ಒಂದು‌ ಸೀನ್ ಗೆ ಇಷ್ಟೆಲ್ಲಾ ಬೇಕಿತ್ತಾ!? – ಪುಷ್ಪ-2ನಲ್ಲಿ ಹಣಕ್ಕೆ ಲೆಕ್ಕವೇ ಇಲ್ವಾ?

ಒಂದು‌ ಸೀನ್ ಗೆ ಇಷ್ಟೆಲ್ಲಾ ಬೇಕಿತ್ತಾ!? – ಪುಷ್ಪ-2ನಲ್ಲಿ ಹಣಕ್ಕೆ ಲೆಕ್ಕವೇ ಇಲ್ವಾ?

ಟಾಲಿವುಡ್‌ ಐಕಾನ್ ಸ್ಟಾರ್‌’ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2: ದಿ ರೂಲ್’ ಚಿತ್ರದ ಟೀಸರ್‌ ಕೆಲವು ದಿನಗಳ ಹಿಂದೆಯಷ್ಟೇ ರಿಲೀಸ್‌ ಆಗಿತ್ತು. ಈ ಟೀಸರ್ ನಲ್ಲಿ ಎಲ್ಲಕ್ಕಿಂತ  ಹೆಚ್ಚು ಹೈಲೆಟ್‌ ಆಗಿದ್ದು ಅಂದ್ರೆ ಅಲ್ಲು ಅರ್ಜುನ್‌ ವೇಷ ಹಾಗೂ ಅಲ್ಲಿಯ ಜಾತ್ರೆ ದೃಶ್ಯಗಳು. ಈ ಟೀಸರ್‌ ನಿಂದಾಗಿ ಪುಷ್ಪ-2  ಸಿನಿಮಾದ ಬಗ್ಗೆ ಕೂತೂಹಲ ನೂರು ಪಟ್ಟು ಜಾಸ್ತಿಯಾಗಿದೆ.. ಯಾರೂ ಊಹಿಸದ ರೀತಿಯ ವಿಚಿತ್ರ ಲುಕ್‌ನಲ್ಲಿ ಅಲ್ಲು ಕಾಣಿಸಿಕೊಂಡಿದ್ದಾರೆ.. ಈ  ಚಿತ್ರಕ್ಕಾಗಿ ಹಾಕಿರುವ ಜಾತ್ರೆಯ ಸೆಟ್‌ಗೆ ನೀರಿನಂತೆ ಖರ್ಚು ಹಣ ಖರ್ಚು ಮಾಡಿದ್ದಾರೆ..

ಇದನ್ನೂ ಓದಿ: ಸಲಾರ್‌ 2 ಸೆಟ್ಟೇರುವುದು ಅನುಮಾನ! – ಚಿತ್ರ ನಿಲ್ಲಲು ಇದೇ ಕಾರಣ ಆಯ್ತಾ?

ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್‌  ಲುಕ್ಕು.. ಮ್ಯಾನರಿಸಂ ಇಡೀ ವಿಶ್ವದಲ್ಲೇ ಟ್ರೆಂಡ್‌ ಆಗಿತ್ತು.. ಯಾರೂ ಊಹೆ ಮಾಡಲೂ ಸಾಧ್ಯವಾಗದ ರೀತಿಯಲ್ಲಿ ಐಕಾನ್‌ ಸ್ಟಾರ್‌ ಅಲ್ಲು ಪುಷ್ಪದಲ್ಲಿ ಕಾಣಿಸಿಕೊಂಡಿದ್ದರು.. ಈಗ ‘ಪುಷ್ಪ 2: ದಿ ರೂಲ್’  ಸಿನಿಮಾದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.. ಯಾಕಂದ್ರೆ ಪುಷ್ಪ-2 ಟೀಸರ್ ನಲ್ಲೇ ಭಾರಿ ಸದ್ದು ಮಾಡ್ತಿದೆ.  ಅಂದಹಾಗೆ, ಈ ಟೀಸರ್‌ನಲ್ಲಿ ಹೆಚ್ಚು ಹೈಲೈಟ್ ಆಗಿರುವುದು ಜಾತ್ರೆ ದೃಶ್ಯಗಳು. ಅದರ ಬಗ್ಗೆಯೇ ಒಂದು ಇಂಟರೆಸ್ಟಿಂಗ್‌ ವಿಚಾರ ಈಗ ಗೊತ್ತಾಗಿದೆ. ‘ಪುಷ್ಪ 2′ ಸಿನಿಮಾದಲ್ಲಿ ಗಂಗಮ್ಮ ಜಾತ್ರೆ ಸೀನ್ ಇದೆ. ಟೀಸರ್‌ನಲ್ಲೂ ಅದನ್ನೇ ತೋರಿಸಲಾಗಿದೆ.. ಜಾತ್ರೆಯಲ್ಲಿ ಅಲ್ಲು ಅರ್ಜುನ್ ಸೀರೆ ಧರಿಸಿಕೊಂಡು, ಟೀಸರ್‌ನಲ್ಲಿ ಖಳರ ಜೊತೆಗೆ ಗುದ್ದಾಡುವ ಸೀನ್‌ ಹೈಲೈಟ್ ಆಗಿದೆ. ಅಂದಹಾಗೆ, ಇಡೀ ಸಿನಿಮಾದಲ್ಲಿ ಆ ಗಂಗಮ್ಮ ಜಾತ್ರೆ ದೃಶ್ಯವೇ ತುಂಬ ಪ್ರಮುಖವಾದುದು ಎನ್ನಲಾಗಿದೆ. ಅದಕ್ಕಾಗಿಯೇ ನಿರ್ದೇಶಕ ಸುಕುಮಾರ್ ಅವರು ಜಾತ್ರೆ ಸೆಟ್‌ ಅನ್ನು ಅದ್ದೂರಿಯಾಗಿ ಹಾಕಿಸಿದ್ದಾರೆ.ಬರೀ ಆರು ನಿಮಿಷದ ಸೀನ್ ಗೆ ಹಣದ ಹೊಳೆಯನ್ನೇ ಹರಿಸಿದ್ದಾರೆ.. ಆ ಜಾತ್ರೆ ಸೀನ್‌ಗಾಗಿಯೇ ಬರೋಬ್ಬರಿ  50 ಕೋಟಿ ರೂಪಾಯಿಗೂ ಅಧಿಕ ಖರ್ಚು ಮಾಡಲಾಗಿದೆಯಂತೆ!

ಹೈದಬಾರಾದ್‌ನ ಗಂದಿಪೇಟ್‌ನಲ್ಲಿರುವ ಅಲ್ಲು ಸ್ಟುಡಿಯೋಸ್‌ನಲ್ಲಿ ಗಂಗಮ್ಮ ಜಾತ್ರೆ ಸೆಟ್ ಅನ್ನು ಅದ್ದೂರಿಯಾಗಿ ಹಾಕಲಾಗಿತ್ತು. ಈ ಸೀನ್‌ಗಾಗಿಯೇ ಕಲಾವಿದರಿಗೆ ವಿಶೇಷ ಮೇಕಪ್‌, ಲೈಟಿಂಗ್ ಸೆಟಪ್ ಮಾಡಲಾಗಿತ್ತು. ಮುಂಬೈನಿಂದ ಮೋಕೊಬೋಟ್ ಕ್ಯಾಮೆರಾವನ್ನು ತರಿಸಿಕೊಳ್ಳಲಾಗಿತ್ತು. ಇದೆಲ್ಲದಕ್ಕಾಗಿಯೇ ಸುಮಾರು 30 ಕೋಟಿ ರೂ. ಹಣ ಖರ್ಚು‌ಮಾಡಲಾಗಿದೆ. ಇನ್ನು,ಕಲಾವಿದರ, ತಂತ್ರಜ್ಞರ ಸಂಭಾವನೆ, ವಿಶುವಲ್ ಎಫೆಕ್ಟ್ಸ್, ಪೋಸ್ಟ್ ಪ್ರೊಡಕ್ಷನ್ ವರ್ಕ್‌, ಸೌಂಡ್ ಡಿಸೈನ್ ಇನ್ನಿತರ ಕೆಲಸಗಳಿಗಾಗಿಯೇ 20 ಕೋಟಿ ರೂ. ಖರ್ಚಾಗಿದೆ. ಎಲ್ಲ ಸೇರಿ 50 ಕೋಟಿ ರೂ. ಇಷ್ಟೊಂದು ಹಣವನ್ನು ಈ  ಜಾತ್ರೆ ಸೀನ್‌ ಅದ್ದೂರಿಯಾಗಿ ತೋರಿಸೋದಿಕ್ಕಾಗಿಯೇ ಮೈತ್ರಿ ಮೂವೀ ಮೇಕರ್ಸ್ ಖರ್ಚು ಮಾಡಿದ್ದಾರೆ.

ಅಂದಹಾಗೆ, ‘ಪುಷ್ಪ 2’ ಸಿನಿಮಾವನ್ನು ಸುಮಾರು 250 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಆಗಸ್ಟ್ 15ರಂದು ಈ ಸಿನಿಮಾ ತೆರೆಗೆ ಬರುತ್ತಿದ್ದು, ಒಂದು ಸಾವಿರ ಕೋಟಿ ರೂ.ಗಳಿಗೂ ಅಧಿಕ ಗಳಿಕೆ ಮಾಡಬೇಕು ಎಂದು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.

‘ಪುಷ್ಪ 2: ದಿ ರೂಲ್’ ಸಿನಿಮಾದಲ್ಲಿ ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದು, ಧನಂಜಯ, ಫಹಾದ್ ಫಾಸಿಲ್, ಜಗದೀಶ್ ಪ್ರತಾಪ್ ಭಂಡಾರಿ, ಜಗಪತಿ ಬಾಬು, ರಾವ್ ರಮೇಶ್, ಅಜಯ್, ಮೈಮ್ ಗೋಪಿ, ಸುನಿಲ್, ಅನಸೂಯಾ ಭಾರದ್ವಾಜ್, ಶ್ರೀತೇಜ್, ಬ್ರಹ್ಮಾಜಿ ಮುಂತಾದವರು ನಟಿಸಿದ್ದಾರೆ. ದೇವಿಶ್ರೀ ಪ್ರಸಾದ್ ಈ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಟೀಸರ್ ನೋಡಿ ಥ್ರಿಲ್‌ ಆಗಿರುವ ಫ್ಯಾನ್ಸ್, ಟ್ರೇಲರ್ ಮತ್ತು ಸಾಂಗ್ಸ್‌ಗಾಗಿ ಕಾದಿದ್ದಾರೆ. ಏನೇ ಆದರೂ ಅಲ್ಲು ಏನೇ‌ ಮಾಡಿದ್ರೂ ಅದರಲ್ಲಿ ಅದ್ದೂರಿತನ ಇರುತ್ತದೆ ಅನ್ನೋದು ಪುಷ್ಪ-2ನಲ್ಲೂ ಸಾಬೀತಾಗುತ್ತಿದೆ.

Shwetha M