ಚಹಲ್ ಚಮತ್ಕಾರ – ಪಂಜಾಬ್‌ಗೆ ರೋಚಕ 16 ರನ್‌ಗಳ ಜಯ

ಪಂಜಾಬ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಕೋಲ್ಕತ್ತಾ ಗೆದ್ದು ಬೀಗಿದೆ. 16 ರನ್ ಗಳ ಮೂಲಕ ಪಂಜಾಬ್ ಗೆಲುವು ಸಾಧಿಸಿದೆ.
ಇದನ್ನೂ ಓದಿ: ಭಾರತದಲ್ಲಿ ಈ ಬಾರಿ ಮಳೆ ಪ್ರಮಾಣ ಹೆಚ್ಚು – ರೈತರಿಗೆ ಅನುಕೂಲ ಆಗಲಿದ್ಯಾ ಮುಂಗಾರು ಮಳೆ?
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಪಂಜಾಬ್ 15.2 ಓವರ್‌ಗಳಲ್ಲಿ 111 ರನ್‌ಗಳಿಗೆ ಆಲೌಟ್ ಆಯ್ತು. ಸುಲಭದ ಸವಾಲನ್ನು ಬೆನ್ನಟ್ಟಿದ ಕೋಲ್ಕತ್ತಾ 15.1 ಓವರ್‌ಗಳಲ್ಲಿ 95 ರನ್‌ಗಳಿಗೆ ಆಲೌಟ್ ಆಗಿ ಸೋಲನ್ನು ಒಪ್ಪಿಕೊಂಡಿದೆ.
7 ರನ್ ಗಳಿಸುವಷ್ಟರಲ್ಲೇ ಕೋಲ್ಕತ್ತಾ ಎರಡು ವಿಕೆಟ್ ಕಳೆದುಕೊಂಡರೂ ರಘುವಂಶಿ ಮತ್ತು ರೆಹಾನೆ ನಿಧಾನವಾಗಿ ಆಡಿ ಇನ್ನಿಂಗ್ಸ್ ಕಟ್ಟಿದರು. ರಹಾನೆ 17 ರನ್ ರಘುವಂಶಿ 37 ರನ್ (28 ಎಸೆತ, 5 ಬೌಂಡರಿ, 1 ಸಿಕ್ಸ್ ) ಸಿಡಿಸಿ ಔಟಾದರು. ಇವರಿಬ್ಬರು ಔಟಾದ ಬೆನ್ನಲ್ಲೇ ಪತನ ಆರಂಭವಾಯಿತು.
12ನೇ ಓವರ್‌ನಲ್ಲಿ ಚಹಲ್ ಅವರು ರಿಂಕು ಸಿಂಗ್ ಮತ್ತು ರಮಣ್‌ದೀಪ್ ಸಿಂಗ್ ಅವರನ್ನು ಔಟ್ ಮಾಡುವ ಮೂಲಕ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ಹೀಗಿದ್ದರೂ ರಸೆಲ್ ಅಬ್ಬರಿಸುತ್ತಿದ್ದರು. ಆದರೆ ರಸೆಲ್ 17 ರನ್‌ಗಳಿಸಿದಾಗ ಜಾನ್‌ಸೆನ್ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ಕಿಂಗ್ಸ್ ಪಂದ್ಯವನ್ನು ಸೋತಿತು. ಚಹಲ್ 4 ವಿಕೆಟ್ ಕಿತ್ತರೆ, ಜಾನ್‌ಸೆನ್ 3 ವಿಕೆಟ್ ಕಿತ್ತರು. ಮ್ಯಾಕ್ಸ್‌ವೆಲ್, ಆರ್ಶ್‌ದೀಪ್ ಸಿಂಗ್, ಬಾರ್ಟ್ಲೆಟ್ ತಲಾ ಒಂದೊಂದು ವಿಕೆಟ್ ಪಡೆದರು.
ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ಆರಂಭಿಕ ಮೂವರು ಆಟಗಾರರನ್ನು ಹರ್ಷಿತ್ ರಾಣಾ ಪೆವಿಲಿಯನ್‌ಗೆ ಕಳುಹಿಸಿದ್ದರು. ಪ್ರಿಯಾಂಶ್ ಅರ್ಯಾ 22 ರನ್(12 ಎಸೆತ, 3 ಬೌಂಡರಿ, 1 ಸಿಕ್ಸ್), ಪ್ರಭುಸಿಮ್ರಾನ್ ಸಿಂಗ್ 30 ರನ್(15 ಎಸೆತ, 2 ಬೌಂಡರಿ, 3 ಸಿಕ್ಸ್) ಕೊನೆಯಲ್ಲಿ ಶಶಾಂಕ್ ಸಿಂಗ್ 18 ರನ್ ಹೊಡೆದ ಪರಿಣಾಮ ಪಂಜಾಬ್ 100 ರನ್‌ಗಳ ಗಡಿಯನ್ನು ದಾಟಿತ್ತು.
ಹರ್ಷಿತ್ ರಾಣಾ 3 ವಿಕೆಟ್, ವರುಣ್ ಚಕ್ರವರ್ತಿ ಮತ್ತು ಸುನಿಲ್ ನರೈನ್ ತಲಾ 2 ವಿಕೆಟ್, ವೈಭವ್ ಅರೋರ, ಅನ್ರಿಚ್ ನಾರ್ಟ್ಜೆ ತಲಾ ಒಂದೊಂದು ವಿಕೆಟ್ ಕಿತ್ತರು.