ಹೈದರಾಬಾದ್ ವಿರುದ್ಧ ಗೆದ್ದ ಪಂಜಾಬ್ ಕಿಂಗ್ಸ್- ಹೈದರಾಬಾದ್ ತಂಡಕ್ಕೆ ಮೂರನೇ ಸೋಲು

ಹೈದರಾಬಾದ್ ವಿರುದ್ಧ ಗೆದ್ದ ಪಂಜಾಬ್ ಕಿಂಗ್ಸ್- ಹೈದರಾಬಾದ್ ತಂಡಕ್ಕೆ ಮೂರನೇ ಸೋಲು

ಐಪಿಎಲ್ 2026 ರ 17 ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಗೆಲುವು ದಾಖಲಿಸಿದೆ.  ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಪಂಜಾಬ್ ಗೆದ್ದು ಬೀಗಿದೆ. ಆದರೆ, ಹೈದರಾಬಾದ್ ತಂಡಕ್ಕೆ ಇದು ಮೂರನೇ ಸೋಲು.

ಇದನ್ನೂ ಓದಿ:ಪಂಜಾಬ್ ವಿರುದ್ಧ ಅಭಿಷೇಕ್ ಶರ್ಮಾ ಅಬ್ಬರ – 220 ರನ್ ಟಾರ್ಗೆಟ್ ನೀಡಿದ SRH

ಶನಿವಾರ ಮಧ್ಯಾಹ್ನ (ಏಪ್ರಿಲ್ 11) ರಂದು ಪಂಜಾಬ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಟಾಸ್ ವಿನ್ ಆಗಿತ್ತು. ಪಂಜಾಬ್ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಜೋಡಿ ಆರಂಭ ಚೆನ್ನಾಗಿಯೇ ಇತ್ತು. ಈ ಜೋಡಿ ಮೊದಲ ವಿಕೆಟ್‌ಗೆ 120 ರನ್‌ಗಳ ಜೊತೆಯಾಟ ನೀಡಿತು. ಅಭಿಷೇಕ್ ಶರ್ಮಾ 28 ಎಸೆತಗಳಲ್ಲಿ 74 ರನ್ ಗಳಿಸಿದರೆ, ಟ್ರಾವಿಸ್ ಹೆಡ್ 23 ಎಸೆತಗಳಲ್ಲಿ 38 ರನ್ ಗಳಿಸಿದರು. ನಾಯಕ ಇಶಾನ್ ಕಿಶನ್ 17 ಎಸೆತಗಳಲ್ಲಿ 27 ರನ್ ಗಳಿಸಿದರೆ, ಹೆನ್ರಿಕ್ ಕ್ಲಾಸೆನ್ 33 ಎಸೆತಗಳನ್ನು ಎದುರಿಸಿ 39 ರನ್ ಗಳಿಸಿದರು. ಅನಿಕೇತ್ ವರ್ಮಾ 18 ರನ್ ಗಳಿಸಿದರೆ, ಸಲೀಲ್ ಅರೋರಾ 9 ರನ್ ಗಳಿಸಿದರು. ನಿತೀಶ್ ಕುಮಾರ್ ರೆಡ್ಡಿ ಔಟಾಗದೆ 0 ರನ್ ಮತ್ತು ಹರೀಶ್ ದುಬೆ ಔಟಾಗದೆ 1 ರನ್ ಗಳಿಸಿದರು. ಮೊದಲ ಆರು ಓವರ್‌ಗಳಲ್ಲಿ 105 ರನ್ ಗಳಿಸಿದ ಹೈದರಾಬಾದ್ ತಂಡವು 20 ಓವರ್‌ಗಳಲ್ಲಿ 219 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು.

220 ರನ್‌ಗಳ ಗುರಿ ಪಡೆದ ಪಂಜಾಬ್ ಪಡೆ, ಪ್ರಭ್ಸಿಮ್ರಾನ್ ಸಿಂಗ್ ಮತ್ತು ಶ್ರೇಯಸ್ ಅಯ್ಯರ್ ಅವರ ಅರ್ಧಶತಕಗಳ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿತು. ಪಂಜಾಬ್ ತಂಡ 18.5 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳಿಗೆ 223 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು. ಪಂಜಾಬ್ ಗೆ ಇದು ಸತತ ಮೂರನೇ ಗೆಲುವು. ಆದರೆ, ಸನ್​ರೈಸರ್ಸ್​ ತಂಡ ಲೀಗ್​ನಲ್ಲಿ ಮೂರನೇ ಸೋಲನ್ನು ಎದುರಿಸಿತು. ಪಂಜಾಬ್ ತಂಡ ಈಗ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.

Sulekha