‘ಯುದ್ದ ನಿಲ್ಲಿಸಲು ಉಕ್ರೇನ್‌ನೊಂದಿಗೆ ಮಾತುಕತೆಗೆ ಸಿದ್ಧ’ – ಪುಟಿನ್

‘ಯುದ್ದ ನಿಲ್ಲಿಸಲು ಉಕ್ರೇನ್‌ನೊಂದಿಗೆ ಮಾತುಕತೆಗೆ ಸಿದ್ಧ’ – ಪುಟಿನ್

ಮಾಸ್ಕೋ: 10 ತಿಂಗಳುಗಳಿಂದ ಉಕ್ರೇನ್‌ನಲ್ಲಿ ನಡೆಸುತ್ತಿರುವ ಆಕ್ರಮಣವನ್ನು ಶೀಘ್ರವೇ ನಿಲ್ಲಿಸುವುದಾಗಿ ಕೆಲ ದಿನಗಳ ಹಿಂದೆಷ್ಟೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದರು. ‘ಉಕ್ರೇನ್ ಮೇಲೆ ಹೆಚ್ಚಿನ ದಾಳಿ ನಡೆಸುತ್ತಿದ್ದರೂ ನಾವಿದನ್ನು ನಿಲ್ಲಿಸಲು ಉಕ್ರೇನ್‌ನೊಂದಿಗೆ ಮಾತುಕತೆಗೆ ಸಿದ್ಧರಾಗಿದ್ದೇವೆ’ ಎಂದು ಪುಟಿನ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಕೊನೆಗೊಳ್ಳುತ್ತಾ ರಷ್ಯಾ – ಉಕ್ರೇನ್ ವಾರ್! ಪುಟಿನ್ ಹೇಳಿದ್ದೇನು?  

ದೂರದರ್ಶನ ಸಂದರ್ಶನವೊಂದರಲ್ಲಿ ಮಾತನಾಡಿದ ಪುಟಿನ್, ನಾವು ಉಕ್ರೇನ್‌ನೊಂದಿಗೆ ನಡೆಸುತ್ತಿರುವ ಯುದ್ಧವನ್ನು ನಿಲ್ಲಿಸಲು ಮಾತುಕತೆಗೆ ಸಿದ್ಧರಾಗಿದ್ದೇವೆ. ಮಾತುಕತೆಗೆ ಮುಂದಾಗುವ ಎಲ್ಲರೊಂದಿಗೂ ನಾವು ಸ್ವೀಕಾರಾರ್ಹ ಫಲಿತಾಂಶದ ಬಗ್ಗೆಯೇ ಚರ್ಚಿಸುತ್ತೇವೆ ಎಂದು ಹೇಳಿದ್ದಾರೆ.

ಯುದ್ದ ನಿಲ್ಲಿಸುವ ಕುರಿತ ಮಾತುಕತೆಯನ್ನು ನಿರಾಕರಿಸುತ್ತಿರುವುದು ನಾವಲ್ಲ, ಬದಲಿಗೆ ಅವರೇ. ನಾವು ಸರಿಯಾದ ಮಾರ್ಗದಲ್ಲೇ ಸಾಗುತ್ತಿದ್ದೇವೆ ಎಂಬುದನ್ನು ನಾವು ನಂಬುತ್ತೇವೆ. ನಾವು ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳನ್ನು, ನಮ್ಮ ನಾಗರಿಕರು, ನಮ್ಮ ಜನರ ಹಿತಾಸಕ್ತಿಗಳನ್ನು ರಕ್ಷಿಸುತ್ತಿದ್ದೇವೆ ಎಂದು ತಿಳಿಸಿದರು.

ಈ ವರ್ಷ ಫೆಬ್ರವರಿ 24ರಂದು ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿತ್ತು. 10 ತಿಂಗಳುಗಳಿಂದ ರಷ್ಯಾ ನಿರಂತರವಾಗಿ ಉಕ್ರೇನ್ ಮೇಲೆ ದಾಳಿ ನಡೆಸುತ್ತಿದೆ. ಆದರೆ ಇತ್ತೀಚಿನ ತಿಂಗಳುಗಳಲ್ಲಿ ರಷ್ಯಾ ತನ್ನ ಆಕ್ರಮಣದ ವೇಗವನ್ನು ಕಡಿಮೆಗೊಳಿಸುತ್ತಿರುವುದಾಗಿ ಹೇಳಿದೆ.

suddiyaana