ಹಾರ್ದಿಕ್ ನಗುವ ನಾಟಕ? – ಒಳಗೆ ನಡೀತಿರೋದೇನು ಗೊತ್ತಾ?-HITಮ್ಯಾನ್ ಗೆ ಬಿಗ್ ಡೇ!

ಹಾರ್ದಿಕ್ ನಗುವ ನಾಟಕ? – ಒಳಗೆ ನಡೀತಿರೋದೇನು ಗೊತ್ತಾ?-HITಮ್ಯಾನ್ ಗೆ ಬಿಗ್ ಡೇ!

ಹಾರ್ದಿಕ್‌ ಪಾಂಡ್ಯಾ ಇತ್ತೀಚೆಗೆ ತುಂಬಾನೇ ನಗುತ್ತಿರುತ್ತಾರೆ.. ಟಾಸ್‌ಗೆ ಬಂದಾಗಲೂ ಹಾರ್ದಿಕ್‌ ನಗ್ತಾರೆ.. ಮ್ಯಾಚ್‌ ಸೋತಾಗಲೂ ಹಾರ್ದಿಕ್‌ ನಗ್ತಾರೆ.. ಕ್ಯಾಚ್‌ ಬಿಟ್ಟಾಗಲೂ ಹಾರ್ದಿಕ್‌ ನಗ್ತಾರೆ.. ಬೌಲರ್‌ ಹೊಡೆಸಿಕೊಂಡಾಗಲೂ ಹಾರ್ದಿಕ್‌ ನಗ್ತಾರೆ.. ಇದೇ ಹಾರ್ದಿಕ್‌ ಹಿಂದೆ ಹೇಗಿದ್ರು? ಈಗ ಮುಂಬೈ ಇಂಡಿಯನ್ಸ್‌ ನಾಯಕ ಆದ್ಮೇಲೆ ಯಾಕೆ ಇಷ್ಟೊಂದು ನಗ್ತಾರೆ ಅನ್ನೋದ್ರ ಬಗ್ಗೆ ವಿವರಣೆ ಇಲ್ಲಿದೆ.

 ಇದನ್ನೂ ಓದಿ: ಬಾಹುಬಲಿ ಬಟ್ಲರ್.. ಸೋತ ಕೆಕೆಆರ್! – ಐಪಿಎಲ್ ಗೆಲ್ಲೋದು ಇವ್ರೇನಾ?

ಹಾರ್ದಿಕ್‌ ಪಾಂಡ್ಯಾ ಕ್ಯಾಪ್ಟನ್‌ ಆಗಿದ್ದು ಇದೇ ಮೊದಲೇನಲ್ಲ.. ಮುಂಬೈ ಇಂಡಿಯನ್ಸ್‌ಗೆ ಮಾತ್ರ ಅವರು ಕ್ಯಾಪ್ಟನ್‌ ಆಗಿದ್ದೂ ಅಲ್ಲ.. ಹಾರ್ದಿಕ್‌ ಪಾಂಡ್ಯಾ ಭಾರತ ಕಂಡಿರುವ ಇತ್ತೀಚಿನ ವರ್ಷಗಳ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರು.. ಒಳ್ಳೆಯ ಫೀಲ್ಡರ್‌.. ಒಳ್ಳೆಯ ಬೌಲರ್‌.. ಹಾರ್ಡ್‌ ಹಿಟ್ಟಿಂಗ್‌ ಬ್ಯಾಟ್ಸ್‌ಮನ್‌.. ಒಂದು ತಂಡ ಬ್ಯಾಲೆನ್ಸ್‌ ಆಗಿರೋದಿಕ್ಕೆ ಎಂತಹ ಕ್ವಾಲಿಟಿ ಆಟಗಾರ ಬೇಕೋ.. ಆ ೆಲ್ಲಾ ಕ್ವಾಲಿಟಿಗಳು ಇರುವ ಆಟಗಾರ ಅಂದ್ರೆ ಅದು ಹಾರ್ದಿಕ್‌ ಪಾಂಡ್ಯಾ.. ಇದೇ ಕಾರಣಕ್ಕಾಗಿ ಈ ಹಾರ್ದಿಕ್‌ ಪಾಂಡ್ಯಾಗೆ ಟೀಂ ಇಂಡಿಯಾದ ಟಿ20 ಕ್ಯಾಪ್ಟೆನ್ಸಿಯೂ ಸಿಕ್ಕಿದೆ.. ಗುಜರಾತ್‌ ಟೈಟನ್ಸ್‌ ತಂಡ ಹೊಸದಾಗಿ ರಚನೆಯಾದಾಗ ಇದೇ ಪಾಂಡ್ಯಾರನ್ನು ಜಿಟಿ ಕ್ಯಾಪ್ಟನ್‌ ಆಗಿ ಖರೀದಿಸಿತ್ತು.. ಅಷ್ಟೇ ಅಲ್ಲ.. ಕ್ಯಾಪ್ಟನ್‌ ಆದ ಮೊದಲ ಸೀಸನ್‌ನಲ್ಲೇ ಟೈಟಲ್‌ ಗೆಲ್ಲೋದ್ರಲ್ಲಿ ಹಾರ್ದಿಕ್‌ ಪಾಂಡ್ಯಾ  ಯಶಸ್ವಿಯಾದ್ರು.. ಆದ್ರೆ ಯಾವಾಗ ಮುಂಬೈ ಇಂಡಿಯನ್ಸ್‌ ಗೆ ಹಾರ್ದಿಕ್‌ ಶಿಫ್ಟ್‌ ಆದ್ರೋ ಪಾಂಡ್ಯಾನ ಮನಸ್ಥಿತಿಯೇ ಬದಲಾದಂತಿದೆ.. ಹಿಂದೆಲ್ಲಾ ಕ್ಯಾಪ್ಟನ್‌ ಆಗಿದ್ದಾಗ ಹಾರ್ದಿಕ್‌ ಒಂದಿಷ್ಟು ಸ್ಟಂಟ್‌ ಇರೋರ ತರ ಕಾಣ್ತಿದ್ದರೇ ಹೊರತು ಎಲ್ಲೂ ಪೆದ್ದು ಪೆದ್ದಾಗಿ ನಗ್ತಾ ಇದ್ದಿದ್ದು ಕಾಣ್ತಿರಲಿಲ್ಲ.. ಕ್ಯಾಫ್ಟನ್‌ ಎಂಬ ಸಣ್ಣ ಜಂಭ ಹಾರ್ದಿಕ್‌ ಮುಖದಲ್ಲಿ ಸದಾ ಇರುತ್ತಿತ್ತು.. ಮ್ಯಾಚ್‌ ಗೆಲ್ಲಲು ಎಲ್ಲಾ ರೀತಿಯ ಎಫರ್ಟ್‌ ಕೂಡ ಹಾಕ್ತಿದ್ದರು ಪಾಂಡ್ಯಾ..  ಒಂದಿಷ್ಟು ಸ್ವಾರ್ಥಿ ಪ್ಲೇಯರ್‌ ಎಂಬ ಆಪಾದನೆ ಪಾಂಡ್ಯಾಗೆ ಹಿಂದಿನಿಂದಲೂ ಇತ್ತು.. ವರ್ಲ್ಡ್‌ಕಪ್‌ನಲ್ಲಿ ಕೆ.ಎಲ್‌.ರಾಹುಲ್‌ಗೆ ಸೆಂಚುರಿ ಹೊಡೆಯಲು ಅವಕಾಶವಿದ್ದರೂ ಅದನ್ನು ಹಾರ್ದಿಕ್‌ ತಲೆಯೇ ಇಲ್ಲದವರಂತೆ ಆಡಿ ಸೆಂಚುರಿ ತಪ್ಪಿಸಿದ್ದರು.. ಇಂತಹ ಆಟ ಹಾರ್ದಿಕ್‌ ಕಡೆಯಿಂದ ಸರ್ವೇ ಸಾಮಾನ್ಯ ಎನ್ನಬಹುದು.. ಹಾಗಿದ್ದರೂ as a player ಹಾರ್ದಿಕ್‌ ಮೈದಾನದಲ್ಲಿ ಹೆಚ್ಚು ಸೀರಿಯಸ್‌ ಆಟಗಾರನಾಗಿಯೇ ಕಾಣಿಸಿಕೊಳ್ತಿದ್ದರು.. ಆದ್ರೆ ಮುಂಬೈ ಕ್ಯಾಪ್ಟನ್‌ ಆದ್ಮೇಲೆ ಇದ್ದಕ್ಕಿದ್ದಂತೆ ನಗೋದಿಕ್ಕೆ ಶುರುಮಾಡಿದ್ದಾರೆ ಪಾಂಡ್ಯಾ.. ಆದ್ರೆ ಪಾಂಡ್ಯಾ ನಗು ಸಹಜ ರೀತಿಯಲ್ಲಿ ಕಾಣ್ತಿಲ್ಲ.. ಪೆದ್ದು ಪೆದ್ದಾಗಿ ನಗ್ತಾರೆ.. ಟಾಸ್‌ಗೆ ಬಂದಾಗಂತೂ ಮುಖದ ತುಂಬಾ ನಗು ಕುಣೀತಾ ಇರ್ತದೆ.. ಮ್ಯಾಚ್‌ ಸೋತಾಗ್ಲೂ ಮುಖದಲ್ಲಿ ಅದೇ ನಗು ಕಾಣಿಸಿಕೊಳ್ತಿರುತ್ತದೆ.. ಇಷ್ಟಕ್ಕೂಈ ಮನುಷ್ಯ ಇಷ್ಟೆಲ್ಲಾ ನಗೋದು ಯಾಕೆ ಎಂಬ ಪ್ರಶ್ನೆ ಯಾರಿಗೆ ಆದ್ರೂ ಮೂಡೋದು ಸಹಜ.. ಆದ್ರೆ ಕ್ರಿಕೆಟ್‌ ಕಾಮೆಂಟೇಟರ್‌ ಕೆವಿನ್‌ ಪೀಟರ್ಸನ್‌ ಮಾತ್ರ ಹಾರ್ದಿಕ್‌ ಪಾಂಡ್ಯಾ ನಗುವಿನ ರಹಸ್ಯವನ್ನು ತನ್ನದೇ ಶೈಲಿಯಲ್ಲಿ ಭೇದಿಸಿದ್ದಾರೆ..

ಹಾರ್ದಿಕ್‌ ನಗುತ್ತಿರುವುದನ್ನು ನೋಡಿದರೆ ಅದು ಸಹಜ ಅನ್ನಿಸುತ್ತಿಲ್ಲ.. ಅವರು ನಗುವವರಂತೆ ನಟನೆ ಮಾಡ್ತಿದ್ದಾರೆ.. ಆದರೆ ಒಳಗೆ ಅವರು ಅಷ್ಟೊಂದು ಖುಷಿಯಾಗಿಲ್ಲ ಎನ್ನುವುದನ್ನೂ ಅವರ ನಗುವೇ ಹೇಳ್ತಿದೆ ಎಂದು ಕೆವಿನ್‌ ಹೇಳಿದ್ದಾರೆ. ಜೊತೆಗೆ, ಈಗ ಹಾರ್ದಿಕ್‌ ಫೈರಿಂಗ್‌ ಲೈನ್‌ನಲ್ಲಿದ್ದಾರೆ.. ನಾನು ಕೂಡ ಫೈರಿಂಗ್‌ ಲೈನ್‌ನ ಸ್ಥಿತಿಯನ್ನು ಅನುಭವಿಸಿದ್ದಾನೆ.. ಎದೆಯೊಳಗೆ ಬಚ್ಚಿಟ್ಟುಕೊಳ್ಳುವ ನೋವು ಎಂತದ್ದು ಎನ್ನುವುದು ನನಗೂ ಚೆನ್ನಾಗಿ ಗೊತ್ತಿದೆ ಎಂದು ಕೆವಿನ್‌ ಪೀಟರ್ಸನ್‌ ಹೇಳಿದ್ದಾರೆ.. ಈ ಮೂಲಕ ಪಾಂಡ್ಯಾರನ್ನು ಮ್ಯಾಚ್‌ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್‌ ಪ್ಯಾನ್ಸ್‌ ಇಷ್ಟೊಂದು ಕಿಚಾಯಿಸೋದು ಒಳ್ಳೆಯದಲ್ಲ ಎಂದು ಕೆವಿನ್‌ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.. ಈಗ ಪಾಂಡ್ಯಾ ಮೇಲೆ ಬಿದ್ದಿರುವ ಒತ್ತಡದಿಂದಾಗಿ ಅವರ ಆಟದ ಮೇಲೂ ಪರಿಣಾಮ ಬೀರಿದೆ.. ಇದು ಭಾರತದ ಕ್ರಿಕೆಟ್‌ ದೃಷ್ಟಿಯಿಂದ ಒಳ್ಳೆಯದಲ್ಲ ಎಂಬ ಕಿವಿಮಾತನ್ನು ಪೀಟರ್ಸನ್‌ ಹೇಳಿದ್ದಾರೆ.. ಆದ್ರೆ ಪೀಟರ್ಸನ್‌ ಅವರು ಇಂತಹ ಸಲಹೆಗಳನ್ನು, ಕಿವಿಮಾತುಗಳನ್ನು ಕಿವಿಗೆ ಹಾಕಿಕೊಳ್ಳುವಷ್ಟು ಸಮಾಧಾನ ಯಾವೊಬ್ಬ ಕ್ರಿಕೆಟ್‌ ಫ್ಯಾನ್‌ಗೂ ಇಲ್ಲ ಎನ್ನವುದು ಈಗಿನ ವಾಸ್ತವ.. ಯಾಕಂದ್ರೆ ರೋಹಿತ್‌ ಶರ್ಮಾ ಇಂಡಿಯನ್‌ ಕ್ರಿಕೆಟ್‌ನಲ್ಲಿ ಈಗಿನ ಬಹುದೊಡ್ಡ ಸ್ಟಾರ್‌… ಹೌದು ಹಿಂದೆ ಧೋನಿ ಕ್ಯಾಪ್ಟೆನ್ಸಿಯಲ್ಲಿ ತೆಂಡುಲ್ಕರ್‌, ಗಂಗೂಲಿ, ದ್ರಾವಿಡ್‌, ಕುಂಬ್ಳೆ ಎಲ್ಲರೂ ಆಡಿರಬಹುದು.. ಆದರೆ ಅವರೆಲ್ಲರೂ ತಮ್ಮ ಕ್ಯಾಪ್ಟನ್ಸಿಯಲ್ಲಿ ವೈಫಲ್ಯ ಅನುಭವಿಸೋದಿಕ್ಕೆ ಶುರುವಾದ್ಮೇಲೆ ಆಗಿದ್ದ ಬದಲಾವಣೆ ಅದಾಗಿತ್ತು.. ಹೀಗಾಗಿ ಫ್ಯಾನ್ಸ್‌ ಕಡೆಯಿಂದ ಹೆಚ್ಚು ಪ್ರತಿರೋಧ ಬಂದಿರಲಿಲ್ಲ.. ಆದ್ರೆ ರೋಹಿತ್‌ ಈಗಲೂ ಟೀಂ ಇಂಡಿಯಾದ ಕ್ಯಾಪ್ಟನ್‌.. ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಸೋಲಿಲ್ಲದೆ ಫೈನಲ್‌ ತನಕ ಕೊಂಡೊಯ್ದಿದ್ದರು.. ಬ್ಯಾಟಿಂಗ್‌ನಲ್ಲೂ ಈಗಲೂ ಮುಂಬೈ ತಂಡಕ್ಕೆ ಆಧಾರ.. ಇಂತಹ ಸಂದರ್ಭದಲ್ಲೇ ರೋಹಿತ್‌ ಬದಲಾಯಿಸಿ ಪಾಂಡ್ಯಾರನ್ನು ಕ್ಯಾಪ್ಟನ್‌ ಮಾಡಿದ ಕ್ರಮ ಫ್ಯಾನ್ಸ್‌ಗೆ ಇಷ್ಟವಾಗಿಲ್ಲ.. ಇದೇ ಕಾರಣಕ್ಕಾಗಿ ಈಗ ಪಾಂಡ್ಯಾ ಇಂತದ್ದೊಂದು ಸಂಕಷ್ಟ ಎದುರಿಸುವಂತಾಗಿದೆ.. ಯಾಕಂದ್ರೆ ತಂಡಗಳು ಇರೋದು ಕೇವಲ ಮಾಲೀಕರಿಂದ ಮಾತ್ರ ಅಲ್ಲ.. ತಂಡದ ಅಭಿಮಾನಿಗಳು ಕೂಡ ಮಾಲೀಕರಿಗಿಂತ ಹೆಚ್ಚು ತಮ್ಮ ತಂಡದ ಪರವಾಗಿ ನಿಂತಿರುತ್ತಾರೆ ಎನ್ನುವುದನ್ನು ಮರೆಯಬಾರದು..

ಇನ್ನು ಪಂಜಾಬ್‌ ವಿರುದ್ಧದ ಪಂದ್ಯ ರೋಹಿತ್‌ ಶರ್ಮಾ ಪಾಲಿಗೆ ಬಿಗ್‌ ಮ್ಯಾಚ್‌ ಆಗಿದೆ.. ಇದು ಐಪಿಎಲ್‌ನಲ್ಲಿ ರೋಹಿತ್ ಆಡ್ತಿರುವ 250 ನೇ ಪಂದ್ಯ.. ಧೋನಿ ನಂತರ 250 ಐಪಿಎಲ್‌ ಪಂದ್ಯಗಳನ್ನು ಆಡಿದ ಆಟಗಾರ ಎಂಬ ರೆಕಾರ್ಡ್‌ ರೋಹಿತ್‌ ಹೆಸರಲ್ಲೂ ದಾಖಲಾಗಲಿದೆ.. ಕಳೆದ ಪಂದ್ಯದಲ್ಲಿ ಸೆಂಚುರಿ ಭಾರಿಸಿರುವುದರಿಂದ ಈ ಪಂದ್ಯದಲ್ಲೂ ಹಿಟ್‌ ಮ್ಯಾನ್‌  ಬಿಗ್‌ ಹಿಟ್‌ ಮಾಡಬಹುದು ಎಂಬ ನಿರೀಕ್ಷೆಯಲ್ಲಿ ಅವರ ಅಭಿಮಾನಿಗಳಿದ್ದಾರೆ.. ಒಂದ್ಕಡೆ ಪಾಂಡ್ಯಾ ಹೊಡೆತದ ಮೇಲೆ ಹೊಡೆತ ತಿನ್ತಾ ಇದ್ರೆ ಇತ್ತ ರೋಹಿತ್‌ ಹಿಟ್‌ ಮೇಲೆ ಹಿಟ್‌ ಆಗ್ತಿದ್ದಾರೆ.

Sulekha