ಪುಷ್ಪ 2 ರಿಲೀಸ್ ಡೇಟ್ ಮುಂದಕ್ಕೆ! – ಚಿತ್ರ ತಂಡಕ್ಕೆ ಕೋಟಿ ಕೋಟಿ ಲಾಸ್‌!
ನಿರ್ದೇಶಕರ ಎಡವಟ್ಟೇ ಕಾರಣ ಆಯ್ತಾ?

ಪುಷ್ಪ 2 ರಿಲೀಸ್ ಡೇಟ್ ಮುಂದಕ್ಕೆ! – ಚಿತ್ರ ತಂಡಕ್ಕೆ ಕೋಟಿ ಕೋಟಿ ಲಾಸ್‌!ನಿರ್ದೇಶಕರ ಎಡವಟ್ಟೇ ಕಾರಣ ಆಯ್ತಾ?

ಪುಷ್ಪಾ 2 ದಿ ರೂಲ್ ಸಿನಿಮಾ ಸಖತ್ ಹೈಪ್ ಕ್ರಿಯೇಟ್ ಮಾಡಿದೆ.. ಈ ದೊಡ್ಡ ಬಜೆಟ್ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅಂತಾ ಕಾಯ್ತಾ ಇದ್ದ ಅಭಿಮಾನಿಗಳಿಗೆ ಮತ್ತೆ ನಿರಾಸೆಯಾಗಿದೆ..‌ ಈ ಪ್ಯಾನ್ ಇಂಡಿಯಾ ಸಿನಿಮಾಗಳ ಸಹವಾಸವೂ ಸಾಕು, ಫ್ಯಾನ್ಸ್ ಕಾಯುವುದು ಸಾಕಪ್ಪ ಸಾಕು ಎನ್ನುವಂತಾಗಿಬಿಟ್ಟಿದೆ. ದೊಡ್ಡ ಸಿನಿಮಾಗಳ ರಿಲೀಸ್ ಡೇಟ್ ಪದೇ ಪದೇ ಮುಂದೂಡಲಾಗುತ್ತಿದೆ. ಇದೀಗ ‘ಪುಷ್ಪ’-2 ರಿಲೀಸ್ ಡೇಟ್ ಮತ್ತೆ ಮುಂದಕ್ಕೆ ಹೋಗಿದೆ. ಸಿನಿಮಾ ಮುಂದಕ್ಕೆ ಹಾಕಿದ್ದೇ ಹಾಕಿದ್ದು.‌ ಸಿನಿಮಾ ಟೀಂ ಗೆ ಕೋಟಿ ಕೋಟಿ ಖರ್ಚಾಗಿದೆ.. ಸಿನಿಮಾದ ವೆಚ್ಚ ಹೆಚ್ಚಾಗಲು ಕಾರಣ ಏನು? ರಿಲೀಸ್ ಡೇಟ್ ಯಾಕೆ ಮುಂದಕ್ಕೆ ಹಾಕಲಾಯ್ತು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗನ ದುರಂತ ಅಂತ್ಯ- 4ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣು

ಕಳೆದೊಂದು ವಾರದಿಂದ ಅಲ್ಲು ಅರ್ಜುನ್ ನಟನೆಯ ‘ಪುಷ್ಪ’-2 ಸಿನಿಮಾ ರಿಲೀಸ್ ಪೋಸ್ಟ್‌ಪೋನ್‌ ಬಗ್ಗೆ ಗುಸುಗುಸು ಶುರುವಾಗಿತ್ತು. ಇದೀಗ ಅದು ನಿಜವಾಗಿದೆ. ಆಗಸ್ಟ್ 15ಕ್ಕೆ ಸಿನಿಮಾ ಬಿಡುಗಡೆಯಾಗ ಬೇಕಿದ್ದ ಸಿನಿಮಾವನ್ನ  ಮುಂದೂಡಲಾಗುದೆ..  ಇನ್ನು 4 ತಿಂಗಳು ತಡವಾಗಿ ಮತ್ತೆ ‘ಪುಷ್ಪ’ರಾಜ್ ಬರ್ತಿದ್ದಾನೆ. ಇದು ಸಹಜವಾಗಿಯೇ ಅಲ್ಲು ಅರ್ಜುನ್ ಫ್ಯಾನ್ಸ್ ಬೇಸರಕ್ಕೆ ಕಾರಣವಾಗಿದೆ.  ಪುಷ್ಪ 2 ಸಿನಿಮಾ ರಿಲೀಸ್ ಅನ್ನ ಡಿಸೆಂಬರ್ 6ಕ್ಕೆ ಮುಂದೂಡಿದೆ. ಈಗಾಗಲೇ 2 ಸಾಂಗ್ಸ್, ಟೀಸರ್ ರಿಲೀಸ್ ಮಾಡಿ ಸದ್ದು ಮಾಡಿದ್ದ ಚಿತ್ರತಂಡ ಇದೀಗ ನಿರಾಸೆ ಮೂಡಿಸಿದೆ.

ಪುಷ್ಪ ‘2: ದಿ ರೂಲ್’ ಅನ್ನು ನವೀನ್ ಯೆರ್ನೇನಿ ಮತ್ತು ರವಿಶಂಕರ್ ಅವರು ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ. ಸುಮಾರು ನಾಲ್ಕು ತಿಂಗಳ ಕಾಲ ಈ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದ್ದು, ಇದರ ಪರಿಣಾಮ ನಿರ್ಮಾಪಕರ ಮೇಲೆ ಆರ್ಥಿಕ ಹೊರೆ ಬೀಳಲಿದೆ. ಮುಂದೂಡಿಕೆಯಿಂದಾಗಿ ಈ ಚಿತ್ರಕ್ಕೆ ಹೆಚ್ಚುವರಿಯಾಗಿ ಸುಮಾರು ರೂ.40 ಕೋಟಿ ವೆಚ್ಚವಾಗಲಿದೆ ಎಂದು ಹೇಳಲಾಗುತ್ತಿದೆ. ಪುಷ್ಪ 2 ಚಿತ್ರ ಸುಮಾರು 350 ಕೋಟಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ಸಿನಿಮಾ.

ಪುಷ್ಪ 2 ಚಿತ್ರೀಕರಣಕ್ಕೆ ಇನ್ನೂ 50 ದಿನ ಬಾಕಿ ಇದೆ. ಕೆಲವು ದೃಶ್ಯಗಳನ್ನು ರೀಶೂಟ್ ಮಾಡುತ್ತಿದೆಯಂತೆ ಚಿತ್ರತಂಡ. ಇದರಿಂದಾಗಿ ಈ ಸಿನಿಮಾದ ಬಿಡುಗಡೆಯನ್ನು ಮುಂದೂಡಬೇಕಾಗಿದೆ. ಆದರೆ, ಈಗಾಗಲೇ ಚಿತ್ರಕ್ಕಾಗಿ ಹಾಕಲಾಗಿರುವ ಬೃಹತ್ ಸೆಟ್‌ಗಳನ್ನು ಇನ್ನೂ ಹೆಚ್ಚು ಕಾಲ ಮುಂದುವರಿಸಬೇಕಾಗಿದೆ. ಕೆಲ ನಟರ ಡೇಟ್ಸ್ ಕೂಡ ಈ ಸಿನಿಮಾಕ್ಕೆ ಹೊಂದಾಣಿಕೆ ಆಗಿಲ್ಲ. ಅವರ ಹೊಸ ಡೇಟ್ಸ್‌ ಸಿಕ್ಕ ಬಳಿಕ ಮತ್ತೆ ಶೂಟಿಂಗ್‌ ನಡೆಯಲಿದೆಯಂತೆ. ಇದರಿಂದಾಗಿ ನಿರ್ಮಾಪಕರಿಗೆ ಸುಮಾರು 40 ಕೋಟಿ ಹೆಚ್ಚುವರಿ ಬಜೆಟ್ ಹೊರೆ ಆಗಲಿದೆ ಎಂದು ಅಂದಾಜಿಸಲಾಗಿದೆ. ಒಟ್ಟಿನಲ್ಲಿ ಪರೋಕ್ಷವಾಗಿ ನಿರ್ದೇಶಕರೇ ಈ ಬೆಳವಣಿಗೆಗೆ ಕಾರಣ ಎಂಬ ಮಾತೂ ಕೇಳಿಬಂದಿದೆ.

2021ರಲ್ಲಿ ಬಿಡುಗಡೆಯಾದ ಪುಷ್ಪ ಚಿತ್ರವು ಪ್ಯಾನ್ ಇಂಡಿಯಾ ರೇಂಜ್‌ನಲ್ಲಿ ದೊಡ್ಡ ಬ್ಲಾಕ್‌ಬಸ್ಟರ್‌ ಆಯಿತು. ಅದರಂತೆ ಪುಷ್ಪ 2: ದಿ ರೂಲ್ ಸಿನಿಮಾ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹೆಚ್ಚಿಸಿಕೊಂಡಿದೆ. ಹಾಗಾಗಿಯೇ ನಿರ್ದೇಶಕ ಸುಕುಮಾರ್ ಈ ಸಿನಿಮಾದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಯಾವುದೇ ತಪ್ಪುಗಳಿಲ್ಲದೆ ಹೆಚ್ಚಿನ ಕಾಳಜಿಯಿಂದ ಈ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಮೂಲಗಳ ಪ್ರಕಾರ, ಅಲ್ಲು ಅರ್ಜುನ್ ಮತ್ತು ನಿರ್ಮಾಪಕರು ಆಗಸ್ಟ್ 15ಕ್ಕೆ ಈ ಚಿತ್ರವನ್ನು ಬಿಡುಗಡೆ ಮಾಡಲು ಬಯಸಿದ್ದರು. ಆದರೆ ಇನ್ನೂ 50 ದಿನದ ಶೂಟಿಂಗ್‌ ಬಾಕಿ ಇರುವುದರಿಂದ, ಬಿಡುಗಡೆಯನ್ನು ಡಿಸೆಂಬರ್‌ 6ಕ್ಕೆ ಮುಂದೂಡಲಾಗಿದೆ. ಪ್ರೇಕ್ಷಕರಿಗೆ ಉತ್ತಮವಾದದ್ದನ್ನು ನೀಡುವುದು ತಮ್ಮ ಗುರಿಯಾಗಿದೆ ಎಂದು ತಯಾರಕರು ಬಹಿರಂಗಪಡಿಸಿದ್ದಾರೆ. ಶೂಟಿಂಗ್ ಇನ್ನೂ ಬಾಕಿ ಇರುವ ಕಾರಣ ಪುಷ್ಪ 2 ಅನ್ನು ಮುಂದೂಡಲಾಗುತ್ತಿದೆ.

Shwetha M