ಕಬಡ್ಡಿ ಆಟಗಾರನ ಭೀಕರ ಕೊಲೆ – ದೇಹವನ್ನ ತುಂಡರಿಸಿ ಆತನ ಮನೆ ಮುಂದೆಯೇ ಬಿಸಾಡಿ ಹೋದ ಪಾಪಿಗಳು

ಕಬಡ್ಡಿ ಆಟಗಾರನ ಭೀಕರ ಕೊಲೆ – ದೇಹವನ್ನ ತುಂಡರಿಸಿ ಆತನ ಮನೆ ಮುಂದೆಯೇ ಬಿಸಾಡಿ ಹೋದ ಪಾಪಿಗಳು

ಕಬಡ್ಡಿ ನಮ್ಮ ಭಾರತದ ದೇಸೀಯ ಕ್ರೀಡೆ. ಭಾರತದ ಗ್ರಾಮೀಣ ಕ್ರೀಡೆ ಆಗಿರುವ ಕಬಡ್ಡಿ ಸುಮಾರು 4 ಸಾವಿರ ವರ್ಷಗಳಷ್ಟು ಪುರಾತನ ಇತಿಹಾಸ ಹೊಂದಿದೆ. ಭಾರತದ ದೇಸೀ ಕ್ರೀಡೆ ಕಬಡ್ಡಿಯು ದೇಶಕ್ಕೆ ಸಾಕಷ್ಟು ಹೆಗ್ಗಳಿಕೆಯ ಜೊತೆಗೆ ಹೆಸರನ್ನೂ ತಂದು ಕೊಟ್ಟಿದೆ. ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಅಂದರೆ ಗ್ರಾಮೀಣ ಜನರಿಗೆ ಬಹಳ ಇಷ್ಟ. ಕಬಡ್ಡಿ ಹಲವಾರು ಹೆಸರುಗಳಿಂದ ಪ್ರಚಲಿತವಾಗಿದೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಬಡ್ಡಿಗೆ ಮನ್ನಣೆ ಸಿಗುತ್ತಿದೆ. ನೂರಾರು ಯುವ ಆಟಗಾರರು ಗುರುತಿಸಿಕೊಳ್ಳುತ್ತಿದ್ದಾರೆ. ಆದರೆ ಪಂಜಾಬ್ ನಲ್ಲಿ ಕಬಡ್ಡಿ ಯುವ ಆಟಗಾರನನ್ನ ಭೀಕರವಾಗಿ ಕೊಲೆ ಮಾಡಲಾಗಿದೆ.

ಇದನ್ನೂ ಓದಿ : ಧರ್ಮಸ್ಥಳದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿಯ ರಕ್ಷಣೆ – ಬೆಂಗಳೂರಿನಲ್ಲಿ ಅಪಾರ್ಟ್ ಮೆಂಟ್ ಮೇಲಿಂದ ಹಾರಿ ಸೂಸೈಡ್

ಕಬಡ್ಡಿ ಆಟಗಾರನನ್ನ ಭೀಕರವಾಗಿ ಕೊಲೆ ಮಾಡಿರುವ ದುಷ್ಕರ್ಮಿಗಳು ಆತನ ದೇಹವನ್ನ ತುಂಡು ತುಂಡಾಗಿ ಕತ್ತರಿಸಿ ಅವನ ಮನೆ ಬಳಿಯೇ ಎಸೆದು ಹೋಗಿರುವ ಆಘಾತಕಾರಿ ಘಟನೆ ನಡೆದಿದೆ. ಪಂಜಾಬ್‌ನ ಕಪುರ್ತಲಾ ಜಿಲ್ಲೆಯ ಕಬಡ್ಡಿ ಆಟಗಾರನ ಬರ್ಬರ ಹತ್ಯೆಯಾಗಿದೆ. ಕೆಲವು ದಿನಗಳ ಹಿಂದಷ್ಟೇ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆಯನ್ನು ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಕಠಿಣವಾದ ಪದಗಳಿಂದ ಖಂಡಿಸಿದ್ದಾರೆ. ಪಂಜಾಬ್‌ನಲ್ಲಿ ಈಗ ಜಂಗಲ್‌ ರಾಜ್ಯದ ಆಡಳಿತ ಜಾರಿಯಲ್ಲಿದೆ ಎಂದು ಆಮ್‌ ಆದ್ಮಿ ಪಕ್ಷದ ಮುಖಂಡ ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವತ್ ಮನ್ ವಿರುದ್ಧ ವಾಕ್‌ಪ್ರಹಾರ ನಡೆಸಿದ್ದಾರೆ. ಈ ಘಟನೆಯ ಸಂಬಂಧ, ಪರಿಸ್ಥಿತಿಯನ್ನು ನಿಭಾಯಿಸಲು ವಿಫಲರಾದ ಮುಖ್ಯಮಂತ್ರಿ ಭಗವತ್ ಮನ್ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕಬಡ್ಡಿ ಆಟಗಾರನನ್ನ ಕೊಲೆ ಮಾಡಿ ಆತನ ದೇಹವನ್ನ ತುಂಡರಿಸಿ ಮನೆ ಬಳಿ ಬಿಸಾಡಿ ಹೋಗಿರುವುದು ದೊಡ್ಡ ಮಟ್ಟದ ಸುದ್ದಿಯಾಗಿದೆ. ಸ್ಥಳೀಯ ವರದಿಗಳ ಪ್ರಕಾರ ಯುವ ಕಬಡ್ಡಿ ಆಟಗಾರನನ್ನು ಬರ್ಬರವಾಗಿ ಹತ್ಯೆ ಮಾಡಿದ ಸಂಬಂಧ, ಇದುವರೆಗೂ ಯಾವುದೇ ವ್ಯಕ್ತಿಯನ್ನು ಪಂಜಾಬ್ ಪೊಲೀಸರು ಬಂಧಿಸಿಲ್ಲ ಎಂದು ವರದಿಯಾಗಿದೆ. ಸೆಪ್ಟೆಂಬರ್ 19ರ ರಾತ್ರಿ ಕಬಡ್ಡಿ ಆಟಗಾರನ ಹತ್ಯೆ ನಡೆದಿದೆ ಎಂದು ವರದಿಯಾಗಿದೆ. ಕೆಲವು ವರದಿಗಳ ಪ್ರಕಾರ, ಕಬಡ್ಡಿ ಆಟಗಾರ ಹರ್ದೀಪ್ ಸಿಂಗ್ ಹಾಗೂ ಅದೇ ಏರಿಯಾದಲ್ಲಿ ವಾಸವಾಗಿದ್ದ ಹರ್ಪ್ರೀತ್ ಸಿಂಗ್ ನಡುವೆ ಸಾಕಷ್ಟು ಸಮಯದಿಂದ ಆಗಾಗ ಗಲಾಟೆಗಳು ನಡೆಯುತ್ತಿದ್ದವು. ಹೀಗಾಗಿ ಈ ಹಿಂದೆಯೇ ಹರ್ದೀಪ್ ಹಾಗೂ ಹರ್ಪ್ರೀತ್ ಅವರ ಮೇಲೆ ದಿಲ್ವಾನ್ ಪೊಲೀಸ್ ಠಾಣೆಯಲ್ಲಿ ಕೇಸ್‌ಗಳು ದಾಖಲಾಗಿದ್ದವು.

Shantha Kumari