ಕಂಠಿಗೆ ಸಿಕ್ಕೇ ಬಿಡ್ತು ಸ್ನೇಹ ಹೃದಯ.. ಸ್ನೇಹ ಪಾತ್ರಕ್ಕೆ ನಟಿ ಗುಡ್‌ಬೈ
ಪುಟ್ಟಕ್ಕನ ಮಕ್ಕಳು ಮುಕ್ತಾಯ?

ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ಸ್ನೇಹ ಪಾತ್ರವನ್ನ ಸಾಯಿಸ್ತಿದ್ದಂತೆ, ಸೀರಿಯಲ್ ಹಳ್ಳ ಹಿಡಿತು ಅನ್ನೋದು ಸೀರಿಯಲ್ ಪ್ರೇಮಿಗಳ ವಾದ.. ಸ್ನೇಹ ಸತ್ತ ಬಳಿಕ ಆಕೆಯ ಹೃದಯವನ್ನ ಮತ್ತೊಬ್ಬರಿಗೆ ಕಸಿ ಮಾಡಲಾಗಿದೆ.. ಇದೀಗ ಈ ವಿಚಾರ ಕಂಠಿಗೆ ಗೊತ್ತಾಗಿದೆ. ಸ್ನೇಹ ಹಾರ್ಟ್ ಯಾರಿಗೆ ಜೋಡಿಸಲಾಗಿದೆ ಅನ್ನೋದನ್ನ ಆತ ತಿಳ್ಕೊಂಡಿದ್ದಾನೆ.. ಇವೆಲ್ಲದ್ರ ನಡುವೆ ಸ್ನೇಹ ಪಾತ್ರ ಮಾಡುತ್ತಿದ್ದ ನಟಿ ಸೀರಿಯಲ್ ಗೆ ಗುಡ್‌ಬೈ ಹೇಳಿದ್ದಾರೆ.
ಇದನ್ನೂ ಓದಿ: ಸುಪ್ರೀಂ ಕೋರ್ಟ್ ಅಂಗಳಕ್ಕೆ ಬಿದ್ದ ಕರ್ನಾಟಕ ಹನಿ ಟ್ರ್ಯಾಪ್ ಕೇಸ್ – ನ್ಯಾಯಮೂರ್ತಿ ಎದುರು ಅರ್ಜಿದಾರರ ಮನವಿ
ಪುಟ್ಟಕ್ಕನ ಮಗಳು ಸ್ನೇಹಾ ಪಾತ್ರಧಾರಿಯಾಗಿದ್ದ ಸಂಜನಾ ಬುರ್ಲಿ ಸೀರಿಯಲ್ಬಿಡ್ತಿದ್ದಂತೆ, ಒಳ್ಳೆಯ ರೀತಿಯಲ್ಲಿ ಸಾಗ್ತಿದ್ದ ಸೀರಿಯಲ್ನ ಕಥೆಯನ್ನೇ ಚೇಂಜ್ ಮಾಡಲಾಯ್ತು.. ಸೀರಿಯಲ್ ಡೈರೆಕ್ಟರ್ ಸ್ನೇಹಾ ಪಾತ್ರವನ್ನೇ ಸಾಯಿಸಿದ್ರು.. ಅದಾದ್ಮೇಲೆ ಮತ್ತೊಂದು ಸ್ಟೋರಿ ಲಿಂಕ್ ಕೊಟ್ಟು, ಸ್ನೇಹ ಎನ್ನುವ ಮತ್ತೊಂದು ಪಾತ್ರವನ್ನ ಸೃಷ್ಠಿ ಮಾಡಲಾಯ್ತು. ಸ್ನೇಹಾ ಮತ್ತು ಕಂಠಿಯ ನಡುವಿನ ವೈಮನಸ್ಸು.. ನಂತರ ಅದು ಪ್ರೀತಿಗೆ ಬದಲಾಗಿದ್ದು.. ಪುಟ್ಟಕ್ಕನ ಮಗಳಾದ ಸ್ನೇಹಾ ಡಿಸಿಯಾಗಿದ್ದು.. ಎಲ್ಲವನ್ನೂ ತಮ್ಮ ಬದುಕಿನ ಭಾಗ ಅಂತ ಅಂದುಕೊಂಡು ಸೀರಿಯಲ್ ನೋಡ್ತಿದ್ದ ವೀಕ್ಷಕರಿಗೆ ಸ್ನೇಹಾಳನ್ನು ಸಾಯಿಸಿದ್ದು ಅಸಂಬದ್ಧ ಎನ್ನಿಸಿಬಿಟ್ಟಿತು. ಆಕೆಯಿಂದ ಇನ್ನೇನೋ ನಿರೀಕ್ಷೆ ಮಾಡಿ, ಹೆಣ್ಣುಮಕ್ಕಳಿಗೆ ಮಾದರಿಯಾಗುವಂತೆ ಮಾಡ್ತಾರೆ ಅಂತಾ ಅಂದ್ಕೊಂಡಿದ್ದ ವೀಕ್ಷಕರಿಗೆ ನಿರಾಸೆಯಾಯಿತು. ಅದಾದ್ಮೇಲೆ ಪುಟ್ಟಕ್ಕನ ಮನೆಯಲ್ಲೇ ಆಶ್ರಯ ಪಡಿತಾ ಇದ್ದ ಸ್ನೇಹಗೆ, ಡಿಸಿ ಸ್ನೇಹ ಹಾರ್ಟ್‌ನ ಕಸಿ ಮಾಡಲಾಯ್ತು.. ಆದ್ರೆ ಆಕೆಯನ್ನು ಕಂಡರೆ ಕಂಠಿ ಆಗಲ್ಲ. ಅವಳು ಎದುರಿಗೆ ಬಂದ್ರೆ ಕೆಂಡಕಾರ್ತಾ ಬಂದಿದ್ದಾನೆ. ಆದ್ರೆ ತನ್ನ ಹೆಂಡ್ತಿ ಸ್ನೇಹಾಳ ಹೃದಯವನ್ನು ಅಳವಡಿಸಿದ್ದು, ಇದೇ ಸ್ನೇಹಾಗೆ ಎನ್ನುವುದು ಆತನಿಗೆ ತಿಳಿದಿರಲಿಲ್ಲ. ಈಗ ಕಂಠಿಗೆ ಈ ವಿಚಾರ ಗೊತ್ತಾಗಿದೆ. ಅವಳನ್ನ ಹುಡುಕಿಕೊಂಡು ಹೋಗುವಷ್ಟರಲ್ಲಿ ಆಕೆ ಕಿಡ್ನ್ಯಾಪ್ ಆಗಿದ್ದಾಳೆ.. ಇನ್ನೇನು ಆಕೆಗೆ ಚಾಕು ಚುಚ್ಬೇಕು ಅನ್ನುವಷ್ಟರಲ್ಲಿ ಅಲ್ಲಿಗೆ ಕಂಠಿ ಎಂಟ್ರಿಕೊಟ್ಟಿದ್ದಾನೆ.. ರೌಡಿಗಳ ಜೊತೆ ಫೈಟ್ ಮಾಡಿ ಆಕೆಯನ್ನ ಕಾಪಾಡಿದ್ದಾನೆ.. ನಮ್ಮವರಿಗೆ ಭಯಪಡಿಸ್ತೀಯಾ.. ನಮ್ಮವರ ಮೇಲೆ ಕೈ ಇಟ್ರೆ ಯಾರನ್ನೂ ಸುಮ್ನೆ ಬಿಡಲ್ಲ ಅಂತಾ ಕಂಠಿ ಮಾಸ್ ಡೈಲಾಗ್ ಹೊಡಿದ್ದಾನೆ.. ಇದೀಗ ಕಂಠಿಗೆ ತನ್ನ ಹೃದಯದ ಹುಡುಗಿ ಸಿಕ್ಕಾಗಿದೆ. ಇನ್ನೇನಿದ್ರೂ ಅವರಿಬ್ರು ಒಂದಾಗೊಂದೇ ಬಾಕಿ ಇದೆ.
ಇವೆಲ್ಲದ್ರ ಮಧ್ಯೆ ಸೀರಿಯಲ್‌ನಲ್ಲಿ ಮತ್ತೊಂದು ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ ಆಗಿದ್ದಾರೆ.. ಏಕಾಏಕಿ ಸ್ನೇಹ ಪಾತ್ರಕ್ಕೆ ಬೇರೆ ನಟಿಯನ್ನ ರೀಪ್ಲೇಸ್ ಮಾಡಲಾಗಿದೆ. ಹೌದು ಹೊಸ ಸ್ನೇಹಾ ಪಾತ್ರಕ್ಕೆ ಅಪೂರ್ವ ನಾಗರಾಜ್ ಅವರನ್ನು ಪರಿಚಯಿಸಲಾಯಿತು. ಅದ್ರೆ ಈ ಪಾತ್ರ ವೀಕ್ಷಕರಿಗೆ ಅಷ್ಟೇನು ಹಿಡಿಸಲಿಲ್ಲ.. ಕಂಠಿಗೆ ಈ ಸ್ನೇಹಾ ಸೂಟ್ ಆಗಲ್ಲ ಅಂತಾ ವೀಕ್ಷಕರು ಹೇಳ್ತಾ ಬಂದಿದ್ರು.. ಆದರೂ ಹೊಸ ಪಾತ್ರಕ್ಕೆ ಒಗ್ಗಿಕೊಳ್ಳುವಷ್ಟರಲ್ಲೇ ಈಗ ಈ ಸ್ನೇಹಾ ಪಾತ್ರಧಾರಿಯನ್ನು ಮತ್ತೆ ಬದಲಾಯಿಸಲಾಗಿದೆ. ಇದೀಗ ಹೊಸ ನಟಿಯನ್ನ ರೀಪ್ಲೇಸ್ ಮಾಡಲಾಗಿದೆ. ಇದೀಗ ಸ್ನೇಹ ಪಾತ್ರಕ್ಕೆ ರಾಮಾಚಾರಿ ಸೀರಿಯಲ್‌ನಲ್ಲಿ ರುಕ್ಮಿಣಿ ಪಾತ್ರ ಮಾಡಿ, ಆ ಸೀರಿಯಲ್ ಅನ್ನು ಅರ್ಧಕ್ಕೆ ಬಿಟ್ಟಿದ್ದ ನಟಿ ದೇವಿಕಾ ಭಟ್ ಎಂಟ್ರಿ ಕೊಟ್ಟಿದ್ದಾರೆ. ಇದರ ಪ್ರೊಮೋ ಬಿಡುಗಡೆಯಾಗುತ್ತಲೇ ಮೂರು ಮೂರು ಸ್ನೇಹಾಳನ್ನು ಕಟ್ಟಿಕೊಳ್ಳುವ ಕಂಠಿ ಗತಿ ಏನು ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಪದೇ ಪದೇ ಪಾತ್ರಗಳ ಬದಲಾವಣೆ ಯಾಕೆ ಎಂದು ಪ್ರಶ್ನಿಸುತ್ತಿದ್ದಾರೆ. ಸೀರಿಯಲ್ ಕಥೆಯನ್ನ ಯಾಕೆ ರಬ್ಬರ್ ತರ ಎಳೀತೀರಾ.. ಸೀರಿಯಲ್ ಮುಗಿಸಿಬಿಡಿ.. ಅಂತಾ ಹೇಳಿದ್ದಾರೆ. ಇನ್ನೂ ಕೆಲವರು ಕೆಟ್ಟ್ ಮೇಲೆ ಬುದ್ಧಿ ಬಂತು ಅಂತ ಹೇಳ್ತಾರಲ್ಲ.. trp ಕಮ್ಮಿ ಆದ್ಮೇಲೆ, ಡೈರೆಕ್ಟರ್ ಗೆ ಬುದ್ಧಿ ಬಂತು.. ಜನ ಬಡ್ಕೋತಿದ್ರು ಆ ಹುಡುಗಿನ ಚೇಂಜ್ ಮಾಡಿ ಅಂತ ಅದ್ಕೆ ಚೇಂಜ್ ಮಾಡಿದ್ದಾರೆ ಅಂತಾ ಕಾಮೆಂಟ್ ಮಾಡಿದ್ದಾರೆ.