ನಾಯಕತ್ವದಲ್ಲಿ ಗೆದ್ದು ಬೀಗಿದ ಬುಮ್ರಾ – ಮುಂಬೈ ವಿರುದ್ಧ ಸೋತು ಬೆಂಡಾದ ಪಂಜಾಬ್ ಕಿಂಗ್ಸ್

ನಾಯಕತ್ವದಲ್ಲಿ ಗೆದ್ದು ಬೀಗಿದ ಬುಮ್ರಾ – ಮುಂಬೈ ವಿರುದ್ಧ ಸೋತು ಬೆಂಡಾದ ಪಂಜಾಬ್ ಕಿಂಗ್ಸ್

ಗೆಲ್ಲಲೇಬೇಕಾದ ಮಹತ್ವದ ಪಂದ್ಯದಲ್ಲಿ ಸೋತು ಸುಣ್ಣವಾಗಿದೆ ಪಂಜಾಬ್ ಕಿಂಗ್ಸ್. ಆದರೆ, ಮುಂಬೈ ಇಂಡಿಯನ್ಸ್ ಗೆಲ್ಲುವ ಮೂಲಕ ಮಾನ ಕಾಪಾಡಿಕೊಂಡಿದೆ. ಆದರೆ, ಮುಂಬೈ ವಿರುದ್ಧ ಸೋತ ಪಂಜಾಬ್ ತಂಡಕ್ಕೆ ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣವಾಗಿದೆ.

ಇದನ್ನೂ ಓದಿ:ನಂ-1ನಲ್ಲಿದ್ರೂ ಸೇಫ್ ಇಲ್ಲ RCB – PBKS & SRH ಪಂದ್ಯಗಳೇ ಅಗ್ನಿಪರೀಕ್ಷೆ

ಗುರುವಾರ ಧರ್ಮಶಾಲಾದಲ್ಲಿನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವು ಮುಂಬೈ ತಂಡಕ್ಕೆ ಮಹತ್ವದ್ದಾಗಿರಲಿಲ್ಲ. ಯಾಕೆಂದರೆ, ಈಗಾಗಲೇ ಮುಂಬೈ ಟೂರ್ನಿಯಿಂದ ಹೊರಗೆ ನಡೆದಿದೆ. ಆದರೆ, ಪ್ಲೇಆಫ್ ರೇಸ್​​ನಲ್ಲಿದ್ದ ಪಂಜಾಬ್ ತಂಡಕ್ಕೆ ಈ ಸೋಲು ಆಘಾತ ತಂದಿದೆ.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 200 ರನ್​ಗಳಿಸಿತು. ಪ್ರಭಸಿಮ್ರನ್ ಸಿಂಗ್ 32 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್​ಗಳ ಸಹಿತ 57, ಒಮರ್ಝೈ 17 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್​ಗಳ ಸಹಿತ 38 ರನ್​ಗಳಿಸಿ ತಂಡದ ಮೊತ್ತ 200ಕ್ಕೇರುವಂತೆ ಮಾಡಿದ್ದರು. ನಾಯಕ ಶ್ರೇಯಸ್ ಅಯ್ಯರ್ 4, ಪ್ರಿಯಾಂಶ್ ಆರ್ಯ 22, ಕೂಪರ್ ಕೊನೊಲಿ 21, ಸೂರ್ಯಾಂಶ್ ಶೆಡ್ಗೆ 8, ಶಶಾಂಕ್ ಸಿಂಗ್ 2, ಮಾರ್ಕೊ ಯಾನ್ಸನ್ 2 ರನ್​ಳಿಸಿ ನಿರಾಶೆ ಮೂಡಿಸಿದರು. ಕೊನೆಯಲ್ಲಿ ವಿಷ್ಣು ವಿನೋದ್ 8 ಎಸೆತಗಳಲ್ಲಿ ಅಜೇಯ 15, ಬಾರ್ಟ್ಲೆಟ್ 7 ಎಸೆತಗಳಲ್ಲಿ ಅಜೇಯ 19 ರನ್​ಗಳಿಸಿದರು. ಇವರಿಬ್ಬರು ಕೊನೆಯ 12 ಎಸೆತಗಳಲ್ಲಿ 34 ರನ್​ಗಳಿಸಿದರು.

201 ರನ್​ಗಳ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 19.5 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು ತಲುಪಿತು. ತಿಲಕ್ ವರ್ಮಾ 33 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್​ಗಳ ಸಹಿತ ಅಜೇಯ 75 ರನ್​ಗಳಿಸಿ ರೋಚಕ ಗೆಲುವಿಗೆ ಕಾರಣರಾದರು. ಉತ್ತಮ ಆರಂಭ ಒದಗಿಸಿಕೊಟ್ಟ ರಿಕಲ್ಟನ್ 201 ರನ್​ಗಳ ಕಠಿಣ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಭರ್ಜರಿ ಆರಂಭ ಪಡೆದುಕೊಂಡಿತು. ಮೊದಲ ವಿಕೆಟ್ ಜೊತೆಯಾಟದಲ್ಲಿ 61 ರನ್​ಗಳ ಜೊತೆಯಾಟ ನೀಡಿದರು. ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ರಯಾನ್ ರಿಕಲ್ಟನ್ 23 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್​ಗಳ ಸಹಿತ 48 ರನ್​ಗಳಿಸಿ ಒಮರ್ಝೈ ಬೌಲಿಂಗ್​​ನಲ್ಲಿ ಪ್ರಿಯಾಂಶ್ ಆರ್ಯಗೆ ಕ್ಯಾಚ್ ನೀಡಿ ಔಟ್ ಆದರು. ರಿಕಲ್ಟನ್ ಬೆನ್ನಲ್ಲೆ ಮುಂಬೈ 7 ರನ್​ಗಳ ಅಂತರದಲ್ಲಿ 2 ವಿಕೆಟ್ ಕಳೆದುಕೊಂಡಿತು. ರನ್​ಗಳಿಸಲು ಪರದಾಡುತ್ತಿದ್ದ ರೋಹಿತ್ ಶರ್ಮಾ 26 ಎಸೆತಗಳಲ್ಲಿ 25 ರನ್​​​​​​​​​​​​​​​​​​​​​​ಗಳಿಸಿ ಚಹಲ್ ಬೌಲಿಂಗ್​ನಲ್ಲಿ ಬೌಲ್ಡ್ ಆದರು. ನಂತರ ಬಂದ ನಮನ್ ಧೀರ್ 6 ಎಸೆತಗಳಲ್ಲಿ 9 ರನ್​ಗಳಿಸಿ ಮಾರ್ಕೊ ಯಾನ್ಸನ್​ ಬೌಲಿಂಗ್​​ನಲ್ಲಿ ಅರ್ಶದೀಪ್​ ಸಿಂಗ್​ಗೆ ಕ್ಯಾಚ್ ನೀಡಿ ಔಟ್ ಆದರು. ತಿಲಕ್ ಜೊತೆ ಸಿಡಿಲಬ್ಬರಿಸಿದ ವಿಲ್ ಜಾಕ್ಸ್ 5ನೇ ವಿಕೆಟ್ ಜೊತೆಯಾಟದಲ್ಲಿ 20 ಎಸೆತಗಳಲ್ಲಿ 56 ರನ್​ಗಳಿಸಿ ತಂಡಕ್ಕೆ ರೋಚಕ ಜಯ ತಂದುಕೊಟ್ಟರು. 4ನೇ ಕ್ರಮಾಂಕದಲ್ಲಿ ಆಡಿದ ತಿಲಕ್ ವರ್ಮಾ ಕೇವಲ 33 ಎಸೆತಗಳಲ್ಲಿ ತಲಾ 6 ಬೌಂಡರಿ, 6 ಸಿಕ್ಸರ್​ಗಳ ಸಹಿತ ಅಜೇಯ 75 ರನ್​ಗಳಿಸಿದರು. ವಿಲ್ ಜಾಕ್ಸ್​ 10 ಎಸೆತಗಳಲ್ಲಿ ತಲಾ 2 ಬೌಂಡರಿ, 2 ಸಿಕ್ಸರ್​ಗಳ ಸಹಿತ ಅಜೇಯ 25 ರನ್ಗಳಿಸಿದರು. ಕೊನೆಯ 3 ಓವರ್​​​​​ಗಳಲ್ಲಿ ಮುಂಬೈ ಗೆಲುವಿಗೆ 50 ರನ್​​ಗಳ ಅಗತ್ಯವಿತ್ತು. ಈ ಹಂತದಲ್ಲಿ ಪಂಜಾಬ್ ಸುಲಭವಾಗಿ ಗೆಲ್ಲಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ತಿಲಕ್ ವರ್ಮಾ ಹಾಗೂ ವಿಲ್ ಜಾಕ್ಸ್ ಎಲ್ಲಾ ಲೆಕ್ಕಾಚಾರಗಳನ್ನ ತಲೆಕೆಳಗಾಗಿಸಿದರು.  ಪಂಜಾಬ್ ಬೌಲರ್‌ಗಳನ್ನು ಬೆಂಡೆತ್ತುವ ಮೂಲಕ ಭರ್ಜರಿ ಜಯ ತಂದುಕೊಟ್ಟರು.

Sulekha