ಕೆಕೆಆರ್​ ವಿರುದ್ಧ ಗೆದ್ದು ಬೀಗಿದ ಪಂಜಾಬ್​ ಕಿಂಗ್ಸ್​​ ಟೀಮ್​ – 262 ರನ್​ ಚೇಸ್​ ಮಾಡಿ ಗೆದ್ದು ಬೀಗಿದ ಪಂಜಾಬ್​​!

ಕೆಕೆಆರ್​ ವಿರುದ್ಧ ಗೆದ್ದು ಬೀಗಿದ ಪಂಜಾಬ್​ ಕಿಂಗ್ಸ್​​ ಟೀಮ್​ – 262 ರನ್​ ಚೇಸ್​ ಮಾಡಿ ಗೆದ್ದು ಬೀಗಿದ ಪಂಜಾಬ್​​!

ಪಂಜಾಬ್‌ ಕಿಂಗ್ಸ್‌ ಹಾಗೂ  ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡದ ಮಧ್ಯೆ ನಡೆದ ಹೈವೋಲ್ಟೇಜ್‌ ಪಂದ್ಯದಲ್ಲಿ ಕೋಲ್ಕತ್ತಾ ಗೆದ್ದು ಬೀಗಿದೆ. ಪಂಜಾಬ್‌ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ ಕೋಲ್ಕತ್ತಾ.

ಈಡನ್​ ಗಾರ್ಡನ್​​ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್​ ನೀಡಿದ ಬೃಹತ್​ ಗುರಿ ಬೆನ್ನತ್ತಿ ಪಂಜಾಬ್​ ಕಿಂಗ್ಸ್ ಪರ ಓಪನರ್​ ಆಗಿ ಬಂದ ಪ್ರಭುಸಿಮ್ರಾನ್​ ಸಿಂಗ್​ ಕೇವಲ 20 ಬಾಲ್​ನಲ್ಲಿ 5 ಸಿಕ್ಸರ್​​, 4 ಫೋರ್​ ಸಮೇತ 54 ರನ್​ ಚಚ್ಚಿದ್ರು. ಇವರಿಗೆ ಸಾಥ್​ ಕೊಟ್ಟ ಬೇರ್​ಸ್ಟೋ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಇನ್ನಿಂಗ್ಸ್​ ಉದ್ಧಕ್ಕೂ ಕೆಕೆಆರ್​ ಬೌಲರ್​ಗಳ ಬೆಂಡೆತ್ತಿದ್ರು.

ಇದನ್ನೂ ಓದಿ: ಬಾಲಿವುಡ್ ನಟ ಬಾಬ್ಬಿ ಡಿಯೋಲ್ ಫುಲ್ ಬ್ಯುಸಿ – ಅನಿಮಲ್ ಸಿನಿಮಾದಿಂದಾಗಿ ಹೆಚ್ಚಿದ ಬೇಡಿಕೆ

ಇನ್ನು, ಬೇರ್​ಸ್ಟೋ ಕೇವಲ 48 ಬಾಲ್​ನಲ್ಲಿ 108 ರನ್​ ಸಿಡಿಸಿದ್ರು. ಅದರಲ್ಲೂ ಬರೋಬ್ಬರಿ 9 ಸಿಕ್ಸರ್​​, 8 ಭರ್ಜರಿ ಫೋರ್​ನೊಂದಿಗೆ ಶತಕ ಸಿಡಿಸಿದ್ರು. ಇವರ ಸ್ಟ್ರೈಕ್​ ರೇಟ್​ ಬರೋಬ್ಬರಿ 220ಕ್ಕೂ ಹೆಚ್ಚು ಇತ್ತು. ಬಳಿಕ ಬಂದ ಶಶಾಂಕ್​ ಸಿಂಗ್​​ ಕೇವಲ 27 ಬಾಲ್​ನಲ್ಲಿ 8 ಸಿಕ್ಸರ್​​, 2 ಫೋರ್​ ಸಮೇತ 67 ರನ್​ ಚಚ್ಚಿದ್ರು. ಈ ಮೂಲಕ ಪಂಜಾಬ್​ ತಂಡವನ್ನು ಇನ್ನೂ 9 ಬಾಲ್​ ಬಾಕಿ ಇರುವಂತೆಯೇ ಗೆಲ್ಲಿಸಿದ್ರು.

ಟಾಸ್​ ಸೋತರೂ ಫಸ್ಟ್​ ಬ್ಯಾಟಿಂಗ್​ ಮಾಡಿದ ಕೆಕೆಆರ್​ ಪರ ಓಪನರ್​ ಆಗಿ ಬಂದ ಸಾಲ್ಟ್​ ಕೇವಲ 37 ಬಾಲ್​ನಲ್ಲಿ 6 ಸಿಕ್ಸರ್​​, 6 ಫೋರ್​ ಸಮೇತ 75 ರನ್​ ಸಿಡಿಸಿದ್ರು. ಇವರಿಗೆ ಸಾಥ್​ ನೀಡಿ ಎಂದಿನಂತೆ ಅಬ್ಬರಿಸಿದ ಸುನೀಲ್​ ನರೈನ್​​ ಕೇವಲ 32 ಬಾಲ್​ನಲ್ಲಿ 4 ಸಿಕ್ಸ್​​, 9 ಫೋರ್​ ಸಮೇತ 71 ರನ್​ ಚಚ್ಚಿದ್ರು.

ಬಳಿಕ ಬಂದ ವೆಂಕಟೇಶ್​​ ಅಯ್ಯರ್​ ತಾಳ್ಮೆಯಿಂದ ಬ್ಯಾಟ್​ ಬೀಸಿ 23 ಬಾಲ್​ನಲ್ಲಿ 2 ಸಿಕ್ಸರ್​, 3 ಫೋರ್​ ಜತೆಗೆ 39 ರನ್​ ಗಳಿಸಿದ್ರು. ರಸ್ಸೆಲ್​ 12 ಬಾಲ್​ನಲ್ಲಿ 2 ಸಿಕ್ಸರ್​, 2 ಫೋರ್​ ಸಮೇತ 24 ರನ್​ ಬಾರಿಸಿದ್ರು. ಕ್ಯಾಪ್ಟನ್​ ಶ್ರೇಯಸ್ ಅಯ್ಯರ್​​ 10 ಬಾಲ್​ನಲ್ಲಿ 3 ಸಿಕ್ಸರ್​​, 1 ಫೋರ್​​ನೊಂದಿಗೆ 28 ರನ್​​ ಸಿಡಿಸಿದ್ರು. ರಿಂಕು ಸಿಂಗ್​ 5, ರಮಣ್​ದೀಪ್​ ಸಿಂಗ್​​ 6 ರನ್​​​ ಗಳಿಸಿದ ಪರಿಣಾಮ ಕೆಕೆಆರ್​​ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 261 ರನ್​ ಕಲೆ ಹಾಕಿ 262 ರನ್​ಗಳ ಬಿಗ್​ ಟಾರ್ಗೆಟ್​ ನೀಡಿತ್ತು.

Shwetha M

Leave a Reply

Your email address will not be published. Required fields are marked *