ಪುಟ್ಟಕ್ಕನಿಗೆ ಕ್ರೇಜಿಸ್ಟಾರ್ ಸಾಥ್‌.. ಸ್ನೇಹಾಗೆ ನ್ಯಾಯ ಕೊಡಿಸ್ತಾರಾ ಪುಟ್ನಂಜ? – ಕಿರುತೆರೆಯಲ್ಲಿ ರವಿಚಂದ್ರನ್ ಹವಾ

ಪುಟ್ಟಕ್ಕನಿಗೆ ಕ್ರೇಜಿಸ್ಟಾರ್ ಸಾಥ್‌.. ಸ್ನೇಹಾಗೆ ನ್ಯಾಯ ಕೊಡಿಸ್ತಾರಾ ಪುಟ್ನಂಜ? – ಕಿರುತೆರೆಯಲ್ಲಿ ರವಿಚಂದ್ರನ್ ಹವಾ

ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ಡಿಸಿ ಸ್ನೇಹ ಸತ್ತು ಅದೆಷ್ಟೋ ಟೈಮ್‌ ಆಯ್ತು.. ಆದ್ರೂ ಸ್ನೇಹ ಸುತ್ತವೇ ಕತೆ ಸಾಗ್ತಾ ಇದೆ.. ಸ್ನೇಹ ಸಾವು ಹೇಗಾಯ್ತು ಅಂತಾ ರಹಸ್ಯ ಹುಡುಕೋ ಹೊತ್ತಲ್ಲೇ ಆಕೆಯ ವಿರುದ್ಧ ದೊಡ್ಡ ಆರೋಪ ಹೊರಿಸಲಾಗಿದೆ. ಸತ್ತ ಸ್ನೇಹ ಭ್ರಷ್ಟಾಚಾರ ಮಾಡಿದ್ದಾಳೆ.. ಡಿಸಿ ಸ್ನೇಹ ಜೊತೆ ಬಂಗಾರಮ್ಮ ಕೂಡ ಸೇರಿಕೊಂಡಿದ್ದಾಳೆ ಎಂಬ ಆರೋಪ ಹೊರಿಸಲಾಗಿದೆ.. ಇದೀಗ ಪುಟ್ಟಕ್ಕ ಡಿಸಿ ಸ್ನೇಹ ಹೆಸರಿಗೆ ಬಂದಿರೋ ಕಳಂಕವನ್ನ ಹೋಗಲಾಡಿಸಲು ಹೋರಾಟಕ್ಕೆ ಇಳಿದಿದ್ದಾಳೆ.. ಇದೀಗ ಪುಟ್ಟಕ್ಕನ ಹೋರಾಟಕ್ಕೆ ಪುಟ್ನಂಜ ಸಾಥ್‌ ನೀಡಿದ್ದಾರೆ.. ಅಷ್ಟಕ್ಕೂ ಸೀರಿಯಲ್‌ ನಲ್ಲಿ ಕ್ರೇಜಿಸ್ಟಾರ್‌ ಪಾತ್ರ ಏನು? ಪುಟ್ಟಕ್ಕನಿಗೆ ನ್ಯಾಯ ಕೊಡಿಸ್ತಾರಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ರಾಜ್ಯದ ಜನರಿಗೆ ಮತ್ತೆ KMF ನಿಂದ ಶಾಕ್‌! – ನಂದಿನಿ ಹಾಲಿನ ದರ ಮತ್ತೆ ಹೆಚ್ಚಳ?

ಪುಟ್ಟಕ್ಕನ ಮಕ್ಕಳು ಸೀರಿಯಲ್‌ ನಲ್ಲಿ ಯಾವಾಗ ಪಾತ್ರಗಳ ಬದಲಾವಣೆ, ಟ್ವಿಸ್ಟ್‌ ಬರೋದಿಕ್ಕೆ ಶುರುವಾಯ್ತೋ, ಅವಾಗಿಂದ ಟಿಆರ್‌ಪಿಯಲ್ಲಿ ಕುಸಿತ ಕಂಡಿದೆ. ಇದೀಗ ಸೀರಿಯಲ್‌ ಡೈರೆಕ್ಟರ್‌ ವೀಕ್ಷಕರನ್ನ ಸೆಳೆಯಲು ಹೊಸ ಹೊಸ ಪ್ರಯತ್ನ ಮಾಡ್ತಿದ್ದಾರೆ.. ಇದೀಗ ಸತ್ತ ಡಿಸಿ ಸ್ನೇಹ ಸುತ್ತವೇ ಸೀರಿಯಲ್‌ ಕತೆ ಸಾಗ್ತಿದೆ.. ಡಿಸಿ ಸ್ನೇಹ ಅತ್ತೆ ಜೊತೆ ಸೇರ್ಕೊಂಡು ತನ್ನ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾಳೆ.. ಭ್ರಷ್ಟಾಚಾರ ಮಾಡಿದ್ದಾಳೆ.. ಬಡ ಮಕ್ಕಳಿಗೆ ಮೋಸ ಮಾಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಇದೀಗ ಪುಟ್ಟಕ್ಕ ಸ್ನೇಹ ಹೆಸರಿಗೆ ಬಂದ ಕಳಂಕ ತೊಲಗಿಸಲು ಹೋರಾಟಕ್ಕೆ ಇಳಿದಿದ್ದಾಳೆ..

ಹೌದು, ಸ್ನೇಹ ಮೇಲೆ ಆರೋಪ ಬರ್ತಿದ್ದಂತೆ ಪುಟ್ಟಕ್ಕ ಹೋರಾಟಕ್ಕೆ ಇಳಿದಿದ್ದಾಳೆ..  ಇತ್ತ ಬಂಗಾರಮ್ಮ ಹಾಗೂ ಕಂಠಿ ಈ ಕುತಂತ್ರ ಮಾಡಿದ್ದು ಯಾರು ಅಂತಾ ಕಂಡುಹಿಡಿಯಲು ಹೊರಟಿದ್ದಾರೆ. ಸಿಂಗಾರಮ್ಮನ ಹುಡುಗ್ರನ್ನ ಕಟ್ಟಿಹಾಕಿ ಸರಿಯಾಗೇ ಬೆಂಡೆತ್ತುತ್ತಿದ್ದಾರೆ.. ತನ್ನ ಮಗಳು ಯಾವ ತಪ್ಪು ಮಾಡಿಲ್ಲ, ಆಕೆಗೆ ನ್ಯಾಯ ಕೊಡಿಸುವ ಸಲುವಾಗಿ ಪುಟ್ಟಕ್ಕ ಆಕೆಯ ಮನೆಯವರೊಂದಿದೆ ಧರಣಿ ಕೂತಿದ್ದಾಳೆ. ಇದೀಗ ಪುಟ್ಟಕ್ಕನ ಹೋರಾಟಕ್ಕೆ ದೊಡ್ಡ ಶಕ್ತಿಯಾಗಿ, ನ್ಯಾಯ ಕೊಡಿಸಲೆಂದೇ ಕ್ರೇಜಿಸ್ಟಾರ್ ರವಿಚಂದ್ರನ್ ಪುಟ್ಟಮಲ್ಲಿ ಕೈ ಜೋಡಿಸಿದ್ದಾರೆ. ಇಲ್ಲಿಂದ ಪುಟ್ಟಕ್ಕನ ಮಕ್ಕಳು ಸೀರಿಯಲ್ ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.

ಸ್ನೇಹಾಗೆ ನ್ಯಾಯ ಕೊಡಿಸಲು ಪುಟ್ಟಕ್ಕ ಹಾಗೂ ಕುಟುಂಬದವರೆಲ್ಲಾ ಧರಣಿಗೆ ಕುಳಿತಿದ್ದಾರೆ. ಈ ಆರೋಪ ಸುಳ್ಳು ಎಂದು ಹೋರಾಟಕ್ಕೆ ಇಳಿದಿದ್ದಾರೆ. ಪುಟ್ಟಕ್ಕನ ಶಾಂತಿಯುತ ಹೋರಾಟಕ್ಕೆ ಕ್ರಾಂತಿಕಾರಿ ಕ್ರೇಜಿಸ್ಟಾರ್ ರವಿಚಂದ್ರನ್ ಸಾಥ್​ ಕೊಟ್ಟಿದ್ದಾರೆ.. ಪುಟ್ಟಕ್ಕ ಪೊಲೀಸ್‌ ಠಾಣೆ ಮುಂದೆ ಧರಣಿಗೆ ಕೂತಿದ್ಲು.. ಸಂಜೆ 5 ಗಂಟೆ ಒಳಗೆ ಪರಿಹಾರ ಸಿಕ್ಕಿಲ್ಲ ಅಂದ್ರೆ ಸೀಮೆ ಎಣ್ಣೆ ಸುರ್ಕೊಂಡು ಸಾಯ್ತೇನೆ ಅಂತಾ ಹೇಳಿದ್ಲು.. ಅದಾದ್ಮೇಲೆ ಮೈಮೇಲೆ ಸೀಮೆಎಣ್ಣೆ ಸುರ್ಕೊಂಡು ಬೆಂಕಿ ಹಚ್ಚಲು ಮುಂದಾಗಿದ್ಲು.. ಅಷ್ಟೊಟ್ಟಿಗೆ ಕ್ರೇಜಿಸ್ಟಾರ್‌ ರವಿಚಂದ್ರನ್‌ ಎಂಟ್ರಿಕೊಟ್ಟಿದ್ದಾರೆ.. ಮೈಮೇಲೆ ಬೆಂಕಿ ಹಚ್ಚಿಕೊಳ್ಳಲು ಮುಂದಾಗಿದ್ದ ಪುಟ್ಟಕ್ಕಳನ್ನ ತಡೆದಿದ್ದಾರೆ.. ಬಳಿಕ ನಿಮ್ಮ ಹೋರಾಟಕ್ಕೆ ನಾನು ಜೊತೆಯಾಗಿರ್ತೇನೆ.. ಸ್ನೇಹ ಹೆಸರಿಗೆ ಯಾವತ್ತು ಹಾಳಾಗ್ಬಾರ್ದು ಅಂತಾ ಹೇಳಿದ್ದಾರೆ.. ಇದೀಗ ಸೀರಿಯಲ್‌ ಗೆ ಕ್ರೇಜಿಸ್ಟಾರ್‌ ಎಂಟ್ರಿಯಾಗಿದೆ.. ಸೀರಿಯಲ್‌ ಸ್ಟೋರಿಯಲ್ಲಿ ಏನ್‌ ಟ್ವಿಸ್ಟ್‌ ಇರಲಿದೆ ಎಂಬ ಕುತೂಹಲ ವೀಕ್ಷಕರನ್ನು ಕಾಡ್ತಿದೆ..

ಇದೀಗ ಸೀರಿಯಲ್‌ ಪ್ರೋಮೋ ನೋಡಿದ ವೀಕ್ಷಕರು ನಾನಾ ಕಾಮೆಂಟ್‌ ಮಾಡ್ತಿದ್ದಾರೆ.. ಪುಟ್ಟಮಲ್ಲಿಗೆ ನ್ಯಾಯ ಕೊಡ್ಸೋಕೆ ಪುಟನಂಜ ಬಂದ್ದಿದಾರೆ.. ಇನ್ನುಮುಂದೆ ಸೀರಿಯಲ್‌ ವರಸೆ ಬದಲಾಗಲಿದೆ ಅಂತಾ ಕೆಲವರು ಕಾಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು ಕ್ರೇಜಿಸ್ಟಾರ್‌ ಸೀರಿಯಲ್‌ ಗೆ ಬಂದಿರೋದು ಖುಷಿ ಇದೆ.. ಆದ್ರೆ ಈ ಸೀರಿಯಲ್‌ ಗೆ ಬರ್ಬಾದಿತ್ತು. ಸಿನಿಮಾ ರಿಯಾಲಿಟಿ ಶೋನಲ್ಲಿ ನೋಡೋದೇ ಚೆಂದ ಅಂದಿದ್ದಾರೆ.. ಮತ್ತೆ ಕೆಲವರು, ಪುಟ್ಮಲ್ಲಿಗೆ ಪುಟ್ನಂಜನೆ ನ್ಯಾಯ ಕೊಡಿಸೋಕೆ ಬಂದವ್ರೆ… ಅಂತೂ ದಿಕ್ಕು ಕಾಣದೆ ಹುಚ್ಚುತನದಲ್ಲಿ ಮುಂದೆ ಹೋಗುತ್ತಿದ್ದ ಧಾರಾವಾಹಿಗೆ ರವಿಚಂದ್ರನ್‌ ಬಂದು ದಿಕ್ಕು ತೋರಿಸ್ತಾರಾ? ಅಂತಾ ಕಾದುನೋಡ್ಬೇಕು ಎಂದು ಕಾಮೆಂಟ್‌ ಮಾಡಿದ್ದಾರೆ.

Shwetha M

Leave a Reply

Your email address will not be published. Required fields are marked *