ಕಂಠಿ ರಾಧಾ ಎಂಗೇಜ್‌ಮೆಂಟ್.. ಸಾಹೇಬ್ರ ಪ್ರೀತಿ.. ಸ್ನೇಹಗೆ ಕಣ್ಣೀರೇ ಗತಿ – ಅದೇ ಗೋಳು.. ಸೀರಿಯಲ್ ನಿಲ್ಲಿಸಿದ್ರೆ ಬೆಸ್ಟ್!

ಕಂಠಿ ಸ್ನೇಹಳನ್ನ ಪ್ರೀತಿಸ್ತಿದ್ದಾನೆ. ಈಗಾಗಲೇ ಸ್ನೇಹ ಬಳಿ ಪ್ರೇಮ ನಿವೇದನೆ ಮಾಡಿದ್ದಾನೆ. ಇದೀಗ ಸ್ನೇಹಗೂ ಕಂಠಿ ಮೇಲೆ ಲವ್ ಆಗಿದೆ. ಆದ್ರೀಗ ರಾಧಾಳಿಂದಾಗಿ ಸ್ನೇಹ ಹಾಗೂ ಕಂಠಿ ದೂರಾ ಆಗಿದ್ದಲ್ಲದೇ, ಪುಟ್ಟಕ್ಕ ಹಾಗೂ ಬಂಗಾರಮ್ಮನ ಬಾಂಧವ್ಯದಲ್ಲೂ ಬಿರುಕು ಬಿದ್ದಿದೆ, ಇದೀಗ ಅಮ್ಮನ ಮಾತಿಗೆ ಕಟ್ಟುಬಿದ್ದು ರಾಧಾ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾನೆ ಕಂಠಿ.. ಇತ್ತ ಸ್ನೇಹಗೂ ಬೇರೆಯವರ ಜೊತೆ ಮದುವೆ ಮಾಡಿದಲು ಆಕೆಯ ತಂದೆ ರೆಡಿಯಾಗಿದ್ದಾನೆ. ಇದೀಗ ಸೀರಿಯಲ್ ನೋಡಿದ ವೀಕ್ಷಕರು ಫುಲ್ ಸಿಟ್ಟು ಮಾಡ್ಕೊಂಡಿದ್ದಾರೆ, ಈ ಗೋಳು ನೋಡೋಕೆ ಆಗಲ್ಲ.. ಸೀರಿಯಲ್ ನಿಲ್ಲಿದ್ರೇನೆ ಬೆಸ್ಟ್ ಅಂತಾ ಹೇಳ್ತಿದ್ದಾರೆ.
ಇದನ್ನೂ ಓದಿ : ಜಾರಿದ RCB.. ಮೇಲೇರಿದ MI.. ನೆಟ್ ರನ್ ರೇಟ್ ಚಾಲೆಂಜ್ ಆಗುತ್ತಾ? – ರೆಡ್ ಆರ್ಮಿಗೆ ಬೆಂಗಳೂರೇ ಟಾರ್ಗೆಟ್!
ಪುಟ್ಟಕ್ಕನ ಮಕ್ಕಳು ಸೀರಿಯಲ್ ಕೊನೆಗೂ ಟ್ರ್ಯಾಕ್ ಬಂತಲ್ಲ ಅಂತಾ ಸೀರಿಯಲ್ ಫ್ಯಾನ್ಸ್ ಖುಷಿಪಟ್ಟಿದ್ರು.. ಕಂಠಿ ಹಾಗೂ ಸ್ನೇಹ ಕಾಂಬಿನೇಷನ್ ಅನ್ನ ಇಷ್ಟ ಪಡೋಕೆ ಶುರುಮಾಡಿದ್ರು. ಆದ್ರೀಗ ಮತ್ತೆ ಸೀರಿಯಲ್ ಪ್ರೇಮಿಗಳಿಗೆ ನಿರಾಸೆಯಾಗಿದೆ. ಮತ್ತೆ ಸೀರಿಯಲ್ ಹಳ್ಳ ಹಿಡಿತಿದೆ. ರಾಧಾಳ ಕುತಂತ್ರದಿಂದಾಗಿ ಸ್ನೇಹ ಹಾಗೂ ಕಂಠಿ ದೂರ ಆಗಿದ್ದಾರೆ. ಅಷ್ಟೇ ಅಲ್ಲ ರಾಧ ಮಾಡಿದ ಕಿತಾಪತಿಯಿಂದಾಗಿ ಪುಟ್ಟಕ್ಕ ಹಾಗೂ ಬಂಗಾರಮ್ಮ ಕಿತ್ತಾಡುವ ಹಾಗೆ ಆಗಿದೆ. ಇದೀಗ ಬಂಗಾರಮ್ಮ ತನ್ನ ಮಗನಿಗೆ ರಾಧಾ ಜೊತೆ ಎಂಗೇಜ್‌ಮೆಂಟ್ ಮಾಡಿಸಿದ್ದಾಳೆ.
ಹೌದು, ಕಂಠಿ ಸ್ನೇಹಳನ್ನ ಪ್ರೀತಿಸ್ತಿರೋ ವಿಚಾರ ರಾಧಾಗೆ ಗೊತ್ತಾಗ್ತಿದ್ದಂತೆ ಅವರಿಬ್ಬರನ್ನ ದೂರ ಮಾಡ್ಬೇಕು ಅಂತಾ ಪ್ಲ್ಯಾನ್ ಮಾಡಿದ್ಲು. ಹೀಗಾಗಿ ಆಕೆ ಬಂಗಾರಮ್ಮನ ಬಳಿ ಬಂದು ಸ್ನೇಹ ಮೇಲೆ ಸುಳ್ಳು ಆರೋಪ ಮಾಡಿದ್ಲು. ಈ ಮನೆ ಸೇರ್ಬೇಕು ಅಂತಾ ಸ್ನೇಹ ಪ್ಲ್ಯಾನ್ ಮಾಡಿ ಕಂಠಿಯನ್ನ ಒಲಿಸಿಕೊಂಡಿದ್ದಾಳೆ. ಈ ಮದುವೆ ನಿಲ್ಲಿಸಿಬಿಡಿ ಅಂತಾ ಹೇಳಿದ್ದಾಳೆ. ರಾಧಾ ಮಾತನ್ನ ನಂಬಿದ ಬಂಗಾರಮ್ಮ ಸ್ನೇಹಳನ್ನ ದ್ವೇಷಿಸಲು ಶುರುಮಾಡಿದ್ದಾಳೆ. ತನ್ನ ಮಗನನ್ನು ಯಾವುದೇ ಕಾರಣಕ್ಕೆ ಮದುವೆ ಆಗ್ಬಾರ್ದು ಅಂತಾ ಮಾತು ತೆಗೆದುಕೊಂಡಿದ್ದಾಳೆ. ಅಷ್ಟೇ ಅಲ್ಲ.. ಬಂಗಾರಮ್ಮ ರಾಧಾ ಜೊತೆ ಕಂಠಿಯ ಎಂಗೇಜ್‌ಮೆಂಟ್ ಮಾಡಿಸಿದ್ದಾಳೆ. ಕಂಠಿಗೆ ರಾಧಾ ಜೊತೆ ಮದುವೆಯಾಗಲು ಇಷ್ಟವಿಲ್ಲ.. ಸ್ನೇಹ ನೆನಪಲ್ಲೇ ಕಾಲ ಕಳಿತಾ ಇದ್ದಾನೆ. ಆದ್ರೆ ಅಮ್ಮನಿಗೋಸ್ಕರ ರಾಧಾ ಉಂಗುರ ಬದಲಾಯಿಸಿಕೊಂಡಿದ್ದಾನೆ. ಇತ್ತ ಸ್ನೇಹಗೂ ಆಕೆಯ ತಂದೆ ಮದುವೆ ನಿಶ್ಚಯ ಮಾಡಿದ್ದಾರೆ. ಇದೀಗ ಎರಡು ಮನೆಯವರು ತಾಂಬೂಲ ಬದಲಾಯಿಸಿಕೊಂಡಿದ್ದಾರೆ. ಆದ್ರೇ ಸ್ನೇಹ ಮಾತ್ರ ಕಂಠಿ ನೆನಪಲ್ಲಿ ಕಣ್ಣೀರು ಹಾಕಿದ್ದಾಳೆ. ಬಳಿಕ ಸುಮಾ ಬಳಿ ತಾನು ಕಂಠಿಯನ್ನೇ ಪ್ರೀತಿಸ್ತಿದ್ದೀನಿ.. ಅವನನ್ನ ಬಿಟ್ಟು ಬದುಕೋಕೆ ಆಗಲ್ಲ ಅಂತಾ ಹೇಳಿದ್ದಾಳೆ.
ಆದ್ರೀಗ ಸೀರಿಯಲ್ ನೋಡಿದ ಫ್ಯಾನ್ಸ್ ಮಾತ್ರ ಅಸಮಧಾನ ಹೊರ ಹಾಕಿದ್ದಾರೆ. ಭೂಮಿ ಗುಂಡಾಗಿರೋದು ನಿಜ.. ಅದ್ಕೆ ಸೀರಿಯಲ್ ನಲ್ಲಿ ಸುತ್ತಿ ಸುತ್ತಿ ಅದೇ ಸ್ಟೋರಿ ಬರ್ತಿದೆ. ಕಂಠಿ ಸ್ನೇಹ ಸ್ಟೋರಿ ಹಳೇ ಕತೆ.. ಅಂತಾ ಕೆಲವರು ಕಾಮೆಂಟ್ ಮಾಡಿದ್ದಾರೆ.. ಇನ್ನೂ ಕೆಲವರು ಊರಿಗೆ ನ್ಯಾಯ ಹೇಳೋ ಬಂಗಾರಮ್ಮಗೆ ಯೋಚನೆ ಮಾಡೋ ಶಕ್ತಿ ಇಲ್ಲಾ. ಅವರಮ್ಮ ಬೇಡದೆ ಇರೋ ಸೀನ್ ಗೆ ಇರ್ತಾರೆ.. ಆದ್ರೆ ಮೊಮ್ಮಗನ ನಿಶಿತಾರ್ಥ ದಿನ ಇರಲ್ಲಾ. ತಲೆಬುಡ ಇಲ್ಲದ ಸ್ಟೋರಿನಾ ನೋಡೋಕೆ ಆಗ್ತಿಲ್ಲ.. ದಯವಿಟ್ಟು ಸೀರಿಯಲ್ ನಿಲ್ಲಿಸಿ ಬಿಡಿ ಅಂತಾ ಕಾಮೆಂಟ್ ಮಾಡಿದ್ದಾರೆ.