ಸಾವಿರ ಕೋಟಿ ದಾಟಿದ ‘ಪುಷ್ಪ 2’ ಕಲೆಕ್ಷನ್ – 12 ಸಾವಿರ ಥಿಯೇಟರ್‌ನಲ್ಲಿ ಹವಾ

ಸಾವಿರ ಕೋಟಿ ದಾಟಿದ ‘ಪುಷ್ಪ 2’ ಕಲೆಕ್ಷನ್ – 12 ಸಾವಿರ ಥಿಯೇಟರ್‌ನಲ್ಲಿ ಹವಾ

ಪುಷ್ಪ -2.. ಸಖತ್ ಹೈಪ್ ಕ್ರಿಯೆಟ್ ಮಾಡಿರೋ ಸಿನಿಮಾ.. ಸಿನಿ ರಸಿಕರು ಕಾತರದಿಂದ ಕಾಯುತ್ತಿದ್ದ ಸಿನಿಮಾ ರಿಲೀಸ್‌ಗೂ ಮೊದಲೇ ದಾಖಲೆ ಬರೆದಿದೆ.  ಟಿಕೆಟ್ ಬೆಲೆ ದುಬಾರಿಯಾಗಿದ್ರು, ಪ್ರೇಕ್ಷಕರು ಸಿನಿಮಾ ಹೇಗಿದೆ ಅನ್ನೋದನ್ನ ನೋಡೋಕೆ ಖರೀದಿ ಮಾಡುತ್ತಿದ್ದಾರೆ. ಹಾಕಿದ ಬಂಡವಾಳವನ್ನ ಈಗಗಾಲೇ ತೆಗೆದಿರೋ ಚಿತ್ರತಂಡ, ಎಷ್ಟು ಕೋಟಿ ಗಳಿಸುತ್ತೆ ಅನ್ನೋ ಲೆಕ್ಕಚಾರ ಕೂಡ ಶುರವಾಗಿದೆ.. ಸಿನಿಮಾ ವಿಮರ್ಶೆ ಕೂಡ ಹೊರ ಬೀಳುತ್ತಿದ್ದು, ಸಿನಿಮಾ ಬಾಕ್ಸ್‌ ಆಫೀಸ್‌ ಪುಡಿ ಪುಡಿ ಮಾಡೋದು ಪಕ್ಕಾ ಅನ್ನೋ ಮಾತು ಕೇಳಿ ಬರ್ತಿದೆ. ಹಾಗಿದ್ರೆ ಪುಷ್ಪ ಸಿನಿಮಾ ಹೇಗಿದೆ? ರಿಲೀಸ್‌ಗೂ ಮುಂಚೆ ಎಷ್ಟು ಕೋಟಿ ಕಲೆಕ್ಷನ್ ಮಾಡಿತ್ತು? ಇದ್ರಲ್ಲಿ ನಟಿದ ಸ್ಟಾರ್ ನಟರಿಗೆ ಎಷ್ಟೆಷ್ಟು ಕೋಟಿ ಸಂಭಾವೆ ನೀಡಲಾಗಿದೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: BBK ಶೋಭಾ ಶೆಟ್ಟಿಗೆ ಏನಾಯ್ತು? – ಆಸ್ಪತ್ರೆಯ ಬೆಡ್‌ನಿಂದಲೇ ಫ್ಯಾನ್ಸ್‌ಗೆ ಸಂದೇಶ

ಸುಕುಮಾರ್‌ ನಿರ್ದೇಶನದಲ್ಲಿ ಮೂಡಿಬಂದಿರುವ ಪುಷ್ಪ -2 ದಿ ರೂಲ್‌ ಸಿನಿಮಾ  ನೋಡೋಕೆ ಲಕ್ಷಾಂತರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ತೆಲುಗು ಜತೆಗೆ ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲಿ ಮೋಡಿ ಮಾಡುತ್ತಿದ್ದು, ಸಿನಿಮಾ ಟಿಕೆಟ್ ಬೆಲೆ ದುಬಾರಿಯಾಗಿದೆ. ಅಡ್ವಾನ್ಸ್ ಬುಕ್ಕಿಂಗ್‌ನಲ್ಲೇ ಕೋಟಿ ಕೋಟಿ ಗಳಿಸಿದೆ ಚಿತ್ರತಂಡ.. ಆದ್ರೆ ಈ ಸಿನಿಮಾದ ಒಂದು ಟಿಕೆಟ್‌  3 ಸಾವಿರ ರೂಪಾಯಿ ತನಕವಿದ್ದು ಅಭಿಮಾನಿಗಳು ಶಾಕ್ ಆಗಿದ್ದಾರೆ. ಕರ್ನಾಟಕದಲ್ಲಿ ಕೂಡ 1000 ರೂ, 2000 ರೂ. ವರೆಗೆ ಟಿಕೆಟ್ ಬೆಲೆ ಹೆಚ್ಚಿಸಿದ್ದಾರೆ. ಇಷ್ಟು ಹಣ ಕೊಟ್ಟು ನೋಡುವಂಥದ್ದು ಏನಿದೆ? ಎಂದು ಕೆಲವರು ತಲೆ ಕೆಡಿಸಿಕೊಂಡಿದ್ದಾರೆ. ಆಂಧ್ರ, ತೆಲಂಗಾಣದಲ್ಲಿ ಕೂಡ ಟಿಕೆಟ್ ದರ  ಹೆಚ್ಚಿಸಲಾಗಿದೆ. ಅಷ್ಟಕ್ಕೂ ಯಾಕೆ ಟಿಕೆಟ್ ದರ ಇಷ್ಟು ಜಾಸ್ತಿ ಅಂದ್ರೆ ಬಜೆಟ್ ಜಾಸ್ತಿ ಎನ್ನುವ ಚರ್ಚೆ ಶುರುವಾಗಿದೆ ‘ಪುಷ್ಪ’-2 ಚಿತ್ರದ ಬಜೆಟ್ ಜಾಸ್ತಿ, ಅದನ್ನು ವಾಪಸ್ ಪಡೆಯಬೇಕು ಅಂದ್ರೆ ಟಿಕೆಟ್ ದರ ಹೆಚ್ಚಿಸಲೇಬೇಕು ಎಂದು ಆಂಧ್ರ, ತೆಲಂಗಾಣ ಸರ್ಕಾರದ ಬಳಿ  ಚಿತ್ರತಂಡ ಅನುಮಪತಿ ಪಡೆದಿದೆ ಅನ್ನೋ ಚರ್ಚೆ ನಡೀತಿದೆ. ಕೆಲ ವರ್ಷಗಳಿಂದ ಆಂಧ್ರ, ತೆಲಂಗಾಣದಲ್ಲಿ ದೊಡ್ಡ ಸಿನಿಮಾಗಳಿಗೆ ಮನಸೋ ಇಚ್ಛೆ ಟಿಕೆಟ್ ದರ ಹೆಚ್ಚಿಸುವ ಅವಕಾಶ ಇಲ್ಲ. ಆದರೆ ಸರ್ಕಾರಕ್ಕೆ ಆಪ್ತರಾಗಿರುವ ನಿರ್ಮಾಪಕರು ಅವಕಾಶ ಪಡೆದುಕೊಳ್ಳುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ‘ಪುಷ್ಪ’-2 ಬಜೆಟ್ 500 ಕೋಟಿ ರೂ. ದಾಟಿದೆ ಎನ್ನಲಾಗ್ತಿದೆ. ಅದಕ್ಕೆ ಕಾರಣ ಕಲಾವಿದರು, ತಂತ್ರಜ್ಞರ ಸಂಭಾವನೆ. ಕ್ರೇಜ್ಗೆ ತಕ್ಕಂತೆ ಕಲಾವಿದರು ಸಂಭಾವನೆ ಕೇಳಿ ಪಡೆದಿದ್ದಾರೆ. ಅದನ್ನು ವಾಪಸ್ ಪಡೆಯಲು ನಿರ್ಮಾಪಕರು ಈಗ ಟಿಕೆಟ್ ದರ ಹೆಚ್ಚಿಸುವ ಸಾಹಸಕ್ಕೆ ಕೈಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಸಿನಿಮಾ 1000 ಕೋಟಿ ರೂ.ಗೂ ಅಧಿಕ ಪ್ರೀ ರಿಲೀಸ್ ಬ್ಯುಸಿನೆಸ್ ಮಾಡಿದೆ.

ಪುಷ್ಪ’ ಚಿತ್ರದಲ್ಲಿ ಪುಷ್ಪರಾಜ್ ಪ್ರೇಯಸಿ ಆಗಿ ರಶ್ಮಿಕಾ ಮಂದಣ್ಣ ಮಿಂಚಿದ್ದರು. ಇಬ್ಬರ ಕೆಮೆಸ್ಟ್ರಿ ವರ್ಕ್ ಆಗಿತ್ತು. ಇದೀಗ ಸೀಕ್ವೆಲ್ನಲ್ಲಿ ಕತೆ ಮುಂದುವರೆಯುತ್ತಿದ್ದು ನಾಯಕನ ಹೆಂಡತಿ ಪಾತ್ರ ಮುಂದುವರೆದಿದೆ.  10 ಕೋಟಿ ರೂ. ವರೆಗೆ ಕೊಡಗಿನ ಕುವರಿ ಸಂಭಾವನೆ ಪಡೆದಿದ್ದಾರೆ ಎನ್ನುವ ಚರ್ಚೆ ನಡೀತಿದೆ.

‘ಪುಷ್ಪ’  ಚಿತ್ರದ ರುವಾರಿ ನಿರ್ದೇಶಕ ಸುಕುಮಾರ್. ವೆಬ್ ಸೀರಿಸ್ ಮಾಡಲು ಬರೆದಿದ್ದ ಕಥೆಯನ್ನು ಸಿನಿಮಾ ರೂಪಕ್ಕೆ ತಂದಿದ್ದರು. ಪಾರ್ಟ್-1 ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಹಾಗಾಗಿ ಸೀಕ್ವೆಲ್ ಮೇಲೆ ನಿರೀಕ್ಷೆ ಹೆಚ್ಚಾಯಿತು. ಇದೀಗ ‘ಪುಷ್ಪ’-2ಗಾಗಿ 40ರಿಂದ 50 ಕೋಟಿ ರೂ. ಸಂಭಾವನೆ ಜೊತೆಗೆ ಲಾಭದಲ್ಲಿ ಪಾಲು ಪಡೆಯಲು ಸುಕುಮಾರ್ ನಿರ್ಧರಿಸಿದ್ದಾರೆ ಎನ್ನುವ ಚರ್ಚೆ ನಡೀತಿದೆ.

ಸ್ಪೆಷಲ್ ಸಾಂಗ್‌ನಲ್ಲಿ ಬೆಂಗಳೂರು ಬೆಡಗಿ ಶ್ರೀಲೀಲಾ ಕುಣಿದಿದ್ದಾರೆ. ‘ಕಿಸ್ಸಿಕ್’ ಎಂದು ಪುಷ್ಪರಾಜ್ ಜೊತೆ ಬಿಂದಾಸ್ ಡ್ಯಾನ್ಸ್ ಮಾಡಿದ್ದಾರೆ. ಅದಕ್ಕಾಗಿ 2 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದ್ದಾರೆ.

‘ಪುಷ್ಪ’-2 ಚಿತ್ರದ ಮತ್ತೊಂದು ಪ್ರಮುಖ ಪಾತ್ರ ಭನ್ವರ್ ಸಿಂಗ್ ಶೇಖಾವತ್. ಪ್ರೀಕ್ವೆಲ್ನಲ್ಲಿ ಕ್ಲೈಮ್ಯಾಕ್ಸ್ ವೇಳೆಗೆ ಆ ಪಾತ್ರ ಪರಿಚಯವಾಗಿತ್ತು. ಸೀಕ್ವೆಲ್ನಲ್ಲಿ ಪುಷ್ಪರಾಜ್ ಆರ್ಭಟಕ್ಕೆ ಅಡ್ಡಗಾಲು ಹಾಕುವ ಈ ಪಾತ್ರದಲ್ಲಿ ಫಹಾದ್  ನಟಿಸಿದ್ದಾರೆ. ಇದಕ್ಕಾಗಿ 8 ಕೋಟಿ ರೂ. ಜೇಬಿಗಿಳಿಸಿದ್ದಾರೆ ಎನ್ನಲಾಗುತ್ತಿದೆ.

ಅಲ್ಲು ಅರ್ಜುನ್ ‘ಪುಷ್ಪ’ ಬ್ರ್ಯಾಂಡ್‌ನ  ಒಡೆಯ. ‘ಪುಷ್ಪ’-2 ಚಿತ್ರಕ್ಕಾಗಿ ಅಲ್ಲು ಅರ್ಜುನ್ 300 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಇದು ನಿಜವೋ ಸುಳ್ಳೋ ಗೊತ್ತಿಲ್ಲ. 150 ಕೋಟಿ ರೂ. ಅಧಿಕ ಸಂಭಾವನೆ ಅಂತೂ ಅಲ್ಲು ಅರ್ಜುನ್ಗೆ ಸಿಕ್ಕಿದೆ. ಇನ್ನು ಶೇರ್ ಲೆಕ್ಕದಲ್ಲಿ ಒಟ್ಟು ಸಂಭಾವನೆ 300 ಕೋಟಿ ರೂ. ತಲುಪಿದರೂ ಅಚ್ಚರಿಯಿಲ್ಲ. ಅಲ್ಲು ಅರ್ಜುನ್‌ಗೆ ‘ಪುಷ್ಪ 2’ ಚಿತ್ರದಷ್ಟು ಹೈಪ್ ಅವರ ನಟನೆಯ ಯಾವ ಚಿತ್ರಕ್ಕೂ ಸಿಕ್ಕಿಲ್ಲ ಅನ್ನೋದು ವಿಶೇಷ.

ಈ ಸಿನಿಮಾ ಸುಮಾರು 12 ಸಾವಿರ ಸ್ಕ್ರೀನ್‌ಗಳಲ್ಲಿ ಮೋಡಿ ಮಾಡಲಿದೆ. ಕೇವಲ  ಅಡ್ವಾನ್ಸ್ ಬುಕಿಂಗ್‌ನಿಂದ   ಬರೋಬ್ಬರಿ 100 ಕೋಟಿ ರೂಪಾಯಿಗೂ ಹೆಚ್ಚು ಹರಿದು ಬಂದಿದೆ. ಹೀಗಾಗಿ, ಮೊದಲ ದಿನದ ಕಲೆಕ್ಷನ್ 250- ಕೋಟಿ ಎಂದು ಲೆಕ್ಕಚಾರ ಹಾಕಲಾಗಿದೆ. ಮೊದಲ ನಾಲ್ಕು ದಿನದಲ್ಲೇ ಸಿನಿಮಾದ ಕಲೆಕ್ಷನ್ ಸಾವಿರ ಕೋಟಿ ರೂಪಾಯಿ ಸಮೀಪಿಸಿದರೂ ಅಚ್ಚರಿ ಏನಿಲ್ಲ. ಸದ್ಯ ಪ್ರೀ ಬುಕಿಂಗ್ನಿಂದ ಭಾರತದಲ್ಲಿ 70 ಕೋಟಿ ರೂಪಾಯಿ ಹರಿದು ಬಂದರೆ, ವಿದೇಶದಲ್ಲಿ 30 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.  2024ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಲಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಪುಷ್ಟ 2 ಸಿನಿಮಾ ಯಾವ ಸಿನಿಮಾದ ಮುಂದೆ ತಗ್ಗದೇ ಈ ಹಿಂದಿನ ಎಲ್ಲಾ ದಾಖಲೆಗಳನ್ನ ಉಡೀಸ್ ಮಾಡೋದು ಪಕ್ಕಾ.

Shwetha M