ಸೋಲಿಲ್ಲದ ಸರದಾರ PBKS – ಪಂಜಾಬ್ ಲಕ್ಕಿ ಚಾರ್ಮ್ ಶ್ರೇಯಸ್
ಅಂತೂ ಇಂತು ಗೆದ್ದ KKR!

ಸೋಲಿನ ಸುಳಿಯಲ್ಲಿ ಬಿದ್ದು ಒದ್ದಾಡ್ತಿದ್ದ ಕೆಕೆಆರ್ ಕೊನೆಗೂ ಗೆಲುವಿನ ಖಾತೆ ತೆರೆದಿದೆ. ಇನ್ನೊಂದ್ಕಡೆ ತಾಕತ್ತಿದ್ರೆ ಸೋಲಿಸಿ ಅಂತಾ ಪಂಜಾಬ್ ವಿಜಯಾಯತ್ರೆ ಕಂಟಿನ್ಯೂ ಆಗಿದೆ. ಮೊದ್ಲಿಗೆ ಭಾನುವಾರದ ಡಬಲ್ ಹೆಡರ್ ಮ್ಯಾಚಲ್ಲಿ ಕೆಕೆಆರ್ ಮತ್ತು ರಾಜಸ್ಥಾನ ನಡುವೆ ಮ್ಯಾಚ್ ಇತ್ತು. ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಈ ಮ್ಯಾಚಲ್ಲಿ ರಾಜಸ್ಥಾನ ರಾಯಲ್ಸ್ ಫಸ್ಟ್ ಬ್ಯಾಟಿಂಗ್ ಮಾಡಿತ್ತು. ಆದ್ರೆ ಸೂರ್ಯವಂಶಿ ಮತ್ತು ಜೈಸ್ವಾಲ್ ಔಟ್ ಆದ್ಮೇಲೆ ರನ್ಸ್ ಬರ್ಲಿಲ್ಲ. ಹೀಗಾಗಿ 156 ರನ್ಸ್ ಕಲೆ ಹಾಕಿದ್ರು. ಈ ಗುರಿ ಬೆನ್ನಟ್ಟಿದ ಕೆಕೆಆರ್ ಕೊನೆಯ ಓವರ್ನಲ್ಲಿ ವಿನ್ ಆಯ್ತು. ಮತ್ತೊಂದೆಡೆ ಸಂಜೆ ಮ್ಯಾಚಲ್ಲಿ ಪಂಜಾಬ್ ತಂಡ ಸೂಪರ್ ಸಾಲಿಡ್ ಆಗಿ ಗೆದ್ದಿದೆ. ಟಾರ್ಗೆಟ್ ಸೆಟ್ ಮಾಡಿದಾಗ್ಲೇ ಪಂಜಾಬ್ ಆಲ್ರೆಡಿ ಗೆದ್ದಾಗಿತ್ತು.
ಇದನ್ನೂ ಓದಿ : ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಭರ್ಜರಿ ಗೆಲುವು – ಗೆಲುವಿನ ಓಟ ಮುಂದುವರಿಸಿ ಶ್ರೇಯಸ್ ಪಡೆ
ರಾಜಸ್ಥಾನ ಸೋಲಿಸಿದ ಪರಾಗ್!
ಟಾಸ್ ಗೆದ್ರೂ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪರಾಗ್
ಸೂರ್ಯವಂಶಿ (46) ಮತ್ತು ಜೈಸ್ವಾಲ್ (39) ಮಾತ್ರವೇ ರನ್ಸ್
ಪರಾಗ್ 12, ಹೆಟ್ಮೆಯರ್ 15 ರನ್.. ಉಳಿದವರು ಸಿಂಗಲ್ ಡಿಜಿಟ್
ಕೆಕೆಆರ್ ಪರ ವರುಣ್ ಚಕ್ರವರ್ತಿ 14 ರನ್ಸ್ ನೀಡಿ 3 ವಿಕೆಟ್
ಬ್ಯಾಟಿಂಗ್ ಆರಂಭಿಸಿದ ಕೆಕೆಆರ್ ಪರ ಓಪನರ್ಸ್ ಡಕ್ ಔಟ್
ಕೊನೆಯಲ್ಲಿ ರಿಂಕು ಮತ್ತು ಅನುಕೂಲ್ ರಾಯ್ ಗೆಲುವಿನ ರನ್ಸ್
ಜಡ್ಡು ಬಿಟ್ಟು ಬ್ರಿಜೇಶ್ ಕೈಗೆ ಬಾಲ್ ಕೊಟ್ಟು ಸೋತ ಪರಾಗ್
ಇಲ್ಲಿ ರಾಜಸ್ಥಾನಕ್ಕೆ ಗೆಲ್ಲೋ ಚಾನ್ಸ್ ಇದ್ರೂ ರಿಯಾನ್ ಪರಾಗ್ ಮಾಡಿದ ಮಿಸ್ಟೇಕ್ ಸೋಲಿಗೆ ಕಾರಣ ಆಯ್ತು. ಇನ್ನು ಸಂಜೆ ಮ್ಯಾಚಲ್ಲಿ ಪಂಜಾಬ್ ಮತ್ತು ಲಕ್ನೋ ನಡುವಿನ ಫೈಟಲ್ಲಿ ಪಂಜಾಬ್ ತಂಡ ಒನ್ ಸೈಡೆಡ್ ಆಗಿ ಮ್ಯಾಚ್ ವಿನ್ ಆದ್ರು. ಮೊದಲ ಓವರ್ನಲ್ಲೇ ಶಮಿ ಪ್ರಭ್ ಸಿಮ್ರಾನ್ ಸಿಂಗ್ ವಿಕೆಟ್ ತೆಗೆದ್ರು. ಆದ್ರೆ ಪ್ರಿಯಾನ್ಶ್ ಆರ್ಯ ಹಾಗೇ ಕೂಪರ್ ಕೊನೊಲಿ ಅದ್ಭುತ ಜೊತೆಯಾಟ. 2ನೇ ವಿಕೆಟ್ಗೆ 182 ರನ್ಗಳ ಜೊತೆಯಾಟ ಆಡ್ತಾರೆ. ಅದೂ ಕೂಡ 15ನೇ ಓವರ್ನಲ್ಲೇ 180ಪ್ಲಸ್ ರನ್ಸ್ ಇತ್ತು. ಅಂತಿಮವಾಗಿ 7 ವಿಕೆಟ್ ನಷ್ಟಕ್ಕೆ 254 ರನ್ಸ್ ಕಲೆ ಹಾಕ್ತಾರೆ. ಈ ಸೀಸನ್ನ ಹೈಯೆಸ್ಟ್ ಸ್ಕೋರ್ ಇದು. ಈ ಟಾರ್ಗೆಟ್ ಬೆನ್ನತ್ತಿದ್ದ ಲಕ್ನೋ ಪರ ಯಾರೂ ಸಾಥ್ ಕೊಡ್ಲಿಲ್ಲ. ಯಾರಿಂದಲೂ ಅರ್ಧಶತಕವೂ ಬರ್ಲಿಲ್ಲ. ಬಹುಶಃ ಶಶಾಂಕ್ ಸಿಂಗ್ ಡ್ರಾಪ್ ಮಾಡಿದ ಮೂರು ಕ್ಯಾಚ್ಗಳನ್ನ ಕನ್ವರ್ಟ್ ಮಾಡಿದ್ರೆ ಇನ್ನೂ ಬೇಗನೇ ಗೆಲ್ತಿದ್ರು. ಅಂತಿಮವಾಗಿ ಲಕ್ನೋ ತಂಡ 5 ವಿಕೆಟ್ ನಷ್ಟಕ್ಕೆ 200 ರನ್ ಅಷ್ಟೇ ಗಳಿಸಿದ್ದು. 54 ರನ್ಳಿಂದ ಪಂಜಾಗ್ ಗೆದ್ದು ಬೀಗಿತು. ಇನ್ನು ಈ ಸೀಸನ್ನಲ್ಲಿ ಪಂಜಾಬ್ 6 ಪಂದ್ಯ ಆಡಿದ್ದು 1 ಪಂದ್ಯ ಮಳೆಗೆ ರದ್ದಾಗಿದೆ. ಉಳಿದೆಲ್ಲಾ ಮ್ಯಾಚ್ ಗೆದ್ದು ಅನ್ ಬೀಟನ್ ಟೀಂ ಆಗಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿದೆ. ಈ ಸೀಸನ್ನಲ್ಲಿ ಟ್ರೋಫಿ ಗೆಲ್ಲೋಕೆ ಮಸ್ಟ್ ಡಿಸರ್ವಿಂಗ್ ಟಿಂ ಆಗಿ ಕಾಣ್ತಿದೆ.

ನೋಡಿರಿ

