2ನೇ ಮದುವೆಗೆ ಒಪ್ಪಿದ ಕಂಠಿ! – ಸ್ನೇಹನಾ ಮದುವೆ ಆಗ್ತಾನಾ ಶ್ರೀ?
ವಿವಾಹಕ್ಕೆ ಬಂಗಾರಮ್ಮನೇ ಅಡ್ಡಿ?

ಡಿಸಿ ಸ್ನೇಹಾಳನ್ನ ಕಳ್ಕೊಂಡ ಮೇಲೆ ಕಂಠಿ ಮಾನಸಿಕವಾಗಿ ಕುಗ್ಗಿ ಹೋಗಿದ್ದ.. ಅವಳ ನೆನಪಲ್ಲೇ ಕಾಲ ಕಳಿತಾ ಇದ್ದ.. ಬಂಗಾರಮ್ಮ, ಪುಟ್ಟಕ್ಕ ಎರಡನೇ ಮದುವೆ ಆಗು ಅಂತಾ ಎಷ್ಟು ಹೇಳಿದ್ರೂ ಆತ ಒಪ್ಕೊಂಡಿರ್ಲಿಲ್ಲ.. ಅವರ ಮೇಲೆಯೇ ರೇಗಾಡ್ತಿದ್ದ. ಆದ್ರೀಗ ಕಂಠಿ ಎರಡನೇ ಮದುವೆಗೆ ಮುಂದಾಗಿದ್ದಾನೆ.. ತಾನು ಮದುವೆ ರೆಡಿ ಅಂತಾ ಪುಟ್ಟಕ್ಕನ ಬಳಿ ಕೂಡ ಹೇಳ್ಕೊಂಡಿದ್ದಾನೆ.. ಆದ್ರೀಗ ಕಂಠಿ ಎರಡನೇ ಮದುವೆಗೆ ಬಂಗಾರಮ್ಮಳೇ ಅಡ್ಡಿ ಆಗ್ತಾಳಾ ಅನ್ನೋ ಅನುಮಾನ ಸೀರಿಯಲ್ ಫ್ಯಾನ್ಸ್ ಮೂಡ್ತಿದೆ.
ಇದನ್ನೂ ಓದಿ: SRH ಕೈಯಲ್ಲಿ ಕರುನಾಡ ಬ್ರಹ್ಮಾಸ್ತ್ರ ಅಭಿನವ್ ಮೇಲೆ ಕಣ್ಣಿಟ್ಟಿದ್ದೇಕೆ ಕಾವ್ಯ?
ಡಿಸಿ ಸ್ನೇಹ ಸಾಯ್ತಿದ್ದಂತೆ ಪುಟ್ಟಕ್ಕನ ಮಕ್ಕಳು ಸೀರಿಯಲ್ ಸ್ಟೋರಿ ಹಳ್ಳ ಹಿಡಿದಿತ್ತು.. ಕತೆ ಚೇಂಜ್ ಆಗ್ತಿದ್ದಂತೆ ಸೀರಿಯಲ್‌ನ ನಿಲ್ಲಿಸಿಬಿಡಿ ಅಂತಾ ವೀಕ್ಷಕರು ಕೂಡ ಹೇಳ್ತಿದ್ರು.. ಆದ್ರೀಗ ಸೀರಿಯಲ್ ಮತ್ತೆ ಟ್ರ್ಯಾಕ್ ಗೆ ಬರೋತರ ಕಾಣ್ತಿದೆ. ಇದೀಗ ಡಿಸಿ ಸ್ನೇಹಳ ಹೃದಯವನ್ನ ಯಾರಿಗೆ ಕಸಿ ಮಾಡಲಾಗಿದೆ ಅನ್ನೋ ಮ್ಯಾಟರ್ ಕಂಠಿಗೆ ಗೊತ್ತಾಗಿದೆ.. ಪುಟ್ಟಕ್ಕನ ಮನೆಯಲ್ಲಿರೋ ಸ್ನೇಹಗೆ ತನ್ನ ಹೆಂಡ್ತಿ ಹೃದಯ ಜೋಡಿಸಲಾಗಿದೆ ಅಂತಾ ಆತನಿಗೆ ಗೊತ್ತಾಗಿದೆ. ಸ್ನೇಹ ಹೃದಯ ಇನ್ನೂ ಜೀವಂತ ಇದೆ ಅಂತಾ ಗೊತ್ತಾಗ್ತಿದ್ದಂತೆ ಕಂಠಿ ಈಗ ಎರಡನೇ ಮದುವೆಗೆ ರೆಡಿಯಾಗಿದ್ದಾನೆ. ಇದನ್ನ ಬಂಗಾರಮ್ಮ ಹಾಗೂ ಪುಟ್ಟಕ್ಕನಿಗೆ ಹೇಳಿದ್ದಾನೆ. ಆದ್ರೀಗ ಕಂಠಿ ಮದುವೆಗೆ ಬಂಗಾರಮ್ಮನೇ ಅಡ್ಡಿ ಆಗ್ತಾಳಾ ಅನ್ನೋ ಪ್ರಶ್ನೆ ಮೂಡಿದೆ
ಡಿಸಿ ಸ್ನೇಹ ಸತ್ತ ಬಳಿಕ ಕಂಠಿಗೆ ಮದುವೆ ಮಾಡಿಸಲು ಬಂಗಾರಮ್ಮ ಮುಂದಾಗಿದ್ಲು.. ಈ ವಿಚಾರವನ್ನ ಪುಟ್ಟಕ್ಕನ ಬಳಿ ಕೂಡ ಬಂಗಾರಮ್ಮ ತಿಳಿಸಿದ್ಲು.. ಅದಾದ್ಮೇಲೆ.. ತನ್ನ ಮನೆಯಲ್ಲಿರೋ ರಾಧಾಳೇ ಕಂಠಿಗೆ ತಕ್ಕ ಹುಡುಗಿ ಅಂತಾ ಬಂಗಾರಮ್ಮ ಡಿಸೈಡ್ ಮಾಡಿದ್ಲು.. ಈ ವಿಚಾರವನ್ನ ರಾಧಾ ಬಳಿ ಕೂಡ ಹೇಳಿದ್ದು, ಇದಕ್ಕೆ ರಾಧಾ ಒಪ್ಪಿದ್ದಾಳೆ.. ಆದ್ರೆ ಈ ಮದುವೆ ಕಂಠಿ ಒಪ್ಪಿರ್ಲಿಲ್ಲ.. ಎರಡನೇ ಮದುವೆಯಾಗು ಅಂತಾ ಹೇಳಿದ್ದ ಪುಟ್ಟಕ್ಕ ಹಾಗೂ ಬಂಗಾರಮ್ಮನ ಮೇಲೆ ರೇಗಾಡಿದ್ದ. ಅಷ್ಟೊತ್ತಿಗೆ ಡಿಸಿ ಸ್ನೇಹ ಹೃದಯವನ್ನ ಕಸಿ ಮಾಡಲಾಗಿದೆ.. ಬೇರೊಬ್ಬರಿಗೆ ಜೋಡಿಸಲಾಗಿದೆ ಅಂತಾ ಕಂಠಿಗೆ ಗೊತ್ತಾಗಿದೆ.. ಈ ವಿಚಾರ ಗೊತ್ತಾಗ್ತಿದ್ದಂತೆ ಸ್ನೇಹ ಹೃದಯ ಇರೋ ಹುಡುಗಿ ಸಿಕ್ಕಿದ್ರೆ ನಿನ್ನನ್ನ ಮದುವೆ ಆಗಲ್ಲ ಅಂತಾ ರಾಧಾ ಬಳಿ ಹೇಳಿದ್ದ.. ಇದೀಗ ಆ ಹುಡುಗಿ ಸಿಕ್ಕಾಗಿದೆ. ಪುಟ್ಟಕ್ಕನ ಮನೆಯಯಲ್ಲಿರೋ ಸ್ನೇಹನೇ ಅವಳು ಅಂತಾ ಕಂಠಿಗೆ ಗೊತ್ತಾದೆ. ಇದೀಗ ಮದುವೆ ಆದ್ರೆ ಈಕೆಯನ್ನೇ ಮದುವೆ ಆಗ್ತೀನಿ ಅಂತಾ ಮುಂದಾಗಿದ್ದಾನೆ. ಹೀಗಾಗೇ ಎರಡನೇ ಮದುವೆಗೆ ಒಪ್ಪಿಗೆ ಇದೆ ಅಂತಾ ಪುಟ್ಟಕ್ಕನಿಗೆ ತಿಳಿಸಿದ್ದಾನೆ.. ಆದ್ರೀಗ ಬಂಗಾರಮ್ಮ ಈ ಮದುವೆಗೆ ಒಪ್ಪೋದು ಡೌಟ್.. ಬಂಗಾರಮ್ಮ ರಾಧಾಳನ್ನ ಸೊಸೆ ಅಂತಾ ಒಪ್ಪಿಕೊಂಡಾಗಿದೆ.. ಇದೀಗ ಕಂಠಿ ಸ್ನೇಹಳನ್ನ ಮದುವೆ ಆಗೋದಾಗಿ ನಿರ್ಧರಿಸಿದ್ದು, ಆದ್ರೆ ಈ ಮದುವೆಗೆ ಬಂಗಾರಮ್ಮ ಅಡ್ಡಿ ಆಗೋ ಸಾಧ್ಯತೆ ಇದೆ ಅಂತಾ ಸೀರಿಯಲ್ ಫ್ಯಾನ್ಸ್ ಹೇಳ್ತಿದ್ದಾರೆ.