ಅಲ್ಲು ಅರ್ಜುನ್ ಬಹುನಿರೀಕ್ಷಿತ ಸಿನಿಮಾಕ್ಕೆ ಶಾಕ್ – ‘ಪುಷ್ಪಾ-2’ ಶೂಟಿಂಗ್ ಬಂದ್ ?

ಅಲ್ಲು ಅರ್ಜುನ್ ಬಹುನಿರೀಕ್ಷಿತ ಸಿನಿಮಾಕ್ಕೆ ಶಾಕ್ –  ‘ಪುಷ್ಪಾ-2’ ಶೂಟಿಂಗ್ ಬಂದ್ ?

ಪುಷ್ಪಾ-2. ಟಾಲಿವುಡ್‌ನಲ್ಲಿ ಸಂಚಲನ ಮೂಡಿಸಲು ರೆಡಿಯಾಗಿರುವ ಈ ಸಿನಿಮಾ ತಂಡ ಇದೀಗ ಶಾಕ್‌ನಲ್ಲಿದೆ. ಟಾಲಿವುಡ್ ಖ್ಯಾತ ನಿರ್ದೇಶಕ ಸುಕುಮಾರ್ ನಿವಾಸದ ಮೇಲೆ ಹಾಗೂ ಬೃಹತ್ ಚಿತ್ರ ನಿರ್ಮಾಣ ಸಂಸ್ಥೆಯಾಗಿರುವ ಮೈತ್ರಿ ಮೂವಿ ಮೇಕರ್ಸ್ ಕಚೇರಿಗಳ ಮೇಲೂ ಐಟಿ ಅಧಿಕಾರಿಗಳು ದಾಳಿ ಮುಂದುವರಿಸಿದ್ದು ಪುಷ್ಪಾ-2 ಮೇಲೆ ಇದರ ಪರಿಣಾಮ ಬಿದ್ದಿದೆ.

ಇದನ್ನೂ ಓದಿ:  ಪುಷ್ಪಾ- 2 ಪೋಸ್ಟರ್‌ಗೆ ‘ನಂಬರ್ 1’ ಸ್ಥಾನ – ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಅಲ್ಲು ಅರ್ಜುನ್

ಅಲ್ಲು ಅರ್ಜುನ್ ನಾಯಕನಾಗಿ ನಟಿಸುತ್ತಿರುವ ಪುಷ್ಪ 2 ಸಿನಿಮಾದ ಶೂಟಿಂಗ್ ನಿಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಈ ಸಿನಿಮಾದ ನಿರ್ಮಾಪಕರು ಹಾಗೂ ನಿರ್ದೇಶಕರ ಮನೆ ಹಾಗೂ ಕಚೇರಿಯ ಮೇಲೆ ಇಡಿ ಹಾಗೂ ಐಟಿ ದಾಳಿ ನಡೆದ ಹಿನ್ನೆಲೆಯಲ್ಲಿ ಶೂಟಿಂಗ್ ಸ್ಥಗಿತ ಮಾಡಲಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ. ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡಿತ್ತು. ನವೀನ್ ಯೆರ್ನೇನಿ ಹಾಗೂ ಯಲಮಂಚಿಲಿ ರವಿಶಂಕರ್ ಈ ಸಂಸ್ಥೆಯ ನಿರ್ಮಾಪಕರು. ಮೊನ್ನೆ ಬೆಳಗಿನ ಜಾವ ಇವರ ಮನೆ ಹಾಗೂ ಕಚೇರಿಯಲ್ಲಿ ಇಡಿ  ಅಧಿಕಾರಿಗಳು ದಾಳಿ ಮಾಡಿದ್ದು ವಾಲ್ತೇರು ವೀರಯ್ಯ, ವೀರಸಿಂಹ ರೆಡ್ಡಿ ಅಂತ ಬಹುಕೋಟಿ ವೆಚ್ಚದ ಸಿನಿಮಾಗಳನ್ನು ಈ ಸಂಸ್ಥೆ ನಿರ್ಮಾಣ ಮಾಡಿದ್ದು ವಿದೇಶಗಳಲ್ಲಿ ದೊಡ್ಡಬಜೆಟ್ ನ ಚಿತ್ರಗಳನ್ನು ವಿತರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಹವಾಲಾ ಮಾರ್ಗದಲ್ಲಿ ಹಣದ ಸಂಗ್ರಹಣೆ ಮೂಲಕ ಪ್ರಮೋಟರ್ಸ್ ಮನಿ ಲ್ಯಾಂಡರಿಂಗ್ ಗೆ ಮುಂದಾಗಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ. ಇಷ್ಟೇ ಅಲ್ಲದೇ ಆದಾಯ ತೆರಿಗೆ  ಪಾವತಿಯಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗುತ್ತಿದ್ದು ಇಡಿ ಅಧಿಕಾರಿಗಳ ಜೊತೆ ಐಟಿ ಅಧಿಕಾರಿಗಳು ಕೂಡ ಜೊತೆಯಾಗಿ ಶೋಧ ಕಾರ್ಯ ನಡೆಸಿದ್ದರು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಸಿನಿಮಾ ನಿರ್ಮಾಣ ಸಂಸ್ಥೆಯ ಜೊತೆಗೆ ಪುಷ್ಪ ಚಿತ್ರದ ಸುಕುಮಾರನ್ ಮನೆಯಲ್ಲೂ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದರು.

suddiyaana