ಪ್ಲೇ ಆಫ್ಗಾಗಿ ಇಂದು ಪಂಜಾಬ್ ಹೋರಾಟ – RR ಮತ್ತು KKR ಸೋಲಿನ ಮೇಲೆ PBKS ಭವಿಷ್ಯ

IPL ಸೀಸನ್19ರ ಆರಂಭದಲ್ಲಿ ಅಬ್ಬರಿಸಿದ ಪಂಜಾಬ್ ಕೊನೆ ಹಂತದಲ್ಲಿ ಸೋಲುಗಳಿಂದ ಕಂಗೆಟ್ಟು ಹೋಗಿದೆ. ಇವತ್ತು ಪಂಜಾಬ್ಗೆ ಮಾಡು ಇಲ್ಲವೇ ಮಡಿ ಪಂದ್ಯ. ಇವತ್ತು LSGಯನ್ನ ಎದುರಿಸಲಿರೋ PBKS ಗೆದ್ದರಷ್ಟೇ ಪ್ಲೇ ಆಫ್ ರೇಸ್ನಲ್ಲಿ ಇರಲಿದೆ. ಲಕ್ನೋ ವಿರುದ್ಧ ಗೆದ್ದರೇ 15 ಅಂಕಗಳನ್ನು ಗಳಿಸಿದಂತೆ ಆಗುತ್ತದೆ. ಆಗ ಪ್ಲೇ ಆಫ್ ಪ್ರವೇಶಿಸುವ ಲೆಕ್ಕಾಚಾರವನ್ನು ಪಂಜಾಬ್ ಹಾಕಬಹುದಾಗಿದೆ.
ಒಂದು ವೇಳೆ ಇಂದು ಪಂಜಾಬ್ ಗೆದ್ದರೂ RR ಮತ್ತು KKR ಸೋಲು – ಗೆಲುವಿನ ಮೇಲೆ PBKS ಭವಿಷ್ಯ ನಿಂತಿದೆ. PBKS ಈಗ 13 ಅಂಕಗಳಿಸಿ 5ನೇ ಸ್ಥಾನದಲ್ಲಿದೆ. ಇವತ್ತು ಗೆದ್ದರೇ 15 ಅಂಕ ಆಗುತ್ತೆ. 4ನೇ ಸ್ಥಾನದಲ್ಲಿ ಆರ್ಆರ್ ಇದೆ. ಇದ್ದಕ್ಕೂ ಒಂದು ಪಂದ್ಯ ಬಾಕಿ ಇದೆ. ಆರ್ಆರ್ ಮುಂದಿನ ಪಂದ್ಯ ಗೆದ್ದರೇ ಪಂಜಾಬ್ ಪ್ಲೇ ಆಫ್ನಿಂದ ಹೊರ ಬೀಳಲಿದೆ. ಸೋತ್ರ ಪಂಜಾಬ್ಗೆ ಚಾನ್ಸ್.. ಕೇವಲ ಇಲ್ಲಿ ಆರ್ಆರ್ ಮಾತ್ರ ರೇಸ್ನಲ್ಲಿ ಇಲ್ಲ ಕೆಕೆಆರ್ ಕೂಡ ರೇಸ್ನಲ್ಲಿದೆ. ಕೆಕೆಆರ್ ಈಗ 13 ಅಂಕ ಗಳಿಸಿ 6ನೇ ಪ್ಲೇಸ್ನಲ್ಲಿದೆ. ಇದ್ದಕ್ಕೂ ಒಂದು ಪಂದ್ಯ ಬಾಕಿ ಇದೆ. ಒಂದು ವೇಳೆ ಕೆೆಕೆಆರ್ ಗೆದ್ದರೇ ಪಂಜಾಬ್ ಮನೆಗೆ.. ಹೀಗಾಗಿ ಇವತ್ತು ಪಂಜಾಬ್ ಎಲ್ಎಸ್ಜಿ ವಿರುದ್ಧ ಗೆದ್ದರೇ ಪ್ಲೇ ಆಫ್ ಕನಸು ಜೀವಂತವಾಗಿರುತ್ತೆ. ಸೋತ್ರೆ ಇವತ್ತು ಮನೆಕಡೆ ಪಂಜಾಬ್ ಗಂಟುಮೂಟೆ ಕಟ್ಟಲಿದೆ. ಹೀಗಾಗಿ ಇವತ್ತಿನ ಪಂದ್ಯ ಸಾಕಷ್ಟು ಹಲ್ಚಲ್ ಎಬ್ಬಿಸಿದೆ..
ಇದನ್ನೂ ಓದಿ: ಟಾಪ್-1ಗಾಗಿ ಟಾರ್ಗೆಟ್ ಬಿಟ್ಟ RCB – SMART ಅಲ್ಲ ಸೋಲಿನ SHAME
ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ಆಟಗಾರರಾದ ಪ್ರಭ್ಸಿಮ್ರನ್ ಸಿಂಗ್, ಪ್ರಿಯಾಂಶ್ ಆರ್ಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಅಬ್ಬರದ ಪ್ರದರ್ಶನ ನೀಡಬೇಕಿದೆ. ಅಲ್ಲದೆ ತಂಡ ದೊಡ್ಡ ಮೊತ್ತದ ಕನಸಿಗೆ ಉತ್ತಮ ಅಡಿಪಾಯ ಹಾಕಿಕೊಡಬೇಕಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಕೂಪರ್ ಕಾನೋಲಿ, ನಾಯಕ ಶ್ರೇಯಸ್ ಅಯ್ಯರ್, ಮಾರ್ಕಸ್ ಸ್ಟೋಯ್ನಿಸ್ ಸ್ಥಿರ ಪ್ರದರ್ಶನ ನೀಡುವ ಅನಿವಾರ್ಯತೆ ಇದೆ. ಅಂದಾಗ ಮಾತ್ರ ದೊಡ್ಡ ಮೊತ್ತದ ಕನಸು ನನಸಾಗುತ್ತದೆ. ಪಂಜಾಬ್ ತಂಡ ಸತತ 6 ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದ್ದು ಗೆಲುವಿನ ಟ್ರ್ಯಾಕ್ಗೆ ಮರಳಲು ಪ್ಲ್ಯಾನ್ ಮಾಡಿಕೊಂಡಿದೆ. ಇನ್ನು ಎಲ್ಎಸ್ಜಿ ತಂಡ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಜಯ ಸಾಧಿಸಿ ಲೀಗ್ಗೆ ಗುಡ್ ಬೈ ಹೇಳುವ ಆಸೆಯನ್ನು ಹೊಂದಿದೆ.

ನೋಡಿರಿ

