ಅಮೃತಸರ ದೇವಾಲಯದ ಮೇಲೆ ನಡೆದ ಗ್ರೆನೇಡ್ ದಾಳಿ- ಆರೋಪಿ ಎನ್‌ಕೌಂಟರ್‌ಗೆ ಬಲಿ

ಅಮೃತಸರ ದೇವಾಲಯದ ಮೇಲೆ ನಡೆದ ಗ್ರೆನೇಡ್ ದಾಳಿಯ ಪ್ರಮುಖ ಆರೋಪಿ ಎನ್ಕೌಂಟರ್ನಲ್ಲಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೃತನನ್ನು ಅಮೃತಸರದ ಬಾಲ್ ಗ್ರಾಮದ ನಿವಾಸಿ ಜಗ್ಜಿತ್ ಸಿಂಗ್ ಅವರ ಪುತ್ರ ಗುರ್ಸಿದಕ್ ಎಂದು ಗುರುತಿಸಲಾಗಿದೆ. ಶುಕ್ರವಾರ ಮಧ್ಯರಾತ್ರಿ ಅಮೃತಸರದಲ್ಲಿ ಬೈಕ್ನಲ್ಲಿ ಬಂದ ಅಪರಿಚಿತ ದಾಳಿಕೋರನೊಬ್ಬ ಸ್ಫೋಟಕ ಸಾಧನವನ್ನು ಕಟ್ಟಡದ ಕೆಳಗೆ ಎಸೆದ ಬಳಿಕ ಸ್ಫೋಟ ಸಂಭವಿಸಿತ್ತು.
ಗೋಡೆಯ ಒಂದು ಭಾಗಕ್ಕೆ ಹಾನಿಯಾಗಿತ್ತು, ಕಿಟಕಿ ಗಾಜುಗಳು ಒಡೆದಿದ್ದವು. ಸಿಸಿಟಿವಿಯಲ್ಲಿ ಘಟನೆ ಸೆರೆಯಾಗಿದ್ದು, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲವಾದರೂ ಸ್ಫೋಟವು ಅಮೃತಸರದ ಖಂಡ್ವಾಲಾ ಪ್ರದೇಶದ ನಿವಾಸಿಗಳಲ್ಲಿ ಭಯಭೀತತೆಯನ್ನುಂಟುಮಾಡಿತು.
ಮೂಲಗಳ ಪ್ರಕಾರ, ಸೋಮವಾರ ಬೆಳಗ್ಗೆ ಅಮೃತಸರ ಗ್ರೆನೇಡ್ ದಾಳಿಯಲ್ಲಿ ಭಾಗಿಯಾಗಿರುವ ಶಂಕಿತರು ರಾಜಸಾನ್ಸಿ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಪೊಲೀಸರಿಗೆ ನಿರ್ದಿಷ್ಟ ಮಾಹಿತಿ ಸಿಕ್ಕಿತ್ತು. ಇದಾದ ನಂತರ, ಆರೋಪಿಗಳನ್ನು ಬಂಧಿಸಲು ಸಿಐಎ ಮತ್ತು ಎಸ್‌ಎಚ್‌ಒ ಛೆಹರ್ತಾದಿಂದ ಸಮರ್ಪಿತ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.
ಪೊಲೀಸರು ಶಂಕಿತರು ಹೋಗುತ್ತಿದ್ದ ಬೈಕ್ಅನ್ನು ತಡೆಯಲು ಪ್ರಯತ್ನಿಸಿದಾಗ, ಆರೋಪಿಗಳು ತಮ್ಮ ವಾಹನವನ್ನು ಬಿಟ್ಟು ಸಮೀಪಿಸುತ್ತಿದ್ದ ತಂಡದ ಮೇಲೆ ಗುಂಡು ಹಾರಿಸಿದರು. ಘರ್ಷಣೆಯ ಸಮಯದಲ್ಲಿ, ಹೆಡ್ ಕಾನ್‌ಸ್ಟೆಬಲ್ ಗುರುಪ್ರೀತ್ ಸಿಂಗ್ ಅವರ ಎಡಗೈಗೆ ಗುಂಡು ತಗುಲಿತು, ಮತ್ತೊಂದು ಗುಂಡು ಇನ್ಸ್‌ಪೆಕ್ಟರ್ ಅಮೋಲಕ್ ಸಿಂಗ್ ಅವರ ಪೇಟಕ್ಕೆ ತಗುಲಿತು. ಮೂರನೇ ಸುತ್ತಿನ ಗುಂಡು ಪೊಲೀಸ್ ವಾಹನಕ್ಕೆ ತಗುಲಿ, ಪರಿಸ್ಥಿತಿಯ ತೀವ್ರತೆಯನ್ನು ಹೆಚ್ಚಿತ್ತು.
ಆತ್ಮರಕ್ಷಣೆಯ ಸಲುವಾಗಿ, ಇನ್ಸ್‌ಪೆಕ್ಟರ್ ವಿನೋದ್ ಕುಮಾರ್ ಗುಂಡು ಹಾರಿಸಿ ಪ್ರಮುಖ ಆರೋಪಿಯನ್ನು ಗಾಯಗೊಳಿಸಿದರು. ಬಳಿಕ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ. ಇತರರು ಸ್ಥಳದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಗಾಯಗೊಂಡ ಕಾನ್‌ಸ್ಟೆಬಲ್‌ಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ತಕ್ಷಣವೇ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಯಿತು.