ಕಂಠಿ, ಸ್ನೇಹಾ ಮದ್ವೆಗೆ ಒಪ್ಪಿದ ಪುಟ್ಟಕ್ಕ.. ಮದುವೆಗೆ ಬಂಗಾರಮ್ಮನೇ ವಿಲನ್! – ಅಮ್ಮಾವ್ರಿಂದ ಪುಟ್ಟಕ್ಕ ದೂರ?

ಕಂಠಿ, ಸ್ನೇಹಾ ಮದ್ವೆಗೆ ಒಪ್ಪಿದ ಪುಟ್ಟಕ್ಕ.. ಮದುವೆಗೆ ಬಂಗಾರಮ್ಮನೇ ವಿಲನ್! – ಅಮ್ಮಾವ್ರಿಂದ ಪುಟ್ಟಕ್ಕ ದೂರ?

ಡಿಸಿ ಸ್ನೇಹಾ ಸಾಯುವಾಗ ಅಂಗಾಗ ದಾನ ಮಾಡಲಾಗಿತ್ತು. ಸ್ನೇಹಾಳ ಹೃದಯವನ್ನ ಸಾವು ಬದುಕಿನ ನಡುವೆ ಹೊರಾಡುತ್ತಿದ್ದ ಮತ್ತೊಂದು ಜೀವಕ್ಕೆ ಕಸಿ ಮಾಡಲಾಯ್ತು. ಇದೀಗ ಡಿಸಿ ಸ್ನೇಹ ಹೃದಯ ಇನ್ನೂ ಜೀವಂತವಾಗಿದೆ ಅನ್ನೋ ವಿಚಾರ ಈಗ ಕಂಠಿಗೆ ಗೊತ್ತಾಗಿದೆ. ಆ ಹುಡುಗಿ ಬೇರೆ ಯಾರು ಅಲ್ಲ ಪುಟ್ಟಕ್ಕನ ಮನೆಯಲ್ಲಿರೋ ಸ್ನೇಹ ಅಂತ ಗೊತ್ತಾಗಿದೆ. ಇದೀಗ ಕಂಠಿ ಈಕೆಯನ್ನೇ ಎರಡನೇ ಮದುವೆಯಾಗಲು ಮುಂದಾಗಿದ್ದಾನೆ. ಇದಕ್ಕೆ ಪುಟ್ಟಕ್ಕ ಕೂಡ ಗ್ರೀನ್‌ ಸಿಗ್ನಲ್‌ ಕೊಟ್ಟಾಗಿದೆ. ಆದ್ರೀಗ ಈ ಮದುವೆಯಿಂದ ಪುಟ್ಟಕ್ಕ ಬಂಗಾರಮ್ಮ ದೂರ ಆಗ್ತಾರಾ ಅನ್ನೋ ಅನುಮಾನ ಕಾಡ್ತಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:ಗಗನ ಜೊತೆಗೆ ಸೈಕ್ ಆದ ಬಾಳು..  ಬೆಳಗುಂದಿ ರೊಮ್ಯಾಂಟಿಕ್‌ ಮೂಡ್

ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಈಗ ರೋಚಕ ತಿರುವು ಪಡೆದುಕೊಂಡಿದೆ. ಡಿಸಿ ಸ್ನೇಹ ಪಾತ್ರ ಮುಗಿಯೋ ಹೊತ್ತಲ್ಲೇ ಇನ್ನೊಂದು ಪಾತ್ರವನ್ನ ಡೈರೆಕ್ಟರ್‌ ಸೃಷ್ಠಿ ಮಾಡಿದ್ರು.. ಆ ಪಾತ್ರಕ್ಕೂ ಸ್ನೇಹ ಅನ್ನೋ ಹೆಸ್ರು ಇಡಲಾಗಿತ್ತು, ಡಿಸಿ ಸ್ನೇಹ ಸಾಯ್ತಿದ್ದಂತೆ, ಆಕೆಯ ಹೃದಯವನ್ನ ಈ ಸ್ನೇಹಾಗೆ ಜೋಡಿಸಲಾಗಿತ್ತು. ಆದ್ರೆ ಈ ವಿಚಾರ ಕಂಠಿಗೆ ಗೊತ್ತಿರ್ಲಿಲ್ಲ.. ಹೀಗಾಗಿ ಸ್ನೇಹ ಮೇಲೆ ಕಂಠಿ ರೇಗಾಡ್ತಿದ್ದ. ಮನ ಬಂದಂತೆ ಬೈಯ್ತಿದ್ದ. ಆದ್ರೀಗ ಪುಟ್ಟಕ್ಕನ ಮನೆಯಲ್ಲಿರೋ ಸ್ನೇಹಳಿಗೆ ತನ್ನ ಹೆಂಡ್ತಿ ಹೃದಯ ಕಸಿ ಮಾಡಲಾಗಿದೆ ಅನ್ನೋ ವಿಚಾರ ಕಂಠಿಗೆ ಗೊತ್ತಾಗಿದೆ. ಈ ವಿಚಾರ ಗೊತ್ತಾಗ್ತಿದ್ದಂತೆ ಕಂಠಿ ಆಕೆಯನ್ನೇ ಮದು ವೆಯಾಗಲು ಹೊರಟಿದ್ದಾನೆ.

ಹೌದು. ಈ ವಿಚಾರ ಗೊತ್ತಾಗ್ತಿದ್ದಂತೆ ಸ್ನೇಹಳ ಮದುವೆ ತಡೆದಿದ್ದಾನೆ. ಬಳಿಕ ಹೃದಯದ ವಿಚಾರ ಪುಟ್ಟಕ್ಕನ ಬಳಿ ಹೇಳಿದ್ದಾನೆ. ಮಗಳ ಹೃದಯ ಜೀವಂತವಾಗಿದೆ ಅಂತಾ ಗೊತ್ತಾಗ್ತಿದ್ದಂತೆ ಪುಟ್ಟಕ್ಕ ಖುಷಿಯಾಗಿದ್ದಾಳೆ. ಅವಳ ಜೊತೆಯೇ ನಿನ್ನ ಮದುವೆ ಮಾಡಿಸ್ತೀನಿ ಅಂತಾ ಮಾತು ಕೊಟ್ಟಿದ್ದಾಳೆ. ಆದ್ರೆ ಈ ಮದುವೆಗೆ ಬಂಗಾರಮ್ಮನೇ ಆಡ್ಡಿಯಾಗೋ ಸಾಧ್ಯತೆ ಇದೆ. ಯಾಕಂದ್ರೆ ಬಂಗಾರಮ್ಮ ಕಂಠಿಗೆ ಮದುವೆ ಮಾಡಿಸಲು ಬೇರೆ ಹುಡುಗಿ ನೋಡಿದ್ದಾಳೆ. ಆ ಹುಡುಗಿ ಬೇರೆ ಯಾರು ಅಲ್ಲ.. ಕಂಠಿ ಅತ್ತೆ ಮಗಳು ರಾಧಾಳನ್ನೇ ಮದುವೆ ಮಾಡಿಸಲು ಬಂಗಾರಮ್ಮ ಪ್ಲ್ಯಾನ್‌ ಮಾಡಿದ್ದಾಳೆ. ಹೀಗಾಗಿ ಬಂಗಾರಮ್ಮ ಸ್ನೇಹಾ, ಕಂಠಿ ಮದುವೆಗೆ ಒಪ್ಪಿಗೆ ನೀಡೋದು ಡೌಟ್..‌ ಈ ಮದುವೆಗೆ ಬಂಗಾರಮ್ಮ ವಿರೋಧ ಮಾಡೋ ಸಾಧ್ಯತೆ ಇದೆ. ಬಂಗಾರಮ್ಮ ವಿರೋಧ ಮಾಡಿದ್ರೂ ಪುಟ್ಟಕ್ಕ ಕಂಠಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಮದುವೆ ಮಾಡಿಸ್ಬೋದು.. ಹೀಗಾಗಿ ಬಂಗಾರಮ್ಮ ಪುಟ್ಟಕ್ಕನ ಮೇಲೆ ಸಿಟ್ಟು ಮಾಡಿಕೊಳ್ಳೋ ಸಾಧ್ಯತೆ ಇದೆ ಅಂತಾ ವೀಕ್ಷಕರು ಊಹೆ ಮಾಡ್ತಿದ್ದಾರೆ. ಇದೀಗ ಸ್ನೇಹ ಕಂಠಿ ಒಂದಾಗ್ತಾರಾ? ಮದುವೆ ವೇಳೆ ಸೀರಿಯಲ್‌ ಸ್ಟೋರಿ ಯಾವ ಟ್ವಿಸ್ಟ್‌ ಪಡೆದುಕೊಳ್ಳಲಿದೆ ಅನ್ನೋ ಕ್ಯೂರಿಯಾಸಿಟಿ ವೀಕ್ಷಕರನ್ನ ಕಾಡ್ತಿದೆ.

Shwetha M

Leave a Reply

Your email address will not be published. Required fields are marked *