ಬಿಗಿಯಾಯ್ತು ಪುರಿ ಜಗನ್ನಾಥ ದೇವಾಲಯದ ರೂಲ್ಸ್​! – ವಸ್ತ್ರ ಸಂಹಿತೆ ಜಾರಿ, ಗುಟ್ಕಾ, ಪಾನ್ ನಿಷೇಧ!

ಬಿಗಿಯಾಯ್ತು ಪುರಿ ಜಗನ್ನಾಥ ದೇವಾಲಯದ ರೂಲ್ಸ್​! – ವಸ್ತ್ರ ಸಂಹಿತೆ ಜಾರಿ, ಗುಟ್ಕಾ, ಪಾನ್ ನಿಷೇಧ!

ಒಡಿಶಾದ ಪುರಿ ಜಗನ್ನಾಥ ದೇವಾಲಯದಲ್ಲಿ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿಯಾಗಿದೆ. ದೇವಾಲಯಕ್ಕೆ ಆಗಮಿಸುವ ಭಕ್ತರು ತಮಿಷ್ಟದ ಉಡುಗೆಗಳನ್ನು ಧರಿಸಿ ಬರುವಂತಿಲ್ಲ. ಇದಕ್ಕೆ ಅವಕಾಶ ಇರುವುದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟನೆ ಹೊರಡಿಸಲಾಗಿದೆ.

ಇದನ್ನೂ ಓದಿ: ಪ್ರವಾಸಿಗರಿಗಾಗಿ ನಿರ್ಮಾಣವಾಯ್ತು ಐಷಾರಾಮಿ ಟೆಂಟ್!‌ – ಅಬ್ಬಬ್ಬಾ.. ಒಂದು ದಿನಕ್ಕೆ ಎಷ್ಟು ಹಣ ಗೊತ್ತಾ?

ದೇಗುಲಕ್ಕೆ ಪ್ರವೇಶಿಸಲು ಭಕ್ತರು “ಯೋಗ್ಯವಾದ ಬಟ್ಟೆಗಳನ್ನು” ಧರಿಸಬೇಕಾಗುತ್ತದೆ. ಹಾಫ್ ಪ್ಯಾಂಟ್, ಶಾರ್ಟ್ಸ್, ಟೋರ್ನ್ ಜೀನ್ಸ್, ಸ್ಕರ್ಟ್, ಸ್ಲೀವ್ ಲೆಸ್ ಡ್ರೆಸ್ ಧರಿಸಿದ ಭಕ್ತರಿಗೆ ದೇವಸ್ಥಾನದೊಳಗೆ ಪ್ರವೇಶವಿಲ್ಲ. ಅಷ್ಟೇ ಅಲ್ಲದೇ ದೇವಾಲಯದ ಸುತ್ತಮುತ್ತಲ ಪ್ರದೇಶಗಳಲ್ಲಿ ಗುಟ್ಕಾ, ಪಾನ್ ಸೇವಿಸುವುದನ್ನ ಹಾಗೂ ಪ್ಲಾಸ್ಟಿಕ್, ಪಾಲಿಥಿನ್ ಬಳಸುವುದನ್ನು ನಿಷೇಧಿಸಲಾಗಿದೆ ಎಂದು ಆಡಳಿತ ಮಂಡಳಿ ಹೇಳಿದೆ.

ಶ್ರೀ ಜಗನ್ನಾಥ ದೇವಸ್ಥಾನದ ಆಡಳಿತ ಮಂಡಳಿ ಪೊಲೀಸರ ನೆರವಿನೊಂದಿಗೆ ನಿರ್ಬಂಧಗಳನ್ನು ಜಾರಿಗೊಳಿಸಿದೆ. ದೇವಾಲಯದ ಆವರಣದಲ್ಲಿ ಗುಟ್ಕಾ ಮತ್ತು ಪಾನ್ ನಿಷೇಧವನ್ನು ಅದರ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಲು ಜಾರಿಗೊಳಿಸಲಾಗುತ್ತಿದೆ. ನಿರ್ಬಂಧವನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.

Shwetha M