ಪುಟ್ಟಕ್ಕ ಬಂಗಾರಮ್ಮ ಫೈಟ್.. – ಕಂಠಿ ಸ್ನೇಹ ಮದ್ವೆ ನಡೆಯುತ್ತಾ?

ಸ್ನೇಹ ಕಂಠಿ ಮಧ್ಯೆ ಪ್ರೀತಿ ಚಿಗುರಿಗೆ. ಇನ್ನೇನು ಮನೆಯವರ ಒಪ್ಪಿಗೆ ಪಡೆದು ಮದುವೆ ಆಗ್ಬೇಕು ಅನ್ನುವಷ್ಟರಲ್ಲಿ ರಾಧಾ ಅವರಿಬ್ಬರನ್ನ ದೂರ ಆಗುವಂತೆ ಮಾಡಿದ್ದಾಳೆ. ಸ್ನೇಹ ಬಗ್ಗೆ ಬಂಗಾರಮ್ಮ ಬಳಿ ಇಲ್ಲ ಸಲ್ಲದ್ದೆಲ್ಲಾ ಹೇಳಿ ಆಕೆಯ ಮೇಲೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಿದ್ದಾಳೆ. ಇದ್ರಿಂದ ಪುಟ್ಟಕ್ಕ ಬಂಗಾರಮ್ಮನ ಫ್ರೆಂಡ್‌ಶಿಪ್ ಕೂಡ ಹಾಳಾಗಿದೆ. ಇದೀಗ ಬಂಗಾರಮ್ಮ ಪುಟ್ಟಕ್ಕ ಒಬ್ಬರಿಗೊಬ್ಬರು ಜಗಳ ಆಗುವಂತೆ ಆಗಿದೆ.
ಇದನ್ನೂ ಓದಿ: ಎಸ್ಎಸ್ಎಲ್ಸಿ ಫಲಿತಾಂಶ – ಕರಾವಳಿಯೇ ಕಿಂಗ್, ಟಾಪ್-3 ಸ್ಥಾನ ಪಡೆದ ಕರಾವಳಿ ಜಿಲ್ಲೆಗಳು!
ಪುಟ್ಟಕ್ಕನ ಮಕ್ಕಳು ಸದ್ಯ ರೋಚಕ ತಿರುವು ಪಡೆದುಕೊಂಡಿದೆ. ಸ್ನೇಹ ಹಾಗೂ ಕಂಠಿ ಪ್ರೀತಿಗೆ ರಾಧಾ ವಿಲನ್ ಆಗಿದ್ದಾಳೆ. ರಾಧಾಗೆ ಕಂಠಿಯನ್ನ ಮದುವೆ ಆಗ್ಬೇಕು ಅನ್ನೋ ಹಠ. ಹೀಗಾಗಿ ಕಂಠಿ ಹಾಗೂ ರಾಧಾಳನ್ನ ದೂರ ಮಾಡ್ಬೇಕು ಅಂತಾ ಪ್ರಯತ್ನಿಸ್ತಿದ್ದಾಳೆ. ಇದಕ್ಕಾಗಿ ಆಕೆ ಬಳಸಿಕೊಂಡಿದ್ದು ಬಂಗಾರಮ್ಮಳನ್ನ. ಬಂಗಾರಮ್ಮ ಬಳಿ ಸ್ನೇಹ ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಿದ್ದಾಳೆ. ಇದ್ರಿಂದ ಬಂಗಾರಮ್ಮ ಸ್ನೇಹಳ ಬಳಿ ಕಂಠಿಯಿಂದ ದೂರ ಹೋಗ್ಬೇಕು ಅಂತಾ ಹೇಳಿದ್ದಾಳೆ. ಯಾವುದೇ ಕಾರಣಕ್ಕೂ ಕಂಠಿನ ಮದುವೆ ಆಗ್ಬಾರ್ದು ಅಂತಾ ಹೇಳಿದ್ದಾಳೆ. ಇದ್ರಿಂದಾಗಿ ಸ್ನೇಹ ತಂದೆ ಹೇಳಿದ ಹುಡುಗಿಯೊಂದಿಗೆ ಮದುವೆ ಆಗಲು ಹೊರಟಿದ್ದಾಳೆ. ಇನ್ನೋಂದ್ಕಡೆ ಕಂಠಿ ಅಮ್ಮನ ಮಾತಿಗೆ ಕಟ್ಟುಬಿದ್ದು ಸ್ನೇಹಳನ್ನ ಮದುವೆಯಾಗಲು ಒಪ್ಪಿಕೊಂಡಿದ್ದಾನೆ. ಆದ್ರೀಗ ಕಂಠಿ ರಾಧಾ ಮದುವೆಯಿಂದಾಗಿ ಬಂಗಾರಮ್ಮ ಹಾಗೂ ಪುಟ್ಟಕ್ಕಳ ಸ್ನೇಹ ಮುರಿದು ನಿದ್ದಿದೆ.
ಬಂಗಾರಮ್ಮ ಯಾವತ್ತೂ ಪುಟ್ಟಕ್ಕ ಗೆ ಎದುರಾಗಿ ನಿಂತಿರಲಿಲ್ಲ. ಪುಟ್ಟಕ್ಕ ಎಂದರೆ ಬಂಗಾರ ಮ್ಮ ಗೆ ಅದೇನೋ ಪ್ರೀತಿ. ಆದರೆ ಇದೀಗ ರಾಧ ಮಾಡಿದ ಕಿತಾಪತಿ ಕೆಲಸದಿಂದಾಗಿ ಪುಟ್ಟಕ್ಕ ಹಾಗೂ ಬಂಗಾರಮ್ಮ ಕಿತ್ತಾಟ ನಡೆಸುವ ಹಾಗೆ ಆಗಿದೆ. ಪುಟ್ಟಕ್ಕ ಗೆ ಕಂಠಿ ಪ್ರೀತಿ ವಿಚಾರ ತಿಳಿದಿತ್ತು. ಕಂಠಿ ಸ್ನೇಹ ಮದುವೆ ಮಾಡಿಸೋದಾಗಿ ಮಾತು ಕೊಟ್ಟಿದ್ಲು.. ಆದ್ರೆ ಬಂಗಾರಮ್ಮ ಪುಟ್ಟಕ್ಕನ ಮನೆಗೆ ಕಂಠಿ ರಾಧಾ ಮದುವೆ ಇನ್ವಿಟೇಷನ್ ಕಾರ್ಡ್ ತೆಗೆದುಕೊಂಡು ಬಂದಿದ್ದಾಳೆ. ಈ ವೇಳೆ ಪುಟ್ಟಕ್ಕ ಇನ್ವಿಟೇಷನ್ ತೆಗೆದುಕೊಳ್ಳಲು ಒಪ್ಪಿಲ್ಲ. ಬಂಗಾರಮ್ಮನ ವಿರುದ್ಧವೇ ಮಾತನಾಡಿದ್ದಾಳೆ. ಕಂಠಿಗೆ ಈ ಮದುವೆ ಇಷ್ಟ ಇಲ್ಲ.. ಈ ಮದುವೆ ನಡೆಯೋದಿಲ್ಲ.. ಅಂತಾ ಹೇಳಿದ್ದಾಳೆ. ಇದ್ರಿಂದ ಬಂಗಾರಮ್ಮ ಸಿಟ್ಟಾಗಿದ್ದಾಳೆ. ಪುಟ್ಟಕ್ಕನ ಮೇಲೆಯೇ ರೇಗಾಡಿದ್ದಾಳೆ.
ಮತ್ತೊಂದ್ಕಡೆ ಸ್ನೇಹ ಕಿಡ್‌ನ್ಯಾಪ್ ಆಗಿದ್ಲು. ಈ ವೇಳೆ ಕಂಠಿ ರೌಡಿಗಳೊಂದಿಗೆ ಫೈಟ್ ಮಾಡಿ ಆಕೆಯನ್ನ ಸೇವ್ ಮಾಡಿದ್ದಾನೆ. ಆದ್ರೆ ಆಕೆಗೆ ಪ್ರಜ್ಞೆ ಇಲ್ಲ.. ಆಕೆಯನ್ನ ಎತ್ತಿಕೊಂಡು ಪುಟ್ಟಕ್ಕನ ಮನೆಗೆ ಕಂಠಿ ಬಂದಿದ್ದಾನೆ. ಇದೀಗ ಬಂಗಾರಮ್ಮ ಮುಂದೇನು ಮಾಡ್ತಾಳೆ. ಮದುವೆ ಒಪ್ಪಿಕೊಳ್ತಾಳಾ ಅಥವಾ ಕಂಠಿಯನ್ನ ಅಲ್ಲಿಂದ ಎಳ್ಕೊಂಡು ಹೋಗ್ತಾಳಾ ಅನ್ನೋ ಕುತೂಹಲ ಮೂಡಿದೆ. ಇನ್ನೊಂದ್ಕಡೆ ಪುಟ್ಟಕ್ಕ ಯಾವುದಾದ್ರೂ ಕೆಲಸ ನಡೆಸಿಕೊಡ್ತೇನೆ ಅಂತಾ ಮಾತು ಕೊಟ್ರೆ ಮುಗಿತು. ಎಂತಹ ಕಷ್ಟ ಬಂದ್ರು ಅನ್ನ ನಡೆಸಿಕೊಡ್ತಾಳೆ. ಇದೀಗ ಪುಟ್ಟಕ್ಕ ಕಂಠಿ ಸ್ನೇಹಳನ್ನ ಹೇಗೆ ಒಂದು ಮಾಡ್ತಾರೆ ಅಂತಾ ಕಾದು ನೋಡ್ಬೇಕು.