ಪುಟ್ಟಕ್ಕನ ಮಕ್ಕಳು ಪಯಣ ಮುಗಿಸಿದ ಉಮಾಶ್ರೀ! – ಧಾರವಾಹಿ ಕ್ಲೈಮ್ಯಾಕ್ಸ್‌ ಶೂಟಿಂಗ್ ಮುಕ್ತಾಯ!

ಪುಟ್ಟಕ್ಕನ ಮಕ್ಕಳು ಪಯಣ ಮುಗಿಸಿದ ಉಮಾಶ್ರೀ! – ಧಾರವಾಹಿ ಕ್ಲೈಮ್ಯಾಕ್ಸ್‌ ಶೂಟಿಂಗ್ ಮುಕ್ತಾಯ!

ಪುಟ್ಟಕ್ಕನ ಮಕ್ಕಳು.. ಕಳೆದ 4 ವರ್ಷಗಳಿಂದ ಜೀ ಕನ್ನಡಸದಲ್ಲಿ ಪ್ರಸಾರವಾಗ್ತಿದೆ ಈ ಜನಪ್ರಿಯ ಸೀರಿಯಲ್. ನಟಿ ಉಮಾಶ್ರೀ  ಮುಖ್ಯಭೂಮಿಕೆಯಲ್ಲಿ ನಟಿಸಿರುವ ಇತ್ತೀಚೆಗಷ್ಟೇ ಪುಟ್ಟಕ್ಕನ ಮಕ್ಕಳು ಸೀರಿಯಲ್‌ 1200 ಸಂಚಿಕೆಗಳನ್ನು ಪೂರೈಸಿತ್ತು. ಆದ್ರೀಗ ಸೀರಿಯಲ್‌ ಪ್ರೇಮಿಗಳಿಗೆ ಬೇಸರದ ಸುದ್ದಿಯಿದೆ. ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಈಗ ಕ್ಲೈಮ್ಯಾಕ್ಸ್‌ ಹಂತಕ್ಕೆ ತಲುಪಿದೆ. ಇನ್ನೇನು ಕೆಲವೇ ದಿನಗಳಲ್ಲಿ ಸೀರಿಯಲ್‌ ಎಂಡ್‌ ಆಗುತ್ತಿದೆ.

ಇದನ್ನೂ ಓದಿ: MBBSಗೆ ಪ್ರವೇಶ ಪಡೆಯಲು ತನ್ನ ಕಾಲನ್ನೇ ಕತ್ತರಿಸಿಕೊಂಡ! – ಆಮೇಲೆ ಏನಾಯ್ತು ಗೊತ್ತಾ?

ಗಂಡನಿಂದ ದೂರವಾಗಿದ್ದ ಪುಟ್ಟಕ್ಕ ತನ್ನ ಮೂವರು ಹೆಣ್ಣು ಮಕ್ಕಳನ್ನು ಸಾಕಿ ಸಲಗಿ, ಅವರಿಗೆ ಒಳ್ಳೆ ಬದುಕಿನ ದಾರಿ ತೋರಿಸಿದ್ಲು. ಏನೇ ಕಷ್ಟ ಬಂದ್ರೂ ಅದನ್ನ ಧೈರ್ಯವಾಗಿ ಎದುರಿಸುವ ಗಟ್ಟಿಗಿತ್ತಿ ಈಕೆ. ಮೆಸ್‌ ನಡೆಸಿಕೊಂಡು ಬಂದಿದ್ದ ಪುಟ್ಟಕ್ಕ ಜೀವನ ಅದೆಷ್ಟೋ ಮಹಿಳೆಯರಿಗೆ ಮಾದರಿಯಾಗಿತ್ತು. ಇದೀಗ ಈ ಸೀರಿಯಲ್‌ ಮುಕ್ತಾಯದ ಹಂತಕ್ಕೆ ಬಂದಿದೆ. ಸೀರಿಯಲ್‌ ಮುಕ್ತಾಯವಾಗಿರುವ ಬಗ್ಗೆ ಸೀರಿಯಲ್‌ ನಟ, ನಟಿಯರು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿದ್ದಾರೆ.

ತೆಲುಗಿನ ರಾಧಮ್ಮ ಕೂತುರು ಧಾರಾವಾಹಿಯನ್ನ ರೀಮೆಕ್ ಮಾಡಲಾಗಿತ್ತಿ. ಕನ್ನಡದ ನೇಟಿವಿಟಿಗೆ ತಕ್ಕಂತೆ ಬದಲಿಸಿಕೊಂಡು ಕಥೆಯನ್ನು ಬೆಳೆಸಲಾಗಿತ್ತು. 2021, ಡಿಸೆಂಬರ್ 13ರಂದು ಪುಟ್ಟಕ್ಕನ ಮಕ್ಕಳು ಧಾರಾವಾಹಿ ಪ್ರಸಾರ ಆರಂಭವಾಗಿತ್ತು. ಅಲ್ಲಿಂದ ಒಂದು ಹಂತದ ವರೆಗೆ ಈ ಧಾರಾವಾಹಿ ನಂಬರ್ ಒನ್ ಪಟ್ಟದಲ್ಲಿತ್ತು. ಇದೀಗ ಈ ಸೀರಿಯಲ್‌ ಮುಕ್ತಾಯವಾಗ್ತಿದೆ. ಪುಟ್ಟಕ್ಕನ ಹಿರಿಯ ಮಗಳು ಸಹನಾ ಖ್ಯಾತಿಯ ನಟಿ ಅಕ್ಷರಾ ಸೋಶಿಯಲ್ ಮೀಡೀಯಾದಲ್ಲಿ ಶೂಟಿಂಗ್ ಸೆಟ್ ನ ಮಧುರ ನೆನಪಿನ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿರುವ ಅಕ್ಷರ, ಈ ಸುಂದರ ಪ್ರಯಾಣ.. ಪುಟ್ಟಕ್ಕನ ಮಕ್ಕಳು — 4 ಮರೆಯಲಾಗದ ವರ್ಷಗಳ ನಂತರ, ಈ ಸುಂದರ ಪ್ರಯಾಣ ಕೊನೆಗೂ ಅಂತ್ಯಗೊಂಡಿದೆ. ಈ ಅನುಭವ ನನಗೆ ಏನನ್ನು ಅರ್ಥೈಸಿದೆ ಎಂಬುದನ್ನು ಪದಗಳಲ್ಲಿ ಹೇಳುವುದು ಕಷ್ಟ. ಪ್ರತಿ ಕ್ಷಣ, ಪ್ರತಿ ಪಾಠ, ಪ್ರತಿ ನೆನಪು ಶಾಶ್ವತವಾಗಿ ನನ್ನ ಹೃದಯಕ್ಕೆ ಹತ್ತಿರವಾಗಿರುತ್ತದೆ. ನಾನು ಇದನ್ನು ಜೀವಮಾನವಿಡೀ ಪಾಲಿಸುತ್ತೇನೆ. ಸಹನಾ ಆಗಿರುವುದು ನನ್ನ ಜೀವನದ ಅತ್ಯಂತ ವಿಶೇಷ ಅಧ್ಯಾಯಗಳಲ್ಲಿ ಒಂದಾಗಿದೆ.

ನೀವು ನನ್ನ ಮೇಲೆ ಸುರಿಸಿದ ಅಪಾರ ಪ್ರೀತಿ, ಬೆಂಬಲ ಮತ್ತು ಪ್ರೋತ್ಸಾಹಕ್ಕಾಗಿ ನನ್ನ ಹೃದಯದ ಕೆಳಗಿನಿಂದ ಧನ್ಯವಾದಗಳು . ದಯವಿಟ್ಟು ನನ್ನೊಂದಿಗೆ ನಿಂತು ನನ್ನ ಮುಂದಿನ ಯೋಜನೆಗಳಲ್ಲಿಯೂ ನನ್ನನ್ನು ಬೆಂಬಲಿಸುವುದನ್ನು ಮುಂದುವರಿಸಿ. ನನ್ನ ನಿರ್ಮಾಣ ಸಂಸ್ಥೆ ಆರೂರು ಜಗದೀಶ್‌ ಸೇರಿದಂತೆ ಎಲ್ಲರಿಗೂ ಕೃತಜ್ಞತೆಗಳುಮತ್ತು ನನ್ನ ಎಲ್ಲಾ ಸಹ-ಕಲಾವಿದರು ಮತ್ತು ತಂತ್ರಜ್ಞರಿಗೆ ಶಾಶ್ವತವಾಗಿ ಕೃತಜ್ಞರಾಗಿರುತ್ತೇನೆ ಎಂದು ಬರೆದುಕೊಂಡಿದ್ದಾರೆ.

Shwetha M