ಒಂದಾದ ಪುಟ್ಟಕ್ಕ, ಬಂಗಾರಮ್ಮ.. ನಡೆದೇ ಹೋಯ್ತು ಕಂಠಿ- ಸ್ನೇಹ ಮದ್ವೆ – ಜೈಲು ಸೇರಿದ ಮನೆಹಾಳಿ ರಾಧಾ!

ಒಂದಾದ ಪುಟ್ಟಕ್ಕ, ಬಂಗಾರಮ್ಮ.. ನಡೆದೇ ಹೋಯ್ತು ಕಂಠಿ- ಸ್ನೇಹ ಮದ್ವೆ – ಜೈಲು ಸೇರಿದ ಮನೆಹಾಳಿ ರಾಧಾ!

ಸ್ನೇಹ – ಕಂಠಿ ಲವ್‌ ಸ್ಟೋರಿ ಶುರುವಾಗ್ತಿದ್ದಂತೆ ಜೀವದ ಗೆಳತಿಯರಾದ ಪುಟ್ಟಕ್ಕ ಬಂಗಾರಮ್ಮ ಮುನಿಸಿಕೊಂಡಿದ್ರು. ಕಂಠಿ ಸ್ನೇಹ ಮದುವೆ ಆಗ್ಬೇಕು ಅಂತಾ ಪುಟ್ಟಕ್ಕ ಹಠ ಮಾಡಿದ್ರೆ, ರಾಧಾ ಕಂಠಿ ಮದುವೆ ಮಾಡಿಸ್ಬೇಕು ಎಂದು ಬಂಗಾರಮ್ಮ ಶಪತ ಮಾಡಿದ್ಲು.. ಆದ್ರೀಗ ಮನೆಹಾಳಿ ರಾಧಾ ಮುಖವಾಡ ಬಯಲಾಗಿದೆ. ಇದೀಗ ದೂರವಾಗಿದ್ದ ಪುಟ್ಟಕ್ಕ ಬಂಗಾರಮ್ಮ ಒಂದಾಗಿದ್ದಾರೆ. ಬೆಂಕಿ, ಬಿರುಗಾಳಿ ಒಂದಾದ್ರೆ ಏನಾಗುತ್ತೆ ಅಂತಾ ಈಗ ಕೆಟ್ಟವರಿಗೆ ಗೊತ್ತಾಗಲಿದೆ.

ಇದನ್ನೂ ಓದಿ: ಆರ್ ಸಿಬಿಯಲ್ಲಿ ಮ್ಯಾಚ್ ವಿನ್ನಿಂಗ್ ಫಾರಿನ್ ಪ್ಲೇಯರ್ಸ್ – ಬೌಲಿಂಗ್ & ಬ್ಯಾಟಿಂಗ್ ಬೊಂಬಾಟ್!

ಪುಟ್ಟಕ್ಕನ ಮಕ್ಕಳು ಈಗ ಟ್ವಿಸ್ಟ್‌ ಆಂಡ್‌ ಟರ್ನ್‌ನಿಂದ ಕೂಡಿದೆ. ಡಿಸಿ ಸ್ನೇಹ ಹೃದಯ ಇನ್ನೊಬ್ಬಳು ಸ್ನೇಹಗೆ ಕಸಿ ಮಾಡಲಾಗಿದೆ ಅಂತಾ ಗೊತ್ತಾದ್ಮೇಲೆ ಕಂಠಿ ಬದಲಾಗಿದ್ದಾನೆ. ಆ ಸ್ಬೇಹಳ ಮೇಲೆ ಅವನಿಗೆ ಪ್ರೀತಿ ಹುಟ್ಟಿತ್ತು. ಅದಾದ್ಮೇಲೆ ಪುಟ್ಟಕ್ಕನ ಸಹಾಯ ಪಡೆದು ಸ್ನೇಹಗೆ ಪ್ರಪೋಸ್‌ ಮಾಡಿದ್ದ.. ಇನ್ನೇನು ಆಕೆ ಪ್ರೀತಿಗೆ ಒಪ್ಪಿಗೆ ಸೂಚಿಸ್ಬೇಕು ಅನ್ನುವಷ್ಟರಲ್ಲಿ ರಾಧಾ ತನ್ನ ನೀಚ ಬುದ್ದಿ ತೋರಿಸಿದ್ಲು.. ಇದ್ರಿಂದ ಕಂಠಿ ಸ್ನೇಹ ದೂರ ಆಗಿದ್ದಲ್ಲದೇ, ಜೀವದ ಗೆಳತಿಯರಂತಿದ್ದ ಪುಟ್ಟಕ್ಕ ಹಾಗೂ ಬಂಗಾರಮ್ಮ ಕೂಡ ಮುನಿಸಿಕೊಂಡಿದ್ರು.. ಇದೀಗ ರಾಧಾ ಮುಖವಾಡ ಬಯಲಾಗಿದೆ.

ಹೌದು, ರಾಧಾ ಹಾಗೂ ಕಂಠಿ ಮದುವೆಯನ್ನ ಹೇಗಾದ್ರೂ ಮಾಡಿ ನಿಲ್ಲಿಸ್ಬೇಕು ಅಂತಾ ಪುಟ್ಟಕ್ಕ ಹಾಗೂ ಬಂಗಾರಮ್ಮನ ತಾಯಿ ಪ್ರಯತ್ನಿಸಿದ್ರು.. ಏನೇ ಸಾಕ್ಷಿ ತಂದು ತೋರಿಸಿದ್ರು ಅದನ್ನ ನಂಬಲು ಬಂಗಾರಮ್ಮ ತಯಾರಿರ್ಲಿಲ್ಲ.. ಮತ್ತೊಂದ್ಕಡೆ ಸ್ನೇಹ ಹಾಗೂ ಆಕೆಯ ತಂದೆ ಮದುವೆಗೆ ಅಡ್ಡಿ ಆಗ್ತಾರೆ ಅಂತಾ ಅವ್ರರನ್ನ ಕಿಡ್ನ್ಯಾಪ್‌ ಮಾಡಿದ್ರು.. ಈ ವಿಚಾರ ಗೊತ್ತಾಗಿ ಪುಟ್ಟಕ್ಕ ಅವರನ್ನ ಬಿಡಿಸಿಕೊಂಡು ಬರಲು ಹೋಗಿದ್ದಾಳೆ. ಇದೇ ವೇಳೆಗೆ ಮದುವೆ ಹಾಲ್‌ ಗೆ  ಪೊಲೀಸ್‌ ಬಂದು ರಾಧಾ ಕಾಲ್‌ ಲಿಸ್ಟ್‌ ತಂದು ಕೊಟ್ಟಿದ್ದಾರೆ. ಈ ವೇಳೆ ರಾಧಾಳ ಇನ್ನೊಂದು ಮುಖ ಬಯಲಾಗಿದೆ. ಬಳಿಕ ಸ್ನೇಹ ಇದ್ದ ಜಾಗಕ್ಕೆ ಬಂಗಾರಮ್ಮ ಹೋಗಿದ್ದಾಳೆ. ಬಂಗಾರಮ್ಮ ಅಲ್ಲಿಗೆ ತಲುಪುವಷ್ಟರಲ್ಲಿ ಸ್ನೇಹ ಮಾತ್ರವಲ್ಲ ಪುಟ್ಟಕ್ಕ ಕೂಡ ಅಪಾಯಕ್ಕೆ ಸಿಲುಕಿದ್ದಾಳೆ. ರೌಡಿ ಇನ್ನೇನು ಪುಟ್ಟಕ್ಕನಿಗೆ ಚೂರಿ ಚುಚ್ಬೇಕು ಅನ್ನುವಷ್ಟರಲ್ಲಿ ಬಂಗಾರಮ್ಮ ಎಂಟ್ರಿ ಕೊಟ್ಟಿದ್ದಾಳೆ. ಪುಟ್ಟಕ್ಕ, ಸ್ನೇಹಳನ್ನ ಅಪಾಯದಿಂದ ಪಾರು ಮಾಡಿದ್ದಾಳೆ.

ಇದೀಗ ಪುಟ್ಟಕ್ಕ ಬಂಗಾರಮ್ಮ ಒಂದಾಗಿದ್ದಾರೆ. ರಾಧಾಳ ಇನ್ನೊಂದು ಮುಖ ಬಯಲಾಗಿದೆ. ಆಕೆಯನ್ನ ಬಂಗಾರಮ್ಮ ಜೈಲಿಗೆ ಕಳುಹಿಸೋದು ಪಕ್ಕಾ ಆಗಿದೆ. ಇನ್ನು ಬಂಗಾರಮ್ಮ ಸ್ನೇಹ ಕಂಠಿ ಪ್ರೀತಿಯನ್ನ ಒಪ್ಪಿಕೊಳ್ಳೊದು ಪಕ್ಕಾ. ಆಕೆಯೇ ಮುಂದೆ ನಿಂತು ಮದುವೆ ಮಾಡಿಸ್ತಾಳೆ. ಇದೀಗ ಸೀರಿಯಲ್‌ ನೋಡಿದ ವೀಕ್ಷಕರು ನಾನಾ ಕಾಮೆಂಟ್‌ ಮಾಡ್ತಿದ್ದಾರೆ. ರಾಧಾ, ನಂಜಮ್ಮ, ರಾಜಿ ಎಲ್ಲರು ಜೈಲ್ ಗೇ ಹೋಗುತಾರೆ. ಸ್ನೇಹ ಕಂಠಿ ನಾ ಮದುವೆ ಅಗ್ತಾಳೆ. ಇಲ್ಲಿಗೆ ಈ ಸ್ಟೋರಿ ಮುಗಿಯುತ್ತೆ ಅಂತಾ ಕಾಮೆಂಟ್‌ ಮಾಡಿದ್ದಾರೆ.

Shwetha M

Leave a Reply

Your email address will not be published. Required fields are marked *