ಗುಜರಾತ್​ ವಿರುದ್ಧ ಮೂರು ವಿಕೆಟ್​ಗಳ ಜಯ ಪಡೆದ ಪಂಜಾಬ್​ ಕಿಂಗ್ಸ್‌

ಗುಜರಾತ್​ ವಿರುದ್ಧ ಮೂರು ವಿಕೆಟ್​ಗಳ ಜಯ ಪಡೆದ ಪಂಜಾಬ್​ ಕಿಂಗ್ಸ್‌

ಗುಜರಾತ್ ಟೈಟನ್ಸ್ Vs ಪಂಜಾಬ್ ಕಿಂಗ್ಸ್ ನಡುವೆ ನಡೆದ ಪಂದ್ಯದಲ್ಲಿ ಪಂಜಾಬ್‌ ಭರ್ಜರಿ ಗೆಲುವು ಸಾಧಿಸಿದೆ. ಗುಜರಾತ್​ ನೀಡಿದ 199 ರನ್​ಗಳ ಟಾರ್ಗೆಟ್​ ಅನ್ನು ಪಂಜಾಬ್​ ತಂಡ ಉಡೀಸ್​ ಮಾಡಿದೆ. ಪಂಜಾಬ್ ಕಿಂಗ್ಸ್ 3 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.

ಇದನ್ನೂ ಓದಿ : ಚುನಾವಣಾ ಪ್ರಚಾರದತ್ತ ಮುಖ ಮಾಡಿದ ಕೂಲಿ ಕಾರ್ಮಿಕರು ! – ಕ್ಯಾಂಪೇನ್ ಗೆ​ ಭಾಗಿಯಾದ್ರೆ ಎಷ್ಟು ದುಡ್ಡು ಸಿಗುತ್ತೆ?

ಅಹಮದಾಬಾದ್‌ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಗುಜರಾತ್ ಟೈಟನ್ಸ್ ನಾಯಕ ಶುಭ್ ಮನ್ ಗಿಲ್ (89 ರನ್) ಅಮೋಘ ಅರ್ಧಶತಕ ಮತ್ತು ಸಾಯಿ ಸುದರ್ಶನ್ (33 ರನ್) ಸಮಯೋಚಿತ ಬ್ಯಾಟಿಂಗ್ ನ ನೆರವಿನಿಂದ ನಿಗಧಿತ 20 ಓವರ್ ನಲ್ಲಿ 4 ವಿಕೆಟ್ ಕಳೆದುಕೊಂಡು 199ರನ್ ಕಲೆಹಾಕಿತು. ಆ ಮೂಲಕ ಪಂಜಾಬ್ ಗೆ ಗೆಲ್ಲಲು 200 ರನ್ ಗಳ ಬೃಹತ್ ಗುರಿ ನೀಡಿತು.

ಈ ಮೊತ್ತವನ್ನು ಬೆನ್ನು ಹತ್ತಿದ ಪಂಜಾಬ್ ಕಿಂಗ್ಸ್ ತಂಡ ಆರಂಭಿಕ ಆಘಾತ ಎದುರಿಸಿತು. ನಾಯಕ ಶಿಖರ್ ಧವನ್ ಕೇವಲ 1 ರನ್ ಗಳಿಸಿ ಔಟಾದರೆ, ಮತ್ತೋರ್ವ ಆರಂಭಿಕ ಆಟಗಾರ ಜಾನಿ ಬೇರ್ ಸ್ಟೋ 22 ರನ್ ಗೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಕ್ರೀಸ್ ಗಿಳಿದ ಪ್ರಭಾಸಿಮ್ರಾನ್ ಸಿಂಗ್ 35 ರನ್ ಗಳಿಸಿ ಪಂಜಾಬ್ ತಂಡಕ್ಕೆ ಆಸರೆಯಾದರು.

ಆದರೆ ಈ ಹಂತದಲ್ಲಿ ಸ್ಯಾಮ್ ಕರ್ರನ್ 5 ರನ್ ವಿಕೆಟ್ ಕಳೆದುಕೊಂಡರೆ, ಸಿಖಂದರ್ ರಾಜಾ 15 ರನ್ ಗೆ ವಿಕೆಟ್ ಒಪ್ಪಿಸಿದರು. ಜಿತೇಶ್ ಶರ್ಮಾ 16 ರನ್ ಔಟಾಗಿ ತಂಡ ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಜೊತೆಗೂಡಿದ ಶಶಾಂಕ್ ಸಿಂಗ್ (61 ರನ್) ಮತ್ತು ಆಷುತೋಶ್ ಶರ್ಮಾ (31 ರನ್) ತಂಡಕ್ಕೆ ಆಸರೆಯಾಗಿ ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂದು ನಿಲ್ಲಿಸಿದರು.

ಅಂತಿಮ ಹಂತದಲ್ಲಿ ತಂಡಕ್ಕೆ ಗೆಲ್ಲಲು 7 ರನ್ ಗಳ ಅವಶ್ಯಕತೆ ಇದ್ದಾಗ ಆಷುತೋಶ್ ಶರ್ಮಾ ದರ್ಶನ್ ನಲ್ಕಂಡೆಗೆ ವಿಕೆಟ್ ಒಪ್ಪಿಸಿದರು. ಬಳಿಕ ಹರಪ್ರೀತ್ ಬ್ರಾರ್ ಮತ್ತು ಶಶಾಂಕ್ ಸಿಂಗ್ ಗೆಲುವಿನ ಔಪಚಾರಿಕತೆ ಮುಕ್ತಾಯಗೊಳಿಸಿದರು.

Shwetha M