ಗಗನಯಾತ್ರಿಗಳ ಮೂತ್ರ ಹಾಗೂ ಬೆವರಿಂದ ಶುದ್ಧ ನೀರು – ಬಾಹ್ಯಾಕಾಶದಲ್ಲಿ ಹೊಸ ಸಂಶೋಧನೆ..!
ಬಾಹ್ಯಾಕಾಶದಲ್ಲಿ ನೀರಿನ ಕೊರತೆ ಪ್ರಮಾಣ ತಗ್ಗಿಸಲು ನಾಸಾ ಗಗನಯಾತ್ರಿಗಳು ಹೊಸ ವಿಧಾನವನ್ನು ಕಂಡು ಹಿಡಿದಿದ್ದಾರೆ. ಗಗನಯಾತ್ರಿಗಳ ಮೂತ್ರ ಹಾಗೂ ಬೆವರನ್ನು ನೀರಾಗಿ ಪರಿವರ್ತಿಸುವ ವಿಧಾನವನ್ನು ಗಗನನಯಾತ್ರಿಗಳು ಕಂಡು ಹಿಡಿದಿದ್ದಾರೆ. ಈ ವಿಧಾನವು ಬಾಹ್ಯಾಕಾಶದಲ್ಲಿ ನೀರಿನ ಕೊರತೆ ಪ್ರಮಾಣ ತಗ್ಗಿಸಲಿದೆ ಎಂದು ನಾಸಾ ಹೇಳಿದೆ.
ಇದನ್ನೂ ಓದಿ:ಉತ್ತರಾಖಂಡದಲ್ಲಿ ಭಾರಿ ಮಳೆ – ಪವಿತ್ರ ಕೇದಾರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ!
ಬಾಹ್ಯಾಕಾಶ ಸಂಸ್ಥೆಯು ತಿಳಿಸಿರುವಂತೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೆ ಕುಡಿಯಲು, ಆಹಾರ ತಯಾರಿಕೆ ಹಾಗೂ ನೈರ್ಮಲ್ಯದ ಬಳಕೆಗಾಗಿ ಪ್ರತಿದಿನ 1 ಗ್ಯಾಲನ್‌ನಷ್ಟು (ಸುಮಾರು 3 ಲಕ್ಷ ಲೀಟರ್‌ಗೂ ಅಧಿಕ) ನೀರು ಬೇಕಾಗುತ್ತದೆ. ಸದ್ಯ ಗಗನ ಯಾತ್ರಿಗಳು ಕಂಡುಹಿಡಿದಿರುವ ನೀರಿನ ಮರುಸ್ಥಾಪನೆಯ ವಿಧಾನದಿಂದ ಶೇ.98 ರಷ್ಟು ಚೇತರಿಕೆ ಸಾಧ್ಯವಾಗಲಿದೆ ಎಂದು ಹೇಳಲಾಗಿದೆ. ಇದರೊಂದಿಗೆ ಬಾಹ್ಯಾಕಾಶದಲ್ಲಿ ಪರಿಸರ ನಿಯಂತ್ರಣ ಮತ್ತು ಜೀವನಕ್ಕೆ ಸಹಕಾರಿಯಾಗುವ ವ್ಯವಸ್ಥೆಗಳನ್ನು ಬಳಸಿಕೊಂಡು ಆಹಾರ, ಗಾಳಿ ಮತ್ತು ನೀರಿನಂತಹ ಉಪಯುಕ್ತ ವಸ್ತುಗಳನ್ನ ಪುನರುತ್ಪಾದಿಸುವ ಗುರಿಯನ್ನು ಹೊಂದಲಾಗಿದೆ. ಇಸಿಎಲ್ಎಸ್ಎಸ್ ವಿಧಾನವು ಒಂದು ಯಂತ್ರಾಂಶದ ಸಂಯೋಜನೆಯಾಗಿದೆ. ಇದು ತ್ಯಾಜ್ಯದ ನೀರನ್ನು ಸಂಗ್ರಹಿಸಿಕೊಂಡು ವಾಟರ್ ಪ್ರೊಫೆಸಟರ್ ಅಸೆಂಬ್ಲಿಗೆ (WPA) ಕಳುಹಿಸುವ ಮೂಲಕ ನೀರು ಕುಡಿಯಲು ಯೋಗ್ಯವಾಗುವ ರೀತಿಯಲ್ಲಿ ಉತ್ಪಾದಿಸುತ್ತದೆ. ಜೊತೆಗೆ ಇಲ್ಲಿ ಸಿಬ್ಬಂದಿಯ ಉಸಿರು ಮತ್ತು ಬೆವರಿನಿಂದ ಬಿಡುಗಡೆಯಾಗುವ ತೇವಾಂಶವನ್ನ ಸೆರೆ ಹಿಡಿಯಲು ಕ್ಯಾಬಿನ್ ಏರ್ ವಿಶೇಷ ಘಟಕವನ್ನೂ ಸ್ಥಾಪಿಸಲಾಗಿದೆ.