ಪುಟ್ಟಕ್ಕನ ಕರುಳಿನ ಕೂಗು ನಿಜವಾಯ್ತು! – ತಿಥಿ ದಿನವೇ ಸಹನಾ ಪ್ರತ್ಯಕ್ಷ
ಸ್ನೇಹ ಓದಿಗೆ ಬಂಗಾರಮ್ಮನೇ ಸ್ಪೂರ್ತಿ

ಪುಟ್ಟಕ್ಕನ ಕರುಳಿನ ಕೂಗು ನಿಜವಾಯ್ತು! – ತಿಥಿ ದಿನವೇ ಸಹನಾ ಪ್ರತ್ಯಕ್ಷಸ್ನೇಹ ಓದಿಗೆ ಬಂಗಾರಮ್ಮನೇ ಸ್ಪೂರ್ತಿ

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಈ ವೀಕ್ ನ ಎಪಿಸೋಡ್‌ಗಳಲ್ಲಿ ವೀಕ್ಷಕರಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕಾದಿದೆ. ಒಂದೆಡೆ ಸಹನಾ ತಿಥಿ ದಿನವೇ ಪುಟ್ಟಕ್ಕನಿಗೆ ಶಾಕ್ ಕಾದಿದೆ. ಮತ್ತೊಂದೆಡೆ ಸ್ನೇಹಾ ಓದಿಗೆ ಅತ್ತೆಯೇ ಸ್ಪೂರ್ತಿಯಾಗಿ ನಿಂತಿದ್ದಾರೆ. ಸುಮ ಲೈಫ್‌ಲ್ಲೂ ಬದಲಾವಣೆಯ ಗಾಳಿ ಬೀಸಿದೆ. ಈ ಎಲ್ಲಾ ಕಥೆಗಳನ್ನ ಮುಂದಿಟ್ಟುಕೊಂಡು ಸೀರಿಯಲ್ ತಂಡ ಈ ವಾರ ವೀಕ್ಷಕರ ಮುಂದೆ ಬಂದಿದೆ.

ಪುಟ್ಟಕ್ಕನ ಮಕ್ಕಳು. ಇಲ್ಲಿ ಪುಟ್ಟಕ್ಕ ಒಂದು ರೀತಿ ನೋವಲ್ಲೇ ಬದುಕಿ, ನೋವಲ್ಲೇ ಉಸಿರಾಡಿ, ನೋವಲ್ಲೇ ಬದುಕು ಸಾಗಿಸುವ ಜೀವ. ತನ್ನ ಮೂವರು ಹೆಣ್ಣು ಮಕ್ಕಳನ್ನ ದಿಟ್ಟ ಹೆಣ್ಣುಮಕ್ಕಳನ್ನಾಗಿ ಬೆಳೆಸೋ ಪುಟ್ಟಕ್ಕ ಮೊದಲ ಮಗಳು ಸಹನಾಳಿಂದಾಗಿ ಮೊದಲ ಬಾರಿ ಸೋತು ಹೋಗುತ್ತಾಳೆ. ಸಹನಾಳ ಪ್ರೀತಿ, ಮದುವೆ, ನಂತರ ಸಹನಾ ಸಾವು. ಇದು ಪುಟ್ಟಕ್ಕಳನ್ನು ಕುಗ್ಗುವಂತೆ ಮಾಡುತ್ತದೆ. ಆದ್ರೆ, ಸಹನಾ ಬದುಕಿದ್ದಾಳೆ ಅನ್ನೋದು ಪುಟ್ಟಕ್ಕನಿಗೆ ಗೊತ್ತಿಲ್ಲ. ತಾಯಿಯ ಮನಸು ಕರುಳಬಳ್ಳಿ ಜೀವಂತವಿದೆ ಅಂತಾ ಹೇಳಿದರೂ ಕಣ್ಣಾರೆ ಕಂಡ ಸತ್ಯ ಪುಟ್ಟಕ್ಕಳನ್ನ ಅಸಹಾಯಕಳನ್ನಾಗಿ ಮಾಡಿಸಿದೆ. ಆದ್ರೆ, ಸತ್ಯವನ್ನು ಜಾಸ್ತಿ ದಿನ ಮುಚ್ಚಿಡೋದು ಬೇಡ ಅಂತಾನೋ ಏನೋ, ಸೀರಿಯಲ್ ನಿರ್ದೇಶಕರು ಶೀಘ್ರದಲ್ಲೇ ಪುಟ್ಟಕ್ಕನ ಮಗಳು ಸಹನಾಳನ್ನು ತಾಯಿ ಮುಂದೆ ತಂದು ನಿಲ್ಲಿಸುತ್ತಿದ್ದಾರೆ. ಯೆಸ್. ಸಹನಾ ಮನೆಗೆ ಬರುವ ಟೈಮ್ ಬಂದೇ ಬಿಟ್ಟಿದೆ. ಅತ್ತ ಸಹನಾ ತಿಥಿಗೆ ಎಲ್ಲರೂ ರೆಡಿಮಾಡಿಕೊಂಡಿದ್ದರೆ, ಇತ್ತ ಮನೆಗೆ ಬರಲು ಬಸ್ ಹತ್ತಿದ್ದಾಳೆ ಸಹನಾ. ತಿಥಿಯೂಟಕ್ಕೆ ಬಂದವರಿಗೆ ಹಬ್ಬದೂಟ ಬಡಿಸಲು ಪುಟ್ಟಕ್ಕ ರೆಡಿಯಾಗೋದೊಂದೇ ಬಾಕಿ.

ಮತ್ತೊಂದೆಡೆ ಸ್ನೇಹಾ ಕಥೆ. ಅಂತೂ ಇಂತೂ ಸ್ನೇಹ ಮತ್ತು ಬಂಗಾರಮ್ಮ ಒಂದಾಗಿಯಾಗಿದೆ. ಬಂಗಾರಮ್ಮನ ಬಂಗಾರದ ಮನಸು ಸ್ನೇಹಳಿಗೆ ಅರ್ಥವಾಗಿದೆ. ಸತ್ಯವಂತ ಸೊಸೆಯ ಒಳ್ಳೇ ಗುಣ ಅತ್ತೆಗೂ ಗೊತ್ತಾಗಿದೆ. ಈಗೇನಿದ್ರೂ ಸ್ನೇಹ ಓದೋದೊಂದೇ ಬಾಕಿ. ಸದ್ಯದಲ್ಲೇ ಸ್ನೇಹ ಸರ್ಕಾರಿ ಅಧಿಕಾರಿಯಾಗ್ತಾಳೆ ಎಂಬ ನಿರೀಕ್ಷೆಯಲ್ಲಿದ್ದಾರೆ ವೀಕ್ಷಕರು. ಅಲ್ಲಿ ಪುಟ್ಟಕ್ಕ ತನ್ನ ಮೂವರು ಮಕ್ಕಳು ಸಮಾಜದಲ್ಲಿ ಒಂದೊಳ್ಳೇ ಸ್ಥಾನಮಾನದಲ್ಲಿ ಬದುಕಬೇಕು ಎಂದು ಬಯಸಿ ಬೆಳೆಸುತ್ತಿದ್ದರೆ, ಇತ್ತ ಆ ಮೂವರು ಹೆಣ್ಣು ಮಕ್ಕಳು ಒಂದಲ್ಲಾ ಒಂದು ದಿನ ನಾವು ಯಾರಿಗೂ ಕಮ್ಮಿಯಿಲ್ಲ ಅಂತಾ ತೋರಿಸಿಕೊಡಲಿದ್ದಾರೆ ಎಂಬ ನಿರೀಕ್ಷೆಕೂಡಾ ಇದೆ. ಹೀಗಾಗಿ ಪುಟ್ಟಕ್ಕನ ಮಕ್ಕಳು ಸೀರಿಯಲ್ ಮಹಿಳೆಯರ ಫೆವರೇಟ್ ಆಗ್ತಿದೆ. ಅದೇನೇ ಇರಲಿ, ಸಹನಾ ಸತ್ತಿಲ್ಲ ಅನ್ನೋ ಸತ್ಯ ಗೊತ್ತಾದಾಗ ಪುಟ್ಟಕ್ಕನ ರಿಯಾಕ್ಷನ್ ಹೇಗಿರುತ್ತೆ ಅನ್ನೋದನ್ನು ನೋಡಲು ವೀಕ್ಷಕರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

Shwetha M

Leave a Reply

Your email address will not be published. Required fields are marked *