೆ ಗೊತ್ತಾಗಿದೆ. ಹೀಗಾಗಿ ಎಲ್ಲರೂ ದೇವಸ್ಥಾನಕ್ಕೆ ಹೋಗಿದ್ದಾರೆ. ಇದೀಗ ದೇವಸ್ಥಾನದಲ್ಲೂ ಪುಟ್ಟಕ್ಕನಿಗೆ ಶಾಕ್‌ ಎದುರಾಗಿದೆ. ಇದೀಗ ಸುಮಾ ಬಾಳಲ್ಲಿ ಬಿರುಗಾಳಿ ಎಳೋ ಮುನ್ಸೂಚನೆ ಸಿಕ್ಕಿದೆ.

ಹೌದು, ದೇವಸ್ಥಾನದಲ್ಲಿ ಪುಟ್ಟಕ್ಕನಿಗೆ ಮಹಾ ಗುರುಗಳ ದರ್ಶನವಾಗಿದೆ. ಈ ವೇಳೆ ಮಕ್ಕಳ ಬಗ್ಗೆ ಭವಿಷ್ಯವಾಣಿ ನುಡಿದ್ದಿದ್ದಾರೆ.. ಮೂರು ಮೊಗ್ಗುಗಳು ಅರಳಿ ಹೂವಾಗಿವೆ.. ಎರಡು ಹೂವುಗಳಿಗೆ ಸಂಸಾರ ನಡೆಸೋ ಯೋಗ ಇಲ್ಲದೆ ಬಾಡಿ ಹೋಯ್ತು. ಇನ್ನೊಂದು ಇದ್ದೂ ಇಲ್ಲದಾಯ್ತು.. ಮೂರನೆಯದ್ದು ಗಾಳಿಗೆ ಅಲುಗಾಡುತ್ತೆ. ತಾಳಿ ಬಿದ್ದಿಲ್ಲ ಅಂದ್ರೆ ಅದೂ ಬಾಡಿ ಹೋಗುತ್ತೆ ಅಂತಾ ಹೇಳಿದ್ದಾರೆ ಮಹಾ ಗುರುಗಳು. ಇದೀಗ ಸುಮಾ ಬಾಳಲ್ಲೂ ದುರಂತ ನಡೆಯುತ್ತಾ ಅನ್ನೋ ಅನುಮಾನ ವೀಕ್ಷಕರನ್ನ ಮೂಡಿದೆ. ಮತ್ತೊಂದ್ಕಡೆ ಸಚಿನ್‌ ಸುಮಾಗೆ ಮದುವೆ ಪ್ರಪೋಸಲ್‌ ಇಟ್ಕೋಂಡು ಬಂದಿದ್ದಾನೆ. ಇದೀಗ ಇವರಿಬ್ರ ಮದುವೆಯನ್ನ ಪುಟ್ಟಕ್ಕ ಮಾಡಿಸ್ತಾಳಾ ಅನ್ನೋ  ಕ್ಯೂರಿಯಾಸಿಟಿ ಮೂಡಿದೆ.

ಮತ್ತೊಂದ್ಕಡೆ ಈಗ ಕಂಠಿ ಜೀವನಕ್ಕೆ ಆಪತ್ತು ಇದೆ ಅಂತಾ ಮಹಾ ಗುರುಗಳು ಹೇಳಿದ್ದಾರೆ. ಸ್ನೇಹ ತಾಯಿ ಸತ್ತಿತ್ತು, ಅವ್ರಿಗೆ ಹಾಲು ತುಪ್ಪ ಬಿಟ್ಟಿಲ್ಲ ಅಂದ್ರೆ ಗಂಡನ ಪ್ರಾಣಕ್ಕೆ ಸಂಚಕಾರ ಬರುತ್ತೆ ಅಂತಾ ಹೇಳಿದ್ದಾರೆ. ಇದೀಗ ಸ್ನೇಹ ಕಂಠಿ ಜೊತೆ ತನ್ನ ಊರಿಗೆ ಹೊರಟಿದ್ದಾಳೆ. ಇಲ್ಲೇ ಕಂಠಿಗೆ ಏನಾದ್ರೂ ಅಪಾಯ ಎದುರಾಗುತ್ತಾ? ಸ್ನೇಹ ಕಂಠಿಯನ್ನ ಹೇಗೆ ಕಾಪಾಡ್ತಾಳೆ ಅನ್ನೋ ಕ್ಯೂರಿಯಾಸಿಟಿ ವೀಕ್ಷಕರಲ್ಲಿದೆ.

Shwetha M