BBKಗೆ ಪುಟ್ಟಕ್ಕನ ಮಗಳು ಸ್ನೇಹ? – ಸಂಜನಾ ವೈಲ್ಡ್ ಕಾರ್ಡ್ ಎಂಟ್ರಿ?
ಹುಚ್ಚಿ ಆಗ್ಬೇಕು ಅಂದಿದ್ಯಾಕೆ ನಟಿ?
ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರುವ ಪುಟ್ಟಕ್ಕನ ಮಕ್ಕಳು ಸೀರಿಯಲ್ ರೋಚಕ ತಿರುವು ಪಡೆದುಕೊಂಡಿದೆ.. ಡಿಸಿ ಸ್ನೇಹ ಜನರ ಕಷ್ಟ ಪರಿಹಾರ ಮಾಡ್ತಾಳೆ ಅಂತ ವೀಕ್ಷಕರು ಅಂದ್ಕೊಂಡ್ರೆ, ಡೈರೆಕ್ಟರ್ ಟ್ವಿಸ್ಟ್ ಕೊಟ್ಟಿದ್ದಾರೆ.. ಸ್ನೇಹಳನ್ನು ಸಾಯಿಸಿ, ಪಾತ್ರವನ್ನ ಅಂತ್ಯಗೊಳಿಸಿದ್ದಾರೆ.. ಇಷ್ಟು ಬೇಗ ಸ್ನೇಹ ಪಾತ್ರ ಅಂತ್ಯಗೊಳಿಸಲು ಕಾರಣ ಏನು ಅಂತಾ ವೀಕ್ಷಕರು ಪ್ರಶ್ನೆ ಮಾಡ್ತಾ ಇದ್ರು.. ಈ ಬೆನ್ನಲ್ಲೇ ಸ್ನೇಹ ಪಾತ್ರಧಾರಿ ಸಂಜನಾ ಬುರ್ಲಿ ಬಿಗ್ ಬಾಸ್ ಕನ್ನಡ ಸೀಸನ್ 11 ಗೆ ಎಂಟ್ರಿ ಕೊಡ್ತಾರೆ ಅನ್ನೋ ಸುದ್ದಿ ಹರಿದಾಡ್ತಾ ಇದೆ.. ಅಷ್ಟಕ್ಕೂ ಸಂಜನಾ ಸೀರಿಯಲ್ ನಿಂದ ಹೊರ ನಡೆದಿದ್ದು ಯಾಕೆ? ದೊಡ್ಮನೆಗೆ ಹೋಗ್ತಾರಾ? ಈ ಬಗ್ಗೆ ನಟಿ ಹೇಳಿದ್ದೇನು? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಕೇಂದ್ರ ಸಚಿವ ಹೆಚ್‌ಡಿಕೆ, ನಿಖಿಲ್ ಕುಮಾರಸ್ವಾಮಿ ವಿರುದ್ದ ಎಫ್‌ಐಆರ್ ದಾಖಲು – ಏನಿದು ಹೊಸ ಕೇಸ್?
ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ಈತರ ಟ್ವಿಸ್ಟ್ ಸಿಗುತ್ತೆ ಅಂತಾ ಯಾರು ಅಂದ್ಕೊಂಡಿರ್ಲಿಲ್ಲ.. ಡಿಸಿ ಆಗಿರುವ ಸ್ನೇಹ ಜನಸೇವೆ ಮಾಡ್ತಾಳೆ.. ಜನರ ಕಷ್ಟಕ್ಕೆ ಸ್ಪಂಧಿಸಿ, ಎಲ್ಲರ ಮುಂದೆ ಭೇಷ್ ಅನ್ನಿಸಿಕೊಳ್ತಾಳೆ ಅಂತಾ ವೀಕ್ಷಕರು ಅಂದ್ಕೊಂಡಿದ್ರು.. ಆದ್ರೆ ಸ್ನೇಹ ತನ್ನ ಕುಟುಂಬದ ಸಮಸ್ಯೆಗೆ ಪರಿಹಾರ ಹುಡುಕೋದ್ರಲ್ಲೇ ಬ್ಯೂಸಿ ಆಗಿದ್ಲು.. ಎಲ್ಲ ಕಷ್ಟ ಮುಗಿತು ಅಂದ್ಕೊಳ್ಳುವಾಗ್ಲೇ ಸೀರಿಯಲ್ ಡೈರೆಕ್ಟರ್ ವೀಕ್ಷರಿಗೆ ಶಾಕ್ ಕೊಟ್ಟಿದ್ರು.. ಸ್ನೇಹಗೆ ಆಕ್ಸಿಡೆಂಟ್ ಮಾಡಿಸಿ, ಪಾತ್ರವನ್ನೇ ಸಾಯಿಸಿಬಿಟ್ರು..
ಹೌದು, ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ಸ್ನೇಹ ಪಾತ್ರ ಎಲ್ಲರಿಗೂ ಅಚ್ಚುಮೆಚ್ಚಾಗಿತ್ತು.. ಯಾಕಂದ್ರೆ ಸ್ನೇಹಾ ಎಲ್ಲ ಸಮಸ್ಯೆಗಳನ್ನೂ ಹಿಮ್ಮೆಟ್ಟಿ ಜಿಲ್ಲಾಧಿಕಾರಿಯಾಗಿ ಮಾದರಿಯಾದವಳು.. ಆದ್ರೆ ಏಕಾಏಕಿ ಸ್ನೇಹಾಳನ್ನು ಸಾಯಿಸಿದ್ದು ಏಕೆ ಎನ್ನುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಲೇ ಇದೆ. ಇಡೀ ಸೀರಿಯಲ್ನ ಉದ್ದೇಶವನ್ನೇ ನಿರ್ದೇಶಕರು ಬುಡಮೇಲು ಮಾಡಿದರು ಎನ್ನುವ ಮಾತೂ ಸಾಕಷ್ಟು ಕೇಳಿ ಬರುತ್ತಿದೆ. ಆದರೆ, ಇದಾಗಲೇ ಸಂಜನಾ ಈ ಬಗ್ಗೆ ಹೇಳಿಕೊಂಡಿದ್ದರು. ಅನಿವಾರ್ಯವಾಗಿ ನಾನು ಸೀರಿಯಲ್ ಸೆಟ್ನಿಂದ ಹೊರಕ್ಕೆ ಹೋಗಬೇಕಾಯಿತು. ಇದು ನನ್ನ ವೈಯಕ್ತಿಕ ಕಾರಣ.. ಹೀಗಾಗಿ ಉದ್ದೇಶಪೂರ್ವಕವಾಗಿ ಸ್ನೇಹಾಳನ್ನು ಸಾಯಿಸುವ ಸೀನ್ ಮಾಡಬೇಕಾಯಿತು.. ಕಥೆಯನ್ನು ಬದಲಿಸಬೇಕಾಯಿತು ಎಂದೆಲ್ಲಾ ಹೇಳಿದ್ದರು. ಈ ಬೆನ್ನಲ್ಲೇ ಸಂಜನಾ ಬುರ್ಲಿ ಬಿಗ್ ಬಾಸ್ ಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಡ್ತಾರೆ ಅನ್ನೋ ಮಾತು ಕೇಳಿಬಂದಿದೆ.. ಈ ಬಗ್ಗೆ ನಟಿ ಸ್ಪಷ್ಟನೆ ಕೊಟ್ಟಿದ್ದಾರೆ.. ನಾನು ಪುಟ್ಟಕ್ಕನ ಮಕ್ಕಳು ಸೀರಿಯಲ್ ಬಿಟ್ಟಾಗ ಸೋಷಿಯಲ್ ಮೀಡಿಯಾಗಳಲ್ಲಿ ನಾನು ಬಿಗ್ಬಾಸ್ಗೆ ಹೋಗಲು ಸೀರಿಯಲ್ ಬಿಟ್ಟೆ ಎಂದೇ ಪೋಸ್ಟ್ಗಳನ್ನು ಹಾಕುತ್ತಿದ್ದರು. ನಿರ್ದೇಶಕರು ಹೊಸ ಪಾತ್ರಕ್ಕೆ ಹುಡುಗಿಯನ್ನು ಸರ್ಚ್ ಮಾಡುವ ಪೋಸ್ಟ್ ಹಾಕಿದಾಗಲೇ ಎಲ್ಲರೂ ನಾನು ಬಿಗ್ಬಾಸ್ಗೆ ಹೋಗ್ತಾ ಇದ್ದೇನೆ ಎಂದುಕೊಂಡಿದ್ದರು. ಅದನ್ನೆಲ್ಲಾ ನಾನು ನೋಡುತ್ತಿದ್ದೆ. ಆದರೆ ಆ ಕ್ಷಣ ರಿಯಾಕ್ಟ್ ಮಾಡಲು ಹೋಗಿಲ್ಲ. ಹೇಗಿದ್ದರೂ ಬಿಗ್ಬಾಸ್ ಶುರುವಾದ ಮೇಲೆ ಸತ್ಯ ಗೊತ್ತಾಗತ್ತಲ್ಲಾ ಎಂದು. ಈಗ ಹೇಗೆ ಮಾತಾಡ್ತಾ ಇದ್ದಾರೆ ಎಂದ್ರೆ ವೈಲ್ಡ್ ಕಾರ್ಡ್ ಎಂಟ್ರಿ ಕೊಡ್ತೇನೆ ಅನ್ನುತ್ತಿದ್ದಾರೆ. ನಿಜಕ್ಕೂ ನೆಟ್ಟಿಗರ ಕ್ರಿಯೇಟಿವಿಟಿ ಮೆಚ್ಚಬೇಕು. ತಮ್ಮದೇ ಆದ ರೀತಿಯಲ್ಲಿ ಹೇಗೆಲ್ಲಾ ಕಲ್ಪನೆ ಮಾಡಿಕೊಳ್ಳುತ್ತಾರೆ ಇದೇ ಸಾಕ್ಷಿ.. ನಾನು ಬಿಗ್ಬಾಸ್ ಮಾತ್ರ ಅಲ್ಲ.. ಯಾವುದೇ ರಿಯಾಲಿಟಿ ಶೋಗಳಿಗೂ ಹೋಗಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ಈ ಮೂಲಕ ಅವರ ಫ್ಯಾನ್ಸ್ಗೆ ಉತ್ತರ ಕೊಟ್ಟಿದ್ದಾರೆ.
ಇದೀಗ ಸಂಜನಾ ಮುಂದೇನು ಮಾಡ್ತಾರೆ ಅನ್ನೋ ಪ್ರಶ್ನೆ ವೀಕ್ಷಕರನ್ನ ಕಾಡೋದು ಸಹಜ.. ಅದಕ್ಕೂ ನಟಿ ಉತ್ತರಿಸಿದ್ದಾರೆ.. ಸೀರಿಯಲ್ ಬಿಡಲು ನನಗೂ ಮನಸ್ಸು ಇರಲಿಲ್ಲ. ತುಂಬಾ ನೋವಿನಿಂದಲೇ ಹೊರಕ್ಕೆ ಬಂದಿದ್ದೇನೆ. ಮೂರು ತಿಂಗಳ ಹಿಂದೆಯೇ ನೋಟಿಸ್ ಪಿರಿಯಡ್ ಕೊಟ್ಟಿದ್ದೆ. ಈ ಮೂಲಕ ಸೀರಿಯಲ್ಗಳಿಗೆ ಬೈ ಹೇಳುತ್ತಿದ್ದೇನೆ. ಆದರೆ ನಟಿಯಾಗಿ ಮುಂದುವರೆಯುತ್ತಿದ್ದೇನೆ ಎಂದಿರುವ ಸಂಜನಾ, ಬೆಳ್ಳಿ ತೆರೆಯ ಮೇಲೆ ಕಾಣಿಸಿಕೊಳ್ಳುವ ತವಕದಲ್ಲಿ ಇದ್ದಾರೆ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಇದಾಗಲೇ ಕೆಲವು ಪ್ರಾಜೆಕ್ಟ್ಗಳನ್ನು ಮಾಡಿದ್ದೇನೆ. ಅದಾವುದೂ ಇನ್ನೂ ಬಿಡುಗಡೆಯಾಗಿಲ್ಲ. ನಟಿಯಾಗಿ ಇರುತ್ತೇನೆ. ನನಗೆ ಇಷ್ಟದ ಪಾತ್ರಗಳು ಬಂದರೆ ಒಪ್ಪಿಕೊಳ್ಳುತ್ತೇನೆ. ನನಗೆ ಚಾಲೆಂಜಿಂಗ್ ಪಾತ್ರಗಳು ಎಂದರೆ ಇಷ್ಟ. ಹುಚ್ಚಿಯಂಥ ಪಾತ್ರಗಳನ್ನು ಮಾಡಬೇಕು ಎಂದುಕೊಂಡಿದ್ದೇನೆ. ನಾಯಕಿಯೇ ಆಗಬೇಕೆಂದೇನೂ ಇಲ್ಲ. ನನಗೆ ಇಷ್ಟ ಆಗುವ ಪಾತ್ರಗಳು ಆಗಬೇಕಷ್ಟೇ ಎಂದಿದ್ದಾರೆ ಸಂಜನಾ. ಈ ಮೂಲಕ ಸಂಜನಾ ತನ್ನ ಬಗ್ಗೆ ಹರಿದಾಡ್ತಿರೋ ಸುದ್ದಿಗಳಿಗೆ ಬ್ರೇಕ್ ಹಾಕಿದ್ದಾರೆ..